PhonePe ಮೂಲಕ ಇನ್ನುಂದೆ ಹಣದ ಲೋನ್ ಕೂಡ ಲಭ್ಯವಿದೆ. ಫೋನ್ ಪೇ ಗ್ರಾಹಕರಿಗೆ ಸಿಗಲಿದೆ ಲೋನ್ ! ಈ ರೀತಿಯಾಗಿ ಲೋನ್ ಪಡೆಯಿರಿ.

ಎಲ್ಲರಿಗೂ ನಮಸ್ಕಾರ…

ಎಲ್ಲೆಡೆ ಜನರು ಕೂಡ ಡಿಜಿಟಲ್ ಅಪ್ಲಿಕೇಶನ್ ಗಳಿಗೆ ಮೊರೆ ಹೋಗಿದ್ದಾರೆ. ಅಂದರೆ ತಮ್ಮ ಹಣದ ವಹಿವಾಟುಗಳನ್ನು ಕ್ಷಣಮಾತ್ರದಲ್ಲೇ ನಿರ್ವಹಿಸುವ ಅಪ್ಲಿಕೇಶನ್ ಗಳನ್ನು ಬಳಸುತ್ತಿದ್ದಾರೆ. ಹಾಗೂ ಯುಪಿಐ ಐಡಿ ಮೂಲಕ ಗೂಗಲ್ ಪೇ, ಫೋನ್ ಪೇ, ಹಾಗೂ ಪೇಟಿಎಂ ಗಳಂತಹ ಅಪ್ಲಿಕೇಶನ್ ಇಂದ ಕ್ಷಣದಲ್ಲಿಯೇ ಹಣವನ್ನು ಬೇರೊಂದು ಖಾತೆಗೆ ವರ್ಗಾಯಿಸಲಾಗುತ್ತದೆ. ಇಂಥಹ ಸೌಲಭ್ಯಗಳನ್ನು ದೊರಕಿಸಿದೆ ಡಿಜಿಟಲ್ ಅಪ್ಲಿಕೇಶನ್ಗಳು. ಕೋಟ್ಯಾಂತರ ಗ್ರಾಹಕರು ಹೊಂದಿರುವ ಫೋನ್ ಪೇ ಹಣದ ವಹಿವಾಟು ಮಾಡಲು ಮಾತ್ರ ಬಳಸುವ ಹಾಗಿಲ್ಲ.

WhatsApp Group Join Now
Telegram Group Join Now

ಇನ್ಮುಂದೆ ಸಾಲವನ್ನು ಪಡೆಯುವ ರೀತಿಯಲ್ಲು ಫೋನ್ ಪೇ ಆ್ಯಪ್ಅನ್ನು ಬಳಸಬಹುದು. ಮುಂದಿನ ದಿನಗಳಲ್ಲಿ ಈ ಸೌಲಭ್ಯವು ಎಲ್ಲಾ ಕೋಟ್ಯಾಂತರ ಗ್ರಾಹಕರಿಗೆ ಸಿಗಲಿದೆ. ಈ ಡಿಜಿಟಲ್ ಯುಗದಲ್ಲಿ ಯಾವ ರೀತಿ ಡಿಜಿಟಲ್ ಅಪ್ಲಿಕೇಶನ್ಗಳನ್ನು ಬಳಸಿಕೊಂಡು ಸಾಲವನ್ನು ಪಡೆಯಬಹುದು ಎಂಬ ಮಾಹಿತಿಯನ್ನು ಈ ಕೆಳಕಂಡ ಲೇಖನದಲ್ಲಿ ತಿಳಿಸಲಾಗಿದೆ, ಕೊನೆವರೆಗೂ ಲೇಖನವನ್ನು ಓದಿ.

ಯುಪಿಐ ಬಳಕೆದಾರರು 50 ಕೋಟಿಗಿಂತ ಹೆಚ್ಚಿನ ಗ್ರಾಹಕರಿದ್ದಾರೆ. ಈ 50 ಕೋಟಿಯಲ್ಲಿ 3.7 ಕೋಟಿ ಜನರು ಫೋನ್ ಪೇ ಬಳಸುತ್ತಿದ್ದಾರೆ. ಈ ಅಪ್ಲಿಕೇಶನ್ ಬಳಸುವಂತಹ ಗ್ರಾಹಕರಿಗೆ ಹೆಚ್ಚಿನ ಸೌಲಭ್ಯವನ್ನು ದೊರಕಿಸಲು ಫೋನ್ ಪೇ ಕಂಪನಿ ಮುಂದಾಗಿದೆ ಲೋನ್ ಕೊಡುವ ಮೂಲಕ ತನ್ನ ಗ್ರಾಹಕರನ್ನು ಸೆಳೆಯುತ್ತಿದೆ. ಹಲವಾರು ಕಂಪನಿಗಳು ಜೊತೆಗೂಡಿ ಈ ಲೋನ್ ಫೆಸಿಲಿಟಿ ಯನ್ನು ತರಲು ಮುಂದಾಗಿವೆ. ಗೂಗಲ್ ಪೇ ಗ್ರಾಹಕರಿಗೆ ಇದೊಂದು ಸಿಹಿ ಸುದ್ದಿ ಆದರೆ, ಫೋನ್ ಪೇ ಗ್ರಾಹಕರಿಗೂ ಕೂಡ ಇದೇ ರೀತಿಯ ಸಿಹಿ ಸುದ್ದಿ.

ಈ ಎರಡು ಅಪ್ಲಿಕೇಶನ್ಗಳಲ್ಲಿ ಇನ್ಮುಂದೆ ಲೋನ್ ಸೌಲಭ್ಯ ಎಲ್ಲಾ ಗ್ರಾಹಕರಿಗೂ ಕೂಡ ಲಭ್ಯವಿದೆ. ನೀವು ಕೂಡ ಲೋನನ್ನು ಪಡೆದುಕೊಳ್ಳಬೇಕಾ ? ಹಾಗಾದ್ರೆ ಈ ಕೆಳಕಂಡ ಲೇಖನದ ಅರ್ಹತೆಗಳನ್ನು ತಿಳಿಯಿರಿ ಯಾವ ರೀತಿ ಲೋನನ್ನು ಪಡೆದುಕೊಳ್ಳಬೇಕೆಂಬ ಮಾಹಿತಿಯನ್ನು ಕೂಡ ತಿಳಿದು ಮುಂದಿನ ಹೆಜ್ಜೆಯನ್ನಿಡಿ.

ಇದನ್ನು ಓದಿ :- ಮಾತೃಭಾಷೆಯನ್ನು ಬಳಸಿಕೊಂಡು ಟೈಪಿಂಗ್ ಮಾಡಿ ! ಲಕ್ಷಾಂತರ ಹಣವನ್ನು ಸಂಪಾದಿಸಿ. How to earn money from home ! ಇಲ್ಲಿದೆ ಸಂಪೂರ್ಣವಾದ ವಿವರ.

PhonePe ಅಪ್ಲಿಕೇಶನ್ ನಲ್ಲಿ ಸಾಲ ಸೌಲಭ್ಯ !

ಹೌದು ಇನ್ನು ಮುಂದಿನ ದಿನಗಳಲ್ಲಿ ಫೋನ್ ಪೇ ಅಪ್ಲಿಕೇಶನ್ ನಲ್ಲೂ ಕೂಡ ಸಾಲದ ಸೌಲಭ್ಯ ಎಲ್ಲಾ ಅರ್ಹ ಗ್ರಾಹಕರಿಗೆ ನೀಡಲಾಗುತ್ತದೆ. ಆರು ತಿಂಗಳ ನಂತರ ಈ ಒಂದು ಲೋನ್ ಸೌಲಭ್ಯ ಜಾರಿಯಾಗಲಿದೆ. ಸಾಲ ಪಡೆಯಲು ಕೆಲವು ನಿಯಮಗಳನ್ನು ಕೂಡ ಅಳವಡಿಸಲಾಗುತ್ತದೆ. ಹಾಗೂ ಯಾವ ಗ್ರಾಹಕರು ಈ ಲೋನ್ ಗೆ ಅರ್ಹರು ಎಂಬುದನ್ನು ಕೂಡ ಈಗಾಗಲೇ ಫೋನ್ ಪೇ ತನ್ನ ಗ್ರಾಹಕರಲ್ಲಿ ಹುಡುಕುತ್ತಿದೆ. ಹಾಗೂ ಹಲವಾರು ಬ್ಯಾಂಕುಗಳ ಜೊತೆ ಗೂಡಿ ಮುಂದಿನ ಸಾಲದ ಸೌಲಭ್ಯಕ್ಕೆ ತಯಾರಾಗುತ್ತಿದೆ. ಒಟ್ಟಾರೆ ಹೇಳುವುದಾದರೆ ಎಲ್ಲಾ ಅರ್ಹ ಫೋನ್ ಪೇ ಗ್ರಾಹಕರಿಗೆ ಇನ್ಮುಂದೆ ಲೋನ್ ಸೌಲಭ್ಯ ದೊರಕಲಿದೆ.

ಈ ಗ್ರಾಹಕರು ಮಾತ್ರ ಸಾಲ ಪಡೆಯಲು ಅರ್ಹರು !

ಫೋನ್ ಪೇ ಅಪ್ಲಿಕೇಶನ್ನನ್ನು ಸುಮಾರು ಹಲವಾರು ತಿಂಗಳಿನಿಂದ ಬಳಸುತ್ತಿದ್ದೀರಾ ? ಹಾಗೂ ನಿಮ್ಮ ಸಿಬೀಲ್ ಸ್ಕೋರ್ ಆಗಲಿ ಹಾಗೂ ಕ್ರೆಡಿಟ್ ಸ್ಕೋರ್ ಆಗಲಿ ಹೆಚ್ಚಿನ ಪ್ರಮಾಣದಲ್ಲಿದೆ, ಹಾಗಾದ್ರೆ ನಿಮಗೆ ಸಿಗಲಿದೆ ಲೋನ್ ಸೌಲಭ್ಯ. ಯಾವ ಅಭ್ಯರ್ಥಿಯು ಸಿಬೀಲ್ ಸ್ಕೋರನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತಾನೆ ಅಂದರೆ 750 ಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರನ್ನು ಹೊಂದಿರುತ್ತಾನೋ ಅಂತ ಅರ್ಹ ಗ್ರಾಹಕನಿಗೆ ಲೋನ್ ಸೌಲಭ್ಯ ದೊರೆಯಲಿದೆ. ಹಾಗೂ ಯಾವುದೇ ರೀತಿಯ ಮುಂದಿನ ದಾಖಲಾತಿಗಳು ಈ ಸಾಲಕ್ಕೆ ಅವಶ್ಯ ಕತೆ ಇರುವುದಿಲ್ಲ. ಯಾವ ರೀತಿ ಕ್ರೆಡಿಟ್ ಸ್ಕೋರ್ ಗಳನ್ನು ಪರಿಶೀಲಿಸಬೇಕೆಂದರೆ, ಸೈಬರ್ ಸೆಂಟರ್ ಮೂಲಕ ಪಾನ್ ಕಾರ್ಡ್ ತೆಗೆದುಕೊಂಡು ಹೋಗಿ ಪರಿಶೀಲಿಸಿಕೊಳ್ಳಿ. ಮೇಲ್ಕಂಡ ನಿಯಮವನ್ನು ಪಾಲಿಸುವ ಅರ್ಹ ಅಭ್ಯರ್ಥಿಯು ಈ ಸಾಲದ ಹಣವನ್ನು ಪಡೆಯಬಹುದು.

ನೀವು ಕೂಡ ಹಲವಾರು ಯೋಜನೆಗಳಲ್ಲಿ ಸಾಲವನ್ನು ಪಡೆಯಬೇಕೆಂದುಕೊಂಡಿರುತ್ತಿರಾ,ಆದರೆ ನಿಮಗೆ ಯಾವುದೋ ಒಂದು ದಾಖಲಾತಿಯಿಂದ ಸಾಲ ಸೌಲಭ್ಯ ಸಿಗುವುದಿಲ್ಲ. ಆ ಕಾರಣಕ್ಕಾಗಿ ಆ ಯೋಜನೆಯನ್ನು ಹೊರತುಪಡಿಸಿ ಫೋನ್ ಪೇ ಅನ್ನು ಬಳಸಿಕೊಂಡು ಲೋನನ್ನು ಪಡೆದುಕೊಳ್ಳಿ. ಲೋನ್ ಪಡೆಯಲು ಇನ್ನು ಆರು ತಿಂಗಳು ಬಾಕಿ ಇದೆ, ಫೋನ್ ಪೇ ಗ್ರಾಹಕರು ಕಾದು ನೋಡಬೇಕಿದೆ, ಎಷ್ಟು ಹಣವನ್ನು ಸಾಲವನ್ನಾಗಿ ಪಡೆಯಬಹುದೆಂದು ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ. ನಿಮ್ಮ ಅಕ್ಕ ಪಕ್ಕದ ಸ್ನೇಹಿತರು ಕೂಡ ಲೋನ್ ಪಡೆಯಲು ಪರದಾಡುತ್ತಿದ್ದಾರ ? ಹಾಗಾದ್ರೆ ಈ ಒಂದು ಲೇಖನವನ್ನು ಶೇರ್ ಮಾಡಿ ಅವರಿಗೂ ಕೂಡ ಫೋನ್ ಪೇ ಮೂಲಕ ಸಾಲ ಸೌಲಭ್ಯ ಸಿಗುತ್ತದೆ ಎಂದು ತಿಳಿಸಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನ ದೊಂದಿಗೆ.

Leave a Comment