ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲದವರ ಪಟ್ಟಿ ಕೊಡಿ, ಮನೆ ಮನೆಗೆ ಹೋಗಿ ಸಮಸ್ಯೆ ಬಗೆಹರಿಸಿ ಎಂದು ಖಡಕ್ ಆದೇಶ ಹೊರಡಿಸಿದ ಸಿಎಂ ಸಿದ್ದರಾಮಯ್ಯ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ.

ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯು ಮನೆ ಒಡತಿಯರಿಗೆ ಪ್ರತಿ ತಿಂಗಳು 2000 ರೂಪಾಯಿ ಕೊಡುವುದಾಗಿ ತಿಳಿಸಿತ್ತು. ಸಿ.ಎಂ ಸರ್ಕಾರವು ನುಡಿದಂತೆ ನಡೆಯುತ್ತೇವೆ ಎಂದು ಎಂಬ ನುಡಿಯನ್ನು ತಿಳಿಸಿತ್ತು ಆದರೆ ಅದರಂತೆಯೇ ನಡೆಯುತ್ತಿದ್ದಾರೆ. ಕೆಲವು ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದಿದೆ ಆದರೆ ಇನ್ನೂ ಕೆಲವರಿಗೆ ಗೃಹಲಕ್ಷ್ಮಿ ಯೋಜನೆಯ ಹಣವೇ ಬಂದಿಲ್ಲ. ಗೃಹಲಕ್ಷ್ಮಿ ಹಣ ಬರದೆ ಇರಲು ಬ್ಯಾಂಕಳೆ ಕಾರಣ ಎನ್ನುತ್ತಿದೆ ಸರ್ಕಾರ ಹೇಗೆಂದರೆ ವಾರಕ್ಕೆ ಒಂದು ಬ್ರಾಂಚ್ ಒಂದೊಂದು ಜಿಲ್ಲೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

WhatsApp Group Join Now
Telegram Group Join Now

ಆದ್ದರಿಂದ ಗೃಹಲಕ್ಷ್ಮಿ ಹಣವು ಮಹಿಳೆಯರಿಗೆ ಬರುವುದು ಸ್ವಲ್ಪ ತಡವಾಗುತ್ತಿದೆ ಎಂದು ಹೇಳಿಕೆ ನೀಡಿದರು. ಆದರೆ ದೀರ್ಘ ಕಾಲವೇ ಕಳೆದು ಹೋಗಿದೆ ದೀಪಾವಳಿಗೆ ಹಣ ಬರುತ್ತದೆ ಎಂದು ತಿಳಿಸಿದರು ಆದರೆ ಕೆಲವರಿಗೆ ದೀಪಾವಳಿ ಹಬ್ಬದಂದು ಸಹ ಹಣ ಬಂದು ತಲುಪಿಲ್ಲ. ಇದನ್ನೆಲ್ಲಾ ತಿಳಿದ ಸಿಎಂ ಸಿದ್ದರಾಮಯ್ಯನವರು ಮಂಗಳವಾರ ಸಭೆಯನ್ನು ಏರ್ಪಡಿಸಿದ್ದರು.

ಸಿಎಂ ಸಿದ್ದರಾಮಯ್ಯನವರು ಆ ಸಭೆಯಲ್ಲಿ ಯಾರ್ಯಾರಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ ಅವರಿಗೆಲ್ಲ ನಾನು ಮಾತು ಕೊಡುತ್ತೇನೆ ಗೃಹಲಕ್ಷ್ಮಿ ಹಣವನ್ನು ಆದಷ್ಟು ಬೇಗ ನಿಮಗೆ ಸಿಗುವ ಹಾಗೆ ಮಾಡುತ್ತೇನೆ. ಅಂಗನವಾಡಿಯ ಕಾರ್ಯಕರ್ತೆಯರು ಮನೆ ಮನೆಗೆ ಹೋಗಿ ಯಾರಿಗೆ ಇನ್ನೂ ಕೂಡ ಗೃಹಲಕ್ಷ್ಮಿ ಹಣ ಬಂದಿಲ್ಲವೋ ಅಂತವರ ಹೆಸರುಗಳನ್ನು ಪಟ್ಟಿ ಮಾಡಿ ಬ್ಯಾಂಕಿಗೆ ಹೋಗಿ ಅಲ್ಲಿ ವಿಚಾರಿಸಿ ಗೃಹಲಕ್ಷ್ಮಿ ಹಣ ಬರದೆ ಇರುವವರಿಗೆ ಹಣ ದೊರಕುವಂತೆ ಮಾಡಬೇಕು ಎಂದು ತಿಳಿಸಿದರು. ಇನ್ನು ಮುಂದೆ ಯಾರ್ಯಾರಿಗೆ ಹಣ ಬಂದಿಲ್ಲ ಅಂತವರ ಸಮಸ್ಯೆಗಳನ್ನು ಬಗೆಹರಿಸಿ ಎಂದು ಆದೇಶ ನೀಡಿದರು.

ಸಿಎಂ ಸಿದ್ದರಾಮಯ್ಯನವರ ಮುಖ್ಯ ಉದ್ದೇಶವೇ ಎಲ್ಲ ಮನೆ ಒಡತಿಯರಿಗೂ ಕೂಡ 2000 ರೂಪಾಯಿಯನ್ನು ನೀಡಬೇಕು. ಮಹಿಳೆಯರು ಸ್ವಾವಲಂಬಿಯಾಗಿ ಬದುಕಬೇಕು ಪರಾವಲಂಬಿಗಳಾಗಬಾರದು ಎಂಬ ಉದ್ದೇಶದಿಂದ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದರು. ಮಹಿಳೆಯರಿಗೆ ಉದ್ಯೋಗ ದೊರಕುವುದು ತುಂಬಾ ಕಷ್ಟವಾಗುತ್ತದೆ ಉದ್ಯೋಗ ಸಿಕ್ಕರೂ ಕೂಡ ಮಹಿಳೆಯರು ಈಚೆ ಹೋಗಿ ದುಡಿಯಲು ಕೆಲವರ ಮನೆ ಸಹಾಯ ಮಾಡಿ ಕಳುಹಿಸುವುದಿಲ್ಲ,

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಆದ್ದರಿಂದ ಸಿಎಂ ಸಿದ್ದರಾಮಯ್ಯನವರು ಈ ಎಲ್ಲಾ ವಿಚಾರಗಳನ್ನು ಪರಿಶೀಲಿಸಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದರೆ ಎಲ್ಲಾ ಮಹಿಳೆಯರಿಗೂ ಕೂಡ ತುಂಬಾ ಉಪಯೋಗವಾಗುತ್ತದೆ ಎಂದು ತುಂಬಾ ಮುಖ್ಯವಾಗಿ ವಿಚಾರಣೆ ಮಾಡಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದರು. ಮಹಿಳೆಯರು ಬರುವ 2 ಸಾವಿರ ರೂಪಾಯಿಯಿಂದ ನೆಮ್ಮದಿಯಾಗಿ ಜೀವನ ನಡೆಸಬಹುದು ಯಾರ ತಕರಾರಿಲ್ಲದೆ ಸಂತೋಷದಿಂದ ಇರಬಹುದು ಎಂಬ ಉದ್ದೇಶದಿಂದ ಜಾರಿಗೆ ತಂದರು. ಆದರೆ ಗೃಹಲಕ್ಷ್ಮಿ ಯೋಜನೆಯ ಹಣವು ಕೆಲವು ಮಹಿಳೆಯರಿಗೆ ದೊರಕಿದೆ ಇನ್ನೂ ಕೆಲವು ಮಹಿಳೆಯರಿಗೆ ಇನ್ನೂ ದೊರಕಿಲ್ಲ.

ಪ್ರತಿ ಗ್ರಾಮ ಪಂಚಾಯತ್ ಗೃಹಲಕ್ಷ್ಮಿ ಅದಾಲತ್ ನಡೆಸಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾನ್ಯ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯನವರು ತಿಳಿಸಿದರು. ಮನೆಮನೆಗೂ ಹೋಗಿ ಅವರಿಗೆ ಏಕೆ ಹಣ ಬಂದಿಲ್ಲ ಯಾವ ಸಮಸ್ಯೆ ಇದೆ ಎಂದು ತಿಳಿದು ಆದಷ್ಟು ಬೇಗ ಅವರ ಸಮಸ್ಯೆಗಳನ್ನು ಬಗೆಹರಿಸಿ ಸಾವಿರ ರೂಪಾಯಿ ತೆಗೆದುಕೊಳ್ಳುವಂತೆ ಮಾಡಬೇಕು ಎಂದು ತಿಳಿಸಿದ್ದಾರೆ. ಮೂರನೇ ಕಂತಿನ ಹಣವನ್ನು ನವೆಂಬರ್ ನಲ್ಲಿ ಸರ್ಕಾರವು 6000 ಮಹಿಳೆಯರಿಗೆ ಬ್ಯಾಂಕ್ ಖಾತೆಗೆ ತಲುಪಿಸಿದೆ ಆದರೆ ಇನ್ನೂ ಎರಡರಿಂದ ಮೂರು ಲಕ್ಷ ಮಹಿಳೆಯರಿಗೆ ಇನ್ನೂ ಕೂಡ ಒಂದು ಕಂತಿನ ಹಣವು ಕೂಡ ಬಂದಿಲ್ಲ ಸರ್ಕಾರದ ಲೆಕ್ಕಾಚಾರದ ಪ್ರಕಾರ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಮಹಿಳೆಯರ ಸಂಖ್ಯೆ1.18 ಕೋಟಿ ಇದರೊಳಗೆ ಇನ್ನೂ ಎರಡು ಲಕ್ಷ ಜನರ ಖಾತೆಯಲ್ಲಿ ಸಮಸ್ಯೆ ಇರುವುದರಿಂದ ಅಂತವರಿಗೆ ಗೃಹಲಕ್ಷ್ಮಿ ಹಣ ಜಮಾ ಆಗಿಲ್ಲ. ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಯಾರಿಗೆ ಗೃಹಲಕ್ಷ್ಮಿ ಹಣ ಬಂದಿಲ್ಲ ಅಂತವರ ಪಟ್ಟಿಯನ್ನು ಹುಡುಕಿ ತೆಗೆದು ತಿಂಗಳಿನ ಒಳಗೆ ಅವರ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಮಾನ್ಯ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯನವರು ತಿಳಿಸಿದ್ದಾರೆ.

ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.

Leave a Comment