8 ಜಿಲ್ಲೆಗಳಿಗೆ ಜಾರಿಯಾಗಲಿದೆ ಗೃಹ ಆರೋಗ್ಯ ಯೋಜನೆ ! ಬಿಪಿ, ಶುಗರ್, ಕ್ಯಾನ್ಸರ್, ಪರೀಕ್ಷೆಯನ್ನು, ಉಚಿತವಾಗಿ ಮಾಡಿ, ಉಚಿತವಾದ ಔಷಧಿಗಳನ್ನು ವಿತರಿಸಲಾಗುತ್ತದೆ.

ಎಲ್ಲರಿಗೂ ನಮಸ್ಕಾರ…

ರಾಜ್ಯದ ಗೃಹ ಆರೋಗ್ಯ ಯೋಜನೆ ಅಡಿಯಲ್ಲಿ ಎಲ್ಲಾ ಸಾಮಾನ್ಯ ಜನರ ಮನೆಗೆ ಭೇಟಿ ನೀಡಲಿದೆ ವೈದ್ಯರ ತಂಡ. ವೈದ್ಯರು ತಮ್ಮ ಸಿಬ್ಬಂದಿಗಳ ತಂಡದಲ್ಲಿ ಎಲ್ಲರ ಮನೆಗೂ ಭೇಟಿ ನೀಡಿ, ಉಚಿತವಾಗಿ ಆರೋಗ್ಯ ತಪಾಸಣೆಯನ್ನು ಮಾಡುತ್ತಾರೆ. ಈ ತಪಾಸಣೆಯಲ್ಲಿ ಈ ವ್ಯಕ್ತಿಗಳಿಗೆ ಮಾತ್ರ ಔಷಧಿಯನ್ನು ಉಚಿತವಾಗಿ ವಿತರಿಸಿ, ಮುಂದಿನ ಆರೋಗ್ಯವನ್ನು ವಿಚಾರಿಸುತ್ತಾರೆ. ಈ ಯೋಜನೆ ಅಡಿಯಲ್ಲಿ ಮೂರು ಕಾಯಿಲೆಗಳಿಗೆ ಉಚಿತವಾಗಿ ಔಷಧಿಯನ್ನು ನೀಡಲಾಗುತ್ತದೆ. ಮೊದಲನೆಯದು ಕ್ಯಾನ್ಸರ್ ಕಾಯಿಲೆ, ಹಾಗೂ ಮಧುಮೇಹ, ರಕ್ತ ಒತ್ತಡ, ಇಂಥಹ ಕಾಯಿಲೆಗಳ ವ್ಯಕ್ತಿಗಳ ಮನೆಗೆ ಭೇಟಿ ನೀಡಿ ವೈದ್ಯರೇ ತಮ್ಮ ತಂಡದೊಡನೆ ಪರಿಶೀಲಿಸಿ ಮುಂದಿನ ಔಷಧಿಯನ್ನು ನೀಡಿ ಮುಂದಿನ ಆರೋಗ್ಯ ಕ್ರಮವನ್ನು ಕೈಗೊಂಡು ವೈದ್ಯರೇ ನಿಮ್ಮ ಆರೋಗ್ಯವನ್ನು ನೋಡುತ್ತಾರೆ.

WhatsApp Group Join Now
Telegram Group Join Now

ಗೃಹ ಆರೋಗ್ಯ ಯೋಜನೆ ಜಾರಿಗೊಳ್ಳಲು ಪ್ರಯೋಗಿಕವಾಗಿ ಚಿಕ್ಕಮಂಗಳೂರು ಜಿಲ್ಲೆಯಲ್ಲಿ ನಡೆಸಲಾಗುತ್ತಿದೆ. ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಈ ಒಂದು ಯೋಜನೆಯನ್ನು ಆರಂಭಿಸಲಾಗುತ್ತಿದೆ. ಪ್ರಯೋಗಿಕವಾಗಿ ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಈ ಒಂದು ಯೋಜನೆ ಯಶಸ್ವಿಯಾಗಿ ಮುನ್ನಡೆಯಲು ಕೆಲವು ಹಂತಗಳಲ್ಲಿ ಪ್ರಾರಂಭ ಮಾಡಲಾಗುತ್ತದೆ. ಅಂದರೆ ಮೊದಲನೆಯ ಹಂತದಲ್ಲಿಯೇ 8 ಜಿಲ್ಲೆಗಳಿಗೆ ಮಾತ್ರ ಈ ಒಂದು ಯೋಜನೆ ಸಲ್ಲುತ್ತದೆ. ನಂತರ ಮುಂದಿನ ಹಂತದಲ್ಲಿ ರಾಜ್ಯದ ಎಲ್ಲೆಡೆಯಲ್ಲು ಕೂಡ ಈ ಒಂದು ಯೋಜನೆಯ ಆರೋಗ್ಯ ತಪಾಸಣೆ ಮುನ್ನಡೆಯಲಿದೆ. ಈ ಕೆಳಕಂಡ ಜಿಲ್ಲೆಗಳಿಗೆ ಗೃಹ ಆರೋಗ್ಯ ಯೋಜನೆ ಜಾರಿಗೊಳ್ಳಲಿದೆ.

ಮೈಸೂರು, ರಾಮನಗರ, ಗದಗ, ತುಮಕೂರು ಜಿಲ್ಲೆ, ಬೆಳಗಾವಿ, ಬಳ್ಳಾರಿ,ದಕ್ಷಿಣ ಕನ್ನಡ, ಜಿಲ್ಲೆಗಳಿಗೆ ಮೊದಲನೇ ಹಂತದಲ್ಲಿ ಗೃಹ ಆರೋಗ್ಯ ಯೋಜನೆ ಜಾರಿಗೊಳ್ಳುತ್ತದೆ. ಈ ಮೇಲ್ಕಂಡ ಜಿಲ್ಲೆಗಳಿಗೆ ಮಾತ್ರ ಗೃಹ ಆರೋಗ್ಯ ಯೋಜನೆ ಅಡಿಯಲ್ಲಿ ಪ್ರತಿ ಮನೆಗೂ ಭೇಟಿ ನೀಡಿ ವೈದ್ಯರ ತಂಡ ನಿಮ್ಮ ಆರೋಗ್ಯವನ್ನು ವಿಚಾರಿಸುತ್ತಾರೆ. ಈ ಮೇಲ್ಕಂಡ ಜಿಲ್ಲೆಗಳಲ್ಲಿ ನಿಮ್ಮ ಜಿಲ್ಲೆ ಇಲ್ಲವೇ, ನಿಮ್ಮ ಜಿಲ್ಲೆಗೂ ಕೂಡ ಎರಡನೇ ಹಂತದಲ್ಲಿ ಗೃಹ ಆರೋಗ್ಯ ಯೋಜನೆ ಜಾರಿಗೊಳ್ಳುತ್ತದೆ. ಮೊದಲನೇ ಹಂತದಲ್ಲಿ ಈ ಜಿಲ್ಲೆಗಳಿಗೆ ಮಾತ್ರ ಗೃಹ ಆರೋಗ್ಯ ತಪಾಸಣೆ, ಏಕೆಂದರೆ ಜನರ ಆರೋಗ್ಯವನ್ನು ಪರಿಶೀಲಿಸಿ ಉಚಿತವಾದ ಔಷಧಿಯನ್ನು ಕೊಡಲು ವೈದ್ಯರ ಸಿಬ್ಬಂದಿ ಯಶಸ್ಸಿನಲ್ಲಿ ಸಾಗುತ್ತಾರ, ಎಂಬುದನ್ನು ತಿಳಿಯಲು ಈ ರೀತಿಯ ಹಂತ ಹಂತದ ಪ್ರಯೋಗ.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಪ್ರತಿ ಮನೆಗೂ ತೆರಳಿ 30 ವರ್ಷ ಮೇಲ್ಪಟ್ಟ ವಯಸ್ಸುಳ್ಳ ಎಲ್ಲಾ ವ್ಯಕ್ತಿಗಳಿಗೂ ಕೂಡ ಬಾಯಿ, ಸ್ತನ, ಗರ್ಭಕಂಠದ ಕ್ಯಾನ್ಸರ್ ಗಳಂಥಹ ಕಾಯಿಲೆಯನ್ನು ಪರಿಶೀಲಿಸಿ ಔಷಧಿಯನ್ನು ಉಚಿತವಾಗಿ ನೀಡಲಿದೆ ಗೃಹ ಆರೋಗ್ಯ ಯೋಜನೆ. ನಿಮಗೂ ಕೂಡ ಈ ಮೇಲ್ಕಂಡ ಖಾಯಿಲೆಗಳು ಕಂಡು ಬಂದರೆ ವೈದ್ಯರು ನಿಮ್ಮನ್ನು ಮುಂದಿನ ಆರೋಗ್ಯ ತಪಾಸಣೆಗೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ನಿಮ್ಮ ಮುಂದಿನ ಚಿಕಿತ್ಸೆಗೆ ವೈದ್ಯರು ಕ್ರಮವನ್ನು ತೆಗೆದುಕೊಂಡು ಉಚಿತವಾಗಿ ಚಿಕಿತ್ಸೆಯನ್ನು ನಡೆಸುತ್ತಾರೆ. 

ವೈದ್ಯರ ತಂಡ ಬೆಳಗಿನ ಸಮಯದಲ್ಲಿ ಹಾಗೂ ಮಧ್ಯಾಹ್ನದ ವೇಳೆಯಲ್ಲಿ ವಾರದಲ್ಲಿ 3 ದಿನ 20 ಮನೆಗೆ ಭೇಟಿ ನೀಡಿ ಆರೋಗ್ಯದ ತಪಾಸಣೆಯನ್ನು ಮಾಡುತ್ತಾರೆ. ನಾಲ್ವರು ಸಿಬ್ಬಂದಿಗಳು ಒಂದು ತಂಡದಲ್ಲಿ ಆರೋಗ್ಯ ತಪಾಸಣೆಯನ್ನು ನಡೆಸುತ್ತಾರೆ ದಿನದಲ್ಲಿ 20 ಮನೆಯನ್ನು ಭೇಟಿ ನೀಡಿ ನಿಮ್ಮ ಆರೋಗ್ಯ ಹೇಗಿದೆ ಎಂಬುದನ್ನು ಕೂಡ ವಿಚಾರಿಸಿ ಮೇಲ್ಕಂಡ ಕಾಯಿಲೆಗಳು ನಿಮಗೂ ಕೂಡ ಇದ್ದರೆ ಉಚಿತವಾಗಿ ಮುಂದಿನ ಚಿಕಿತ್ಸೆಯನ್ನು ನಡೆಸುತ್ತಾರೆ. ಹಾಗೂ ವೈದ್ಯರು ಮನೆಗೆ ಭೇಟಿ ನೀಡಲಲ್ಲದೆ 15 ದಿನಕ್ಕೊಮ್ಮೆ ಶಿಬಿರಗಳನ್ನು ಕೂಡ ಹಮ್ಮಿಕೊಳ್ಳುತ್ತಾರೆ.

ರಾಜ್ಯದ ಜನತೆಯ ಆರೋಗ್ಯವನ್ನು ಸುಧಾರಿಸಲು ಈ ಒಂದು ಹೊಸ ಯೋಜನೆಯನ್ನು ಕೈಗೊಂಡಿದೆ ಕೇಂದ್ರ ಸರ್ಕಾರ. ಎಲ್ಲಾ ಸಾಮಾನ್ಯ ಜನರಿಗೆ ಈ ಆರೋಗ್ಯ ತಪಾಸಣೆಯಿಂದ ಆರೋಗ್ಯವನ್ನು ಮತ್ತಷ್ಟು ಸುಧಾರಿಸಿಕೊಳ್ಳಲು ಈ ಒಂದು ಯೋಜನೆಯನ್ನು ಜಾರಿಗೊಳಿಸಲಿದೆ. ನೀವು ಕೂಡ ಈ ಯೋಜನೆಯಲ್ಲಿ ನಿಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳಬೇಕಾ ಹಾಗಾದ್ರೆ ಸ್ವಲ್ಪ ದಿನಗಳ ಕಾಲ ಕಾಯಬೇಕಾಗುತ್ತದೆ. ನಿಮ್ಮ ಜಿಲ್ಲೆಗಳಿಗೂ ಕೂಡ ಇಂಥಹ ಗೃಹ ಆರೋಗ್ಯ ಯೋಜನೆ ಜಾರಿಯಾಗುವವರೆಗೂ, ಕೂಡ ಕಾದುನೋಡಿ ನಿಮ್ಮ ಮನೆಗೆ ವೈದ್ಯರೇ ಆರೋಗ್ಯ ತಪಾಸಣೆ ಮಾಡಲು ಬರುತ್ತಾರೆ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment