ಐದನೇ ಗ್ಯಾರೆಂಟಿ ಯುವನಿಧಿ ಯೋಜನೆಗೆ ಫಿಕ್ಸ್ ಆಯ್ತು ಡೇಟ್ ! ಡಿಪ್ಲೋಮಾ ಹಾಗೂ ಪದವೀಧರರಿಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ.

ಎಲ್ಲರಿಗೂ ನಮಸ್ಕಾರ..

ಚುನಾವಣೆ ಮುನ್ನವೇ ಕಾಂಗ್ರೆಸ್ ಪಕ್ಷವು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂಬ ಭರವಸೆಯನ್ನು ಸಾಮಾನ್ಯ ಜನರಿಗೆ ಹೇಳಿತ್ತು, ಅದೇ ರೀತಿ ಚುನಾವಣೆಯಲ್ಲಿ ಗೆದ್ದ ನಂತರ ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. 5ನೇ ಗ್ಯಾರಂಟಿ ಯೋಜನೆ ಎಂದರೆ ಅದುವೇ ಯುವನಿಧಿ ಯೋಜನೆ, ಈ ಒಂದು ಯುವನಿಧಿ ಯೋಜನೆಯಲ್ಲಿ ಡಿಪ್ಲೋಮಾ ಹಾಗೂ ಪದವಿ ವಿದ್ಯಾರ್ಥಿಗಳಿಗೆ ನಿರುದ್ಯೋಗದ ಸಮಸ್ಯೆಯಿಂದ ಉಂಟಾಗುವ ತೊಂದರೆಗಳನ್ನು ಸಕ್ರಿಯಗೊಳಿಸಲು ಹಣದ ಸಹಾಯ ಮಾಡಲಿದೆ ರಾಜ್ಯ ಸರ್ಕಾರ.

WhatsApp Group Join Now
Telegram Group Join Now

ಕಳೆದ ಆರು ತಿಂಗಳಿನಿಂದ ಈ ಒಂದು ಯುವನಿಧಿ ಯೋಜನೆಗೆ ಮುಹೂರ್ತವನ್ನು ಫಿಕ್ಸ್ ಮಾಡಲು ನಿರ್ದಿಷ್ಟವಾದ ದಿನಾಂಕವನ್ನು ಹುಡುಕುತ್ತಿದೆ, ಹಾಗಾಗಿ ಎರಡು ತಿಂಗಳು ಕಳೆದರೆ ಮುಂದಿನ ವರ್ಷಕ್ಕೆ ಪಾದಾರ್ಪಣೆಯನ್ನು ಮಾಡುತ್ತೇವೆ, ಮತ್ತು ಮುಂದಿನ ವರ್ಷದಿಂದ ಅಂದರೆ ಜನವರಿ ಇಂದ ಈ ಒಂದು ಯೋಜನೆಯನ್ನು ಜಾರಿಗೆ ತರುತ್ತೇವೆ ಎಂದು ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಹೇಳಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ಲೇಖನವನ್ನು ಓದಿ ತಿಳಿದುಕೊಳ್ಳಿ.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಈ ಯುವನಿಧಿ ಯೋಜನೆಯ ಬಗ್ಗೆ ಮಾಹಿತಿ ನೀಡಿರುವ ಮಧು ಬಂಗಾರಪ್ಪನವರು ಮಾಧ್ಯಮಗಳಲ್ಲಿ ಪೂರ್ತಿ ವಿವರವನ್ನು ಯೋಜನೆ ಯ ಬಗ್ಗೆ ತಿಳಿಸಿದ್ದಾರೆ. ಯಾವಾಗ ಈ ಯೋಜನೆಯು ವಿದ್ಯಾರ್ಥಿಗಳಿಗೆ ಜಾರಿಗೊಳಿಸಲಾಗುತ್ತದೆ, ಹಾಗೂ ವಿದ್ಯಾರ್ಥಿಗಳಿಗೆ ಸಹಾಯಧನವಾಗಿ ಎಷ್ಟು ಹಣ ವಿದ್ಯಾರ್ಥಿಯ ಖಾತೆಗೆ ವರ್ಗಾವಣೆ ಆಗುತ್ತದೆ.

ಹಾಗೂಯಾವ ಯಾವ ವಿದ್ಯಾರ್ಥಿಗಳು ಯಾವ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ, ಮತ್ತು ಯಾವ ಕೋರ್ಸ್ ಅನ್ನು ಆಯ್ಕೆ ಮಾಡಿಕೊಂಡು ಓದಿ ಮುಂದಿನ ಕೆಲಸಕ್ಕಾಗಿ ಹುಡುಕುತ್ತಿದ್ದಾರೆ, ಹಾಗೂ ಯಾವ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿ ಮನೆಯಲ್ಲೇ ಇದ್ದಾರೆ, ಅಂಥಹ ವಿದ್ಯಾರ್ಥಿಗಳಿಗೆ ಮಾತ್ರ ಈ ಒಂದು ಯುವನಿಧಿ ಯೋಜನೆಯ ಹಣ ವರ್ಗಾವಣೆ ಆಗುತ್ತದೆ, ಎಂಬ ಭರವಸೆಯನ್ನು ಮಧು ಬಂಗಾರಪ್ಪನವರು ನೀಡಿದ್ದಾರೆ.

ವಿದ್ಯಾರ್ಥಿಗಳು ಡಿಪ್ಲೋಮಾ ಹಾಗೂ ಪದವಿ ಪಡೆದುಕೊಂಡಿದ್ದರು ಕೂಡ ಕೆಲಸ ಸಿಗದಿದ್ದರೆ ನಿರುದ್ಯೋಗಿಗಳಾಗಿ ಮನೆಯಲ್ಲಿ ಉಳಿಯುವುದರಿಂದ, ತಂದೆ ತಾಯಿಗೆ ಹೊರೆ ಹಾಗುತ್ತಾರೆ. ಹಾಗೂ ಒಂದೊಳ್ಳೆ ಸೂಕ್ತವಾದ ಕೆಲಸವನ್ನು ಹುಡುಕಲು ಹಲವಾರು ಖರ್ಚು ಹಾಗೆ ಆಗುತ್ತದೆ. ಅದಕ್ಕಾಗಿ ವಿದ್ಯಾರ್ಥಿಯ ಖರ್ಚಿನ ಹಣವನ್ನು ಸರ್ಕಾರದಿಂದ ನೀಡಬೇಕು ಎಂಬ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ.

ಮುಖ್ಯಮಂತ್ರಿಸಿದ್ದರಾಮಯ್ಯನವರು ಕಳೆದ ಆರು ತಿಂಗಳ ಹಿಂದೆಯೇ ಈ ಒಂದು ಯುವನಿಧಿ ಯೋಜನೆಯ ಬಗ್ಗೆ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದರು, ಅಂದರೆ ಯಾವ ವಿದ್ಯಾರ್ಥಿಗೆ ಕೆಲಸ ಸಿಗದೇ ನಿರುದ್ಯೋಗಿಯಾಗಿ ಮನೆಯಲ್ಲೇ ಉಳಿದುಕೊಂಡಿರುತ್ತಾರೋ ಅಂಥಹ ವಿದ್ಯಾರ್ಥಿಗಳಿಗೆ ಕೆಲಸ ಸಿಗುವವರೆಗೂ ಕೂಡ ಸರ್ಕಾರದಿಂದ ಹಣ ತಲುಪುತ್ತದೆ, ಎಂಬ ಭರವಸೆ ವಿದ್ಯಾರ್ಥಿಗಳಿಗೆ ನೀಡಿದ್ದರು. ಹಾಗಾಗಿ ಜನವರಿ ತಿಂಗಳಲ್ಲಿ ಈ ಒಂದು ಯೋಜನೆ ಜಾರಿಗೊಳ್ಳುತ್ತದೆ.

ವಿದ್ಯಾರ್ಥಿಗಳು ಡಿಪ್ಲೋಮಾವನ್ನು ಈ ವರ್ಷದಂದು ಪೂರ್ಣಗೊಳಿಸಿ ಕೆಲಸ ಹುಡುಕಲು ಮುಂದಾಗಿದ್ದರೂ ಕೂಡ ಯಾವ ಕೆಲಸವು ಸಿಗದಿದ್ದರೆ ಅಂಥಹ, ವಿದ್ಯಾರ್ಥಿಗಳಿಗೆ 1,500 ಹಣವನ್ನು ವಿದ್ಯಾರ್ಥಿಯ ಖಾತೆಗೆ ವರ್ಗಾವಣೆ ಮಾಡಲಿದೆ ಸರ್ಕಾರ. ಹಾಗೂ ಈ ವರ್ಷದಂದು ಡಿಗ್ರಿ ಮುಗಿಸಿದ ವಿದ್ಯಾರ್ಥಿಗಳಿಗೆ 3,000 ಹಣವನ್ನು ವಿದ್ಯಾರ್ಥಿ ಖಾತೆಗೆ ವರ್ಗಾವಣೆ ಮಾಡಲಿದೆ ರಾಜ್ಯ ಸರ್ಕಾರ. 2024ನೇ ಸಾಲಿನ ಜನವರಿ ತಿಂಗಳಿನಿಂದ ಈ ಒಂದು ಯುವನಿಧಿ ಯೋಜನೆಗೆ ದಿನಾಂಕವನ್ನು ನಿಗದಿಪಡಿಸಿ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸುವ ಆಯ್ಕೆಯನ್ನು ನೀಡಿ ನಂತರ ವಿದ್ಯಾರ್ಥಿ ಖಾತೆಗೆ ಹಣವನ್ನು ವರ್ಗಾವಣೆ ಮಾಡಲು ಸೂಚನೆ ನೀಡಿದೆ ಸರ್ಕಾರ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು ! ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ..

Leave a Comment