ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದ ರಕ್ಷಕ್, ವರ್ತೂರ್ ಸಂತೋಷ್ ಮದುವೆಯ ವಿಚಾರದಲ್ಲಿ ಏನು ಹೇಳಿಕೆ ನೀಡಿದರು ?

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ.

ಬಿಗ್ ಬಾಸ್ ಸೀಸನ್ 10ರಲ್ಲಿ ಬುಲೆಟ್ ಪ್ರಕಾಶ್ ರವರ ಮಗ ರಕ್ಷಕ್ ಬುಲೆಟ್ ಸಹ ಭಾಗವಹಿಸಿದ್ದರು. ಬಿಗ್ ಬಾಸ್ ಸೀಸನ್ ಹತ್ತರ ಸ್ಪರ್ಧಿಯಾಗಿ ರಕ್ಷಕ್ ಬುಲೆಟ್ ಆಯ್ಕೆಯಾಗಿದ್ದರು. ರಕ್ಷಕ್ ಬಿಗ್ ಬಾಸ್ ಮನೆಯಲ್ಲಿ ಚೆನ್ನಾಗಿ ಟಸ್ಕ್ಗಳನ್ನು ಮಾಡುತ್ತಿದ್ದರು ಆದರೆ ಇದೀಗ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ ಎಂದು ಅವರ ಅಭಿಮಾನಿಗಳು ಮತ್ತು ಅವರ ಮನೆ ಕುಟುಂಬದವರು ಹೇಳಿಕೆಯನ್ನು ನೀಡುತ್ತಿದ್ದಾರಂತೆ, ಇಂದು ರಕ್ಷದ್ ಬುಲೆಟ್ ಮಾಧ್ಯಮಗಳ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಅಲ್ಲಿನ ಸ್ಪರ್ಧಿಗಳ ಜೊತೆಗಿನ ಸಂಬಂಧ ಸ್ನೇಹ ಎಲ್ಲವನ್ನು ಬಿಟ್ಟು ಬರಲು, ನನಗೆ ತುಂಬಾ ಬೇಜಾರಾಯ್ತು ಯಾಕಾದರೂ ಇಷ್ಟು ಬೇಗ ಎಲಿಮಿನೇಟ್ ಆಗಿ ಹೊರ ಬಂದೆ ಎಂದು ನನಗೆ ತಿಳಿಯುತ್ತಿಲ್ಲ.

WhatsApp Group Join Now
Telegram Group Join Now

ನಾನು ಟಾಸ್ಕ್ ವಿಚಾರವಾಗಲಿ ಮತ್ತೊಂದು ವಿಚಾರದಲ್ಲಿ ನಾನು ಎಲ್ಲಾ ಆಟಗಳಲ್ಲೂ ಚೆನ್ನಾಗಿ ಭಾಗವಹಿಸುತ್ತಿದೆ.ಆದರೂ ನಾನು ಏಕೆ ಎಲಿಮಿನೇಟ್ ಅದೇ ಎಂದು ಒಂದು ಪ್ರಶ್ನೆ ನನಗೆ ಕಾಡುತ್ತಿದೆ ಎಂದು ಬುಲೆಟ್ ಹೇಳಿಕೆ ನೀಡಿದರು. ಬುಲೆಟ್ ಮತ್ತು ವರ್ತೂರ್ ಸಂತೋಷ್ ಸ್ನೇಹ ಬಿಗ್ ಬಾಸ್ ಮನೆಯಲ್ಲಿ ಮೊದಲಿಗೆ ತುಂಬಾ ಗಟ್ಟಿಯಾಗಿತ್ತು. ಆದರೆ ವರ್ತೂರ್ ಸಂತೋಷ್ ಹುಲಿ ಉಗುರಿನ ವಿಚಾರದಲ್ಲಿ ಕೆಲವು ದಿನಗಳು ಬಿಗ್ ಬಾಸ್ ಮನೆಯ ಆಚೆ ಉಳಿದರು. ಆದ್ದರಿಂದ ಎಲ್ಲಾ ಸ್ಪರ್ಧಿಗಳು ರಕ್ಷಕ್ ಆಟವನ್ನು ಸರಿಯಾಗಿ ಆಡುತ್ತಿಲ್ಲ. ವರ್ತೂರ್ ಸಂತೋಷ್ ಇದ್ದಾಗ ತುಂಬಾ ಚೆನ್ನಾಗಿ ಆಟವಾಡುತ್ತಿದ್ದೆ ಎಂದು ಹೇಳಿ ಮೊದಲಿಗೆ ಎಲಿಮಿನೇಟ್ ಮಾಡಿದ್ದರು.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ವರ್ತೂರ್ ಸಂತೋಷ್ಗೆ ಹುಡುಗಿ ಫಿಕ್ಸ್ ಆಗಿದೆ ಎಂದು ರಕ್ಷಕ್ ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಹೇಳುತ್ತಿದ್ದಾರೆ. ವರ್ತುರ್ ಸಂತೋಷ್ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಮುಂದಿನ ದಿನಗಳಲ್ಲಿ ಅವರ ನಿಶ್ಚಿತಾರ್ಥವು ಕೂಡ ನಡೆಯಲಿದೆ ಎಂದು ರಕ್ಷಕ್ ಮಾಧ್ಯಮಗಳ ಸಂದರ್ಶನದಲ್ಲಿ ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನಾವು ತಮಾಷೆಗಾಗಿ ವರ್ತುರ್ ಸಂತೋಷ್ಗೆ ರೇಗಿಸುತ್ತಿದ್ದೆವು.ತುಕಾಲಿ ಸಂತೋಷ್ ಮತ್ತು ನಾನು ಸುಮ್ಮನೆ ವರ್ತುರ್ ಸಂತೋಷ್ ಗೆ ರೇಗಿಸಿ ತಮಾಷೆ ಮಾಡುತ್ತಿದ್ದೆವು. ವರ್ತೂರ್ ಸಂತೋಷ್ ತುಂಬಾ ಒಳ್ಳೆಯ ವ್ಯಕ್ತಿ ಅವರ ಗುಣಗಳು ಅವರ ನಡತೆ ಒಂದು ಒಳ್ಳೆಯ ಸ್ವಭಾವದ ವ್ಯಕ್ತಿ ಎಂದು ರಕ್ಷಕ್ ಹೇಳಿದ್ದಾರೆ. ವರ್ತರ್ ಸಂತೋಷ್ ಗೆ ಹುಡುಗಿಯೂ ಸಹ ಫಿಕ್ಸ್ ಆಗಿದೆ ಅವರ ನಿಶ್ಚಿತಾರ್ಥವು ಕೂಡ ಬಿಗ್ ಬಾಸ್ ಮನೆಯಿಂದ ಬಂದ ಮೇಲೆ ನಡೆಯುತ್ತದೆ.

ಆದರೆ ನೀವು ತನಿಷಾ ಮತ್ತು ವರ್ತೂರ್ ಸಂತೋಷ್ ಬಗ್ಗೆ ಜನಗಳು ಮಾತನಾಡುತ್ತಿರುವುದಕ್ಕೆ ತಲೆಕೆಡಿಸಿಕೊಳ್ಳಬೇಡಿ ಎಂದು ವರ್ತೂರು ಸಂತೋಷ್ಗೆ ನಿಶ್ಚಯ ಮಾಡಿದ ಹುಡುಗಿಗೆ ಹೇಳಿದ್ದಾರೆ. ಇದೆಲ್ಲಾ ಸುಮ್ಮನೆ ತಮಾಷೆಗಾಗಿ ಮಾತ್ರ ಇದನ್ನು ನೀವು ನಿಜವಾಗಿ ಮನಸ್ಸಿಗೆ ತೆಗೆದುಕೊಳ್ಳಬೇಡಿ ವರ್ತುರ್ ಸಂತೋಷ್ ತನಿಷ ಪ್ರೀತಿ ಮಾಡುತ್ತಿಲ್ಲ ಸುಮ್ಮನೆ ಕಾಮಿಡಿ ತಮಾಷೆಗಾಗಿ ಮಾತ್ರ ರೇಗಿಸುತ್ತಿದ್ದಾರೆ ಅಷ್ಟೇ ನೀವು ಏನು ತಲೆ ಕೆಡಿಸಿಕೊಳ್ಳಬೇಡಿ. ಎಂದು ಸಂತೋಷ್ ಗೆ ನಿಶ್ಚಯವಾದ ಹುಡುಗಿಗೆ ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನೂರು ದಿನ ಮಾತ್ರ ಇರುತ್ತದೆ ಆದರೆ ಹೊರಗಡೆ ಮತ್ತೊಂದು ಜೀವನವಿರುತ್ತದೆ ಆದರೆ ಅದು ನೂರು ದಿನವಲ್ಲ ಜೀವನಪೂರ್ತಿ ನೀವು ಆ ಮಾತುಗಳನ್ನು ಕೇಳಿ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ ಅದನ್ನೆಲ್ಲ ನೀವು ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ ಎಂದು ಟಿವಿ ಮಾಧ್ಯಮಗಳ ಸಂದರ್ಶನದಲ್ಲಿ ಎಲ್ಲಾ ರೀತಿಯಲ್ಲೂ ಸಹ ಹೇಳಿದ್ದಾರೆ.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಬಿಗ್ ಬಾಸ್ ಮನೆಯಲ್ಲಿ ನಾನು ಫೈನಲ್ ವರೆಗೂ ಇರಬೇಕಿತ್ತು ಆದರೆ ಇಷ್ಟು ಬೇಗ ಹೊರ ಬರುತ್ತೇನೆ ಎಂದು ನನಗೆ ಗೊತ್ತೇ ಇರಲಿಲ್ಲ ನಮ್ಮ ಮನೆಯವರಿಗೂ ಸಹ ಅದೊಂದು ಶಾಕ್ ವಿಚಾರವಾಗಿದೆ. ಬಿಗ್ ಬಾಸ್ ಮನೆಯ ಲೈಫೇ ಬೇರೆ ಆದರೆ ಹೊರ ಜಗತ್ತೇ ಬೇರೆ, ನಾವು ಅಲ್ಲಿನ ಕೆಲವು ವಿಚಾರಗಳಿಗೆ ರಿಯಲ್ ಲೈಫ್ ನಲ್ಲಿ ತಲೆ ಕೆಡಿಸಿಕೊಳ್ಳಬಾರದು. ಬಿಗ್ ಬಾಸ್ ಮನೆಯಲ್ಲಿ ನಡೆಯುವುದು ಕಾಮಿಡಿ ಮಾತುಗಳು ಅಷ್ಟೇ ಅದನ್ನು ಸೀರಿಯಸ್ ಆಗಿ ತೆಗೆದುಕೊಳ್ಳಬಾರದು. ವರ್ತೂರ್ ಸಂತೋಷ್ ಹುಡುಗಿ ಏನಾದರೂ ನಾವು ರೇಗಿಸುವುದನ್ನು ತಪ್ಪಾಗಿ ತಿಳಿದುಕೊಂಡಿದ್ದರೆ ದಯವಿಟ್ಟು ಕ್ಷಮಿಸಿ ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ.ಬಿಗ್ ಬಾಸ್ ಮನೆಯಲ್ಲಿ ಇಷ್ಟು ದಿನ ನನ್ನನ್ನು ವೋಟ್ ಮಾಡಿ ಪ್ರೋತ್ಸಾಹಿಸಿದ್ದಕ್ಕೆ ಮತ್ತು ನನ್ನ ಅಭಿಮಾನಿಗಳಿಗೂ ತುಂಬಾ ಧನ್ಯವಾದಗಳು ಎಂದು ಹೇಳಿದರು.

ಈ ಲೇಖನವನ್ನು ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.

Leave a Comment