SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಕೊಟ್ಟ ಶಿಕ್ಷಣ ಮಂಡಳಿ. ಮೂರು ಸುತ್ತಿನ ಪರೀಕ್ಷೆಗೆ ಒಂದು ಬಾರಿ ಮಾತ್ರ ಪರೀಕ್ಷಾ ಶುಲ್ಕವನ್ನು ಪಾವತಿಸತಕ್ಕದ್ದು.

ಎಲ್ಲರಿಗೂ ನಮಸ್ಕಾರ…

ಈಗಾಗಲೇ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆಯಾಗಿದೆ. ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ಈ ಒಂದು ಸುದ್ದಿ ಗೊತ್ತಿರುವಂತದ್ದೆ, ಅದೇ ರೀತಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಮೂರು ಬಾರಿ ಬರೆಯಲು ಅವಕಾಶ ನೀಡಿದೆ ಶಿಕ್ಷಣ ಮಂಡಳಿ. ವಿದ್ಯಾರ್ಥಿಗಳು ಒಂದನೇ ಸುತ್ತಿನ ಪರೀಕ್ಷೆಯಲ್ಲಿ ವಿಫಲರಾದರೆ ಇನ್ನು ಉಳಿದ ಎರಡು ಸುತ್ತಿನ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು. ಈ ಕಾರಣಕ್ಕಾಗಿ 2023-24ನೇ ಸಾಲಿನಲ್ಲಿ ಮಾತ್ರ ವಾರ್ಷಿಕ ಪರೀಕ್ಷೆಯಲ್ಲಿ ಬದಲಾವಣೆ ಮಾಡಿದೆ ಶಿಕ್ಷಣ ಮಂಡಳಿ. ಮಧು ಬಂಗಾರಪ್ಪನವರು ಈಗಾಗಲೇ ಈ ಮೇಲ್ಕಂಡ ಸುದ್ದಿಯನ್ನು ಪ್ರಸ್ತುತಪಡಿಸಿದ್ದಾರೆ, ವಾರ್ಷಿಕ ಪರೀಕ್ಷೆಯು ಯಾವ ರೀತಿ ನಡೆಯುತ್ತದೆ ಎಂದು ಕಾದು ನೋಡಬೇಕಿದೆ.

WhatsApp Group Join Now
Telegram Group Join Now

ಎಸೆಸೆಲ್ಸಿ ವಿದ್ಯಾರ್ಥಿಗಳು ಈ ವರ್ಷದಂದು ಮೂರು ಬಾರಿ ಪರೀಕ್ಷೆಯನ್ನು ಬರೆಯಲು ಅವಕಾಶ ಮಾಡಿಕೊಟ್ಟಿದೆ ಶಿಕ್ಷಣ ಇಲಾಖೆ, ಅದೇ ರೀತಿ ವಿದ್ಯಾರ್ಥಿಗಳು ಕೂಡ ಮೊದಲನೇ ಸುತ್ತಿನ ಪರೀಕ್ಷೆಯನ್ನು ಬರೆದು ವಿಫಲರಾದರೆ ಅಥವಾ ಉತ್ತೀರ್ಣರಾದರು ಕೂಡ ವಿದ್ಯಾರ್ಥಿಗಳು ಉಳಿದ ಎರಡು ಪರೀಕ್ಷೆಯನ್ನು ಬರೆಯುತ್ತೇವೆ ಎಂದು ಪಣತೊಟ್ಟರೆ ಅಂಥ ವಿದ್ಯಾರ್ಥಿಗಳು ಮಾತ್ರ ಉಳಿದ ಎರಡು ಪರೀಕ್ಷೆಯನ್ನು ಬರೆಯಬಹುದು, ಹಾಗೂ ವಿಫಲರಾದ ವಿದ್ಯಾರ್ಥಿಗಳು ಕೂಡ ಎರಡು ಪರೀಕ್ಷೆಯನ್ನು ಬರೆಯಬಹುದು, ಮತ್ತು ಈ ಮೂರು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅಂಕವನ್ನು ಹೆಚ್ಚು ಗಳಿಸಿದ ಸುತ್ತಿನ ಅಂಕವನ್ನು ಪರಿಗಣಿಸಲಾಗುತ್ತದೆ, ಎಂದು ಮಧು ಬಂಗಾರಪ್ಪನವರು ಹೇಳಿಕೆ ನೀಡಿದ್ದಾರೆ.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಹಲವು ವರ್ಷಗಳಿಂದ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಹಲವಾರು ಬದಲಾವಣೆಯನ್ನು ಕಂಡು ಪರೀಕ್ಷೆಯನ್ನು ಬರೆಯುತ್ತಿದ್ದಾರೆ, ಅದೇ ರೀತಿ ಈ ವರ್ಷದಂದು ಕೂಡ ಹೊಸ ಹೊಸ ನಿಯಮಗಳು ಜಾರಿಯಾಗಿವೆ, ಆ ಹೊಸ ಹೊಸ ನಿಯಮದಂತೆ ವಿದ್ಯಾರ್ಥಿಗಳು ಕೂಡ ಪಾಲಿಸಿ ಪರೀಕ್ಷೆಯನ್ನು ಬರೆಯತಕ್ಕದ್ದು.

ಈ ವರ್ಷದಂದೆ ಜಾರಿಯಾದ ಹೊಸ ನಿಯಮವೆಂದರೆ ಅದುವೇ ಮೂರು ಸುತ್ತಿನ ಪರೀಕ್ಷೆ. ಈ ಮೂರು ಸುತ್ತಿನ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕವನ್ನು ಒಂದು ಬಾರಿ ಮಾತ್ರ ಪಾವತಿಸತಕ್ಕದ್ದು. ಅಂದರೆ ಮೂರು ಪ್ರಯತ್ನಗಳನ್ನು ಪರೀಕ್ಷೆ ಬರೆಯುತ್ತೇನೆ ಎಂದ ವಿದ್ಯಾರ್ಥಿಗಳಿಗೆ ಒಂದು ಬಾರಿ ಮಾತ್ರ ಪರೀಕ್ಷಾ ಶುಲ್ಕವನ್ನು ಕಟ್ಟಿಸಿಕೊಳ್ಳುತ್ತದೆ ಶಿಕ್ಷಣ ಇಲಾಖೆ.

ಈ ಹಿಂದೆ ಈ ರೀತಿಯಾದ ನಿಯಮಗಳು ಇರಲಿಲ್ಲ. ಆದರೆ ಈ ವರ್ಷದಂದು ಮಾತ್ರ ಈ ನಿಯಮ ಜಾರಿಯಾಗಿದೆ. ಆಗಿನ ಪರೀಕ್ಷೆಗಳಲ್ಲಿ ಪ್ರತಿ ಸಲ ಪರೀಕ್ಷೆ ಬರೆಯುವಾಗ ಪರೀಕ್ಷಾ ಶುಲ್ಕವನ್ನು ಕಟ್ಟಿ, ನಂತರ ಪರೀಕ್ಷೆ ಬರೆಯಬೇಕಿತ್ತು, ಆದರೆ ಈಗ ಹಾಗಲ್ಲ, ಮೂರು ಬಾರಿ ಪ್ರಯತ್ನ ಮಾಡಿದರು ಕೂಡ ಪರೀಕ್ಷೆಯನ್ನು, ಒಂದು ಬಾರಿ ಮಾತ್ರ ಪರೀಕ್ಷಾ ಶುಲ್ಕವನ್ನು ಕಟ್ಟಬಹುದು.

ಎಸೆಸೆಲ್ಸಿ ಓದುತ್ತಿರುವ ವಿದ್ಯಾರ್ಥಿಗಳು ಯಾವ ಮಾಧ್ಯಮವನ್ನು ಆರಿಸಿಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದರೋ, ಅದೇ ಮಾಧ್ಯಮದಲ್ಲಿ ಪರೀಕ್ಷೆಯನ್ನು ಬರೆಯಬಹುದು. ಆದರೆ ಕನ್ನಡ ವಿಷಯ ಎಲ್ಲಾ ವಿದ್ಯಾರ್ಥಿಗಳಿಗೂ ಕಡ್ಡಾಯವಾಗಿದೆ, ಎಲ್ಲಾ ವಿದ್ಯಾರ್ಥಿಗಳು ಕೂಡ ಕನ್ನಡ ವಿಷಯದ ಪರೀಕ್ಷೆ ಬರೆಯಲೇಬೇಕು. ವಿದ್ಯಾರ್ಥಿಗಳು ಉತ್ತೀರ್ಣರಾಗಬೇಕೆಂಬ ಕಾರಣದಿಂದ ಮುಂದಿನ ವರ್ಷದಂದು 500 ರಿಂದ 600 ಕೆಪಿಎಸ್ ಶಾಲೆಗಳನ್ನು ತೆರೆಯಬೇಕು ಎಂಬ ಪಣತೊಟ್ಟಿದೆ ಶಿಕ್ಷಣ ಇಲಾಖೆ. ಈ ವರ್ಷದ ಒಂದು 43,000 ಅತಿಥಿ ಶಿಕ್ಷಕರನ್ನು ನೇಮಿಸಿದೆ ಶಿಕ್ಷಣ ಇಲಾಖೆ. ಹಾಗೂ 13,000 ಖಾಯಂ ಶಿಕ್ಷಕರನ್ನು ಕೂಡ ನೇಮಿಸಿದೆ.

ಲೇಖನವನ್ನು ಕೊನೆವರೆಗೂ ಓದಿದ್ದಕ್ಕೆ ಧನ್ಯವಾದಗಳು ! ಮತ್ತೆ ಸಿಗೋಣ ಮುಂದಿನ ವಿಷಯದೊಂದಿಗೆ.

Leave a Comment