ಮೊಟ್ಟೆ ಬೆಲೆ ಏರಿಕೆಯಾದ ಕಾರಣ ದಿಂದ, ಅಂಗನವಾಡಿ ಮಕ್ಕಳಿಗೆ ಮೊಟ್ಟೆ ಪೂರೈಕೆ ಸ್ಥಗಿತ !

ಎಲ್ಲರಿಗೂ ನಮಸ್ಕಾರ..

ಅಂಗನವಾಡಿ ಮಕ್ಕಳಿಗೆ ಎಷ್ಟೋ ವರ್ಷಗಳಿಂದ ಮೊಟ್ಟೆ ಪೂರೈಸುತ್ತಿರುವ, ಕರ್ನಾಟಕ ಸರಕಾರ ಕೋಳಿ ಒಕ್ಕೂಟ ದವರು ಹಾಗೂ ಕೆಲವು ಗುತ್ತಿಗೆದಾರರು ಇಂದಿನವರೆಗೂ ಅಂಗನವಾಡಿ ಮಕ್ಕಳಿಗೆ ಮೊಟ್ಟೆಯನ್ನು ಸರಬರಾಜು ಮಾಡುತ್ತಿದ್ದರು. ಆದರೆ ಇನ್ಮುಂದೆ ಮೊಟ್ಟೆಯ ಬೆಲೆ ಏರಿಕೆಯಾದ ಕಾರಣಾಂತರದಿಂದ ಮೊಟ್ಟೆಯನ್ನು ಸ್ಥಗಿತಗೊಳಿಸುತ್ತೇವೆ ಎಂದು ಸೂಚನೆ ನೀಡಿದ್ದಾರೆ. ಮೊಟ್ಟೆಯ ವಿತರಣೆಯಲ್ಲಿ ಕೆಲವು ಬದಲಾವಣೆ ಮಾಡಲಿರುವ ಕರ್ನಾಟಕ ಸರಕಾರ ಕೋಳಿ ಒಕ್ಕೂಟದವರು. ಈವರೆಗೂ 65,911 ಅಂಗನವಾಡಿಗಳಿಗೆ ಮೊಟ್ಟೆ ಸರಬರಾಜು ಆಗುತ್ತಿತ್ತು.

WhatsApp Group Join Now
Telegram Group Join Now

ಆದರೆ ಇನ್ಮುಂದೆ ಕೆಲವು ಬದಲಾವಣೆಯನ್ನು, ಈ ಮೊಟ್ಟೆಯಲ್ಲಿ ತರಲಿದೆ ಕೋಳಿ ಒಕ್ಕೂಟ. ಮತ್ತು 41 ಲಕ್ಷ ಮಕ್ಕಳಿಗೆ, ಸರಕಾರದ ಯೋಜನೆಯಾದ ಮಾತೃಪೂರ್ಣ ಯೋಜನೆ ಅಡಿಯಲ್ಲಿ ಆಹಾರ ಗಳನ್ನು ಪಡೆದುಕೊಳ್ಳುತ್ತಿರುವ ಬಾಣತಿಯರ ಹಾಗೂ ಗರ್ಭಿಣಿಯರ ಮೊಟ್ಟೆ ಆಹಾರದಲ್ಲಿ ಭಾರಿ ಬದಲಾವಣೆಯನ್ನು ತರಲಿದೆ ಸರ್ಕಾರ. ಪೂರ್ಣವಾದ ವಿವರವನ್ನು ಈ ಕೆಳಕಂಡ ಲೇಖನದಲ್ಲಿ ನೀಡಲಾಗಿದೆ ಕೊನೆವರೆಗೂ ಲೇಖನವನ್ನು ಓದಿ.

ರಾಜ್ಯದ ಎಲ್ಲಾ ಯೋಜನೆಗಳನ್ನು ಕೂಡ ಜನಗಳು ಉಪಯೋಗಿಸಿಕೊಳ್ಳುತ್ತಿದ್ದಾರೆ. ಆದರೆ ಅಂಗನವಾಡಿ ಮಕ್ಕಳಿಗೆ ತಲುಪುವಂತಹ ಪೌಷ್ಟಿಕತೆಯ ಆಹಾರವೆಂದರೆ, ಅದುವೇ ಮೊಟ್ಟೆ, ಈ ಮೊಟ್ಟೆಯನ್ನು ಕೂಡ ಸ್ಥಗಿತಗೊಳಿಸಲು ಕಾರಣವೇನೆಂದರೆ, ಮೊಟ್ಟೆಯ ಬೆಲೆ ಏರಿಕೆಯಲ್ಲಿದೆ, ಹಾಗೂ ಕರ್ನಾಟಕದಲ್ಲಿ ಕೋಳಿ ಸಾಕಣಿಕೆಯು ಕೂಡ ಕಡಿಮೆಯಾಗಿದೆ ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಕೋಳಿ ಒಕ್ಕೂಟವು ಇಂದಿನಿಂದ ಅಂಗನವಾಡಿ ಮಕ್ಕಳಿಗೆ ಹಾಗೂ ಬಾಣತಿಯರಿಗೆ ಮೊಟ್ಟೆಯನ್ನು ಸ್ಥಗಿತಗೊಳಿಸುತ್ತಿದ್ದಾರೆ.

ಅಂದರೆಮೊಟ್ಟೆಯನ್ನು ಇನ್ಮುಂದೆ ವಿತರಿಸುವುದಿಲ್ಲ. ಈ ಮೊಟ್ಟೆಯನ್ನು ವಿತರಿಸಲು ಕೂಡ ಹಲವು ಬದಲಾವಣೆ ಮಾಡಿದೆ ಅದೇನೆಂದರೆ, ವಾರದಲ್ಲಿ ಇಷ್ಟು ಬಾರಿಯೇ ಮೊಟ್ಟೆಯನ್ನು ಮಕ್ಕಳಿಗೆ ಹಾಗೂ ಬಾಣತಿಯರಿಗೆ ನೀಡಬೇಕೆಂಬ ಬದಲಾವಣೆ. ರಾಜ್ಯದಲ್ಲಿರುವ 65,91 ಅಂಗನವಾಡಿಗಳು ಇದೆ ಈ ಅಂಗನವಾಡಿಗಳಲ್ಲಿ 41 ಲಕ್ಷ ಏನು ಅರಿಯದ ಹಸು ಕೂಸುಗಳು ಅಕ್ಷರಗಳನ್ನು ಕಲಿಯುತ್ತಿದ್ದಾರೆ. ಹಾಗೂ ಮಾತೃಪೂರ್ಣ ಯೋಜನೆ ಅಡಿಯಲ್ಲಿ ಸಾಕಷ್ಟು ಬಾಣತಿ ಮಹಿಳೆಯರು ಪೌಷ್ಟಿಕ ಆಹಾರವನ್ನು ಈ ಅಂಗನವಾಡಿ ಮೂಲಕ ಪಡೆದುಕೊಳ್ಳುತ್ತಿದ್ದಾರೆ.

ಕೆಲವು ತಾಲೂಕಿನಲ್ಲಿ ಈಗಾಗಲೇ 80 ರಷ್ಟು ಸ್ಥಗಿತ ಮಾಡತೊಡಗುತ್ತಿದೆ ಕರ್ನಾಟಕ ಸರಕಾರ ಕೋಳಿ ಒಕ್ಕೂಟ. ಸ್ಥಗಿತಗೊಳಿಸಲು ಕಾರಣಾಂತರಗಳು ಹಲವಾರು ಇದೆ ಅದರಲ್ಲಿ ಒಂದಾದ ಕಾರಣವೆಂದರೆ ಮೊಟ್ಟೆಯ ಬೆಲೆ ಏರಿಕೆಯಾಗಿದೆ ಹಾಗೂ ಕೋಳಿ ಸಾಕಾಣಿಕೆಯು ಕೂಡ ಕಡಿಮೆಯಾಗಿದೆ, ಈ ಕಾರಣದಿಂದ ಮೊಟ್ಟೆ ಬೆಲೆ ಏರಿಕೆಯಾಗಿದೆ. ಸಾಕಾಣಿಕೆಯನ್ನೇ ನಂಬಿಕೊಂಡು ಜೀವನ ಮಾಡುತ್ತಿರುವ ಕುಟುಂಬಗಳು ನಷ್ಟದಲ್ಲಿದ್ದಾರೆ, ಅದಕ್ಕಾಗಿ ಮೊಟ್ಟೆ ಬೆಲೆ ಏರಿಕೆಯಾಗಿದೆ.

ಅಂಗನವಾಡಿ ಮಕ್ಕಳಿಗೆ ಮೊಟ್ಟೆ ಸಿಗಲ್ವ !

ಅಂಗನವಾಡಿಗೆಮೊಟ್ಟೆಯನ್ನು ಪೂರೈಕೆ ಮಾಡುವ ಕೋಳಿ ಒಕ್ಕೂಟದವರು ಕೂಡ ನಷ್ಟಕ್ಕೆ ಒಳಗಾಗಿದ್ದಾರೆ ಏಕೆಂದರೆ ಒಂದು ಮೊಟ್ಟೆಯ ಬೆಲೆ ₹5.75 ರಿಂದ 5.80 ನೀಡಿ ಮೊಟ್ಟೆಯನ್ನು ಖರೀದಿಸುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ಈ ಮೊಟ್ಟೆಯ ಬೆಲೆಯೂ ಬಾರಿ ಬದಲಾವಣೆಯನ್ನು ಕಂಡಿದೆ ಒಂದು ಮೊಟ್ಟೆಯ ಬೆಲೆ ₹6.50 ರಿಂದ ₹7 ರ ವರೆಗೆ ಏರಿಕೆಯಾಗಿದೆ. ಇದರಿಂದ ಕೋಳಿ ಒಕ್ಕೂಟದವರು ₹1 ರಿಂದ 1.25 ಹಣವನ್ನು ಹೆಚ್ಚಿಸಿದ ಕಾರಣದಿಂದ ನಷ್ಟವಾಗುತ್ತಿದೆ ಎಂದು ಅಂಗನವಾಡಿಗಳಲ್ಲಿ ಮೊಟ್ಟೆ ಕೊಡುವುದನ್ನು ಸ್ಥಗಿತಗೊಳಿಸುತ್ತೇವೆ ಎಂದು ಕೋಳಿ ಒಕ್ಕೂದವರು ಹೇಳಿಕೆ ನೀಡಿದ್ದಾರೆ.

ಮೊಟ್ಟೆ ವಿತರಿಸಲು ಸ್ಥಗಿತವಾಗಿದ್ದರು ಕೂಡ ನಿಮ್ಮ ಊರಿನಲ್ಲಿರುವ ಅಂಗಡಿಗಳಲ್ಲಿ ಖರೀದಿಸಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಆದೇಶ ನೀಡಿದ್ದಾರೆ. ಅಂಗನವಾಡಿ ಕಾರ್ಯಕರ್ತರು ಹಿಂದೇಟು ಹಾಕುತ್ತಿದ್ದಾರೆ, ಏಕೆಂದರೆ ಹಣವು ಸರ್ಕಾರದಿಂದ ಸ್ಥಳೀಯ ಅಂಗಡಿಗಳಲ್ಲಿ ಖರೀದಿಸಲು ಬಿಡುಗಡೆ ಇನ್ನೂ ಆಗಿಲ್ಲವೆಂದು, ಅಂಗನವಾಡಿ ಕಾರ್ಯಕರ್ತರು ಹೇಳಿಕೆ ನೀಡುತ್ತಿದ್ದಾರೆ.

ಅಂಗನವಾಡಿಯಲ್ಲಿ 6 ವರ್ಷ ಒಳಗೊಂಡ ಮಕ್ಕಳಿಗೆ ವಾರದಲ್ಲಿ ಎರಡು ಬಾರಿ ಮೊಟ್ಟೆಯನ್ನು ಕೊಡಲಾಗುತ್ತಿತ್ತು, ಹಾಗೂ ಬಾಣತಿ ಮತ್ತು ಗರ್ಭಿಣಿಯರಿಗೆ ಆರು ದಿನವೂ ಕೂಡ ಮೊಟ್ಟೆಯನ್ನು ಪೂರೈಸುತ್ತಿದ್ದರು, ಹಾಗೂ ತೂಕ ಕಡಿಮೆ ಇರುವ ಮಕ್ಕಳಿಗೆ 5 ದಿನಗಳು ಮಾತ್ರ ಮೊಟ್ಟೆಯನ್ನು ಪೂರೈಸುತ್ತಿದೆ, ಸಮಗ್ರ ಶಿಶು ಅಭಿವೃದ್ಧಿ ಸೇವಾ ಯೋಜನೆ.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು ! ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ..

Leave a Comment