ಪಡಿತರ ಚೀಟಿಯಲ್ಲಿ ಹೆಸರನ್ನು ತೆಗಿಸಿದವರಿಗೆ ಮತ್ತೆ ಸಂಕಷ್ಟ ಎದುರಾಗಿದೆ ! ನವೆಂಬರ್ ತಿಂಗಳಿನಿಂದ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ.

ಎಲ್ಲರಿಗೂ ನಮಸ್ಕಾರ..

ಪ್ರತ್ಯೇಕ ರೇಷನ್ ಕಾರ್ಡ್ ಗಳನ್ನು ಮಾಡಿಸಲು ಹಲವಾರು ಜನರು ಅರ್ಜಿಯನ್ನು ಸಲ್ಲಿಸಿದ್ದರು. ಕೆಲವರು ಮಾತ್ರ ರೇಷನ್ ಕಾರ್ಡ್ ಇದ್ದರೂ ಕೂಡ, ರೇಷನ್ ಪಡೆದುಕೊಳ್ಳುವ ಅಭ್ಯರ್ಥಿಗಳ ಹೆಸರನ್ನು ಸೇರಿಸುತ್ತಿದ್ದರು, ಹಾಗೂ ಅಭ್ಯಯರ್ಥಿಯ ಹೆಸರನ್ನು ತಿದ್ದುಪಡಿಸಲು ಅರ್ಜಿಯನ್ನು ಕೂಡ ಸಲ್ಲಿಸಿದ್ದಾರೆ. ಈ ಹಿಂದೆ ಯಾರು ರೇಷನ್ ಕಾರ್ಡ್ ನಿಂದ ಹೆಸರನ್ನು ತೆಗೆದು ಹಾಕಿಸಿದ್ದೀರಿ ಅಂಥವರಿಗೆ ಸಂಕಷ್ಟ ಎದುರಾಗಿದೆ. ಈ ಕುರಿತು ಅನ್ನಭಾಗ್ಯ ಯೋಜನೆಯ ಹೊಸ ನಿಯಮ ಈ ಕೆಳಕಡಂತಿದೆ, ಲೇಖನವನ್ನು ಕೊನೆಯವರೆಗೂ ಓದಿ.

WhatsApp Group Join Now
Telegram Group Join Now

Ration card correction : ಏನಿದು ರೇಷನ್ ಕಾರ್ಡ್ ತಿದ್ದುಪಡಿ ? ಕೆಲವು ತಿಂಗಳಿನಿಂದ ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿಯನ್ನು ಸಲ್ಲಿಸಿ ಎಂದು ಸರ್ಕಾರ ಆದೇಶ ನೀಡಿದ್ದು, ಅನೇಕ ಕುಟುಂಬಗಳು ತಿದ್ದುಪಡಿಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಯ ಹೆಸರುಗಳನ್ನು ಸೇರಿಸುತ್ತಿದ್ದರು, ಹಾಗೂ ಅಭ್ಯರ್ಥಿಯ ಹೆಸರನ್ನು ತೆಗೆದುಹಾಕುಸುತಿದ್ದರು. ಕೆಲವರ ಕುಟುಂಬಗಳಂತೂ ನಿಯಮಗಳನ್ನು ಉಲ್ಲಂಘಿಸಿದ್ದಾರೆ.

ಒಂದೇ ಮನೆಯಲ್ಲಿ ವಾಸ ಮಾಡುವ ಮಗ ಸೊಸೆ ಮೊಮ್ಮಕ್ಕಳು ಇದ್ದರೂ ಕೂಡ ಬೇರೊಂದು ರೇಷನ್ ಕಾರ್ಡ್ ಮಾಡಿಸಲು ಅರ್ಜಿಯನ್ನು ಸಲ್ಲಿಸಿದ್ದರು. ಈ ಕಾರಣಕ್ಕಾಗಿ ಹೊಸ ರೇಷನ್ ಕಾರ್ಡ್ ಮಾಡಿಸುವಲ್ಲಿ, ಈಗಿರುವ ರೇಷನ್ ಕಾರ್ಡ್ ನಲ್ಲಿ ಹೆಸರನ್ನು ತೆಗೆಸಿ ಹೊಸ ರೇಷನ್ ಕಾರ್ಡ್ ನಲ್ಲಿ ಹೆಸರನ್ನು ಸೇರಿಸುತ್ತಿದ್ದಾರೆ. ಇಂಥಹ ಕುಟುಂಬಗಳ ಮೇಲೆ ನಿಗ ವಹಿಸಿದ ಆಹಾರ ಇಲಾಖೆಯು, ಸಂಪೂರ್ಣವಾದ ಪರಿಶೀಲನೆಯನ್ನು ಮಾಡಲು ಮುಂದಾಗಿದೆ.

ರೇಷನ್ ಕಾರ್ಡ್ ತಿದ್ದುಪಡಿಗೆ ಮುಂದಾದ ಕುಟುಂಬಗಳು !

ರಾಜ್ಯ ಸರ್ಕಾರದ ಹಲವಾರು ಯೋಜನೆಗಳ ಸೌಲಭ್ಯವನ್ನು ಉಪಯೋಗಿಸಿಕೊಳ್ಳಲು, ಹಲವಾರು ಕುಟುಂಬಗಳು ರೇಷನ್ ಕಾರ್ಡ್ ಅನ್ನು ಬದಲಿಸಿ ಅರ್ಜಿಯನ್ನು ಸಲ್ಲಿಸುತ್ತಿದ್ದರು. ಆದರೆ ಈ ವಂಚನೆಯನ್ನು ಗಮನಿಸಿದ ಸರ್ಕಾರ ಪಡಿತರ ಚೀಟಿಯನ್ನು ತಿದ್ದುಪಡಿಸಲು ಅವಕಾಶ ಮಾಡಿಕೊಟ್ಟಿದೆ. ತಿದ್ದುಪಡಿಯ ಅವಕಾಶದಿಂದ ಲಕ್ಷಾಂತರ ಕುಟುಂಬಗಳು ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ತಿದ್ದುಪಡಿಯಲ್ಲಿ ಹೆಸರುಗಳೇ ತೆಗೆಸುವ ಅರ್ಜಿಗಳೇ ಜಾಸ್ತಿ ಪೂರೈಕೆಯಾಗಿದೆ. ಜನರು ಹೆಚ್ಚಿನ ತಿದ್ದುಪಡಿ ಹೆಸರನ್ನು ಹುಡುಕಿ ಅರ್ಜಿಯನ್ನು ಸಲ್ಲಿಸಿದ್ದಕ್ಕೆ, ಅನುಮಾನಕ್ಕೆ ಒಳಗೊಂಡಿವೆ.

ಗೃಹಲಕ್ಷ್ಮಿ ಯೋಜನೆಯನ್ನು, ಮಹಿಳೆಯರು ಮಾತ್ರ ಅರ್ಜಿಯನ್ನು ಸಲ್ಲಿಸಲು ಅವಕಾಶವಿತ್ತು, ಆದರೆ ಕುಟುಂಬದ ಯಜಮಾನಿಗೆ ಮಾತ್ರ 2000 ಹಣ, ಈ ಕಾರಣಕ್ಕಾಗಿ ಹಲವಾರು ಕುಟುಂಬಗಳು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳಲು ಹೊಸ ಹೊಸ ಪಡಿತರ ಚೀಟಿಯನ್ನು ಮಾಡಿಸಲು ಅರ್ಜಿಯನ್ನು ಸಲ್ಲಿಸಿದರು. ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು ಕೂಡ ಬೇರೊಂದು ರೇಷನ್ ಕಾರ್ಡ್ ಮಾಡಿಸಲು ಮುಂದಾಗಿದ್ದರು. ಆತುರದಿಂದ ಪಡಿತರ ಚೀಟಿಯಲ್ಲಿ ಹೆಸರನ್ನು ತೆಗೆಸಿ, ಬೇರೊಂದು ರೇಷನ್ ಕಾರ್ಡ್ ಮಾಡಿಸಲು ಹೋದ ಕುಟುಂಬಗಳಿಗೆ ಇಂದೆ ಸಂಕಷ್ಟ ಎದುರಾಗಿದೆ.

ಈ ಹಿನ್ನೆಲೆಯಲ್ಲಿ ಆಹಾರ ಇಲಾಖೆಯು ಅಕ್ಟೋಬರ್ 19 ರಿಂದ 21 ರವರೆಗೆ ಪಡಿತರ ಚೀಟಿಯಾ ತಿದ್ದುಪಡೆಗೆ ಅವಕಾಶ ನೀಡಿತ್ತು. ಈ ಅವಕಾಶವನ್ನು ಕೆಲ ಕುಟುಂಬಗಳು ಸದುಪಯೋಗವಾಗಿ ಬಳಸಿಕೊಂಡು ಅರ್ಜಿಯನ್ನು ಸಲ್ಲಿಸಿದ್ದಾರೆ. ಆದರೆ ಆಹಾರ ಇಲಾಖೆಯ ಸೂಚನೆ ಏನೆಂದರೆ, ಹೊಸ ಸದಸ್ಯರು ಕುಟುಂಬಕ್ಕೆ ಸೇರಿದ್ದರೆ ಅಂಥಹ ಹೆಸರನ್ನು ಪಡಿತರ ಚೀಟಿಗೆ ಸೇರಿಸಿ. ಹಾಗೂ ಮನೆಯ ವಿಳಾಸವು ಕೂಡ ಬದಲಾವಣೆ ಮಾಡಿಕೊಂಡಿದ್ದರೆ,

ಅಂಥಹಬದಲಾವಣೆಯನ್ನು ತಿದ್ದುಪಡೆಗೆ ಅರ್ಜಿ ಸಲ್ಲಿಸಿ, ಮತ್ತು ದೀನರಾಗಿರುವ ಸದಸ್ಯರ ಹೆಸರನ್ನು ಕೂಡ ತೆಗೆದು ಹಾಕಲು ಅರ್ಜಿಯನ್ನು ಸಲ್ಲಿಸಿ, ಎಂದು ಆದೇಶ ನೀಡಿತ್ತು, ಆದರೆ ಕೆಲ ಕುಟುಂಬಗಳು ಆದೇಶವನ್ನು ಉಲ್ಲಂಘಿಸಿ ಒಂದೇ ಕುಟುಂಬದಲ್ಲಿ ನಾಲ್ಕೈದು ಪಡಿತರ ಚೀಟಿಯನ್ನು ಮಾಡಿಸಲು ಮುಂದಾಗುವ ಸಲುವಾಗಿ ತಿದ್ದುಪಡಿಯಲ್ಲಿ ಹೆಸರನ್ನು ತೆಗೆದುಹಾಕಿಸುತ್ತಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಹೆಸರನ್ನು ತೆಗೆದು ಹಾಕಿಸುವ ಅರ್ಜಿಗಳೆ ಪೂರೈಕೆಯಾಗಿದೆ, ಈ ಕಾರಣಕ್ಕಾಗಿ ಅನುಮಾನಕ್ಕೆ ಒಳಗೊಂಡಿದೆ.

ನವೆಂಬರ್ 1 ರಿಂದ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ಕೊಟ್ಟ ಸರ್ಕಾರ !

ಹೌದು ನವೆಂಬರ್ ಒಂದರಿಂದ ಮತ್ತೊಮ್ಮೆ ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರ ಅವಕಾಶ ನೀಡಿದೆ. ಈ ನಿಟ್ಟಿನಲ್ಲಿ ನೀವೇನಾದರೂ ನಿಮ್ಮ ಕುಟುಂಬದ ಸದಸ್ಯರ ಹೆಸರನ್ನು ತೆಗೆದುಹಾಕಲು ಅರ್ಜಿ ಸಲ್ಲಿಸಿದರೆ, ಅಂಥಹ ಸದಸ್ಯರ ಹೆಸರಿನಲ್ಲಿ ಯಾವುದೇ ರೀತಿಯ ಸರ್ಕಾರದ ಯೋಜನೆಗಳಲ್ಲಿ ಪಾಲ್ಗೊಳ್ಳಲು ಅವಕಾಶವಿಲ್ಲ, ಅಂದರೆ ನೀವು ಆ ಸದಸ್ಯರ ಹೆಸರಿನಲ್ಲಿ ಬೇರೊಂದು ಪಡಿತರ ಚೀಟಿ ಮಾಡಿಸಿದರು ಕೂಡ, ಅವರಿಗೆ ಸರ್ಕಾರದ ಯೋಜನೆಗಳ ಸೌಲಭ್ಯ ಲಭಿಸುವುದಿಲ್ಲ. ಹಾಗೂ ಇಂಥಹ ಸದಸ್ಯರಿಗೆ ಹೊಸ ರೇಷನ್ ಕಾರ್ಡ್ ಸಿಗುವುದು ಸಂಶೆಯಕ್ಕೆ ಒಳಗೊಂಡಿದೆ.

ಹಿಂದಿನಂತೆ ರೇಷನ್ ಕಾರ್ಡ್ ಪಡೆದುಕೊಳ್ಳಲು ಸುಲಭದ ಮಾತಲ್ಲ !

ಹೌದು ಆಗಿನ ಕಾಲದಲ್ಲಿ ಪಡಿತರ ಚೀಟಿಗಳು ಕುಟುಂಬಕ್ಕೆ ಒಂದೇ ಮಾಡಿಸುತ್ತಿದ್ದರು. ಆದರೆ ಕೆಲವು ತಿಂಗಳ ಹಿಂದೆ ಒಂದೇ ಕುಟುಂಬಕ್ಕೆ ಹಲವಾರು ರೇಷನ್ ಕಾರ್ಡ್ಗಳನ್ನು ಮಾಡಿಸಲು ಅರ್ಜಿ ಸಲ್ಲಿಸಿದ್ದಾರೆ. 2.96 ಲಕ್ಷ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಿದ್ದಾರೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಎಲ್ಲ ಅರ್ಜಿಯನ್ನು ಪರಿಶೀಲಿಸಿ ಕೆಲವು ಅರ್ಜಿಯನ್ನು ರದ್ದುಗೊಳಿಸಿದೆ. ಅರ್ಜಿ ಸಲ್ಲಿಸಿರುವ ಎಲ್ಲಾ ಅರ್ಜಿಯನ್ನು ಪೂರೈಸಿದರೆ, ಸರ್ಕಾರವು ಯೋಜನೆಗಳಲ್ಲಿ ಹೆಚ್ಚಿನ ಹಣವು ತೇರ್ಗಡೆ ಮಾಡಬೇಕಾಗುತ್ತದೆ.

ಆದ್ದರಿಂದ ಕೆಲವೊಂದು ಪಡಿತರ ಚೀಟಿಯನ್ನು ಪರಿಶೀಲಿಸಿದ ಮೇಲೆ ಹೊಸ ರೇಷನ್ ಕಾರ್ಡನ್ನು ವಿತರಿಸುತ್ತಾರೆ. ನೀವೇನಾದರೂ ನವೆಂಬರ್ ಒಂದರಿಂದ ಪಡಿತರ ಚೀಟಿಯಲ್ಲಿ ಸದಸ್ಯರ ಹೆಸರನ್ನು ತೆಗೆದು ಹಾಕಿಸುತ್ತಿದ್ದರೆ, ಗಮನವಿಟ್ಟು ಅರ್ಜಿಯನ್ನು ಸಲ್ಲಿಸಿ ಏಕೆಂದರೆ ಸದಸ್ಯರಿಗೆ ಬೇರೊಂದು ರೇಷನ್ ಕಾರ್ಡ್ ಸಿಗಲು ಕಠಿಣವಾದ ಕ್ರಮವನ್ನು ಆಹಾರ ಮತ್ತು ಸರಬರಾಜು ಇಲಾಖೆ ಕೈಗೊಳ್ಳುತ್ತದೆ.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು ! ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

 

Leave a Comment