ಆಯುಷ್ಮಾನ್ ಕಾರ್ಡ್ ಅನುಕೂಲಗಳು ಯಾರಿಗೆ ಸಿಗಲಿವೆ, ಎಲ್ಲೆಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು ಎಂದು ಇಲ್ಲಿ ತಿಳಿದುಕೊಳ್ಳಿ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ…

ಈ ಲೇಖನದಲ್ಲಿ ತಿಳಿಸುವುದೇನೆಂದರೆ ಸರ್ಕಾರವು ಆಯುಷ್ಮಾನ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಸರ್ಕಾರವು ಹಲವು ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ ಮತ್ತು ಹಲವು ಯೋಜನೆಗಳನ್ನು ಬಿಡುಗಡೆ ಮಾಡಿದೆ. ಸರ್ಕಾರವು ಆರಂಭ ಮಾಡುವಂತ ಯೋಜನೆಗಳೆಲ್ಲವೂ ಕೂಡ ಜನತಾಮಾನ್ಯರಿಗೆ ತುಂಬಾ ಸಹಾಯಕವಾಗುತ್ತದೆ ಎಂದೇ ಹೇಳಬಹುದು. ಸರ್ಕಾರವು ಒಂದು ಮುಖ್ಯ ಉದ್ದೇಶವನ್ನು ಹೊಂದಿ ದೇಶದ ಅಭಿವೃದ್ಧಿಗಾಗಿ ಮತ್ತು ಜನರ ಉಪಯೋಗಕ್ಕಾಗಿ ಕೆಲವು ಯೋಜನೆಗಳನ್ನು ಜಾರಿಗೆ ತರುತ್ತದೆ. ಬಡ ಜನರಿಗೆ ಅನುಕೂಲವಾಗುವಂತೆ ಆಯುಷ್ಮಾನ್ ಕಾರ್ಡ್ ಯೋಜನೆಯನ್ನು ಕೂಡ ಜಾರಿಗೆ ತಂದಿದೆ. ಆಯುಷ್ಮಾನ್ ಕಾರ್ಡ್ ಉಪಯೋಗಗಳೇನು, ಆಯುಷ್ಮಾನ್ ಕಾರ್ಡ್ ನಿಂದ ನಮಗೆ ಆಗುವಂತಹ ಲಾಭಗಳೇನು,ಎಲ್ಲಿ ನಾವು ಆಯುಷ್ಮಾನ್ ಕಾರ್ಡ್ ಇಂದ ಲಾಭಗಳನ್ನು ಪಡೆಯುತ್ತೇವೆ. ಎಂದು ಈ ಲೇಖನದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿದೆ.

WhatsApp Group Join Now
Telegram Group Join Now

ಆಯುಷ್ಮಾನ್ ಕಾರ್ಡ್ ಯೋಜನೆಯ ಮಹತ್ವ !

ಸರ್ಕಾರವು ಆಯುಷ್ಮಾನ್ ಕಾರ್ಡ್ ಯೋಜನೆಯನ್ನು ಜಾರಿಗೆ ತಂದಿದ್ದು, ಬಡ ಜನರಿಗೆ ಆರ್ಥಿಕ ಪರಿಸ್ಥಿತಿಯಲ್ಲಿ ಅನುಕೂಲವಾಗಲಿ. ಎಲ್ಲರೂ ಕೂಡ ಆರೋಗ್ಯವಂತರಾಗಿ ಜೀವಿಸಲಿ. ಮುಖ್ಯವಾಗಿ ಬಡ ಜನರಿಗೆ ಆರ್ಥಿಕ ಪರಿಸ್ಥಿತಿಯಲ್ಲಾದರೂ ಉಪಯೋಗವಾಗಲಿ ಎಂಬ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಎಷ್ಟೋ ಬಡ ಜನರು ಆರೋಗ್ಯ ಪರಿಸ್ಥಿತಿಯಿಂದ ನರಳುತ್ತಿರುತ್ತಾರೆ. ಆದರೆ ಅವರಿಗೆ ತಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆರೋಗ್ಯ ಸರಿ ಮಾಡಿಕೊಳ್ಳಲು ಹೆಚ್ಚಿನ ಹಣ ಖರ್ಚಾಗುತ್ತದೆ.

ಆದರೆ ಆರೋಗ್ಯದ ಪರಿಸ್ಥಿತಿಯು ಅದೇ ಮಾಡುತ್ತಲೇ ಹೋಗುತ್ತಿರುತ್ತದೆ ಅವರ ಬಳಿ ಹಣವಿರುವುದಿಲ್ಲ ಹಣವನ್ನು ಪಾವತಿ ಮಾಡಿ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗುತ್ತಿರುವುದಿಲ್ಲ. ಇದನ್ನೆಲ್ಲಾ ಪರಿಶೀಲಿಸಿದ ಸರ್ಕಾರವು ಈ ಯೋಜನೆ ಜಾರಿಯಾದರೆ ಎಲ್ಲರಿಗೂ ಕೂಡ ತುಂಬಾ ಅನುಕೂಲವಾಗುತ್ತದೆ ಅದರಲ್ಲಿಯೂ ಬೇಡ ಜನರಿಗೆ ತುಂಬಾ ಅನುಕೂಲವಾಗುತ್ತದೆ ಎಂದು ಈ ಯೋಜನೆಯನ್ನು ಜಾರಿಗೆ ತರಲಾಯಿತು.

ಜನರು ಸುಲಭವಾಗಿ 5 ಲಕ್ಷ ರೂಪಾಯಿಯವರೆಗೆ ಈ ಕಾರ್ಡ್ ನ ಮುಖಾಂತರ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಆರ್ಥಿಕವಾಗಿ ದುರ್ಬಲರಾದ ಜನರಿಗೆ ಈ ಯೋಜನೆಯ ತುಂಬಾ ಉಪಯೋಗ ಆಗುತ್ತದೆ.

ಆಯುಷ್ಮಾನ್ ಯೋಜನೆಯ ಉಪಯೋಗವನ್ನು ಬಡವರು, ನಿವೇಶನ ರಹಿತರು, ಪಚ್ಚೆ ಮನೆಗಳಲ್ಲಿ ವಾಸಿಸುವ ಜನರು, ಪರಿಶಿಷ್ಟ ಅಥವಾ ಬಂಗಡಕ್ಕೆ ಸೇರಿದವರು, ತೃತೀಯ ಲಿಂಗಿಗಳು, ಗ್ರಾಮೀಣ ಪ್ರದೇಶದಲ್ಲಿ ವಾಸಿಸುವವರು, ಬಡತನ ರೇಖೆಗಿಂತ ಕಡಿಮೆ ಇರುವವರು ಮಾತ್ರ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು. ಇಂತಹ ಜನರಿಗೆ ಮಾತ್ರ ಆಯುಷ್ಮಾನ್ ಕಾಡಿಗೆ ಅರ್ಜಿ ಹಾಕಲು ಅವಕಾಶವಿದೆ.

ಎಲ್ಲೆಲ್ಲಿ ಚಿಕಿತ್ಸೆ ಪಡೆಯಬಹುದು ?

ಆಯುಷ್ಮಾನ್ ಕಾರ್ಡನ್ನು ಹೊಂದಿದ್ದರೆ. ದೇಶದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲೂ ಕೂಡ ಉಚಿತವಾಗಿ ಚಿಕಿತ್ಸೆಯನ್ನು ಪಡೆಯಬಹುದು ಈ ಕಾರ್ಡ್ ನ ಮುಖಾಂತರ ನೀವು ಕೆಲವರು ರೋಗಗಳಿಗೆ ಚಿಕಿತ್ಸೆ ಪಡೆಯಬಹುದು ಯಾವುವು ಎಂದರೆ ಕ್ಯಾನ್ಸರ್, ಮೂತ್ರಪಿಂಡ, ಕರೋನ, ಡೆಂಗ್ಯೂ ಚಿಕನ್ ಗುನ್ಯಾ,ಹೃದಯ, ಡಯಾಲಿಸ್, ಮಲೇರಿಯಾ, ಮೊಣಕಾಲು ಮತ್ತು ಸೊಂಟದ ಕಸಿ, ಕಣ್ಣಿನ ಪೊರೆತರೆ ಕಾಯಿಲೆಗಳಿಗೆ ಪಡೆದು ಗುಣಪಡಿಸಿಕೊಳ್ಳಬಹುದು.

ಯೋಜನೆಗೆ ಅರ್ಜಿ ಸಲ್ಲಿಸಲು ಈ ಹಂತಗಳನ್ನು ಅನುಸರಿಸಿ!

  1. ಹಂತ 1: ಅಧಿಕೃತವಾದ ವೆಬ್ಸೈಟ್ mera.pmjay.gov. ಭೇಟಿ ನೀಡಿ, ಲಾಗಿನ್ ಮಾಡಿಕೊಳ್ಳಿ.
  2. ಹಂತ 2: ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಕ್ಯಾಪ್ಚ ನಮೂದಿಸಿ.
  3. ಹಂತ 3:ನಮೂದಿಸಿದ ನಂತರ ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಓ ಟಿ ಪಿ ಯನ್ನು ಇಲ್ಲಿ ನಮೂದಿಸಿ.
  4. ಹಂತ 4: ಇದರ ಮುಂದೆ ಒಂದು ಹೊಸ ಪುಟ ತೆರದುಕೊಳ್ಳುತ್ತದೆ. ನೀವು ಅದರಲ್ಲಿ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಿ.
  5. ಹಂತ 5: ಪಡಿತರ ಚೀಟಿ ಮೊಬೈಲ್ ಸಂಖ್ಯೆ ಮತ್ತು ಹೆಸರು ಇತರ ವಿವರಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಿ.
  6. ಹಂತ 6: ಬಲಭಾಗದಲ್ಲಿ ಇರುವ ಕುಟುಂಬದ ಸದಸ್ಯರ ಮೇಲೆ ಟ್ಯಾಪ್ ಮಾಡಿ ಎಲ್ಲಾ ಫಲಾನುಭವಿಗಳ ಹೆಸರುಗಳನ್ನು ಸೇರಿಸಿ.
  7. ಹಂತ 7: ಇದೇನಲ್ಲ ಸಂಪೂರ್ಣವಾಗಿ ಭರ್ತಿ ಮಾಡಿದ ನಂತರ ಇದನ್ನು ಕಳುಹಿಸಿ. ಸರ್ಕಾರವು ನಿಮಗೆ “ಆಯುಷ್ಮಾನ್ ಕಾರ್ಡ”ನ್ನು ನೀಡುತ್ತದೆ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನ ದೊಂದಿಗೆ.

Leave a Comment