ಅಂದು ಬೆಂಗಳೂರಿನಲ್ಲಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿ ಇಂದು ಕೋಟ್ಯಾಧಿಪತಿ, ಈಗ 150ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಅನ್ನದಾತ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ…

ಈ ಲೇಖನದಲ್ಲಿ ತಿಳಿಸುವುದೇನೆಂದರೆ, ಒಬ್ಬ ಕರ್ನಾಟಕದ ಹುಡುಗ ಭಿಕ್ಷೆ ಬೇಡಿ ಜೀವನದಲ್ಲಿ ಕೋಟ್ಯಾಧಿಪತಿಯಾದ ರೀತಿ ಮತ್ತು ಅವರ ಸಾಧನೆ. ಬಡವರಾಗಿದ್ದರು ಕೂಡ ಉತ್ತಮ ಉದ್ಯೋಗಿ ಯಾದ ರೇಣುಕ ಆರಾಧ್ಯರವರ ಉನ್ನತ ಉದ್ಯಮದ ಜೀವನ ಚರಿತ್ರೆ. ರೇಣುಕಾ ಆರಾಧ್ಯರವರು ಈಗಾಗಲೇ 150ಕ್ಕೂ ಹೆಚ್ಚಿನ ಉದ್ಯೋಗಿಗಳಿಗೆ ಉದ್ಯೋಗ ನೀಡಿದ್ದು. ಅವರ ಮನೆಯ ಅನ್ನದಾತರಾಗಿದ್ದಾರೆ ಇಂದೇ ಹೇಳಬಹುದು. ಅಂದು ಮನೆ ಮನೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಒಬ್ಬ ವ್ಯಕ್ತಿ ಇಂದು ಬೇರೆಯವರಿಗೆ ಕೊಡುವಷ್ಟು ಬೆಳೆದಿದ್ದಾರೆ ಎಂದರೆ ಇದು ಆಶ್ಚರ್ಯವಾದ ಸಂಗತಿ. ಈ ಲೇಖನದಲ್ಲಿ ರೇಣುಕ ಆರಾಧ್ಯರವರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

WhatsApp Group Join Now
Telegram Group Join Now

ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ನಾವು ಏನಾದರೂ ಸಾಧಿಸಬೇಕೆಂಬ ಛಲವಿರುತ್ತದೆ. ಆದರೆ ನಮ್ಮ ಸಾಧನೆಗೆ ನಮ್ಮ ಜೀವನದ ಕೆಲವು ತೊಂದರೆಗಳು ಮತ್ತು ಸಮಸ್ಯೆಗಳು ನಾವು ಮಾಡುವಂತ ಸಾಧನೆಗೆ ಅಡ್ಡಿಯಾಗುತ್ತದೆ. ಆದರೆ ಜೀವನದಲ್ಲಿ ಎಷ್ಟೇ ಸಮಸ್ಯೆಗಳು ಬಂದರೂ ಎಷ್ಟೇ ತೊಂದರೆಗಳು ಬಂದರೂ ನಮ್ಮ ಗುರಿಯನ್ನು ನಾವು ತಲುಪಬೇಕು ಆಗ ನಾವು ಗುರಿಯನ್ನು ಮುಟ್ಟುತ್ತೇವೆ ಎಂದು ಹೇಳಬಹುದು. ಹಿರಿಯರು ಒಂದು ಮಾತನ್ನು ಹೇಳುತ್ತಾರೆ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದು ಸತತವಾಗಿ ಪ್ರಯತ್ನ ಪಟ್ಟರೆ ಯಾವುದೇ ಕೆಲಸವನ್ನು ಸಾಧಿಸಲು ಸಾಧ್ಯ ಎಂದು ಹೇಳುತ್ತಾರೆ.

ಹೌದು ಸ್ನೇಹಿತರೆ ಜೀವನದಲ್ಲಿ ನಾವು ನಮ್ಮ ಗುರಿಯ ಕಡೆ ಗಮನ ಹರಿಸಬೇಕೆ ಹೊರತು ಬೇರೆ ಯಾರೋ ನಮ್ಮನ್ನು ಹೀಯಾಳಿಸಿ ಮಾತನಾಡಿದರೆ ಅದಕ್ಕೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ, ನಾವು ನಮ್ಮ ಗುರಿಯ ಬಗ್ಗೆ ತಲೆಕೆಡಿಸಿಕೊಳ್ಳಬೇಕೆ ಹೊರತು ಜನಗಳು ಹೇಳುತ್ತಾರೆ ಎಂದು ತಲೆ ಕೆಡಿಸಿಕೊಳ್ಳಬಾರದು ಆಗ ನಾವು ನಮ್ಮ ಗುರಿಯನ್ನು ಮುಟ್ಟಲು ಸಾಧ್ಯ.

ರೇಣುಕಾ ಆರಾಧ್ಯ ಬಡ ಕುಟುಂಬಸ್ಥರ ಮನೆಯಲ್ಲಿ ಜನಿಸಿದರು. ಅವರು ಪುರೋಹಿತ ರಾಗಿ ಕೆಲಸವನ್ನು ಮಾಡುತ್ತಿದ್ದರು. ಜೊತೆಗೆ ಅಕ್ಕಿ ಕಾಳು ಬೇಳೆ ಮುಂತಾದವನ್ನು ಭಿಕ್ಷೆ ಬೇಡುತ್ತಿದ್ದರು. ನಂತರ ಅವರು ಪ್ಲಾಸ್ಟಿಕ್ ಫ್ಯಾಕ್ಟರಿ ಎಂಬ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಅವರು ಪ್ಲಾಸ್ಟಿಕ್ ಬ್ಯಾಟರಿಗೆ ಹೋಗುವಾಗಲೇ ಅವರಿಗೆ ಸ್ವಂತ ಉದ್ಯೋಗ ಮಾಡಬೇಕು ಎಂಬ ಆಸಕ್ತಿ ಇತ್ತು ಆದರೆ ಸ್ವಂತ ಉದ್ಯೋಗ ಮಾಡಲು ತುಂಬಾ ಪ್ರಯತ್ನವನ್ನು ಪಟ್ಟರು, ಆ ಪ್ರಯತ್ನವು ಅಂತ ಉದ್ಯೋಗಕ್ಕೆ ಫಲಿಸಲಿಲ್ಲ ಆಗ ಅವರು 30,000 ರೂಪಾಯಿಯನ್ನು ಕಳೆದುಕೊಂಡರು.

ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲೂ ಕೂಡ ಉತ್ತಮವಾದ ಉದ್ಯೋಗಿ ಎಂಬ ಹೆಸರನ್ನು ಕೂಡ ಗಳಿಸಿದರು ಅವರಿಗೆ ನಾನು ಜೀವನದಲ್ಲಿ ಸ್ವಂತವಾಗಿ ಏನನ್ನಾದರೂ ಸಾಧಿಸಬೇಕು ಏನನ್ನಾದರೂ ಮಾಡಬೇಕೆಂಬ ಆಸೆ ತುಂಬಾ ಇತ್ತು ಆದ್ದರಿಂದ ಅವರು ಪ್ಲಾಸ್ಟಿಕ್ ಫ್ಯಾಕ್ಟರಿ ಯ ಜೊತೆಗೆ ಸ್ವಂತ ಬಿಜಿನೆಸ್ ಮಾಡಲು ಆರಂಭಿಸಿದರು ಸೂಟ್ಕೇಸ್ ಕವರಗಳನ್ನು ತಯಾರಿಸುವ ಸ್ವಂತ ಉದ್ಯೋಗದ ಕೆಲಸವನ್ನು ಮಾಡಲು ಪ್ರಾರಂಭಿಸಿದರು ಆದರೆ ಅದು ಕೂಡ ಅವರಿಗೆ ಸ್ವಂತ ಉದ್ಯೋಗದಲ್ಲಿ ಲಾಭದಾಯಕವಾಗಲಿಲ್ಲ ಆದರಿಂದ ಅವರು ಬೇರೆ ಕ್ಷೇತ್ರದಲ್ಲಿ ಸ್ವಂತವಾಗಿ ಏನಾದರೂ ಮಾಡಬೇಕು ಎಂದು ಮನಸ್ಸಲ್ಲಿ ಇಟ್ಟುಕೊಂಡಿದ್ದರು.

ಒಂದು ಕಾರನ್ನು ಖರೀದಿಸಿದರು. ಅವರು ಕಾರನ್ನು ಖರೀದಿಸಿ ಟ್ರಾವೆಲ್ ಏಜೆನ್ಸಿಯನ್ನು ಪ್ರಾರಂಭಿಸಿದರು. ಟ್ರಾವೆಲ್ ಏಜೆನ್ಸಿಯು ಅವರ ಇಡೀ ಜೀವನವನ್ನೇ ಹಂತ ಅಂತವಾಗಿ ಬದಲಾಯಿಸ ತೊಡಗಿತು. ಒಂದನ್ನು ಕಾರನ್ನು ಖರೀದಿಸಿದರು ಅದರ ಜೊತೆಗೆ ಒಂದು ವರ್ಷದ ನಂತರ ಮತ್ತೆ ಕಾರನ್ನು ಖರೀದಿಸಿದರು ಹೀಗೆ ಅವರ ಟ್ರಾವೆಲ್ ಏಜೆನ್ಸಿಯ ಆರಂಭವಾಯಿತು. ಅವರು ಟ್ರಾವೆಲ್ ಏಜೆನ್ಸಿಯಲ್ಲಿ ಉತ್ತಮವಾದ ಬೆಳವಣಿಗೆಯನ್ನು ಕಂಡರೂ. ಭಿಕ್ಷೆ ಬೇಡುತ್ತಿದ್ದ ಒಬ್ಬ ಕನ್ನಡಿಗ ಇಂದು ಕೋಟ್ಯಾಧಿಪತಿಗೆ ಒಡೆಯ ಎಂದರೆ ನಂಬಲು ಸಾಧ್ಯವಾಗುವುದಿಲ್ಲ ಆದರೆ ಇಂತಹ ಸಾಧನೆಯನ್ನು ನಮ್ಮ ಕನ್ನಡಿಗರು ಮಾಡಿದ್ದಾರೆ. ಎಂಬುದು ಹೆಮ್ಮೆಯ ವಿಷಯ. ಮನಸ್ಸು ಮಾಡಿದರೆ ಯಾವುದು ಕಷ್ಟವಲ್ಲ. ಅದೇ ರೀತಿ ಪ್ರಯತ್ನ ಪಟ್ಟರೆ ಎಲ್ಲವೂ ಕೂಡ ಸುಲಭವೇ ಆಗುತ್ತದೆ. ನಿಮ್ಮ ಗುರಿಯ ಕಡೆ ಗಮನವಿರಬೇಕೆ ಹೊರತು ಅವರಿವರ ಮಾತಿನ ಕಡೆ ಗಮನವನ್ನು ಸರಿಸಿ ಕುಗ್ಗಬಾರದು ಏನೇ ಬಂದರೂ ಕೂಡ ಮುನ್ನುಗ್ಗಿ ನಿಮ್ಮ ಗುರಿಯನ್ನು ನೀವು ತಲುಪಬೇಕು.

ರೇಣುಕ ಆರಾಧ್ಯರವರು ಕೂಡ ತಮ್ಮ ಸ್ವಂತ ಉದ್ಯಮ ಮಾಡುವ ಕನಸನ್ನು ಮನಸ್ಸು ಮಾಡಿಕೊಂಡಿದ್ದಾರೆ ಅದೇ ರೀತಿ ಎಲ್ಲರೂ ಕೂಡ ತಮ್ಮ ತಮ್ಮ ಕನಸುಗಳನ್ನು ನನಸು ಮಾಡುವ ಕಡೆ ಗಮನಹರಿಸಬೇಕೇ ಹೊರತು ನಮ್ಮನ್ನು ಕುಗ್ಗಿಸುವ ಮಾತುಗಳಿಗೆ ಕೀವಿ ಕೊಡಬಾರದು. ಈಗ ನಿಮ್ಮ ಬಗ್ಗೆ ಅವರು ಕೆಟ್ಟದಾಗಿ ಚುಚ್ಚಿ ಮಾತಾನಾಡಿದರೆ ನಿಮ್ಮ ಸಾಧನೆ ಅವರ ತಲೆತಗ್ಗಿಸಿ ಮಾತನಾಡುವ ಹಾಗೆ ಮಾಡುತ್ತದೆ. ಎಲ್ಲರೂ ಕೂಡ ರೇಣುಕಾರಾಧ್ಯರ ಸಾಧನೆಯಂತೆ ಕನಸನ್ನು ಕಂಡು ನನಸು ಮಾಡಿಕೊಳ್ಳಬೇಕು.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment