ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಪೂರೈಸಲು ಈ ದಾಖಲಾತಿಗಳನ್ನು ಕಡ್ಡಾಯಗೊಳಿಸಿದೆ ಸರ್ಕಾರ ! ಈ ಯೋಜನೆ ಅಡಿಯಲ್ಲಿ ರೈತರಿಗೆ ಉಚಿತ ಕೊಳವೆ ಬಾವಿ.

ಎಲ್ಲರಿಗೂ ನಮಸ್ಕಾರ..

ಗ್ರಾಮೀಣ ಪ್ರದೇಶದಲ್ಲಿ ನೀರಾವರಿ ಸಮಸ್ಯೆ ಎಲ್ಲೆಡೆ ಇದ್ದೇ ಇರುತ್ತದೆ. ಹಾಗಾಗಿ ನೀರಾವರಿ ಸಮಸ್ಯೆಯನ್ನು ಸಂಪೂರ್ಣವಾಗಿ ತೊರೆದು ಹಾಕಬೇಕೆಂಬ ಉದ್ದೇಶದಿಂದ ಕರ್ನಾಟಕ ಸರಕಾರ ಗಂಗಾ ಕಲ್ಯಾಣ ಯೋಜನೆಯು ಜಾರಿಗೊಂಡಿದೆ, ಸುಮಾರು ವರ್ಷಗಳಿಂದ ಕೂಡ ಈ ಯೋಜನೆಯು ಹಲವಾರು ಉಚಿತವಾದ ಕೊಳವೆ ಬಾವಿಯನ್ನು, ಮತ್ತು ಎಲ್ಲೆಡೆ ನೀರಾವರಿ ಸಮಸ್ಯೆಯನ್ನು ನೀಗಿಸಲು ಕರ್ನಾಟಕ ಸರಕಾರ ಮುನ್ನಡೆ ಸಾಗಲಿದೆ. ಈ ಒಂದು ಗಂಗಾ ಕಲ್ಯಾಣ ಯೋಜನೆಗೆ ಯಾವ ರೈತರು ಅರ್ಹರು ಹಾಗೂ ಯಾರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಬಲ್ಲರು, ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ ಕೊನೆವರೆಗೂ ಲೇಖನವನ್ನು ಓದಿ.

WhatsApp Group Join Now
Telegram Group Join Now

ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ರೈತರಿಗಾಗಿ ಉಚಿತವಾದ ಕೊಳವೆ ಭಾವಿ ಸೌಲಭ್ಯವನ್ನು ನೀಡಲಿದೆ ಸರ್ಕಾರ. ಈಗಾಗಲೇ ಕೋಟ್ಯಂತರ ಜನಗಳು ಕೂಡ ಈ ಒಂದು ಯೋಜನೆಯ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ, ಈ ಗಂಗಾ ಕಲ್ಯಾಣ ಯೋಜನೆಯು ರೈತರಿಗಾಗಿ ರೈತರಿಗೋಸ್ಕರ, ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ರೈತರು ಕೃಷಿ ಭೂಮಿಯನ್ನು ಹೊಂದಿದ್ದರೂ ಕೂಡ ನೀರಾವರಿ ಸಮಸ್ಯೆಯಿಂದ ಯಾವ ಬಿತ್ತನೆಯೂ ನಡೆದು ಅಥವಾ ಬೆಳೆಸಲು ಸಾಧ್ಯವಿಲ್ಲ ಹಾಗಾಗಿ ನೀರಾವರಿ ಸಮಸ್ಯೆಯನ್ನು ನೀಗಿಸಲು ಸರ್ಕಾರ ಮುಂದಾಗಿದೆ,

ಅಂದರೆ ಸರ್ಕಾರದಿಂದ ಕೃಷಿ ಭೂಮಿಯನ್ನು ತಜ್ಞರಿಂದ ಪರಿಶೀಲನೆ ಮಾಡಿ ಯಾವ ಜಾಗದಲ್ಲಿ ಕೊಳವೆ ಬಾವಿಯನ್ನು ಕೊರೆಯಿಸಬೇಕೆಂದು ತಿಳಿದುಕೊಂಡು, ನಂತರ ಕೊರೆಯಿಸಿ. ನೀರನ್ನು ಸಂಗ್ರಹಿಸಲು ಟ್ಯಾಂಕನ್ನು ಕೂಡ ಸರ್ಕಾರದ ಜವಾಬ್ದಾರಿ. ಹಾಗೂ ನೀರಾವರಿ ಸಮಸ್ಯೆಯ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಂಡು, ಎಷ್ಟು ವೆಚ್ಚವಾಗುತ್ತದೋ ಎಲ್ಲಾ ಹಣವನ್ನು ಸರ್ಕಾರವೇ ಪೂರೈಸುತ್ತದೆ. ಹಾಗಾಗಿ ರೈತರು ಕೂಡಲೇ ಅರ್ಜಿ ಸಲ್ಲಿಸಿ ಸರ್ಕಾರದ ಗಂಗಾ ಕಲ್ಯಾಣ ಯೋಜನೆ ಯ ಫಲಾನುಭವಿಗಳಾಗಿ.

ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಈ ಗಂಗಾ ಕಲ್ಯಾಣ ಯೋಜನೆಗೆ ಕೊನೆಯ ದಿನಾಂಕ ಯಾವುದು ಹಾಗೂ ಯಾವ ರೈತರು ಈ ಒಂದು ಯೋಜನೆಗೆ ಅರ್ಹರು ಎಂಬುದನ್ನು ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಿ. ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವ ಅಭ್ಯರ್ಥಿಯು ಒಂದು 20 ಗುಂಟೆಯಿಂದ ಐದು ಎಕರೆ ವರೆಗೂ ಭೂಮಿಯನ್ನು ಹೊಂದಿರುತ್ತಾರೋ, ಅಂಥಹ ರೈತರಿಗೆ ಮಾತ್ರ ಕೊಳವೆ, ಬಾವಿಯನ್ನು ಕೊರೆಸಿ ಅದಕ್ಕೆ ಅಗತ್ಯವಿರುವ ಪಂಪ್ ಸೆಟ್ಗಳನ್ನು ಅಳವಡಿಸಲು ಒಟ್ಟು ಪ್ರಮಾಣದ ವೆಚ್ಚವನ್ನು ಒಂದುವರೆ ಲಕ್ಷ ಸಹಾಯ ಧನವಾಗಿ ಗಂಗಾ ಕಲ್ಯಾಣ ಯೋಜನೆವತಿಯಿಂದ ಸಿಗಲಿದೆ. ಆಸಕ್ತಿ ಯುಳ್ಳ ಅಭ್ಯರ್ಥಿಗಳು ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ.

ಅರ್ಜಿ ಸಲ್ಲಿಸಿದ ರೈತರಿಗೆ ಕೊಳವೆ ಬಾವಿಯನ್ನು ಕೊರೆಯಿಸಲು ಹಾಗೂ ವಿದ್ಯದ್ದೀಕರಣಕ್ಕೆ 50,000 ಹಣವನ್ನು ನಿಗದಿಪಡಿಸಿ ಒಟ್ಟು 2,00,000 ಹಣವನ್ನು ಅಭ್ಯರ್ಥಿಗಳಿಗೆ ನೀಡಲಿದೆ. ಹಾಗೂ ರಾಮನಗರ, ತುಮಕೂರು ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಇಂಥಹ ಜಿಲ್ಲೆಗಳಿಗೆ 350,000 ಹಣವನ್ನು ಸಹಾಯಧನವಾಗಿ ನೀಡಲಿದೆ ಗಂಗಾ ಕಲ್ಯಾಣ ಯೋಜನೆ.

ಅರ್ಜಿ ಪೂರೈಸಲು ಬೇಕಾದ ದಾಖಲಾತಿಗಳು.

  • ಪರಿಶಿಷ್ಟ ಜಾತಿ ವರ್ಗದ ಅಭ್ಯರ್ಥಿಯು ಜಾತಿ ಪ್ರಮಾಣ ಪತ್ರವನ್ನು ಹೊಂದಿರಬೇಕು.
  • ಕುಟುಂಬದ ಆದಾಯ ಗ್ರಾಮೀಣದಲ್ಲಿ 1.5 ಲಕ್ಷ, ನಗರ ಪ್ರದೇಶದಲ್ಲಿ 2.00 ಲಕ್ಷ ಮೀರಿರಬಾರದು.
  • ಅಭ್ಯರ್ಥಿಯು 21 ವರ್ಷ ಉಳ್ಳವರಾಗಿರಬೇಕು.
  • ಪಡಿತರ ಚೀಟಿ ಹಾಗೂ ಅಭ್ಯರ್ಥಿಯ ಆಧಾರ್ ಕಾರ್ಡ್, ಮತ್ತು ಇಂದಿನ ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಖಾತೆ ಪುಸ್ತಕ,
  • ಆಸಕ್ತಿ ಹೊಂದಿರುವ ಅಭ್ಯರ್ಥಿಯು ನವೆಂಬರ್ 29 ರ ಒಳಗೆ ಅರ್ಜಿಯನ್ನು ಸಲ್ಲಿಸಲು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಪೂರೈಸಬಹುದು.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು ! ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment