ರೇಷನ್ ಕಾರ್ಡ್ ದಾರರೇ ಎಚ್ಚರ ! ನೀವೇನಾದ್ರೂ ಪಡಿತರ ಅಕ್ಕಿಯನ್ನು ಮಾರಿದ್ರೆ, ನಿಮ್ಮ ಪಡಿತರ ಚೀಟಿ ರದ್ದು ಮಾಡಲಿದೆ ಸರ್ಕಾರ.

ಎಲ್ಲರಿಗೂ ನಮಸ್ಕಾರ..

ರಾಜ್ಯದ ಎಲ್ಲಾ ಸಾಮಾನ್ಯ ಜನರು ಕೂಡ ಬಿಪಿಎಲ್ ಕಾರ್ಡ್ ಅಥವಾ ಎಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ಗಳನ್ನು ಹೊಂದಿರುತ್ತಾರೆ. ಮತ್ತು ಎಲ್ಲಾ ಪಡಿತರ ಚೀಟಿದಾರರಿಗೆ ಅಕ್ಕಿಯನ್ನು ವಿತರಣೆ ಮಾಡುತ್ತದೆ ಕೇಂದ್ರ ಸರ್ಕಾರ. ಆದರೆ ಅಕ್ಕಿಯನ್ನು ಪಡೆದ ಸದಸ್ಯರು ಅಕ್ಕಿಯನ್ನು ಅಕ್ರಮವಾಗಿ ಮಾರುತ್ತಿದ್ದಾರೆ. ಅದರಲ್ಲೂ ಸರ್ಕಾರದಿಂದ ನೀಡುವ ಅನ್ನ ಭಾಗ್ಯದ ಅಕ್ಕಿಯನ್ನು ಬೇರೊಂದು ಕುಟುಂಬಕ್ಕೆ ಹಣಕ್ಕಾಗಿ ಅಕ್ರಮವಾಗಿ ಮಾರುತ್ತಲೆ ಬಂದಿದ್ದಾರೆ. ಈ ಎಲ್ಲಾ ಅಕ್ರಮವನ್ನು ಗಮನಿಸಿದ ಕೇಂದ್ರ ಸರ್ಕಾರವು ಹೊಸ ನಿಯಮವನ್ನು ಜಾರಿ ಮಾಡಲಿದೆ.

WhatsApp Group Join Now
Telegram Group Join Now

ಮೈಸೂರಿನಲ್ಲಿರುವ ಜಿಲ್ಲಾಧಿಕಾರಿಗಳು ಕೆಲವು ಕುಟುಂಬದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಬೆರೊಂದು ಕುಟುಂಬಕ್ಕೆ ಅಕ್ರಮವಾಗಿ ಮಾರುವುದನ್ನು ಕಂಡು ಖಡಕ್ ಆದ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಅನ್ನ ಭಾಗ್ಯದ ಅಕ್ಕಿಯನ್ನು ಮಾರಿಕೊಂಡವರ ಮೇಲೆ ಕೇಸ್ ಹಾಕಲಾಗುತ್ತದೆ. ಹಾಗೂ ವಸ್ತುಗಳ ಕಾಯ್ದೆ – 1955 ಅಡಿಯಲ್ಲಿ ಅಕ್ರಮವಾಗಿ ಸರ್ಕಾರದ ಧ್ಯಾನವನ್ನು ಮಾರಿದ ಅಭ್ಯರ್ಥಿಯನ್ನು ಶಿಕ್ಷೆಗೆ ಒಳಗಾಯಿಸ ತಕ್ಕದ್ದು, ಎಂದು ಮೈಸೂರಿನ ಜಿಲ್ಲಾಧಿಕಾರಿಗಳು ಅಕ್ರಮವಾಗಿ ಸರ್ಕಾರದ ಧಾನ್ಯವನ್ನು ಮಾರಾಟ ಮಾಡುವ ಜನಗಳಿಗೆ ಎಚ್ಚರಿಕೆ ನೀಡಿದ್ದಾರೆ.

ನೂರರಲ್ಲಿ 10% ಜನಗಳು ನ್ಯಾಯಬೆಲೆ ಅಂಗಡಿಗೆ ಹೋಗಿ ಪಡಿತರ ಪದಾರ್ಥಗಳನ್ನು ಖರೀದಿಸಿ, ಊರೂರಿನ ಸಂತೆಯಲ್ಲಿ ಮಾರಾಟ ಮಾಡುತ್ತಾರೆ, ಅಂಥವರ ಮೇಲು ಕೂಡ ವಸ್ತುಗಳ ಕಾಯ್ದೆ ಜಾರಿಯಾಗುತ್ತದೆ. ಹಾಗಾಗಿ ಯಾರೂ ಕೂಡ ಅಕ್ರಮವಾಗಿ ಅಕ್ಕಿಯನ್ನು ಮಾರಿಕೊಂಡು ಸರ್ಕಾರಕ್ಕೆ ನಷ್ಟವನ್ನು ಮಾಡಬೇಡಿ. ಸರ್ಕಾರದ ಅನ್ನ ಭಾಗ್ಯದ ಅಕ್ಕಿಗಳನ್ನು ನೀವೇ ಸ್ವತಹ ಬಳಸಿಕೊಂಡು, ತಿಂಗಳಿಗೊಮ್ಮೆ ನೀಡುವ ಕೇಂದ್ರ ಸರ್ಕಾರದ ಅರ್ಧಭಾಗ್ಯ ಧಾನ್ಯಗಳನ್ನು ನೀವೇ ಬಳಸಿಕೊಳ್ಳಿ. ಸಂತೆಯಲ್ಲಿ ಪಡಿತರ ಅಕ್ಕಿಯನ್ನು ಮಾರಿದರೆ, ರೇಷನ್ ಕಾರ್ಡ್ ದಾರರ ಮೇಲೆ ವಸ್ತುಗಳ ಕಾಯ್ದೆ ಕೈಗೊಳ್ಳಲಾಗುತ್ತದೆ, ಎಂದು ಜಿಲ್ಲಾಧಿಕಾರಿಗಳು ಜನಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಸರ್ಕಾರದ ಉದ್ದೇಶವೇನೆಂದರೆ ರಾಜ್ಯದ ಎಲ್ಲಾ ಜನರು ಕೂಡ ಆಹಾರಕ್ಕಾಗಿ ಪರದಾಡುವ ಅವಶ್ಯಕತೆ ಬರಬಾರದು, ಎಂಬ ಉದ್ದೇಶದಿಂದ ಎಲ್ಲಾ ಬಿಪಿಎಲ್ ಹಾಗೂ ಎಪಿಎಲ್ ಮತ್ತು ಅಂತ್ಯೋದಯ ಕಾರ್ಡ್ದಾರರಿಗೆ ಅಕ್ಕಿ ಹಾಗೂ ರಾಗಿಯನ್ನು ವಿತರಣೆ ಮಾಡುತ್ತಿದೆ ಸರ್ಕಾರ. ಹಾಗೂ ಕಳೆದ ಆರು ತಿಂಗಳಿನಿಂದ ಸರ್ಕಾರವು ಐದು ಯೋಜನೆಗಳನ್ನು ಕೈಗೊಳ್ಳುತ್ತೇವೆ ಎಂಬ ಮಾತನ್ನು ನೀಡಿ ನುಡಿದಂತೆ ನಡೆದಿದೆ ಸರ್ಕಾರ.

ಅನ್ನಭಾಗ್ಯ ಯೋಜನೆ ಎಂಬ ಹೊಸ ಯೋಜನೆ ಒಬ್ಬ ಸದಸ್ಯರಿಗೆ 5 ಕೆಜಿ ಅಕ್ಕಿಯನ್ನು ನೀಡುತ್ತಿದೆ, ಹಾಗೂ ಉಳಿದ 5 ಕೆಜಿ ಅಕ್ಕಿಗೆ ಹಣವನ್ನು ಖಾತೆಗೆ ಪಾವತಿ ಮಾಡುತ್ತಿದೆ ಸರ್ಕಾರ. ಸರ್ಕಾರದ ಇಂಥಹ ಒಳ್ಳೆ ಉದ್ದೇಶದಲ್ಲೂ ಕೂಡ ಕೆಲವು ಜನರು ಅಕ್ರಮವಾಗಿ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದಾರೆ, ಅಂತವರ ಮೇಲೆ ಇಂದು ಮುಂದೆ ವಸ್ತುಗಳ ಕಾಯ್ದೆ-1955 ಜಾರಿಯಾಗಲಿದೆ.

ಪಡಿತರ ಚೀಟಿದಾರರೇ ಇಕೆವೈಸಿ ಈ ಕೂಡಲೇ ಮಾಡಿಸಿ !

ಸರ್ಕಾರದಿಂದ ಯಾವುದೇ ಯೋಜನೆಗಳ ಫಲಾನುಭವಿಗಳಾಗಬೇಕೆಂದರೆ ರೇಷನ್ ಕಾರ್ಡ್ ಅನ್ನು ಹೊಂದಿರಲೇಬೇಕು. ರೇಷನ್ ಕಾರ್ಡ್ಅನ್ನು ಕಡ್ಡಾಯಗೊಳಿಸಿದೆ ಸರ್ಕಾರ. ಮತ್ತು ಯಾವ ರೇಷನ್ ಕಾರ್ಡ್ ನಕಲಿ ಹಾಗೂ ಯಾವ ರೇಷನ್ ಕಾರ್ಡ್ ಅಸಲಿ ಎಂಬುದನ್ನು ತಿಳಿದುಕೊಳ್ಳಲು, ಇಕೆವೈಸಿ ಎಂಬ ಹೊಸ ನಿಯಮವನ್ನು ಕೂಡ ಜಾರಿ ಮಾಡಿ, ಈಗಾಗಲೇ ಇಕೆವೈಸಿ ಯನ್ನು ಕೂಡ ಮಾಡಿಸಬೇಕೆಂಬ ಆದೇಶವನ್ನು ಕೆಲವು ತಿಂಗಳ ಹಿಂದೆಯೇ ಮಾಡಿತ್ತು, ಹಾಗಾಗಿ ಎಲ್ಲಾ ಪಡಿತರ ಚೀಟಿ ದಾರರು ಕೂಡ ಇಕೆವೈಸಿಯನ್ನು ಮಾಡಿಸಿದ್ದಾರೆ. ಇದರಿಂದ ಯಾವುದು ನಕಲಿ ರೇಷನ್ ಕಾರ್ಡ್, ಯಾವುದು ಅಸಲಿ ಎಂಬುದನ್ನು ತಿಳಿದುಕೊಳ್ಳಬಹುದು.

ಡಿಸೆಂಬರ್ 30 ರ ಒಳಗೆ ಇಕೆವೈಸಿಯನ್ನು ಮಾಡಿಸಲು ಕಾಲಾವಕಾಶ ನೀಡಿದೆ ಸರ್ಕಾರ. ನೀವೇನಾದರೂ ಇಕೆವೈಸಿ ಮಾಡಿಸದಿದ್ದರೆ, ಕೂಡಲೇ ಮಾಡಿಸಿ, ನಿಮ್ಮ ರೇಷನ್ ಕಾರ್ಡ್ ಇಕೆವೈಸಿ ಆಗದಿದ್ದರೆ, ಮುಂದಿನ ತಿಂಗಳಿನಲ್ಲಿ ರೇಷನ್ ಕಾರ್ಡ್ ರದ್ದಾಗಲಿದೆ. ಕೇಂದ್ರ ಸರ್ಕಾರವು ಎಲ್ಲಾ ಪಡಿತರ ಚೀಟಿದಾರರಿಗೆ ಇಕೆವೈಸಿಯನ್ನು ಕಡ್ಡಾಯಗೊಳಿಸಿದೆ.

ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು ! ಮುಂದಿನ ಲೇಖನದೊಂದಿಗೆ ಸಿಗೋಣ.

Leave a Comment