ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ ! ಮಧ್ಯಾಹ್ನದ ಊಟದ ಜೊತೆಗೆ ಒಂದು ಲೋಟ ರಾಗಿ ಮಾಲ್ಟ್, ಮುಂದಿನ ತಿಂಗಳಿನಿಂದಲೇ ವಿತರಿಸಲಾಗುತ್ತದೆ.

ಎಲ್ಲರಿಗೂ ನಮಸ್ಕಾರ..

ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮುಂದಿನ ತಿಂಗಳಿನಿಂದ ಒಂದು ಲೋಟ ರಾಗಿ ಮಾಲ್ಟ್ ಸಿಗಲಿದೆ. ಈ ಮಾಲ್ಟ್ ಭಾಗ್ಯದ ಬಗ್ಗೆ ವರದಿಗಾರರ ಜೊತೆಗೆ ಮಧು ಬಂಗಾರಪ್ಪನವರು ಮಾಹಿತಿ ನೀಡಿದ್ದಾರೆ. ಶಿಕ್ಷಣ ಸಚಿವರು ಕೂಡ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಹಲವಾರು ನಾನಾ ರೀತಿಯ ವಿವಿಧವಾದ ಸೌಲಭ್ಯಗಳನ್ನು ಜಾರಿಗೆ ತರುತ್ತಲೇ ಬಂದಿದ್ದಾರೆ, ಅದರಲ್ಲಿ ಒಂದಾದ ಈ ರಾಗಿ ಮಾಲ್ಟ್ ಕೂಡ ಮುಂದಿನ ತಿಂಗಳಿನಿಂದ ದೊರೆಯಲಿದೆ. ಮಕ್ಕಳ ಪೌಷ್ಟಿಕಾಂಶದ ಆರೋಗ್ಯವನ್ನು ಸುಧಾರಿಸಲು ಈ ಮಾಲ್ಟ್ ಭಾಗ್ಯ ಜಾರಿ. ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ, ಕೊನೆವರೆಗೂ ಲೇಖನವನ್ನು ಓದಿ.

WhatsApp Group Join Now
Telegram Group Join Now

ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ವರದಿಗಾರರ ಜೊತೆಗೆ ಈ ಒಂದು ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಸಂದರ್ಭದಲ್ಲಿ ಒಂದು ಲೋಟ ರಾಗಿ ಮಾಲ್ಟನ್ನು ಎಲ್ಲಾ ವಿದ್ಯಾರ್ಥಿಗಳಿಗೂ ಕೂಡ ವಿತರಿಸಲಾಗುತ್ತದೆ ಎಂದು ಹೇಳಿದ್ದಾರೆ. ಈ ಮಾಲ್ಟ್ ಭಾಗ್ಯವು ಮುಂದಿನ ತಿಂಗಳಿನಿಂದಲೇ ಜಾರಿಯಾಗಲಿದೆ, ಅಂದರೆ ಡಿಸೆಂಬರ್ ತಿಂಗಳಿನಿಂದ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೂ ಸಿಗಲಿದೆ. ಅಪೌಷ್ಟಿಕಾಂಶದಿಂದ, ಬಳಲುತ್ತಿರುವ ವಿದ್ಯಾರ್ಥಿಗಳಿಗೆ ಈ ಒಂದು ರಾಗಿಮಾಲ್ಟ್ ನಿಂದ ಪೌಷ್ಟಿಕಾಂಶದ ಆಹಾರ ಸಿಗಲಿದೆ.

ಈಗಾಗಲೇ ಸರ್ಕಾರಿ ಶಾಲಾ ಮಕ್ಕಳಿಗೆ ವಾರದಲ್ಲಿ 2 ದಿನ ಬಿಸಿಯೂಟದ ವೇಳೆ ಬಾಳೆಹಣ್ಣು, ಮೊಟ್ಟೆ, ಚಿಕ್ಕಿಯನ್ನು ವಿತರಿಸುತ್ತಿದೆ, ಈ ಹಿನ್ನೆಲೆಯಲ್ಲೂ ಕೂಡ ಬಿಸಿಯೂಟದ ಜೊತೆಗೆ ರಾಗಿ ಮಾಲ್ಟನ್ನು ಕೂಡ ನೀಡಲಿದೆ ಸರ್ಕಾರ. ಹಲವಾರು ವರ್ಷಗಳಿಂದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಯೋಜನೆಯನ್ನು ಕೂಡ ಉತ್ತಮವಾಗಿ ನಡೆಯುತ್ತಾ ಬಂದಿದೆ, ಹಾಗೂ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ತಿನ್ನದ ವಿದ್ಯಾರ್ಥಿಗಳಿಗೆ ಚಿಕ್ಕಿ ಹಾಗೂ ಬಾಳೆಹಣ್ಣು ವಿತರಿಸುತ್ತಿದೆ. ಆಹಾರ ಇಲಾಖೆಯ ಉದ್ದೇಶವೇನಿದ್ದರೆ ಅಪೌಷ್ಟಿಕಾಂಶದಿಂದ ಬಳಲುತ್ತಿರುವ ಮಕ್ಕಳು ಪೌಷ್ಟಿಕಾಂಶವನ್ನು ಪಡೆದು ಉತ್ತಮವಾಗಿ ದೇಹವನ್ನು ನಿರ್ವಹಿಸಿಕೊಂಡಿರಬೇಕು.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಮಕ್ಕಳ ದೇಹ ಉತ್ತಮವಾಗಿದ್ದರೆ, ಓದಲು ಇನ್ನೂ ಆಸಕ್ತಿ ಹೆಚ್ಚಾಗುತ್ತದೆ, ಎಂದು ರಾಗಿ ಮಾಲ್ಟ್ ಭಾಗ್ಯವನ್ನು ಚಾಲನೆ ನೀಡಲಿದೆ ಸರ್ಕಾರ. ಮಳೆರಾಯನ ಆರ್ಭಟ ಮುಗಿದರೂ ಕೂಡ ಸೂರ್ಯನ ತಾಪ ಹೆಚ್ಚಾಗುತ್ತಾ ಇದೆ, ಹೀಗಾಗಿ ಮಕ್ಕಳ ಆರೋಗ್ಯವನ್ನು ಮತ್ತಷ್ಟು ಪೌಷ್ಟಿಕಾಂಶದಿಂದ ಸುಧಾರಿಸಬೇಕೆಂದು, ರಾಗಿಮಾಲ್ಟ್ ಯೋಜನೆಯನ್ನು ಜಾರಿಗೊಳಿಸಲಿದೆ ಸರ್ಕಾರ. ಕಳೆದ ಒಂದು ತಿಂಗಳ ಹಿಂದೆ ಎನ್‌ಜಿಓ ವತಿಯಿಂದ ಪ್ರಯೋಗಕ್ಕಾಗಿ ಎರಡು ಜಿಲ್ಲೆಗಳಿಗೆ ರಾಗಿ ಮಾಲ್ಟನ್ನು ಸರ್ಕಾರಿ ಶಾಲಾ ಮಕ್ಕಳಿಗೆ ವಿತರಿಸಲಾಗಿತ್ತು, ಈ ಯೋಜನೆಯು ಕೂಡ ಯಶಸ್ವಿಯಾಗಿದೆ, ಹಾಗಾಗಿ ಈ ಯೋಜನೆಯನ್ನು ಎಲ್ಲಾ ರಾಜ್ಯದ ಸರ್ಕಾರಿ ಶಾಲಾ ಮಕ್ಕಳಿಗೆ ನೀಡಬೇಕೆಂದು ಶಿಕ್ಷಣ ಸಚಿವರು ಹೇಳಿದ್ದಾರೆ.

2023 ನೇ ಸಾಲಿನ ಶೈಕ್ಷಣಿಕ ವರ್ಷವೂ ಮುಗಿಯುವ ವೇಳೆಗೆ ಈ ಹೊಸ ಯೋಜನೆಯನ್ನು ಚಾಲನೆ ನೀಡಲಿದೆ ಸರ್ಕಾರ. ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೂ ಕೂಡ ರಾಗಿ ಗಂಜಿ ವಿತರಣೆ ನಡೆಯಲಿದೆ. ಡಿಸೆಂಬರ್ ತಿಂಗಳಿನಿಂದಲೇ ಈ ಮಾಲ್ಟ್ ಭಾಗ್ಯವನ್ನು ಕೈಗೊಳ್ಳಲಿದೆ ಸರ್ಕಾರ. ಹಲವಾರು ವರ್ಷಗಳಿಂದ ಪೌಡರ್ ಹಾಲನ್ನು ಕೂಡ ವಿದ್ಯಾರ್ಥಿಗಳಿಗೆ ಬೆಳಗಿನ ಸಮಯದಲ್ಲಿ ನೀಡುತ್ತಿದೆ, ಹಾಗೂ ಮಧ್ಯಾಹ್ನದ ಬಿಸಿ ಊಟಕ್ಕೆ ಹಲವಾರು ವಿಧ ವಿಧದ ತರಕಾರಿಗಳನ್ನು ಹಾಕಿ ಸಾಂಬಾರ್ ಕೂಡ ಅಡುಗೆ ಸಿಬ್ಬಂದಿ ಮಾಡುತ್ತಾರೆ, ಈ ತರಕಾರಿಗಳಿಂದಲೂ ಕೂಡ ಮಕ್ಕಳಿಗೆ ಪೌಷ್ಟಿಕಾಂಶಗಳು ದೊರೆಯುತ್ತಿವೆ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು ! ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment