LPG ಗ್ಯಾಸ್ ಸಬ್ಸಿಡಿ ಹಣ ನಿಮಗೂ ಬೇಕೆ ? ಹಾಗಾದ್ರೆ ಈ ಒಂದು ಕೆಲಸ ಮಾಡಿ, ಮಾಡಿಲ್ಲದಿದ್ರೆ ನಿಮಗೆ ಹಣ ವರ್ಗಾವಣೆ ಆಗುವುದಿಲ್ಲ.

ಎಲ್ಲರಿಗೂ ನಮಸ್ಕಾರ..

ಈಗಾಗಲೇ ರಾಜ್ಯದ LPG ಫಲಾನುಭವಿಗಳಿಗೆ LPG ಸಂಪರ್ಕವನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿಸಿ ಎಂದು ಆದೇಶ ನೀಡಿದೆ ಸರ್ಕಾರ. ಈ ನಿಟ್ಟಿನಲ್ಲೂ ಕೂಡ ಗ್ರಾಹಕರು LPG ಸಂಪರ್ಕವನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿಸುತ್ತಿದ್ದಾರೆ, ಕೆಲವರು ಮಾತ್ರ LPG ಸಂಪರ್ಕಕ್ಕೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸುತ್ತಿಲ್ಲ, ಇನ್ಮುಂದೆ ಅಂಥವರಿಗೆ ಹಣ ಬರುವುದಿಲ್ಲ. ಹಾಗೂ LPG ಗ್ಯಾಸ್ ನ ಸಬ್ಸಿಡಿ ಸೌಲಭ್ಯವನ್ನು ಪಡೆಯಲು ಸಾಧ್ಯವಿಲ್ಲ. ಯಾವ ಗ್ರಾಹಕರಿಗೆ ಎಲ್‍ಪಿಜಿಯ ಸಬ್ಸಿಡಿ ಸೌಲಭ್ಯ ದೊರಕಲಿದೆ ಎಂದು ಈ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ, ಕೊನೆವರೆಗೂ ಲೇಖನವನ್ನು ಓದಿ.

WhatsApp Group Join Now
Telegram Group Join Now

ಎಲ್ಲೆಡೆ ರಾಜ್ಯದ ಗ್ರಾಹಕರು ಎಲ್ಪಿಜಿ ಗ್ಯಾಸ್ ಸಬ್ಸಿಡಿ ಸೌಲಭ್ಯವನ್ನು ಪಡೆಯಲು, ನೀವು ಕೂಡ ಎಲ್ಪಿಜಿ ಸಂಪರ್ಕಕ್ಕೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಲೇಬೇಕು. ಲಿಂಕ್ ಮಾಡಿಸಿದ ನಂತರ ಸಬ್ಸಿಡಿ ಸಿಗುತ್ತದೆ. ಎಲ್ ಪಿ ಜಿ ಸಬ್ಸಿಡಿ ಸಂಪರ್ಕವನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡದಿದ್ದರೆ, ನಿಮಗೆ ಎಲ್ಪಿಜಿ ಸಬ್ಸಿಡಿ ಸಿಗುವುದಿಲ್ಲ. ಹಾಗಾಗಿ ಈ ಕೂಡಲೇ ಆನ್ಲೈನ್ ಮೂಲಕ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಿ.

ಸೈಬರ್ಸೆಂಟರ್ ಗೆ ಹೋಗಿ ಮಾಡಿಸುವ ಅವಶ್ಯಕತೆ ಇಲ್ಲ, ಕೂಡಲೇ ಫೋನಿನ ಮೂಲಕವೂ ಎಲ್ ಪಿ ಜಿ ಸಬ್ಸಿಡಿ ಸಂಪರ್ಕವನ್ನು ಆಧಾರ್ ಕಾರ್ಡ್ ಗೆ ಲಿಂಕ್ ಸುಲಭವಾಗಿ ಮಾಡಬಹುದು, ಹಾಗಾದ್ರೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಲು ಏಕೆ ತಡ ಮಾಡುತ್ತಿದ್ದೀರಾ ? ಕೂಡಲೇ ಈ ಕೆಳಕಂಡ ವಿಧಾನವನ್ನು ಪಾಲಿಸಿ ಆಧಾರ್ ಕಾರ್ಡ್ ಲಿಂಕ್ ಮಾಡಿಸಿ.

ಆಧಾರ್ ಕಾರ್ಡ್ ಗೆ ಎಲ್‌ಪಿಜಿ ಗ್ಯಾಸ್ ಸಂಪರ್ಕವನ್ನು ಲಿಂಕ್ ಮಾಡಲು, ಫೋನಿನ ಮೂಲಕ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ ಅಂದರೆ,( UIDAI ) https://uidai.gov.in/ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ಅನಂತರ ಸೆಲ್ಫ್ ಸೀಡಿಂಗ್ ಪುಸ್ತಕ ಎಂಬ ಇಂಗ್ಲಿಷ್ ಪದಗಳು ಕಾಣತೊಡಗುತ್ತವೆ, ಆ ಇಂಗ್ಲಿಷ್ ಪದದ ಮೇಲೆ ಕ್ಲಿಕ್ಕಿಸಿ, ಕ್ಲಿಕ್ಕಿಸಿದ ನಂತರ LPG ಎಂಬುದನ್ನು ಆಯ್ಕೆ ಮಾಡಿಕೊಳ್ಳಿ, ನಿಮ್ಮ ಗ್ಯಾಸ್ ಯಾವ ಕಂಪನಿಯಿಂದ ಸಾಗಲ್ಪಟ್ಟಿದೆ ಎಂಬುದನ್ನು ನಮೂದಿಸಬೇಕು ಅಂದರೆ, IVOCL, BPCL, HPCL, ಇದರಲ್ಲಿ ಒಂದನ್ನು ಆಯ್ಕೆ ಮಾಡಿ ನಮೂದಿಸಬೇಕು ನಂತರ ಗ್ಯಾಸ್ ವಿತರಿಸುವ ವಿತರಕನ ಪಟ್ಟಿ ನಿಮ್ಮ ಮುಂದೆ ಕಾಣತೊಡಗುತ್ತದೆ,

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ನಿಮ್ಮ ಎಲ್ಪಿಜಿ ಗ್ಯಾಸ್ ನ ವಿತರಕನನ್ನು ಆಯ್ಕೆ ಮಾಡಿಕೊಳ್ಳಿ, ಅನಂತರ ಗ್ಯಾಸ್ ಸಂಖ್ಯೆ, ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ, ನಿಮ್ಮಇಮೇಲ್ ಐಡಿಯನ್ನು ಕೂಡ ನಮೂದಿಸಿ, ನಂತರ ನೀವು ನೀಡಿರುವ ಮೊಬೈಲ್ ಸಂಖ್ಯೆಗೆ OTP ಒಂದು ಮೆಸೇಜ್ ನ ಮೂಲಕ ತಲುಪಿರುತ್ತದೆ. ಆ ಮೆಸೇಜ್ ನಲ್ಲಿ ನಿಮ್ಮ ಎಲ್ಲಾ ವಿವರವೂ ಕೂಡ ಒಂದೇ ಜಾಗದಲ್ಲಿ ಇರುತ್ತದೆ, ಎಲ್ಲಾ ವಿವರವನ್ನು ಪರಿಶೀಲಿಸಿ. ಈ ಕೆಲಸ ಮಾಡಿದರೆ ಸಾಕು ನಿಮ್ಮ LPG ಸಂಪರ್ಕಕ್ಕೆ ಆಧಾರ್ ಕಾರ್ಡ್ ಲಿಂಕ್ ಆದಂತೆ.

ಈ ಸೂಚನೆಯನ್ನು ಗಮನಿಸಿ

  • LPG ಗ್ಯಾಸ್ ಸಂಪರ್ಕವು ಯಾರ ಹೆಸರಿನಲ್ಲಿ ಇದೆ ಎಂದು ಮೊದಲು ತಿಳಿದುಕೊಳ್ಳಿ, ತಿಳಿದುಕೊಂಡ ನಂತರ ಅವರ ಆಧಾರ್ ಕಾರ್ಡನ್ನೇ ಬಳಸಿ, ಎಲ್ಪಿಜಿ ಗ್ಯಾಸ್ ಸಂಪರ್ಕಕ್ಕೆ ಲಿಂಕ್ ಮಾಡಬೇಕಾಗುತ್ತದೆ. ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಕೂಡ ಲಿಂಕ್ ಆಗಿರಬೇಕು ಮತ್ತು ಮೊಬೈಲ್ ಸಂಖ್ಯೆಯು ಆಧಾರ್ ಕಾರ್ಡ್ ನಲ್ಲಿ ನಮೂದಿಸಲ್ಪಟ್ಟಿರಬೇಕು ಹಾಗೂ ಗ್ಯಾಸ್ ಸಂಪರ್ಕದ ಹೆಸರು ಹಾಗೂ ಆಧಾರ್ ಕಾರ್ಡ್ ನಲ್ಲಿರುವ ಹೆಸರು ಒಂದೇ ಆಗಿರಬೇಕು, ಅಂದರೆ ಒಂದೇ ವ್ಯಕ್ತಿಯ ಆಧಾರ್ ಕಾರ್ಡ್ ಆಗಿರಬೇಕು.

ಆನ್ಲೈನ್ ಮೂಲಕ ಲಿಂಕ್ ಮಾಡಲು ಬರದಿದ್ದರೆ ಆಫ್ಲೈನ್ ಮೂಲಕ ಕೂಡ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬಹುದು, ಯಾವ ರೀತಿ ಎಂದರೆ, ಎಲ್ ಪಿಜಿ ಗ್ಯಾಸ್ ವಿತರಕರ ಬಳಿ ಹೋಗಿ, ವಿತರಕರು ನಿಮಗೆ ಒಂದು ಅಪ್ಲಿಕೇಶನ್ ಅನ್ನು ನಮೂದಿಸಿ ಎಂದು ಹೇಳುತ್ತಾರೆ, ನಿಮ್ಮ ಎಲ್ಲಾ ವಿವರವನ್ನು ನಮೂದಿಸಿ ನಂತರ ಆಧಾರ್ ಕಾರ್ಡ್ ಜೆರಾಕ್ಸ್ ಕೂಡ ಅಪ್ಲಿಕೇಶನ್ ಜೊತೆ ನೀಡಿ, ಅನಂತರ ವಿತರಕರು ಪರಿಶೀಲಿಸಿ ಆಧಾರ್ ಕಾರ್ಡನ್ನು ಲಿಂಕ್ ಮಾಡುತ್ತಾರೆ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು ! ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ..

Leave a Comment