3 ಸಾವಿರ ಕೆಪಿಎಸ್ ಪಬ್ಲಿಕ್ ಶಾಲೆಗಳನ್ನು ಸ್ಥಾಪಿಸಲು ಮುಂದಾದ ಸರ್ಕಾರ. ಕಟ್ಟಡದ ಕಾರ್ಯಗಳನ್ನು ಮುಂದಿನ ಮೂರು ವರ್ಷಗಳಲ್ಲೇ ಮುಗಿಸಲಿದೆ.

ಎಲ್ಲರಿಗೂ ನಮಸ್ಕಾರ…

ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಮುಂದಿನ ಮೂರು ವರ್ಷಗಳಲ್ಲಿ 3 ಸಾವಿರ ಕೆಪಿಎಸ್ ಪಬ್ಲಿಕ್ ಸ್ಕೂಲ್ ಗಳನ್ನು ನಿರ್ಮಿಸಿ ಸ್ಥಾಪಿಸಲಾಗುತ್ತದೆ. ಎಂದು ಸೂಚನೆ ನೀಡಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ಮೂರು ಸಾವಿರ ಕೆಪಿಎಸ್ ಶಾಲೆಗಳು ಆರಂಭವಾಗಲಿದೆ ಎಂದು ಸಚಿವರು ಹೇಳಿದ್ದಾರೆ. ಹಾಗೂ ಶಿಕ್ಷಣ ಮಂಡಳಿಯ ಉದ್ದೇಶವೇನೆಂದರೆ ಇನ್ನೂ ಹೆಚ್ಚು ಸರ್ಕಾರಿ ಶಾಲೆಗಳು ಸ್ಥಾಪನೆಯಾಗಿ, ಹೆಚ್ಚಿನ ವಿದ್ಯಾರ್ಥಿಗಳ ವಿದ್ಯಾಭ್ಯಾಸವನ್ನು ನೀಡಲು ಮನ್ನಣೆ ನೀಡಲಿದೆ ಸರ್ಕಾರ. ಈ ಕಾರ್ಯವನ್ನು ಮೂರು ವರ್ಷದಲ್ಲೇ ಮುಗಿಸಲಿದೆ ಎಂಬ ಭರವಸೆಯನ್ನು ಮಧು ಬಂಗಾರಪ್ಪನವರು ಕೊಟ್ಟಿದ್ದಾರೆ.

WhatsApp Group Join Now
Telegram Group Join Now

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಇದೊಂದು ಸಿಹಿ ಸುದ್ದಿ ಎಂದೇ ಹೇಳಬಹುದು. ಏಕೆಂದರೆ ಹಲವಾರು ಶಾಲೆಗಳಲ್ಲಿ ಕಟ್ಟಡದ ದುರ್ವೆವಸ್ಥೆಯಿಂದ ವಿದ್ಯಾರ್ಥಿಗಳು ಕಲಿಕೆ ಮಾಡಲು ಆಗುತ್ತಿಲ್ಲ. ಇಂಥಹ ಎಲ್ಲಾ ತೊಂದರೆಗಳನ್ನು ತೊರೆದು ಹಾಕಲು ಮುಂದಾಗಿದೆ ಸರ್ಕಾರ. ಕೆಪಿಎಸ್ ಶಾಲೆ ಪ್ರಾರಂಭವಾದ ಬಳಿಕ ವಿದ್ಯಾರ್ಥಿಗಳಿಗೆ ಎಲ್‌ಕೆಜಿ ಇಂದ ಪ್ರೌಢ ಶಿಕ್ಷಣವರೆಗೂ ಕಲಿಯುವ ವ್ಯವಸ್ಥೆ ಜಾರಿಯಾಗಲಿದೆ. ಹಾಗೂ ಹಲವಾರು ಸಂಸ್ಕೃತಿ, ಕಲೆ, ಗ್ರಂಥಾಲಯ ಕ್ರೀಡಾಂಕಣ, ಚಿತ್ರಕಲೆ, ಎಲ್ಲಾ ತರಗತಿಯನ್ನು ಒಳಗೊಂಡ ಕೆಪಿಎಸ್ ಶಾಲೆ ಸ್ಥಾಪನೆಯಾಗಲಿವೆ.

ಎಲ್ಲಾತರಹದ ಸೌಲಭ್ಯವನ್ನು ಈ ಶಾಲೆಗಳಲ್ಲಿ ಅಳವಡಿಸಲಾಗುತ್ತದೆ. ಹಾಗೂ ಮುಂದಿನ ವರ್ಷದಲ್ಲಿ 600 ಕೆಪಿಎಸ್ ಶಾಲೆ ಪ್ರಾರಂಭವಾಗಲಿವೆ ಎಂಬ ಮಾಹಿತಿಯನ್ನು ಮಧು ಬಂಗಾರಪ್ಪನವರು ನೀಡಿದ್ದಾರೆ. ಶಿಕ್ಷಣ ಮಂಡಳಿಯ ಉದ್ದೇಶವೆಂದರೆ ಇನ್ನು ಹೆಚ್ಚಿನ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಬೇಕು ಎಂದು ಮುಂದಿನ ಮೂರು ವರ್ಷಗಳ ಬಳಿಕ 3000 ಕೆಪಿಎಸ್ ಶಾಲೆ ಆರಂಭ.

ಹಾಗೂ 2024 ನೇ ಸಾಲಿನಲ್ಲಿ ಶೌಚಾಲಯ ವ್ಯವಸ್ಥೆಯನ್ನು ಕೈಗೊಂಡು 8500 ಶಾಲಾ ಕೊಠಡಿಗಳ ಕಾಮಗಾರಿಕೆಯನ್ನು, ಯಶಸ್ಸಿನ ಕಡೆ ಸಾಗಲಿದೆ ಎಂಬ ಭರವಸೆಯನ್ನು ಶಿಕ್ಷಣ ಸಚಿವರು ನೀಡಿದ್ದಾರೆ. ಮತ್ತು ಇಂದಿನ ವರ್ಷದಲ್ಲಿ 13000 ಶಿಕ್ಷಕರನ್ನು ನೇಮಿಸಲಾಗಿದೆ ಎಲ್ಲಾ ಶಿಕ್ಷಕರು ಕೂಡ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಿನ ಕೆಪಿಎಸ್ ಶಾಲೆಯಲ್ಲಿ 400 ಕ್ಕಿಂತ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ, ಇದು ರಾಜ್ಯಕ್ಕೆ ಹೆಮ್ಮೆಯಂದೆ ಹೇಳಬಹುದು. ಹಾಗೂ ಈ ವರ್ಷದೊಂದು ಎಸ್ಎಸ್ಎಲ್ಸಿ ಪರೀಕ್ಷಾ ವೇಳೆಯಲ್ಲಿ ಮೂರು ಬಾರಿ ಪರೀಕ್ಷೆಯನ್ನು ನಡೆಸಲಿದೆ ಶಿಕ್ಷಣ ಮಂಡಳಿ.

ವಿದ್ಯಾರ್ಥಿಗಳಿಗೆ ಓದುವುದರಲ್ಲಿ ಮೂರು ಬಾರಿ ಅವಕಾಶವನ್ನು ನೀಡಿದ ಸರ್ಕಾರ ಹಾಗೂ ಮೂರು ಬಾರಿ ನಡೆಯುವ ಪರೀಕ್ಷೆಯ ಶುಲ್ಕವನ್ನು ಪಾವತಿಸಬಾರದು ಒಂದು ಬಾರಿ ಮಾತ್ರ ಮೊದಲನೇ ಸುತ್ತಿನ ಪರೀಕ್ಷೆಯಲ್ಲಿ ಶುಲ್ಕವನ್ನು ಪಾವತಿಸಿ ಮುಂದಿನ ಎಲ್ಲಾ ಪರೀಕ್ಷೆಯನ್ನು ಉಚಿತವಾಗಿ ಯಾವುದೇ ಶುಲ್ಕವಿಲ್ಲದೆ ಪರೀಕ್ಷೆಯನ್ನು ಬರೆಯಬಹುದು. ಈ ಬಾರಿ ಮಾತ್ರ ಮೂರು ಬಾರಿ ಪರೀಕ್ಷೆಯನ್ನು ನಡೆಸಲಿದೆ ಶಿಕ್ಷಣ ಮಂಡಳಿ ಯಾಕೆ ಈ ನಿರ್ಧಾರವನ್ನು ತೆಗೆದುಕೊಂಡಿದೆ ಗೊತ್ತಾ ? ಏಕೆಂದರೆ ಕರ್ನಾಟಕವು ಓದುವ ವಿಷಯದಲ್ಲಿ ಹಲವು ರಾಜ್ಯಗಳಿಗಿಂತ ಕಡಿಮೆ ಸ್ಥಾನದಲ್ಲಿದೆ. ಹಾಗೂ ಕರ್ನಾಟಕದಲ್ಲಿ ಹಲವಾರು ವಿದ್ಯಾರ್ಥಿಗಳು ಪ್ರತಿಭಾವಂತರು, ಹಾಗೂ ಇನ್ನು ಕೆಲ ವಿದ್ಯಾರ್ಥಿಗಳು ಓದುವ ವಿಷಯದಲ್ಲಿ ಹಿಂದುಳಿದಿದ್ದಾರೆ.

ಈ ಕಾರಣಕ್ಕಾಗಿ ಎಲ್ಲಾ ವಿದ್ಯಾರ್ಥಿಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಪಾಸ್ ಆಗಬೇಕೆಂಬ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದೆ. ಮೂರು ಬಾರಿ ಪರೀಕ್ಷೆ ನಡೆಸಿದರೆ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಮಗದೊಮ್ಮೆ ಪರೀಕ್ಷೆಯ ಅವಕಾಶಗಳು ಇರುತ್ತದೆ. ಮುಂದಿನ ಪರೀಕ್ಷೆಲ್ಲಾದರೂ ಪಾಸಾಗುತ್ತೇನೆ, ಎಂಬ ಭರವಸೆ ವಿದ್ಯಾರ್ಥಿಗಳಿಗಿರುತ್ತದೆ, ಎಂದು ಈ ನಿರ್ಧಾರ ತೆಗೆದುಕೊಂಡಿದೆ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ…

Leave a Comment