ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಹೋಗಲು ಅನುಸರಿಸಬೇಕಾದ ಶಿಕ್ಷಣ ಇಲಾಖೆಯ ಮುಖ್ಯ ಶರತ್ತುಗಳು ಇವೆ ನೋಡಿ !

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ…

ಶಿಕ್ಷಣ ಇಲಾಖೆಯು ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಹೋಗಲು ಅನುಮತಿ ಸೂಚಿಸಿದ್ದು, ಅದರ ಜೊತೆಗೆ ಕೆಲವು ಮುಖ್ಯ ಷರತ್ತುಗಳನ್ನು ಅನುಸರಿಸಬೇಕು ಎಂದು ತಿಳಿಸಿದೆ. ಪ್ರಾರ್ಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಸ್ಪಷ್ಟೀಕರಣವಾಗಿ ತಿಳಿಸಿದೆ, ಪ್ರವಾಸಕ್ಕೆ ಶಾಲಾ ಮಕ್ಕಳು ಹೊರ ರಾಜ್ಯಕ್ಕೂ ಕೂಡ ತೆರಳಬಹುದು, ಮಕ್ಕಳು ಶಾಲಾ ಪ್ರವೇಶಕ್ಕೆ ಬೇರೆ ರಾಜ್ಯಗಳಿಗೆ ಭಾರತೀಯ ರೈಲ್ವೆಯಲ್ಲೂ ಕೂಡ ಹೋಗಬಹುದು ಎಂದು ಶಿಕ್ಷಣ ಇಲಾಖೆಯೂ ಘೋಷಿಸಿದೆ.

WhatsApp Group Join Now
Telegram Group Join Now

ಸುತ್ತೋಲೆಯಲ್ಲಿ ರಾಜ್ಯದ ಪ್ರಾರ್ಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಸುತ್ತೋಲೆ ಹೊರಡಿಸಲಾಗಿದೆ. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಸಂತೋಷದಿಂದ ಪ್ರವಾಸಕ್ಕೆ ಹೋಗಬಹುದು. ಆದರೆ ಕೆಲವು ಶಾಲೆಯವರು ಹೊರ ರಾಜ್ಯಕ್ಕೆ ಪ್ರವಾಸಕ್ಕೆ ತೆರಳಲು ಮನವಿ ಮಾಡಿಕೊಂಡಿದ್ದರು. ಆದರೆ ಶಿಕ್ಷಣ ಇಲಾಖೆಯ ಇದಕ್ಕೆ ಒಪ್ಪಿ ಬೇರೆ ರಾಜ್ಯಗಳಿಗೆ ಪ್ರವಾಸಕ್ಕೆ ತೆರಳಲು ಶಾಲಾ ಮಕ್ಕಳಿಗೆ ಅವಕಾಶ ಮಾಡಿಕೊಟ್ಟಿದೆ.

ಪ್ರತಿ ಶೈಕ್ಷಣಿಕ ವರ್ಷ ರಾಜ್ಯದ ಪ್ರಾರ್ಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ದೇಶಾದ್ಯಂತ ಪ್ರವಾಸ ಹೋಗಲು ಅನುಮತಿ ನೀಡಿದ್ದು, ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಶರತ್ತುಗಳ ಅನ್ವಯ ಆಯಾ ಕ್ಷೇತ್ರದ ಶಿಕ್ಷಣ ಅಧಿಕಾರಿಗಳಿಗೆ ಅನುಮತಿ ನೀಡಲು ಸೂಚಿಸಿದೆ. ಶಾಲಾ ಮಕ್ಕಳಿಗೆ ಹೊರ ರಾಜ್ಯಗಳಿಗೆ ತೆರಳಲು ಭಾರತೀಯ ರೈಲ್ವೆ ರೈಲುಗಳಲ್ಲೂ ಹಮ್ಮಿಕೊಳ್ಳಬಹುದು, ಎಂದು ಶಿಕ್ಷಣ ಇಲಾಖೆಯ ಶೈಕ್ಷಣಿಕ ಪ್ರವಾಸದ ಪ್ರಾರ್ಥಮಿಕ ಮತ್ತು ಪ್ರೌಢ ಮಕ್ಕಳಿಗೆ ತಿಳಿಸಿದೆ.

ಮಕ್ಕಳಿಗೆ ಪ್ರವಾಸ ಎಂಬ ಒಂದು ಪದವು ಸಂತಸದ ಕ್ಷಣಗಳನ್ನು ನೆನಪು ಮಾಡುತ್ತದೆ. ಮಕ್ಕಳು ಓದುವುದರ ಜೊತೆಗೆ ಹೊರ ಪ್ರಪಂಚವನ್ನು ಕೂಡ ನೋಡಬೇಕು. ದೇಶ ಸುತ್ತು, ಕೋಶ ಓದು ಎಂಬ ಗಾದೆಯೂ ಮಕ್ಕಳಿಗೆ ಅನ್ವಯಿಸುತ್ತದೆ ಮಕ್ಕಳು ಬರೀ ಪಾಠವನ್ನೇ ಓದಿ ನಾವು ದೇಶದಲ್ಲಿ ನಡೆಯುವ ಎಲ್ಲಾ ವಿಚಾರವನ್ನು ತಿಳಿಯುತ್ತೇವೆ ಎಂದರೆ ಅದು ಸಾಧ್ಯವಿಲ್ಲ. ಮಕ್ಕಳು ಓದುವುದರ ಜೊತೆಗೆ ಕೆಲವು ಸ್ಥಳಗಳನ್ನು ನೋಡಿ ಕಲಿಯುವುದೇ ಹೆಚ್ಚು. ಅದರಿಂದ ಮಕ್ಕಳಿಗೆ ಪಾಠದ ಜೊತೆಗೆ ಪ್ರವಾಸವು ಕೂಡ ತುಂಬಾ ಮುಖ್ಯವಾದ ಭಾಗವಾಗಿದೆ. ಈಗಾಗಲೇ ಕೋವಿಡ್ ಸಮಯದಲ್ಲಿ ಮಕ್ಕಳು ಪ್ರವಾಸಕ್ಕೆ ಹೋಗಲಿಲ್ಲ ಅದು ಬೇಸರದ ಸಂಗತಿ.

ಆದರೆಈ ವರ್ಷ ಮಕ್ಕಳಿಗೆ ಪ್ರವಾಸಕ್ಕೆ ಹೋಗಲು ಅವಕಾಶ ಮಾಡಿಕೊಟ್ಟಿದೆ ಶಿಕ್ಷಣ ಇಲಾಖೆ. ಮಕ್ಕಳ ಹಿತದೃಷ್ಟಿಯಿಂದ ಮಕ್ಕಳಿಗೆ ಪ್ರವಾಸವು ಮುಖ್ಯ ಎಂಬುದನ್ನು ತಿಳಿದು ಶಿಕ್ಷಣ ಇಲಾಖೆಯು ಮಕ್ಕಳಿಗೆ ಪ್ರವಾಸಕ್ಕೆ ಹೋಗಲು ಅವಕಾಶ ಮಾಡಿಕೊಟ್ಟಿದೆ ಆದರೆ ಅದರ ಜೊತೆಗೆ ಕೆಲವು ಶರತ್ತು ನೀತಿ ನಿಬಂಧನೆಗಳನ್ನು ಅನುಸರಿಸಬೇಕು ಅಂದರೆ ಅನ್ವಯಿಸಿಕೊಂಡು ನೀವು ಪ್ರವಾಸಕ್ಕೆ ಹೋಗಬೇಕು ಎಂದು ಶಿಕ್ಷಣ ಇಲಾಖೆಯು ಆಯಾ ಶಿಕ್ಷಣ ಅಧಿಕಾರಿಗಳಿಗೆ ತಿಳಿಸಿದೆ. ಮಕ್ಕಳಿಗೆ ಅವಕಾಶ ಮಾಡಿಕೊಟ್ಟಿ ಮಕ್ಕಳ ಖುಷಿಗೆ ಕಾರಣವಾಗಿದೆ ಶಿಕ್ಷಣ ಇಲಾಖೆ.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸದ ಮುಖ್ಯ ಶರತ್ತುಗಳು !

  • ಪ್ರತಿ ವರ್ಷವೂ ಡಿಸೆಂಬರ್ ತಿಂಗಳಿನಲ್ಲಿ ಪ್ರವಾಸಕ್ಕೆ ಹೋಗಬೇಕು ಅದನ್ನು ಬಿಟ್ಟು ಡಿಸೆಂಬರ್ ತಿಂಗಳ ನಂತರ ಪ್ರವಾಸಕ್ಕೆ ಅನುಮತಿ ಇಲ್ಲ. ಡಿಸೆಂಬರ್ ಮಾಹೆಯ ಅಂತ್ಯದೊಳಗೆ ಪ್ರವಾಸ ಮುಗಿಸಿ ಬಂದು ಡಿಸೆಂಬರ್ ನಂತರ ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡುವುದು.
  • ಶೈಕ್ಷಣಿಕ ಪ್ರವಾಸಕ್ಕೆ ಪೋಷಕರ ಒಪ್ಪಿಗೆ ಪಡೆದ ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ಪ್ರವಾಸಕ್ಕೆ ಕರೆದೊಯ್ಯಬೇಕು.
  • ಶೈಕ್ಷಣಿಕ ಪ್ರವಾಸವನ್ನು ಶಾಲಾ ದಿನಗಳಲ್ಲಿ ಹಮ್ಮಿಕೊಂಡರೆ ಮುಂದಿನ ದಿನಗಳಲ್ಲಿ ಅಂದರೆ ಶನಿವಾರ ಪೂರ್ಣ ದಿನ / ಭಾನುವಾರ ಶಾಲೆ ನಡೆಸಿ ಕೊರತೆ ಬೀಳದ ಹಾಗೆ ಪಠ್ಯ ಚಟುವಟಿಕೆಗಳನ್ನು ಸರಿದೂಗಿಸುವುದು.
  • ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗುವ ತಳಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
  • ಪ್ರವಾಸವನ್ನು ಕೈಗೊಳ್ಳುವ ಖಾಸಗಿ ಶಾಲೆಗಳು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಕಡ್ಡಾಯವಾಗಿ ಶಾಲಾ ಮಾನ್ಯತೆಯನ್ನು ನವೀಕರಿಸಬೇಕು.
  • ಶಿಕ್ಷಣ ಇಲಾಖೆಯಿಂದ ಮಕ್ಕಳ ಪ್ರವಾಸಕ್ಕೆ ಯಾವುದೇ ಸೌಲಭ್ಯವನ್ನು ನೀಡುವುದಿಲ್ಲ.
  • ಪ್ರವಾಸದಲ್ಲಿ ಸಂಭವಿಸುವ ಯಾವುದೇ ಅವಗಡಗಳಿಗೆ ಶಾಲೆಯ ಮುಖ್ಯಸ್ಥರೇ ನೇರ ಹೊಣೆಯಾಗಿರುತ್ತಾರೆ,ಶಿಕ್ಷಣ ಇಲಾಖೆಯು ಜವಾಬ್ದಾರಿ ಆಗಿರುವುದಿಲ್ಲ.
  • ಶೈಕ್ಷಣಿಕ ಪ್ರವಾಸವನ್ನು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಅಥವಾ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ ವಾಹನಗಳಲ್ಲೆ ಕಡ್ಡಾಯವಾಗಿ ಪ್ರವಾಸವನ್ನು ಕೈಗೊಳ್ಳಬೇಕು.
  • ಯಾವುದೇ ಕಾರಣಕ್ಕೂ ಅನಧಿಕೃತವಾಗಿ ಮಿನಿ ಬಸ್ ಹಾಗೂ ಖಾಸಗಿ ಬಸ್ಗಳಲ್ಲಿ ಪ್ರವಾಸವನ್ನು ಕೈಗೊಳ್ಳಬಾರದು.
  • ಕೋವಿಡ್ 19ಗೆ ಸಂಬಂಧಿಸಿದಂತೆ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು.
  •  ಪ್ರವಾಸ ಕೈಗೊಂಡಿರುವ ವಿದ್ಯಾರ್ಥಿನಿಯರ ಮೇಲ್ವಿಚಾರಣೆಯನ್ನು ಪ್ರವಾಸ ನಿಯೋಜಿತ ಮಹಿಳಾ ಶಿಕ್ಷಕರೇ ಕಡ್ಡಾಯವಾಗಿ ನೋಡಿಕೊಳ್ಳಬೇಕು.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.

Leave a Comment