ರೇಷನ್ ಕಾರ್ಡ್ ದಾರರೇ ಗಮನಿಸಿ : ನೀವು ಕೂಡ ಈ ತಪ್ಪನ್ನು ಮಾಡಿದ್ರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಲಿದೆ ಎಚ್ಚರ.

ಎಲ್ಲರಿಗೂ ನಮಸ್ಕಾರ…

ಸರ್ಕಾರದ ಯಾವುದೇ ಯೋಜನೆಗಳಲ್ಲಿ ಭಾಗಿಯಾಗಲು ರೇಷನ್ ಕಾರ್ಡ್ ಬಹಳ ಮುಖ್ಯ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳಿಗೂ ಕೂಡ ರೇಷನ್ ಕಾರ್ಡ್ ಅನ್ನು ಕಡ್ಡಾಯ ಮಾಡಲಾಗಿದೆ. ಹಾಗೂ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಧಾನ್ಯವನ್ನು ಸ್ವೀಕರಿಸಲು ರೇಷನ್ ಕಾರ್ಡ್ ಇರಲೇಬೇಕು. ರೇಷನ್ ಕಾರ್ಡ್ ಇದ್ದವರು ಮಾತ್ರ ಅನ್ನ ಭಾಗ್ಯ ಯೋಜನೆಯ ಫಲಾನುಭವಿಗಳು. ಕೆಲವರು ರೇಷನ್ ಕಾರ್ಡ್ ಇದ್ದರೂ ಕೂಡ ಆರು ತಿಂಗಳಿಂದ ಯಾವುದೇ ರೀತಿಯ ಧಾನ್ಯಗಳನ್ನು ಸ್ವೀಕರಿಸಿಲ್ಲ, ಅಂಥಹ ಪ್ರಕರಣಗಳನ್ನು ಆಹಾರ ಇಲಾಖೆಯು ಗಮನಿಸಿ ಅಂಥವರ ರೇಷನ್ ಕಾರ್ಡ್ಅನ್ನು ರದ್ದುಗೊಳಿಸಲಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ಲೇಖನವನ್ನು ಕೊನೆವರೆಗೂ ಓದಿ.

WhatsApp Group Join Now
Telegram Group Join Now

ಇಕೆವೈಸಿ ಮಾಡಿಸದಿದ್ದರೆ ರೇಷನ್ ಕಾರ್ಡ್ ರದ್ದು !

ಹೌದು ಇಕೆವೈಸಿ ಮಾಡಿಸದ ಅಭ್ಯರ್ಥಿಯ ರೇಷನ್ ಕಾರ್ಡ್ ಅನ್ನು ರದ್ದುಗೊಳಿಸಲಿದೆ ರಾಜ್ಯ ಸರ್ಕಾರ. ಏಕೆಂದರೆ ರೇಷನ್ ಕಾರ್ಡ್ ನಕಲಿಯೋ ಅಸಲಿಯೋ ಎಂಬ ಸತ್ಯಂಶವನ್ನು ತಿಳಿಯಲು ಇಕೆವೈಸಿ ಮಾಡಿಸಲಾಗುತ್ತದೆ. ಡಿಸೆಂಬರ್ 30 ಇಕೆವೈಸಿ ಮಾಡಿಸಲು ಕೊನೆಯ ದಿನವಾಗಿದೆ. ನೀವು ಕೂಡ ನಿಮ್ಮ ರೇಷನ್ ಕಾರ್ಡ್ ಗೆ ಇಕೆವೈಸಿ ಮಾಡಿಸಿಲ್ವ ? ಹಾಗಾದ್ರೆ ಈ ಕೂಡಲೇ ನ್ಯಾಯಬೆಲೆ ಅಂಗಡಿಗೆ ಹೋಗಿ ವಿಚಾರಿಸಿ ನಂತರ ಇಕೆವೈಸಿ ಯನ್ನು ಮಾಡಿಸಿ. ಪಡಿತರ ಫಲಾನುಭವಿಗಳಿಗೆ ಇಕೆವೈಸಿ ಮಾಡಿಸಲು ಡಿಸೆಂಬರ್ 30 ದಿನದವರೆಗೂ ಕಾಲಾವಕಾಶ ನೀಡಿದೆ ಸರ್ಕಾರ. ಇಕೆವೈಸಿ ಮಾಡಿಸದಿದ್ದರೂ ಕೂಡ ರದ್ದಾಗುತ್ತದೆ ರೇಷನ್ ಕಾರ್ಡ್. ನೀವು ಕೂಡ ಸರ್ಕಾರದ ನಿಯಮವನ್ನು ಪಾಲಿಸದೆ ಇಕೆವೈಸಿ ಮಾಡಿಸದಿದ್ದರೆ ಇಂದೇ ಮಾಡಿಸಿ.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಪಡಿತರ ಅಕ್ಕಿಯನ್ನು ಪಡೆಯದಿದ್ದರೂ ಕೂಡ ರೇಷನ್ ಕಾರ್ಡ್ ರದ್ದಾಗಲಿದೆ !

ಕೆಲ ರೇಷನ್ ಕಾರ್ಡ್ ಅಭ್ಯರ್ಥಿಗಳು ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಪಡೆಯಲು ಮಾತ್ರ ರೇಷನ್ ಕಾರ್ಡ್ ಅನ್ನು ಮಾಡಿಸಿರುತ್ತಾರೆ ಅಂಥವರು ಆರು ತಿಂಗಳಿಂದ ಯಾವ ರೀತಿಯ ಪಡಿತರ ಧಾನ್ಯವನ್ನು ಪಡೆಯದೆ ಸ್ವೀಕರಿಸದೆ ಇರುತ್ತಾರೆ. ಅಭ್ಯರ್ಥಿಯು ಯಾವುದೇ ಬಿಪಿಎಲ್ ಅಥವಾ ಎಪಿಎಲ್ ಕಾರ್ಡನ್ನು ಹೊಂದಿರುತ್ತಾರೆ. ಅಂಥವರ ಪಡಿತರ ಕಾರ್ಡ್ ಗಳು ರದ್ದಾಗಲಿದೆ. ನೀವು ಕೂಡ ಈ ತಪ್ಪನ್ನು ಮಾಡುತ್ತಿದ್ದೀರಾ ?

ಆರು ತಿಂಗಳಿನಿಂದ ಯಾವುದೇ ರೀತಿಯ ಪಡಿತರವನ್ನು ಪಡೆಯುತ್ತಿಲ್ಲವ, ಹಾಗಾದ್ರೆ ನಿಮ್ಮ ರೇಷನ್ ಕಾರ್ಡ್ ಕೂಡ ರದ್ದಾಗಲಿದೆ. 15 ಸಾವಿರ ರೇಷನ್ ಕಾರ್ಡ್ ಗಳು ಮೈಸೂರಿನಲ್ಲಿ ರದ್ದಾಗುತ್ತವೆ ಎಂಬ ಸೂಚನೆ ಕಂಡು ಬಂದಿದೆ. ನೀವು ಕೂಡ ಈ ತಪ್ಪನ್ನು ಮಾಡುತ್ತಿದ್ದರೆ ಸರಿಪಡಿಸಿ ರೇಷನ್ ಕಾರ್ಡ್ ಅನ್ನು ಉಳಿಸಿಕೊಂಡು ಪಡಿತರ ಅಕ್ಕಿಯನ್ನು ಪಡೆಯಿರಿ ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಹಣವು ಕೂಡ ಜಮಾ ಮಾಡಲಾಗುತ್ತದೆ. ನೀವು ಕೂಡ ಆ ಯೋಜನೆಗಳ ಫಲಾನುಭವಿ ಆಗಿರಿ.

ಪಡಿತರ ಅಕ್ಕಿಯನ್ನು ಮಾರಿದ್ರೆ ಕೇಸ್ ಪ್ರಕರಣಕ್ಕೆ ಒಳಗಾಗುತ್ತೀರಿ ಎಚ್ಚರ !

ರೇಷನ್ ಕಾರ್ಡ್ ಹೊಂದಿರುವ ಕೆಲವರು ಹೊಡೀತಾರೆ ಅಕ್ಕಿಯನ್ನು ಸ್ವೀಕರಿಸಿ ಬೇರೊಂದು ವ್ಯಕ್ತಿಗೆ ಮಾರುತ್ತಿರುತ್ತಾರೆ ಇಂಥಹ ತಪ್ಪನ್ನು ನೀವು ಕೂಡ ಮಾಡುತ್ತಿದ್ದೀರಾ ಹಾಗಾದ್ರೆ ನೀವು ಕೂಡ ಕೇಸ್ ಪ್ರಕರಣಕ್ಕೆ ಒಳಗಾಗುವಿರಿ ಎಚ್ಚರವಾಗಿರಿ. ನ್ಯಾಯಬೆಲೆ ಅಂಗಡಿಯಲ್ಲಿ ಪಡೆದುಕೊಂಡ ಪಡಿತರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರೆ ಇದು ಸರ್ಕಾರದ ಅಡಿಯಲ್ಲಿ ಶಿಕ್ಷರ್ಹ ಅಪರಾಧ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ…

Leave a Comment