ವಿದ್ಯಾರ್ಥಿಗಳಿಗೆ ಸಿಗಲಿದೆ HDFC ಪರಿವರ್ತನಾ ಸ್ಕಾಲರ್ ಶಿಪ್ ! ಈ ಕೂಡಲೇ ಅರ್ಜಿ ಸಲ್ಲಿಸಿ, ವರ್ಷಕ್ಕೊಮ್ಮೆ ಪಡೆಯಿರಿ 75,000 ರೂ ಹಣ.

ಎಲ್ಲರಿಗೂ ನಮಸ್ಕಾರ..

ಬಡ ಕುಟುಂಬಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಮುಂದುವರೆಸಲು ಹೆಚ್ಚಿನ ಪ್ರಮಾಣದ ಹಣವಿಲ್ಲದ ಕಾರಣದಿಂದ, ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿರುತ್ತಾರೆ. ಅಂದರೆ ಓದನ್ನೇ ಬಿಡುವಂತಹ ಪರಿಸ್ಥಿತಿಯನ್ನು ಎದರಿಸುತ್ತಿರುತ್ತಾರೆ. ಇಂಥಹ ವಿದ್ಯಾರ್ಥಿಗಳನ್ನು ಕಂಡ ಎಚ್‌ಡಿಎಫ್ಸಿ ಬ್ಯಾಂಕ್ ರವರು ಓದನ್ನು ಮುಂದುವರಿಸಲು ವಿದ್ಯಾರ್ಥಿಗಳಿಗೆ, ಹಣದ ರೂಪದಲ್ಲಿ ಸಹಾಯ ಮಾಡಲಿದ್ದಾರೆ. ಇಸಿಎಸ್ಎಸ್ ಸ್ಕಾಲರ್ಶಿಪ್ ಪ್ರೋಗ್ರಾಮ್ ನನ್ನು ಜಾರಿಗೆ ತಂದು ವಿದ್ಯಾರ್ಥಿಗಳಿಗೆ ನೆರವಾಗಲಿದ್ದಾರೆ. ಅರ್ಜಿ ಕೂಡ ಆಹ್ವಾನಿಸಲಾಗಿದೆ. ನೀವು ಕೂಡ HDFC ಬ್ಯಾಂಕ್ ರವರ ಸ್ಕಾಲರ್ಶಿಪ್ ಪ್ರೋಗ್ರಾಮ್ ಅನ್ನು ಪಡೆದುಕೊಳ್ಳಲು, ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ, ಈ ಕೆಳಕಂಡ ಲೇಖನದಲ್ಲಿ ಪೂರ್ತಿ ಮಾಹಿತಿಯನ್ನು ನೀಡಲಾಗುತ್ತದೆ, ಕೊನೆವರೆಗೂ ಲೇಖನವನ್ನು ಓದಿ.

WhatsApp Group Join Now
Telegram Group Join Now

2023 – 24 ನೇ ಸಾಲಿನಲ್ಲಿ HDFC ಬ್ಯಾಂಕ್ ರವರ ಇಸಿಎಸ್ಎಸ್ ಸ್ಕಾಲರ್ಶಿಪ್ ಪ್ರೋಗ್ರಾಮ್ ನನ್ನು ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿ ವೇತನವೆಂದು ಹಣವನ್ನು ಖಾತೆಗೆ ವರ್ಗಾಯಿಸಲಾಗುತ್ತದೆ. HDFC ಬ್ಯಾಂಕ್ ನ ಉದ್ದೇಶವೇನೆಂದರೆ, ಹಿಂದುಳಿದ ವರ್ಗದ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸುವುದು. ಹಾಗೆ ಶಿಕ್ಷಣದಲ್ಲಿ ಉತ್ತೀರ್ಣರಾಗಿ ಅಂಕವನ್ನು ಗಳಿಸಿ ಓದುತ್ತಿರುವ ವಿದ್ಯಾರ್ಥಿಗಳಿಗೂ ಕೂಡ ಹಣದ ಸಹಾಯವನ್ನು ಮಾಡುವುದು ಇಸಿಎಸ್ಎಸ್ ಸ್ಕಾಲರ್ಶಿಪ್ ಪ್ರೋಗ್ರಾಮ್ ನ ಉದ್ದೇಶ. ಇಸ್ಕಾಲರ್ಶಿಪ್ ಅನ್ನು ಕೆಲವು ವಿದ್ಯಾರ್ಥಿಗಳಿಗೆ ಮಾತ್ರ ನೀಡಲಾಗುತ್ತದೆ.

ಇದನ್ನೂ ಓದಿ :- ಶಕ್ತಿ ಯೋಜನೆಯನ್ನು 10 ವರ್ಷಗಳ ಕಾಲ ಮುನ್ನಡೆಸಲಿದೆ ಕಾಂಗ್ರೆಸ್ ಸರ್ಕಾರ ! ಬಸ್ ಟಿಕೆಟ್ ಗಾಗಿ 2021 ಕೋಟಿ ರೂ ಹಣ ಬಿಡುಗಡೆ ಮಾಡಲಾಗಿದೆ.

ಅಂದರೆ ಒಂದನೇ ತರಗತಿಯಿಂದ 12 ನೇ ತರಗತಿಯವರೆಗೂ ಓದುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಡಿಪ್ಲೋಮಾ, ಐಟಿಐ, ಯುಜಿ, ಪಿಜಿ, ಪಾಲಿಟೆಕ್ನಿಕ್ ಆಯ್ಕೆ ಮಾಡಿಕೊಂಡು ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಸಿಗುತ್ತದೆ. ಯಾವ ವಿದ್ಯಾರ್ಥಿಗೆ ಓದುವ ಆಸಕ್ತಿ ಹೆಚ್ಚಿದೆ, ಹಾಗೂ ಶಿಕ್ಷಣಕ್ಕೆ ಹಣಕಾಸಿನ ತೊಂದರೆ ಉಂಟಾಗಿದೆ ಎನ್ನುವವರು, ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬಹುದು. ಯಾವ ವಿದ್ಯಾರ್ಥಿಗಳಿಗೆ ಎಷ್ಟು ಹಣ ಸಿಗುತ್ತದೆ, ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವೇನು ? ಅರ್ಜಿ ಸಲ್ಲಿಸುವುದು ಯಾವ ರೀತಿ, ಎಂದು ಈ ಕೆಳಕಂಡ ಲೇಖನದಲ್ಲಿ ತಿಳಿಸಿ ಕೊಡಲಾಗುತ್ತದೆ.

HDFC ವಿದ್ಯಾರ್ಥಿವೇತನ ಯಾವ ವಿದ್ಯಾರ್ಥಿಗಳಿಗೆ ಸಿಗಲಿದೆ !

  • ಒಂದನೇ ತರಗತಿಯಿಂದ 12 ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ಸ್ಕಾಲರ್ ಶಿಪ್ ನ ಹಣ ಸಿಗಲಿದೆ.
  • ಹಾಗೂ ಡಿಪ್ಲೋಮೋ ಐಟಿಐ ವಿದ್ಯಾರ್ಥಿಗಳಿಗೆ, ಯುಜಿ,ಪಿಜಿ, ಪಾಲಿಟೆಕ್ನಿಕ್ ವಿಭಾಗವನ್ನು ಆಯ್ಕೆ ಮಾಡಿಕೊಂಡು ಓದುತ್ತಿರುವ ವಿದ್ಯಾರ್ಥಿಗಳಿಗೆ ಹಣ ಸಿಗಲಿದೆ.
  • 31-12-2023 ಇಸಿಎಸ್ಎಸ್ ಸ್ಕಾಲರ್ಶಿಪ್ ನ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇದಾಗಿದೆ. 2023 ನೇ ವರ್ಷ ಅಂತ್ಯವಾಗುವರೆಗೂ ಅವಕಾಶ ನೀಡಲಿದೆ HDFC ಬ್ಯಾಂಕ್.
  • ಶಿಕ್ಷಣದಲ್ಲಿ ಮುಂದಿರುವ ವಿದ್ಯಾರ್ಥಿಗಳು ಏನೆಲ್ಲ ಅರ್ಹತೆಗಳನ್ನು ಹೊಂದಿರಬೇಕು ಎಂಬುದನ್ನು ಈ ಕೆಳಕಂಡಂತೆ ಅಂತ ಅಂತವಾಗಿ ವಿಭಜಿಸಲಾಗಿದೆ.
  • ಮಾಸ್ಟರ್ ಡಿಗ್ರಿ ಓದುತ್ತಿರುವ ವಿದ್ಯಾರ್ಥಿಗಳಿಗೂ ಕೂಡ ಸ್ಕಾಲರ್ಶಿಪ್ ಸಿಗಲಿದೆ !

ವಿದ್ಯಾರ್ಥಿಗಳಿಗೆ ಅರ್ಹತೆಗಳು ಏನಿರಬೇಕು ಅರ್ಜಿಯನ್ನು ಪೂರೈಸುವುದಕ್ಕೆ ? 

  • ಎಂಎ, ಎಂಎಸ್ಸಿ, ಎಂಟೆಕ್, ಎಂಬಿಎ, ಎಂಟೆಕ್, ಕೋರ್ಸ್ ಅನ್ನು ಆಯ್ಕೆ ಮಾಡಿಕೊಂಡು ವಿದ್ಯಾರ್ಥಿಯು ಓದುತ್ತಿರಬೇಕು.
  • ಕೋರ್ಸ್ ನ ಪದವಿಯಲ್ಲಿ ಉತ್ತೀರ್ಣವಾದ ಅಂಕ ಅಥವಾ ಶೇಕಡ 55 ರಷ್ಟು ಗಳಿಸಿರಬೇಕು.
  • ವಿದ್ಯಾರ್ಥಿ ಕುಟುಂಬದ ವಾರ್ಷಿಕ ಆದಾಯ ಎರಡುವರೆ ಲಕ್ಷ ಮೀರಿರಬಾರದು.

ಇಂಥಹ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಎಷ್ಟು ಸಿಗಬಹುದು ?

  • ಎಂಎಸ್‌ಸಿ, ಎಂಎ, ಕೋರ್ಸ್ ಆಯ್ಕೆ ಮಾಡಿಕೊಂಡು ಓದುತ್ತಿರುವ ವಿದ್ಯಾರ್ಥಿಗಳಿಗೆ ಸುಮಾರು 35 ಸಾವಿರದಷ್ಟು ವಿದ್ಯಾರ್ಥಿ ವೇತನ ಸಿಗಲಿದೆ.
  • ಎಂಟೆಕ್, ಎಂಬಿಎ, ವೃತ್ತಿಪರ ಕೋರ್ಸ್ ಅನ್ನು ಆಯ್ಕೆ ಮಾಡಿಕೊಂಡು ಓದುತ್ತಿರುವ ವಿದ್ಯಾರ್ಥಿಗಳಿಗೆ 75,000 ದೊರಕಲಿದೆ.
  • 1-12 ನೇ ತರಗತಿಯವರೆಗೂ ಓದುತ್ತಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್.

ವಿದ್ಯಾರ್ಥಿಗಳಿಗೆ ಅರ್ಹತೆಗಳು ಏನಿರಬೇಕು ?

1-12 ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಐಟಿಐ ಡಿಪ್ಲೋಮಾ ಪಾಲಿಟೆಕ್ನಿಕ್ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ಓದುತ್ತಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಸಿಗಲಿದೆ.

ವಿದ್ಯಾರ್ಥಿಗಳು ಈ ಒಂದು ಸ್ಕಾಲರ್ಶಿಪ್‌ ಗೆ ಅರ್ಜಿ ಸಲ್ಲಿಸಲು ಹಿಂದಿನ ತರಗತಿಯಲ್ಲಿ ಶೇಕಡ 55 ಅಂಕಗಳನ್ನು ಗಳಿಸಿರಬೇಕು.

ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ ಎರಡು ವರೆಲಕ್ಷ ಮೀರಿರಬಾರದು.

ಈ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಎಷ್ಟು ಸಿಗುತ್ತದೆ ?

ಒಂದರಿಂದ ಆರನೇ ತರಗತಿಯವರೆಗೂ ಓದುತ್ತಿರುವ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ 15,000 ಹಣವನ್ನು ನೀಡಲಾಗುವುದು.

ಏಳರಿಂದ ಹನ್ನೆರಡನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಐಟಿಐ ಡಿಪ್ಲೋಮೋ ಪಾಲಿಟೆಕ್ನಿಕ್ ಕೋರ್ಸ್ ಅನ್ನು ಆಯ್ಕೆ ಮಾಡಿ ಓದುತ್ತಿರುವ ವಿದ್ಯಾರ್ಥಿಗಳಿಗೆ 18,000 ರೂ ಹಣ ಸಿಗಲಿದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು. 

  1. ಮೇಲ್ಕಂಡ ವಿಷಯದಲ್ಲಿ ತಿಳಿಸಿದಂತೆ ಎಲ್ಲಾ ವಿದ್ಯಾರ್ಥಿಗಳು ಕೂಡ ಈ ಒಂದು ದಾಖಲಾತಿಗಳನ್ನು ಹೊಂದಿ ಅರ್ಜಿಯನ್ನು ಸಲ್ಲಿಸಬೇಕು.
  2. ವಿದ್ಯಾರ್ಥಿಯ ಗುರುತಿನ ಚೀಟಿ
  3. ವಿದ್ಯಾರ್ಥಿಯ ಪಾಸ್ಪೋರ್ಟ್ ಸೈಜ್ ಭಾವಚಿತ್ರ
  4. ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಇಂದಿನ ಶೈಕ್ಷಣಿಕದ ಅಂಕಪಟ್ಟಿಯನ್ನು ಕೂಡ ಹೊಂದಿರಬೇಕು ಹಾಗೂ ಪಾಸಾದ ಪ್ರಮಾಣ ಪತ್ರ.
  5. ಆದಾಯ ಪ್ರಮಾಣ ಪತ್ರ.
  6. ಈಗಿನ ಶಿಕ್ಷಣಕ್ಕೆ ಓದುತ್ತಿರುವ ಪ್ರವೇಶದ ಪತ್ರ.
  7. ವಿದ್ಯಾರ್ಥಿಗಳಿಗೆ ಹಣದ ಆರ್ಥಿಕತೆಯ ಸಮಸ್ಯೆ ಇದ್ದರೆ ಅಂಥಹ ಸಮಸ್ಯೆಯ ಬಗ್ಗೆ ಕುರಿತು ಬರೆದ ಪತ್ರ.

ಅರ್ಜಿ ಸಲ್ಲಿಸುವ ವಿಧಾನ !

HDFC ಬ್ಯಾಂಕ್ ನ ಇಸಿಎಸ್ಎಸ್ ಸ್ಕಾಲರ್ಶಿಪ್ ಪ್ರೋಗ್ರಾಮ್ ನ ಕೆಳಕಂಡ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.

Apply Now ಎಂಬುದನ್ನು ಕ್ಲಿಕ್ ಮಾಡಿ. ನಂತರ ಇ-ಮೇಲ್ ಮೂಲಕ ಅಥವಾ ಮೊಬೈಲ್ ಸಂಖ್ಯೆಯನ್ನು ಎಂಟರ್ ಮಾಡಿ. ಎಲ್ಲಾ ದಾಖಲಾತಿಗಳನ್ನು ಪೂರೈಸಿ ಅರ್ಜಿಯನ್ನು ಸಲ್ಲಿಸಿ.

ಡಿಸೆಂಬರ್ 31 ಕೊನೆಯ ದಿನಾಂಕವಾಗಿದೆ.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನ ದೊಂದಿಗೆ..

Leave a Comment