ಎಸ್ಎಸ್ಎಲ್ ಸಿ, ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿ ಪ್ರಕಟ !

ಎಲ್ಲರಿಗೂ ನಮಸ್ಕಾರ…

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯ ಪರೀಕ್ಷೆಯಲ್ಲಿ ಭಾರಿ ಬದಲಾವಣೆಯನ್ನು ತರಲಿದ್ದಾರೆ. ಈ ನಿಟ್ಟಿನಲ್ಲಿ ಎಸ್ಎಸ್ಎಲ್ಸಿ ( ಸೆಕೆಂಡರಿ ಸ್ಕೂಲ್ ಲಿವಿಂಗ್ ಸರ್ಟಿಫಿಕೇಟ್ ) ಹಾಗು ( ಸೆಕೆಂಡರಿ ಪಿಯುಸಿ ) ದ್ವಿತೀಯ ಪಿಯುಸಿಯ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. 2023 – 24 ನೇ ಸಾಲಿನ ಎಸ್ ಎಸ್ ಎಲ್ ಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಇದೊಂದು ಸಿಹಿ ಸುದ್ದಿ ಎಂದೇ ಹೇಳಬಹುದು, ಏಕೆಂದರೆ ಅಂತಿಮ ಪರೀಕ್ಷೆಯ ವೇಳಾಪಟ್ಟಿ ತೇರ್ಗಡೆಯಾಗಿದೆ. ವೇಳಾಪಟ್ಟಿಯಲ್ಲಿ ಯಾವ ದಿನದಂದು ಪರೀಕ್ಷೆಯನ್ನು ನಿಗದಿ ಮಾಡಿದ್ದಾರೆ, ಹಾಗೂ ಯಾವ ತರಗತಿಗೆ ಮೊದಲು ಪರೀಕ್ಷೆ ನಡೆಯುತ್ತದೆ ಎಂದು ತಿಳಿದುಕೊಳ್ಳಲು ಈ ಒಂದು ಲೇಖನವನ್ನು ಕೊನೆವರೆಗೂ ಓದಿ.

WhatsApp Group Join Now
Telegram Group Join Now

ಹೌದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಎಸ್ ಎಸ್ ಎಲ್ ಸಿ ಹಾಗು ದ್ವಿತೀಯ ಪಿಯುಸಿಯ ವೇಳಾಪಟ್ಟಿಯನ್ನು ಪ್ರಕಟಣೆ ಮಾಡಲಾಗಿದೆ. ಈ ಬಾರಿಯೂ ಕೂಡ ಪರೀಕ್ಷೆ ನಡೆಯುವಲ್ಲಿ ಬದಲಾವಣೆಯನ್ನು ತರುತ್ತೇವೆ ಎಂಬ ಸೂಚನೆಯನ್ನು ಕೂಡ ತಿಳಿಸಲಾಗಿದೆ. ಪರೀಕ್ಷೆಯ ರಚನೆಯಲ್ಲಿ ಬದಲಾವಣೆ ಮಾಡಲು ನಿರ್ಧರಿಸಿದೆ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯಮಾಪನ ಮಂಡಳಿ. ಕೆಲವು ತಿಂಗಳ ಹಿಂದೆಯೇ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಆಗುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮೂರು ಭಾರಿ ಪರೀಕ್ಷೆಯನ್ನು ನಡೆಸುತ್ತೇವೆ, ಎಂಬ ಆದೇಶವನ್ನು ಹೊರಡಿಸಿತ್ತು ಪರೀಕ್ಷಾ ಮೌಲ್ಯಮಾಪನ ಮಂಡಳಿ.

ಹೀಗಾಗಿ ಮೂರು ಬಾರಿ ಪರೀಕ್ಷೆಯನ್ನು ನಡೆಸಲು ದಿನಾಂಕವನ್ನು ಕೂಡ ನಿಗದಿ ಮಾಡಲಾಗಿದೆ. ಪರೀಕ್ಷಾ ಮಂಡಳಿಯೂ ಮೊದಲನೇ ಸುತ್ತಿನ ಪರೀಕ್ಷೆಯನ್ನು 30-3-2024 ರಿಂದ 15-04-2024 ರವರೆಗೆ ನಡೆಯಲಿದೆ. ಎರಡನೇ ಸುತ್ತಿನ ಪರೀಕ್ಷೆಯನ್ನು 12-06-2024 ರಿಂದ ಆರಂಭವಾದ ಪರೀಕ್ಷೆಯ 19-6-2024 ಕ್ಕೆ ಅಂತ್ಯವಾಗುತ್ತದೆ. ಮೂರನೇ ಸುತ್ತಿನ ಪರೀಕ್ಷೆಯು ಕೂಡ ಈ ಎಲ್ಲಾ ಪರೀಕ್ಷೆಗಳ ಅವಧಿ ಮುಗಿದ ನಂತರ ಪ್ರಾರಂಭವಾಗುತ್ತದೆ. ಅಂದರೆ 29-6-2024 ರಿಂದ ಪ್ರಾರಂಭವಾದ ಪರೀಕ್ಷೆ 5-8-2024 ರವರೆಗೆ ನಡೆಯುತ್ತದೆ.

ಕರ್ನಾಟಕ ಪರೀಕ್ಷಾ ಮೌಲ್ಯಮಾಪನ ಮಂಡಳಿಯು ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯ ವೇಳಾಪಟ್ಟಿ ಪ್ರಕಟಣೆ. 

SSLC ವಿದ್ಯಾರ್ಥಿಗಳ ವೇಳಾಪಟ್ಟಿ ಪ್ರಕಟ !

ಎಸ್ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕೂಡ ಈಗಾಗಲೇ ಬದಲಾವಣೆ ಮಾಡಲಾಗಿದೆ. ಅಂದರೆ ಹಂತ ಹಂತವಾಗಿ ಪರೀಕ್ಷೆಯನ್ನು ಬರೆಯಲು ಅವಕಾಶ ಮಾಡಿಕೊಟ್ಟಿದೆ ಪರೀಕ್ಷಾ ಮಂಡಳಿ, ಮೂರು ಬಾರಿ ಪರೀಕ್ಷೆಯನ್ನು ನಡೆಸಲಿದೆ. ಮೊದಲ ಸುತ್ತಿನ ಪರೀಕ್ಷೆಯಲ್ಲಿ ವಿಫಲರಾದ ವಿದ್ಯಾರ್ಥಿಗಳಿಗೆ ಇನ್ನೂ ಎರಡು ಬಾರಿ ಪರೀಕ್ಷೆಯನ್ನು ಬರೆಯಲು ಅವಕಾಶ ಮಾಡಿಕೊಟ್ಟಿದೆ ಪರೀಕ್ಷಾ ಮಂಡಳಿ. 

ಸೆಕೆಂಡರಿ ಸ್ಕೂಲ್ ಲಿವಿಂಗ್ ಸರ್ಟಿಫಿಕೇಟ್ ( SSLC ) ವೇಳಾಪಟ್ಟಿ

 • ವಾರ್ಷಿಕ ಪರೀಕ್ಷೆ – 1 :- 30 ಮಾರ್ಚ್ ( 30-3-2024 ) ರಿಂದ ಪ್ರಾರಂಭವಾದ ಪರೀಕ್ಷೆಯು, 15 ಏಪ್ರಿಲ್ ( 15-4-2024) ರಂದು ಮುಕ್ತಾಯಗೊಳ್ಳುತ್ತದೆ.
 • ( ಮೇ ಎಂಟರಂದು ಫಲಿತಾಂಶವನ್ನು ಪ್ರಕಟಣೆ ಮಾಡಲಾಗುತ್ತದೆ. ಹಾಗೂ ಮೌಲ್ಯಮಾಪನ ಫಲಿತಾಂಶವನ್ನು ಮೇ 23ಕ್ಕೆ ಪ್ರಕಟಣೆ ಮಾಡಲಾಗುತ್ತದೆ.)
 • ವಾರ್ಷಿಕ ಪರೀಕ್ಷೆ – 2 :- ಜೂನ್ 12 (12-6-2024) ರಿಂದ ಪ್ರಾರಂಭವಾದ ಪರೀಕ್ಷೆಯು ಜೂನ್ 19 (19-6-2024) ರವರೆಗೆ ನಡೆಯುತ್ತದೆ.
 • ( ಜೂನ್ 29 ರಂದು ಪರೀಕ್ಷೆಯ ಫಲಿತಾಂಶವನ್ನು ಪ್ರಕಟಣೆ ಮಾಡಲಾಗುತ್ತದೆ ಹಾಗೂ ಮೌಲ್ಯಮಾಪನ ಫಲಿತಾಂಶವನ್ನು ಜುಲೈ 10 ರಂದು ತಿಳಿಸಲಾಗುತ್ತದೆ.)
 • ವಾರ್ಷಿಕ ಪರೀಕ್ಷೆ – 3 :- ಜೂನ್ 29 ( 29-6-2024 )ರಂದು ಆರಂಭವಾದ ಪರೀಕ್ಷೆಯು ಆಗಸ್ಟ್ 5 ( 5-8-2024 ) ಕ್ಕೆ ಮುಕ್ತಾಯವಾಗಲಿದೆ.
 • ( ವಿದ್ಯಾರ್ಥಿಯ ಫಲಿತಾಂಶವನ್ನು ಆಗಸ್ಟ್ 19ಕ್ಕೆ ಪ್ರಕಟಣೆ ಮಾಡಲಾಗುತ್ತದೆ ಹಾಗೂ ಮರು ಮೌಲ್ಯಮಾಪನ ಫಲಿತಾಂಶವನ್ನು ಆಗಸ್ಟ್ 26ರಂದು ಘೋಷಣೆ ಮಾಡಲಾಗುತ್ತದೆ.)

ಸೆಕೆಂಡ್ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ !

 • ವಾರ್ಷಿಕ ಪರೀಕ್ಷೆ – 1 :- 1-3-2024 ರಿಂದ ಪ್ರಾರಂಭವಾದ ಪರೀಕ್ಷೆಯು 25-3-2024 ಕ್ಕೆ ಅಂತ್ಯಗೊಳ್ಳಲಿದೆ.
 • ( ಫಲಿತಾಂಶವನ್ನು ಏಪ್ರಿಲ್ 22 ರಂದು ಪ್ರಸ್ತುತಗೊಳಿಸುತ್ತಾರೆ.) ಮರು ಮೌಲ್ಯಮಾಪನ ಫಲಿತಾಂಶವನ್ನು ಮೇ 10 ಕ್ಕೆ ಪ್ರಕಟಿಸಲಾಗುತ್ತದೆ.)
 • ವಾರ್ಷಿಕ ಪರೀಕ್ಷೆ – 2 :- 15-5-2024 ರಿಂದ ಆರಂಭವಾದ ಪರೀಕ್ಷೆಯು 25-6-2024 ಕ್ಕೆ ಕೊನೆಗೊಳ್ಳುತ್ತದೆ.
 • ( 21 ಜೂನ್ ತಿಂಗಳಿನಲ್ಲಿ ಫಲಿತಾಂಶವನ್ನು ಪ್ರಕಟಿಸುತ್ತಾರೆ ಹಾಗೂ ಮರು ಮೌಲ್ಯಮಾಪನದ ಫಲಿತಾಂಶವು ಜೂನ್ 29 ಕ್ಕೆ ಪ್ರಕಟಣೆ ಮಾಡಲಾಗುತ್ತದೆ.)
 • ವಾರ್ಷಿಕ ಪರೀಕ್ಷೆ – 3 :- 12-7-2024 ರಿಂದ 30-7-2024 ವರೆಗೂ ನಡೆಯಲಿದೆ.
 • ( 16 ಆಗಸ್ಟ್ ನಲ್ಲಿ ಫಲಿತಾಂಶ ಪ್ರಕಟ ಹಾಗೂ ಮರು ಮೌಲ್ಯಮಾಪನದ ಫಲಿತಾಂಶವನ್ನು 23 ಆಗಸ್ಟ್ ನಂದು ಪ್ರಕಟಣೆ ಮಾಡಲಾಗುತ್ತದೆ. )

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ..

Leave a Comment