ನಿಮ್ಮ ಮೊಬೈಲ್ ಹ್ಯಾಕ್ ಆಗಿದೆಯಾ ಎಂದು ಈಗಲೇ ತಿಳಿದುಕೊಳ್ಳಿ, ಈ ಲಕ್ಷಣಗಳು ಕಂಡು ಬಂದರೆ ಮೊಬೈಲ್ ಹ್ಯಾಕ್ ಆಗಿರುವುದು ಖಂಡಿತ ಎಚ್ಚರ!

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ…

ಈ ಲೇಖನದಲ್ಲಿ ತಿಳಿಸುವುದೇನೆಂದರೆ ನಿಮ್ಮ ಮೊಬೈಲ್ ಅನ್ನು ಯಾರಾದರೂ ಹ್ಯಾಕ್ ಮಾಡಿದ್ದಾರ ಸಂಪೂರ್ಣವಾಗಿ ಲೇಖನದಲ್ಲಿ ತಿಳಿಸಲಾಗಿದೆ. ಸಂಪೂರ್ಣವಾಗಿ ಲೇಖನವನ್ನು ಓದಿ ನಿಮ್ಮ ಮೊಬೈಲ್ ಹ್ಯಾಕ್ ಆಗಿದೆಯಾ ಎಂದು ತಿಳಿದುಕೊಳ್ಳಿ. ಇತ್ತೀಚಿನ ದಿನಗಳಲ್ಲಿ ಎಲ್ಲರ ಬಳಿಯೂ ಕೂಡ ಮೊಬೈಲ್ ಇದ್ದೇ ಇರುತ್ತದೆ. ಈಗಂತೂ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡ ವಯಸ್ಸಿನವರೆಗೂ ಎಲ್ಲರ ಬಳಿಯು ಮೊಬೈಲ್ ಇದ್ದೇ ಇರುತ್ತದೆ. ಕೊರೋನಾ ಸಮಯದಲ್ಲಿ ಮಕ್ಕಳಿಗೆ ಆನ್ಲೈನ್ ಕ್ಲಾಸ್ ನಡೆಸಲಾಗಿತ್ತು ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ಮೊಬೈಲ್ ಅನ್ನು ಕೊಡಿಸಿದ್ದಾರೆ. ಅದರಿಂದ ಈಗ ಎಲ್ಲ ಬಳಿ ಮೊಬೈಲ್ ಇದೆ ಎಂದೇ ಹೇಳಬಹುದು.

WhatsApp Group Join Now
Telegram Group Join Now

ಮೊಬೈಲ್ನಿಂದ ಎಲ್ಲರಿಗೂ ತುಂಬಾ ಅನುಕೂಲವೇ ಇದೆ ಅನುಕೂಲವೂ ಇದೆ ಅನಾನುಕೂಲವೂ ಇದೆ ನಮಗೆ ಎಷ್ಟು ಬೇಕು ಅಷ್ಟು ಮಾತ್ರ ಮೊಬೈಲ್ ಅನ್ನು ಬಳಕೆ ಮಾಡಿದರೆ ಅನುಕೂಲವಾಗುತ್ತದೆ ಅದನ್ನು ಬಿಟ್ಟು ಮಿತಿಮೀರಿಯಾಗಿ ಮೊಬೈಲ್ ಅನ್ನು ಬಳಕೆ ಮಾಡುವುದು ಅಪಾಯಕಾರಿ. ಮೊಬೈಲ್ ಅನ್ನು ನೋಡುವುದರಿಂದ ಕಣ್ಣುಗಳು ಹಾಳಾಗುತ್ತದೆ ಜೊತೆಗೆ ಮಕ್ಕಳ ಬುದ್ಧಿಯ ಮೇಲೆ ಅಂದರೆ ವಿದ್ಯಾಭ್ಯಾಸದ ಗಮನ ಕಡಿಮೆಯಾಗುತ್ತಲೇ ಬರುತ್ತದೆ. ಇನ್ನು ಕೆಲವು ವಿದ್ಯಾರ್ಥಿಗಳು ಮೊಬೈಲ್ ನಿಂದ ಸಮ ವಿದ್ಯಾಭ್ಯಾಸಕ್ಕೆ ಬೇಕಾದ ಕೆಲವು ಮಾಹಿತಿಗಳನ್ನು ಪಡೆದುಕೊಳ್ಳುತ್ತಾರೆ ಅದು ಅವರಿಗೆ ಅನುಕೂಲವಾಗುತ್ತದೆ.

ಅದು ತುಂಬಾ ಒಳ್ಳೆಯದೇ ಮೊಬೈಲ್ ನಿಂದ ಕೆಲವು ವಿಚಾರಗಳು ನಮಗೆ ವಿದ್ಯಾಭ್ಯಾಸದಲ್ಲಿ ತಿಳಿದಿರುವುದಿಲ್ಲ ಅದನ್ನು ಮೊಬೈಲ್ ನಲ್ಲಿ ತಿಳಿದುಕೊಳ್ಳುತ್ತಾರೆ ಅದು ಒಂದು ಒಳ್ಳೆಯ ಮಾಹಿತಿ ಎಂದು ಹೇಳಬಹುದು. ಇನ್ನು ಕೆಲವು ವಿದ್ಯಾರ್ಥಿಗಳುಮೊಬೈಲ್ ನಲ್ಲಿ ದುರ್ಬಳಕೆಯ ಮಾಹಿತಿಗಳನ್ನು ತಿಳಿದುಕೊಳ್ಳುತ್ತಾರೆ ಅದು ಉಪಯುಕ್ತವಾದ ಮಾಹಿತಿಗಳೇ ಅಲ್ಲ ಎಂದು ಹೇಳಬಹುದು. ಆದರಿಂದ ಆದಷ್ಟು ಉಪಯುಕ್ತವಾಗಿಯೇ ಮೊಬೈಲ್ ಅನ್ನು ಬಳಸಿ.

ನಿಮಗೇನಾದರೂ ನಿಮ್ಮ ಮೊಬೈಲ್ ಹ್ಯಾಕ್ ಆಗಿದೆ ಎಂದು ಅನಿಸುತ್ತಿದೆಯೇ ಅಥವಾ ಅನಿಸಿದೆಯೇ?

ನಿಮ್ಮ ಮೊಬೈಲ್ ಹ್ಯಾಕ್ ಆಗಿದೆ ಎಂದು ನಿಮ್ಮಲ್ಲಿ ಅನಿಸುತ್ತಿದ್ದರೆ. ನಿಮ್ಮ ಮೊಬೈಲ್ ನಿಜವಾಗಿಯೂ ಹ್ಯಾಕ್ ಆಗಿದ್ದರೆ ಕೆಲವು ಮುಖ್ಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆ ಲಕ್ಷಣಗಳು ನಿಮ್ಮ ಮೊಬೈಲ್ ನಲ್ಲಿ ಇದ್ದರೆ ಖಂಡಿತವಾಗಿಯೂ ನಿಮ್ಮ ಮೊಬೈಲ್ ಹ್ಯಾಕ್ ಆಗಿದೆ ಎಂದು ಹೇಳಬಹುದು. ಹಾಗಿದ್ದರೆ ಯಾವ ಯಾವ ಲಕ್ಷಣಗಳು ಎಂದು ಈ ಕೆಳಗಿನವುಗಳಲ್ಲಿ ತಿಳಿದುಕೊಳ್ಳೋಣ.

  • ಫೋನ್ ಬಿಸಿ ಆಗುತ್ತದೆ
  • ಫೋನ್ ಬ್ಯಾಟರಿ ಅತ್ತಿ ವೇಗವಾಗಿ ಕಡಿಮೆ ಆಗುತ್ತದೆ
  • ಲಿಂಕ್ ಮಾಡಲಾದ ಖಾತೆಗಳಲ್ಲಿ ಅಸಾಮಾನ್ಯ ಚಟುವಟಿಕೆ
  • ಒಮ್ಮೊಮ್ಮೆ ಫೋನ್ ವಿಚಿತ್ರವಾಗಿ ವರ್ತಿಸುತ್ತದೆ
  • ಫೋನ್ ಪ್ರಕ್ರಿಯೆ ನಿಧಾನವಾಗಿರುತ್ತದೆ
  • ವಿಲಕ್ಷಣ ಪಾಪ್ – ಆಪ್ ಗಳು
  • ಮೊಬೈಲ್ ಡೇಟಾ ಬಳಕೆಯಲ್ಲಿ ಹೆಚ್ಚಳ
  • ನಿಮ್ಮ ಮೊಬೈಲ್ ಗ್ಯಾಲರಿಯಲ್ಲಿ ನೀವು ಗುರುತಿಸದ ಫೋಟೋಗಳು
  • ಅಪರಿಚಿತ ಸಂಖ್ಯೆಗಳಾಗಿ ಪಠ್ಯಗಳನ್ನು ಅಥವಾ ಕರೆ ಲಾಗಿನ್ ಗಳನ್ನು ಒಮ್ಮೆ ಪರಿಶೀಲಿಸಿ

ನಿಮ್ಮ ಮೊಬೈಲ್ ಏನಾದರೂ ಹ್ಯಾಕ್ ಆಗಿದ್ದರೆ ಈ ಮೇಲಿನ ಲಕ್ಷಣಗಳು ನಿಮ್ಮ ಮೊಬೈಲ್ ನಲ್ಲಿ ಕಾಣತೊಡಗುತ್ತವೆ. 10 ನಿಮಿಷಕ್ಕೂ ಕೂಡ ಮೊಬೈಲ್ ಬ್ಯುಸಿಯಾಗುವುದು ತುಡುವುದು, ಮತ್ತು ನಿಮ್ಮ ಮೊಬೈಲ್ ಡಾಟಾ ವೇಗವಾಗಿ ಅಂದರೆ ತುಂಬಾ ವೇಗವಾಗಿ ನೆಟ್ ಖಾಲಿಯಾಗುವುದು, ಜೊತೆಗೆ ನಿಮ್ಮ ಮೊಬೈಲ್ ನಲ್ಲಿ ನೀವು ಯಾರಿಗೂ ಕರೆ ಮಾಡಿರುವುದಿಲ್ಲ ಆದರೂ ಕೂಡ ನಂಬರ್ ಬಂದು ಲಾಗಿನ್ ಆಗಿರುವುದು, ನೀವು ಕ್ಲಿಕ್ ಮಾಡದೇ ಇರುವ ಫೋಟೋಗಳು ನಿಮ್ಮ ಗ್ಯಾಲರಿಯಲ್ಲಿ ಬಂದಿರುವುದು, ಮತ್ತು ಮೊಬೈಲ್ ಬ್ಯಾಟರಿ ಬೇಗ ಕಡಿಮೆ ಆಗುವುದು, ಇವೆಲ್ಲ ಮುಖ್ಯ ಲಕ್ಷಣಗಳು ಕೂಡ ನಿಮ್ಮ ಮೊಬೈಲ್ ನಲ್ಲಿ ಕಂಡುಬಂದರೆ ಈಗಲೇ ಅರಿತುಕೊಳ್ಳಿ ನಿಮ್ಮ ಮೊಬೈಲ್ ಹ್ಯಾಕ್ ಆಗಿದೆ ಎಂದು.

ನಿಮ್ಮ ಮೊಬೈಲ್ ಅನ್ನು ಬೇರೆಯವರು ಕೂಡ ಯೂಸ್ ಮಾಡುತ್ತಿದ್ದಾರೆ ಅಂದರ್ಥ. ಆದ್ದರಿಂದ ತುಂಬಾ ಎಚ್ಚರಿಕೆಯಿಂದ ಮೊಬೈಲ್ ಅನ್ನು ಬಳಸಿ ಇದರಿಂದಾಗಿ ಹಣವನ್ನು ಕಳೆದುಕೊಳ್ಳುವ ಸಾಧ್ಯತೆಗಳು ಕೂಡ ತುಂಬಾ ಹೆಚ್ಚಾಗಿರುತ್ತದೆ ಆದ್ದರಿಂದ ನಿಮ್ಮ ಪರ್ಸನಲ್ ಮೊಬೈಲ್ ನಲ್ಲಿ ಇಟ್ಟುಕೊಂಡಿರುತ್ತೀರಿ ಆದ್ದರಿಂದ ಬೇರೆಯವರು ನಿಮ್ಮ ಮೊಬೈಲ್ ಅನ್ನು ಹ್ಯಾಕ್ ಮಾಡಿ ಯೂಸ್ ಮಾಡುತ್ತಿದ್ದರೆ ತುಂಬಾ ತೊಂದರೆಯಾಗುತ್ತದೆ ಆದ್ದರಿಂದ ಈ ಮೇಲಿನ ಲಕ್ಷಣಗಳು ಏನಾದರೂ ನಿಮಗೆ ಕಂಡುಬಂದರೆ ಒಮ್ಮೆ ಮೊಬೈಲ್ ಅಂಗಡಿಗೆ ಹೋಗಿ ಪರಿಶೀಲಿಸಿ.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment