ಬಸ್ಗಳಲ್ಲಿ ಪ್ರಯಾಣಿಸುವಾಗ ಮಾಸ್ಕ್ ಗಳನ್ನು ಧರಿಸಿ ಪ್ರಯಾಣಿಸಿ, ಸಾರಿಗೆ ಸಚಿವ ಕೆ.ಎಸ್.ರಾಮಲಿಂಗ ರೆಡ್ಡಿ ಸೂಚಿಸಿದ್ದಾರೆ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ…

ಈ ಲೇಖನದಲ್ಲಿ ತಿಳಿಸುವುದೇನೆಂದರೆ ಸಾರಿಗೆ ಸಚಿವರಾದ ಕೆ ಎಸ್ ರಾಮಲಿಂಗ ರೆಡ್ಡಿ ಅವರು ಬಸ್ಗಳಲ್ಲಿ ಪ್ರಯಾಣಿಸುವಾಗ ಎಲ್ಲರೂ ಕೂಡ ಕಡ್ಡಾಯವಾಗಿ ಮಾಸ್ಕಳನ್ನು ಧರಿಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಬಸ್ಗಳಲ್ಲಿ ಪ್ರಯಾಣಿಸುವವರಿಗೆ ಮಾಸ್ಕಳನ್ನು ಕಡ್ಡಾಯವಾಗಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಆದರೆ ಮುಂಚಿತವಾಗಿಯೇ ನಾವು ಸುರಕ್ಷತೆಯಿಂದ ಇದ್ದರೆ ಆ ಕೊರೋನ ವೈರಸ್ ನಿಂದ ತಪ್ಪಿಸಿಕೊಳ್ಳಬಹುದು. ಆದ್ದರಿಂದ ಎಲ್ಲರೂ ಕೂಡ ಬಸ್ನಲ್ಲಿ ಪ್ರಯಾಣಿಸುವಾಗ ಕಡ್ಡಾಯವಾಗಿ ಮಾಸ್ಕ್ ಅನ್ನು ಧರಿಸುವುದನ್ನು ಮಾತ್ರ ಮರೆಯಬೇಡಿ ಎಂದು ಸೂಚನೆ ನೀಡಿದರು.

WhatsApp Group Join Now
Telegram Group Join Now

ಕೋವಿಡ್ ಎಂಬ ಹೊಸ ವೈರಸ್ 2019ರಲ್ಲಿ ಆರಂಭವಾಗಿತ್ತು. ಆಗ ಎಷ್ಟೋ ಜನ ಪ್ರಾಣವನ್ನೇ ಕಳೆದುಕೊಂಡರು, ಕೋವಿಡ್ನಿಂದಾಗಿ ಎಷ್ಟೋ ಜನರ ಪ್ರಾಣ ಹೋಗುವ ಜೊತೆಗೆ ಜೀವನವೂ ಕೂಡ ಹಾಳಾಗಿದೆ. ಎಷ್ಟೋ ಜನ ಬೆಂಗಳೂರಿಗೆ ಜೀವನ ನಡೆಸಲು ಬಂದವರು ಕೂಡ ಹಳ್ಳಿಗೆ ತೆರಳಿದ್ದಾರೆ. ಜನಗಳಿಗೆ ಜೀವನವನ್ನು ನಡೆಸಲು ಕೂಡ ತುಂಬಾ ಕಷ್ಟವಾಗಿತ್ತು ಆ ಸಮಯದಲ್ಲಿ, ಕೆಲವರು ಪ್ರಾಣವನ್ನು ಉಳಿಸಿಕೊಳ್ಳಲು ಕೋವಿಡ್ನಿಂದ ಎಷ್ಟೊ ಹಣವನ್ನು ಆಸ್ಪತ್ರೆಗಳಲ್ಲಿ ಖರ್ಚು ಮಾಡಿದ್ದಾರೆ.

ಹಣವನ್ನು ಖರ್ಚು ಮಾಡಿದ್ದರು ಕೂಡ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಆ ಸಂದರ್ಭದಲ್ಲಿ ಆದ್ದರಿಂದ ಇಂತಹ ಕಾಯಿಲೆಗಳಿಗೆ ತುತ್ತಾಗುವ ಬದಲು ಮುನ್ನೆಚ್ಚರಿಕ ಕ್ರಮಗಳನ್ನು ವಹಿಸೋಣ ನಮ್ಮನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳೋಣ ಸರಿಯಾದ ಕ್ರಮದಲ್ಲಿ ಮಾಸ್ಕನ್ನು ಧರಿಸಿ ಜೊತೆಗೆ ಹಲವು ಬಾರಿ ಕೈಯನ್ನು ವಾಶ್ ಮಾಡಿಕೊಳ್ಳಿ ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ. ಕೋವಿಡ್ ನಂತಹ ಇನ್ನೊಂದು ವೈರಸ್ ಎಂದರೆ JN.1 ಎಂಬ ಹೊಸ ವೈರಸ್ ಕೂಡ ಪತ್ತೆಯಾಗಿದೆ ಈ ವೈರಸ್ ಕೂಡ ತುಂಬಾ ಭಯಂಕರವಾದ ವೈರಸ್ ಆಗಿದೆ. 

ಆದ್ದರಿಂದ ಈ ಕಾಯಿಲೆಯ ಮುಖ್ಯ ಲಕ್ಷಣಗಳು ಬಂದು ತಲೆನೋವು,ಗಂಟಲು ನೋವು,ಕೆಮ್ಮು, ಜ್ವರ ನೆಗಡಿ, ಮೈಕೈ ನೋವು ಸುಸ್ತು, ಇನ್ನಿತರ ಆ ಲಕ್ಷಣಗಳು ಕಾಣುತ್ತವೆ ಈ ಹೊಸ ಕೋವಿಡ್ ವೈರಸ್ ನಲ್ಲಿ, ಆದ್ದರಿಂದ ಎಲ್ಲರೂ ಕೂಡ ತುಂಬಾ ಜಾಗರೂಕತೆಯಿಂದ ಹೊರಗಡೆ ತಿರುಗಾಡಿ ಜೊತೆಗೆ ಮಾಸ್ಕನ್ನು ಧರಿಸಿ ಜೊತೆಗೆ ಹೊರಗಡೆಯಿಂದ ಬಂದ ತಕ್ಷಣ ಕೈಕಾಲುಗಳನ್ನು ನೀಟಾಗಿ ಸೋಪ್ ಬಳಸಿ ತೊಳೆಯಿರಿ.

ಇನ್ನು ಮುಂದೆ ಬಸ್ನಲ್ಲಿ ಪ್ರಯಾಣಿಸುವಾಗ ಮಾಸ್ಕನ್ನು ಧರಿಸಿಕೊಳ್ಳಿ ಎಂದು ಸಚಿವರು ಹೇಳಿಕೆ ನೀಡಿದ್ದಾರೆ. ಅದರಿಂದ ಇನ್ನು ಮುಂದೆ ನೀವು ಬಸ್ನಲ್ಲಿ ಪ್ರಯಾಣಿಸುವಾಗ ಮಾಸ್ಕನ್ನು ಧರಿಸಬೇಕು. ಗುಂಪು ಗುಂಪುಗಾರಿಕೆಯಲ್ಲಿ ನಿಂತುಕೊಳ್ಳಬೇಡಿ, ಒಬ್ಬರ ಬಳಿ ಮಾತನಾಡುವಾಗ ಹತ್ತಿರದಿಂದ ಮಾತನಾಡಬೇಡಿ ಸ್ವಲ್ಪ ದೂರ ನಿಂತು ಮಾತನಾಡಿ, ನಿಂತು ಮಾತನಾಡುವುದು ತುಂಬಾ ಒಳ್ಳೆಯದೇ ಏಕೆಂದರೆ ಈ ವೈರಸ್ ಒಬ್ಬರಿಂದ ಒಬ್ಬರಿಗೆ ಅತಿ ವೇಗವಾಗಿ ಹರಡುತ್ತದೆ. ಆದ್ದರಿಂದ ಸ್ವಲ್ಪ ಜಾಗರೂಕತೆಯಿಂದ ಪ್ರಯಾಣಿಸಿ.

ಕೋವಿಡ್ ನಿಂದಾಗಿ ಹಲವರು ಪ್ರಾಣವನ್ನೇ ಬಿಟ್ಟರು, ಇನ್ನು ಕೆಲವರು ಜೀವನವನ್ನೇ ಕಳೆದುಕೊಂಡರು, ಇನ್ನು ಕೆಲವರು ಹಣವನ್ನು ಕಳೆದುಕೊಂಡು ಜೀವವನ್ನು ಕೂಡ ಕಳೆದುಕೊಂಡರು, ಆರ್ಥಿಕವಾಗಿ ಎಲ್ಲವನ್ನು ಕಳೆದುಕೊಂಡರು ಎಂದು ಹೇಳಬಹುದು, ಕೋರೋನಾ ಎಂಬ ಭಯಂಕರ ವೈರಸ್ ಬಂದಿತ್ತು ಅದೇ ರೀತಿ ಈಗ ಮತ್ತೊಂದು ವೈರಸ್ ಬರುತ್ತಿದೆ ಆದ್ದರಿಂದ ದಯವಿಟ್ಟು ಮುನ್ನೆಚ್ಚರಿಕ ಕ್ರಮಗಳನ್ನು ಪಾಲಿಸಿ. ಬಸ್ಗಳಲ್ಲಿ ಪ್ರಯಾಣ ಮಾಡುವಾಗ ಮಾಸ್ಕ್ ಗಳನ್ನು ಧರಿಸಿ. ತುಂಬಾ ಸ್ವಚ್ಛತೆಯಿಂದ ಇರಿ. ಸ್ವಚ್ಛತೆಯಿಂದ ಇದ್ದರೆ ಆರೋಗ್ಯವೂ ಕೂಡ ಸ್ವಚ್ಛತೆಯಿಂದಲೇ ಇರುತ್ತದೆ.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment