ಹಳೆಯ ಪಡಿತರ ಚೀಟಿಯನ್ನು ರದ್ದು ಮಾಡಿದ್ರೆ ಮಾತ್ರ ಹೊಸ ಪಡಿತರ ಚೀಟಿ ಪಡೆಯಲು ಸಾಧ್ಯ, ಎಂದು ಖಡಕ್ ಆದೇಶ ನೀಡಿದ ಆಹಾರ ಇಲಾಖೆ !


ಎಲ್ಲರಿಗೂ ನಮಸ್ಕಾರ..

ಆಹಾರ ಮತ್ತು ನಾಗರಿಕ ಅಭಿವೃದ್ಧಿ ಇಲಾಖೆಯ ಆದೇಶವೇನೆಂದರೆ ಹೊಸ ರೇಷನ್ ಕಾರ್ಡ್ ಎಷ್ಟು ಹೆಚ್ಚುತ್ತದೆಯೋ ಅಷ್ಟೇ ಹಳೆಯ ರೇಷನ್ ಕಾರ್ಡ್ ಗಳನ್ನು ಕೂಡ ರದ್ದುಗೊಳಿಸಿ, ಮುಂದಿನ ನಿಯಮವನ್ನು ಪಾಲಿಸಬೇಕು ಎಂದು ಹೊಸ ಆದೇಶ ನೀಡಿದೆ. ಹೀಗಾಗಿ ಅಧಿಕಾರಿಗಳನ್ನು ಕೂಡ ಇಕ್ಕಟ್ಟಿನಲ್ಲಿ ಸಿಲುಕಿಸಿದೆ. 2023 ನೇ ಸಾಲಿನಲ್ಲಿ 2.95 ಲಕ್ಷ ಹೊಸ BPL ಪಡಿತರ ಚೀಟಿ ಪಡೆಯಲು ಅರ್ಜಿಯನ್ನು ಪೂರೈಸಿದ್ದಾರೆ. ಎಂದು ಸಚಿವ ಕೆ.ಎಚ್ ಮುನಿಯಪ್ಪನವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಇಲಾಖೆಯ ಖಡಕ್ ಆದೇಶ ಹೊರಡಿಸಿದೆ.

WhatsApp Group Join Now
Telegram Group Join Now

ಈಗಾಗಲೇ ಹಲವಾರು ವರ್ಷಗಳಿಂದ ಪಡಿತರ ಆಹಾರ ಧಾನ್ಯಗಳನ್ನು ಪಡೆದುಕೊಳ್ಳುತ್ತಿರುವ ಕೋಟ್ಯಾಂತರ ಜನರು ಇದ್ದಾರೆ, ಅದರಲ್ಲೂ ಅಂತ್ಯೋದಯಾ ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳು ಕಡಿಮೆ ಇದ್ದಾರೆ ಅಂದರೆ ಕೋಟಿಗಿಂತ ಕಡಿಮೆ, 10.88 ಲಕ್ಷ ಅಂತ್ಯೋದಯ ರೇಷನ್ ಕಾರ್ಡ್ ಅನ್ನು ಹೊಂದಿರುವ ಗ್ರಾಹಕರು. ಹಾಗೂ ಬಿಪಿಎಲ್ ಕಾರ್ಡ್ ಅನ್ನು ಹೊಂದಿರುವ ಜನಸಂಖ್ಯೆ ಎಂದರೆ ಲಕ್ಷಕ್ಕಿಂತ ಮೀರಿದ್ದು ಅಂದರೆ 1.16 ಕೋಟಿ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿ ಹಲವಾರು ವರ್ಷಗಳಿಂದ ಆಹಾರ ಇಲಾಖೆಯ ಪಡಿತರವನ್ನು ಪಡೆದುಕೊಂಡು ಜೀವನ ಸಾಗಿಸುವಂಥಹ ಕುಟುಂಬಗಳು ಕೂಡ ಹೆಚ್ಚಿನ ಪ್ರಮಾಣದಲ್ಲಿ ಇದ್ದಾರೆ. 

ಪ್ರಪಂಚದಲ್ಲಿ ಎಲ್ಲೇ ನೋಡಿದರೂ ಕೂಡ ಸರ್ಕಾರದ ಯೋಜನೆಗಳನ್ನು ಅವಲಂಬಿಸಿ ಬದುಕುತ್ತಿರುವ, ಕೋಟ್ಯಾಂತರ ಕುಟುಂಬಗಳು ಅಸ್ತಿತ್ವದಲ್ಲಿವೆ. ಕೆಲವು ಕುಟುಂಬಗಳು ಮಾತ್ರ ಸರ್ಕಾರದ ಯೋಜನೆಗಳನ್ನು ತೊರೆದು ಜೀವನವನ್ನು ಸಾಗಿಸುವಂಥಹ ಬೆರಳೆಣಿಕೆಯ ಕುಟುಂಬಗಳು ಇದ್ದಾವೆ. 

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಈ ವರ್ಷದ 2.95 ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿರುವ ಎಲ್ಲಾ ಅಭ್ಯರ್ಥಿಗಳ ಅರ್ಜಿಯನ್ನು ಪೂರೈಸುತ್ತದೆ ಸರ್ಕಾರ ಇಲ್ಲ ಕೆಲವು ಪಡಿತರ ಚೀಟಿಗಳನ್ನು ಮಾತ್ರ ಪರಿಶೀಲಿಸಿ ಅಸಲಿ ದಾಖಲಾತಿಗಳನ್ನು ನೀಡಿದ ಅಭ್ಯರ್ಥಿಗೆ ಮಾತ್ರ, ಹಾಗೂ ಯಾರು ಪಡಿತರ ಚೀಟಿಗೆ ಅರ್ಹರು ಎಂಬುದನ್ನು ಕೂಡ ಆಲೋಚಿಸಿ ಈ ಒಂದು ಪಡಿತರ ಚೀಟಿಯನ್ನು ಪೂರೈಸುತ್ತದೆ ಸರ್ಕಾರ. ಒಟ್ಟು ಎರಡು ಪಾಯಿಂಟ್ 95 ಬಿಪಿಎಲ್ ಪಡಿತರ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದಾರೆ, ಈ 2.95 ಪಡಿತರ ಚೀಟಿಯಲ್ಲಿ 2.78 ಲಕ್ಷ ಅಭ್ಯರ್ಥಿಗಳ ಅರ್ಜಿಯ ಸ್ಥಳ ಪರಿಶೀಲನೆ ಮುಗಿದಿದೆ. ಸ್ಥಳ ಪರಿಶೀಲನೆ ನಡೆದರೂ ಕೂಡ 2.28 ಅಭ್ಯರ್ಥಿಗಳ ಅರ್ಜಿಯು ಅರ್ಹ ಎಂಬುದನ್ನು ತಿಳಿಯಬಹುದು. ಕರ್ನಾಟಕದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಿನ ( 27,486 )ಅರ್ಜಿಗಳು ಕಂಡುಬಂದಿವೆ.

ಇಂಥವರ ಪಡಿತರ ಚೀಟಿ ರದ್ದಾಗಲಿದೆ !

ರಾಜ್ಯದ ಎಲ್ಲಾ ಜನತೆಗೂ ಕೂಡ ಸರ್ಕಾರದಿಂದ ಆಹಾರ ಇಲಾಖೆಯು ಆಹಾರದ ಧಾನ್ಯಗಳನ್ನು ವಿತರಿಸುತ್ತದೆ ಈಗಿನವರೆಗೂ ಕಾರ್ಯ ನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲೂ ಕೂಡ ಕೆಲ ಕುಟುಂಬಗಳು ಪಡಿತರ ಚೀಟಿ ಎಂದು ಹೊಂದಿದ್ದರೂ ಕೂಡ ಆರು ತಿಂಗಳಿನಿಂದ ಯಾವುದೇ ರೀತಿಯ ಆಹಾರ ಧಾನ್ಯಗಳನ್ನು ಪಡೆಯದ ಕಾರಣದಿಂದ, ಇಲಾಖೆಯೂ ಇದನ್ನೆಲ್ಲಾ ಗಮನಿಸಿ ಇಂಥವರ ಪಡಿತರ ಚೀಟಿ ರದ್ದು ಮಾಡಲಿದೆ.

ಕಳೆದ ಆರು ತಿಂಗಳಿನಿಂದ ಪಡಿತರ ಚೀಟಿ ಹೊಂದಿರುವ ಕುಟುಂಬಗಳು ಪಡಿತರ ಚೀಟಿಯನ್ನು ತೊರೆದ ಕಾರಣದಿಂದ ಯಾವ ಅರ್ಜಿದಾರರು ಅನರ್ಹರು ಎಂಬುದನ್ನು ಆಹಾರ ಇಲಾಖೆ ತಿಳಿದುಕೊಂಡು ಅಂತವರ ರೇಷನ್ ಕಾರ್ಡ್ ತಕ್ಷಣವೇ ರದ್ದುಗೊಳಿಸಲಿದೆ.14,826 ರಾಜ್ಯದಲ್ಲಿ ಅಂತ್ಯೋದಯ ಪಡಿತರ ಚೀಟಿಯನ್ನು ಹೊಂದಿರುವ ಚೀಟಿದಾರರು ಆರು ತಿಂಗಳದಿಂದ ಆಹಾರದ ಧಾನ್ಯಗಳನ್ನು ಪಡೆದಿಲ್ಲ ಎಂಬ ಗುಟ್ಟು ಆಹಾರ ಇಲಾಖೆಗೆ ತಿಳಿದುಬಂದಿದೆ.

ರಾಜ್ಯದಲ್ಲಿ ಅಂತ್ಯೋದಯ ಪಡಿತರ ಚೀಟಿ ದಾರರು ಮಾತ್ರ ಅಕ್ಕಿಯನ್ನು ಪಡೆಯುತ್ತಿಲ್ಲ ಅಂತಲ್ಲ ಇನ್ನೂ ಬಿಪಿಎಲ್ ಆಗು ಎಪಿಎಲ್ ಕಾರ್ಡ್ದಾರರು ಕೂಡ ಆರು ತಿಂಗಳಿನಿಂದ ಯಾವುದೇ ರೀತಿಯ ಆಹಾರ ಧಾನ್ಯಗಳನ್ನು ಸ್ವೀಕರಿಸಿಲ್ಲ 3.32 ಲಕ್ಷ ಬಿಪಿಎಲ್ ಪಡಿತರರು ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದ ಪಡಿತರ ಚೀಟಿದಾರರು ಆಹಾರ ಇಲಾಖೆಯ ಆಹಾರ ಧಾನ್ಯಗಳನ್ನು ಸ್ವೀಕರಿಸಿಲ್ಲ.

ಇಂಥವರ ರೇಷನ್ ಕಾರ್ಡ್ಗಳನ್ನು ರದ್ದುಗೊಳಿಸಿ ಸರ್ಕಾರದ ಹೊರೆಯನ್ನು ಕಡಿಮೆ ಮಾಡಿಕೊಳ್ಳಬೇಕೆಂಬ ನಿಟ್ಟಿನಲ್ಲಿಯೇ ಯಾರು ಅರ್ಹರು ಅಂತಹ ಅರ್ಜಿದಾರರಿಗೆ ಮಾತ್ರ ಪಡಿತರ ಚೀಟಿ ದೊರೆಯುತ್ತದೆ ಯಾರು ಅನರ್ಹರು ಅಂಥಹ ಪಡಿತರ ಚೀಟಿದಾರರಿಗೆ ಪಡಿತರ ಚೀಟಿ ದೊರಕುವುದಿಲ್ಲ. ರಾಜ್ಯದ ಅನರ್ಹರ ಪಡಿತರ ಚೀಟಿ ದಾರರನ್ನು ರದ್ದುಗೊಳಿಸಿದರೆ ಸರ್ಕಾರದ ಹಣದ ವೆಚ್ಚವು ಕೂಡ ಕಡಿಮೆಯಾಗುತ್ತದೆ, ಎಂಬ ಉದ್ದೇಶ ಹೊಂದಿದೆ ಆಹಾರ ಇಲಾಖೆ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment