ಒಬ್ಬ ವ್ಯಕ್ತಿ ಬ್ಯಾಂಕ್ ಸಾಲವನ್ನು ಮಾಡಿ ಮೃತಪಟ್ಟರೆ ! ಆ ಸಾಲವನ್ನು ಯಾರು ತೀರಿಸಬೇಕು ? ಸಾಲ ಮಾಡಿದ ಯಜಮಾನನ ಮನೆಯವರೇ ಸಾಲವನ್ನು ತೀರಿಸಬೇಕಾ ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ…

ಈ ಲೇಖನದಲ್ಲಿ ತಿಳಿಸುವುದೇನೆಂದರೆ ಒಬ್ಬ ವ್ಯಕ್ತಿಯು ಬ್ಯಾಂಕ್ ನಲ್ಲಿ ಸಾಲವನ್ನು ಮಾಡಿರುತ್ತಾರೆ. ಅಕಾಲಿಕವಾಗಿ ಮರಣವನ್ನು ಹೊಂದುತ್ತಾರೆ ನಂತರ ಅವರು ಮಾಡಿದ ಸಾಲವನ್ನು ಯಾರು ತೀರಿಸಬೇಕೆಂಬ ಪ್ರಶ್ನೆ ಮೂಡುತ್ತದೆ ಆ ಪ್ರಶ್ನೆಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ಮಾಹಿತಿಯನ್ನು ನೀಡಲಾಗಿದೆ ಕೊನೆಯವರೆಗೂ ಓದಿ ಆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಬ್ಯಾಂಕ್ ನಲ್ಲಿ ಸಾಲವನ್ನು ಪಡೆದೆ ಪಡೆದಿರುತ್ತಾರೆ. ಏಕೆಂದರೆ ಇವತ್ತಿನ ಕಾಲ ಆ ರೀತಿ ಇದೆ ನಾವು ಸಾಲವನ್ನು ಮಾಡಬಾರದು ಎಂದುಕೊಂಡಿರುತ್ತೇವೆ ಆದರೆ ಮನೆಯ ಪರಿಸ್ಥಿತಿ ಸಾಲ ತೆಗೆದುಕೊಳ್ಳುವ ರೀತಿಯಲ್ಲಿ ಇರುತ್ತದೆ.

WhatsApp Group Join Now
Telegram Group Join Now

ಒಬ್ಬರು ಕೂಡ ಸಾಲವನ್ನು ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ,ಸಾಲ ಎಂದರೆ ಭಯಪಡುತ್ತಾರೆ ಆದರೆ ಪರಿಸ್ಥಿತಿಗಳು ಸಾಲದ ಮೊರೆ ಹೋಗುವ ರೀತಿ ಮಾಡುತ್ತವೆ. ಆದ್ದರಿಂದ ಎಲ್ಲರೂ ಕೂಡ ಬ್ಯಾಂಕ್ ನಲ್ಲಿ ಸಾಲ ನೀಡುತ್ತಾರೆ ಎಂದು ಬ್ಯಾಂಕ್ ಗೆ ಮೊರೆ ಹೋಗುತ್ತಾರೆ. ನಾವು ಎಷ್ಟೇ ದುಡಿಮೆ ಮಾಡಿದರು ಕೂಡ ನಾವು ಅಂದುಕೊಂಡಂತ ಬದುಕನ್ನು ಬದುಕಲು ಸಾಧ್ಯವೇ ಇಲ್ಲ. ಅದರಿಂದ ನಮ್ಮ ಅನುಕೂಲಗಳಿಗಾಗಿ ನಾವು ಸಾಲವನ್ನು ಪಡೆಯುತ್ತೇವೆ. ಒಟ್ಟಾರೆ ಬ್ಯಾಂಕಲ್ಲಿ ಪ್ರತಿಯೊಬ್ಬರೂ ಕೂಡ ಸಾಲವನ್ನು ಮಾಡೆ ಇರುತ್ತಾರೆ.

ಬ್ಯಾಂಕಲ್ಲಿ ಸಾಲವನ್ನು ಯಾವುದರ ಆಧಾರದ ಮೇಲೆ ನೀಡಲಾಗುತ್ತದೆ !

ಬ್ಯಾಂಕಲ್ಲಿ ಸಾಲವನ್ನು ಕೆಲವು ಮುಖ್ಯ ಆಧಾರದ ಮೇಲೆ ನೀಡಲಾಗುತ್ತದೆ. ಕಾಲವನ್ನು ತೆಗೆದುಕೊಳ್ಳಲು ಕೆಲವು ಸಾಕಷ್ಟು ವಿಧಗಳಿವೆ ಆ ವಿಧಗಳ ಆಧಾರದ ಮೇಲೆ ನೀವು ಸಾಲವನ್ನು ಪಡೆಯಬಹುದು. ವಾಹನದ ಮೇಲೆ ಸಾಲ, ಗೃಹ ಸಾಲ, ಚಿನ್ನ ಅಡವಿಟ್ಟು ಸಾಲ, ಕ್ರೆಡಿಟ್ ಲೋನ್, ವೈಯಕ್ತಿಕ ಸಾಲ, ಹೀಗೆ ಬೇರೆ ಬೇರೆ ರೀತಿಯಾದಂತಹ ಲಭ್ಯವಿರುತ್ತದೆ. ನೀವು ಯಾವ ವಿಧದಲ್ಲಿ ಸಾಲವನ್ನು ಪಡೆಯಬೇಕೆಂದು ಇಚ್ಚಿಸುತ್ತಿದ್ದೀರಿ. ಅದರ ಮುಖಾಂತರ ಆ ವಿಧಾನದಲ್ಲಿ ನೀವು ಸಾಲವನ್ನು ಪಡೆಯಬಹುದು.

ಸಾಲದ ಬಗ್ಗೆ ಇರುವ ರೂಲ್ಸ್ ತಿಳಿದುಕೊಳ್ಳಿ !

ಸಾಲವನ್ನು ಪಡೆಯಬೇಕು ಎಂದರೆ ಅದಕ್ಕೆ ಅದೇ ರೀತಿ ಅಂತಹ ವಿಧಾನಗಳು ಇರುತ್ತವೆ,ಅದನ್ನು ನಾವು ಪಾಲಿಸಿ ಹಾಗೆ ಯಾವ ವಿಧಾನದಲ್ಲಿ ಸಾಲಬೇಕು ಅಂದರೆ ವೈಯಕ್ತಿಕ ಸಾಲ, ಗೃಹ ಸಾಲ, ಚಿನ್ನ ಅಡವಿಟ್ಟು ಸಾಲ, ವೈಯಕ್ತಿಕ ಸಾಲ, ಇದೇ ರೀತಿ ಕೆಲವು ಸಾಲ ತೆಗೆದುಕೊಳ್ಳಲು ಅದರ ವಿಧಾನದ ಮೇಲೆ ಸಾಲವನ್ನು ನೀಡಲಾಗುತ್ತದೆ. ನಿಮಗೇನಾದರೂ ಸಾಲಬೇಕೆಂದು ಬಯಸಿದರೆ ಆಸ್ತಿ ಪತ್ರ ಮತ್ತು ಅಮೂಲ್ಯವಾದ ವಸ್ತುವನ್ನು ಅಡವಿಡಬೇಕು. ನಂತರ ಸಾಲವನ್ನು ನೀಡಲಾಗುತ್ತದೆ ಆದರೆ ವೈಯಕ್ತಿಕ ಸಾಲದಲ್ಲಿ ಆ ರೀತಿಯಲ್ಲ ಇದಕ್ಕೆ ಯಾವುದೇ ರೀತಿಯ ಶ್ಯೂರಿಟಿ ಇರುವುದಿಲ್ಲ. ವ್ಯಕ್ತಿಯ ತಿಂಗಳ ಆದಾಯದ ಮೇಲೆ ಸಾಲವನ್ನು ನೀಡಲಾಗುತ್ತದೆ.

ನಿಮಗೆಲ್ಲಾ ಕಾಡುವ ಪ್ರಶ್ನೆ ಎಂದರೆ ಸಾಲ ಪಡೆದ ವ್ಯಕ್ತಿ ಸತ್ತರೆ ಆ ಸಾಲವನ್ನು ಯಾರು ತೀರಿಸಬೇಕು ?

ಮನೆ ಯಜಮಾನನು ಬದುಕಿನ ಬಂಡಿಯನ್ನು ಸಾಗಿಸಲು ಕೆಲವು ಕೆಟ್ಟ ಪರಿಸ್ಥಿತಿಯನ್ನು ನಿಭಾಯಿಸಲು ಸಾಲವನ್ನು ಪಡೆದಿರುತ್ತಾರೆ. ಯಜಮಾನನು ಸಾಲವನ್ನು ಪಡೆದು ಆಕಾಲಿಕವಾಗಿ ಮರಣವನ್ನು ಹೊಂದಿದ್ದರೆ. ಮನೆಯವರಿಗೆ ಕೆಲವು ವಿಚಾರಗಳು ಗೊತ್ತೇ ಇರುವುದಿಲ್ಲ. ಯಜಮಾನನು ಯಾವ ಬ್ಯಾಂಕಿನಲ್ಲಿ ಸಾಲ ಮಾಡಿದ್ದಾರೆ ಎಂಬುದು ಕೂಡ ಗೊತ್ತಾಗುವುದಿಲ್ಲ ಕೆಲವು ಮನೆಯ ಸದಸ್ಯರಿಗೆ. ಕೆಲವು ಯಜಮಾನರು ತಾವು ಮಾಡಿದಂತಹ ಸಾಲವನ್ನು ಮನೆಯಲ್ಲಿ ಹೇಳಿಕೊಳ್ಳುವುದಿಲ್ಲ. ಆದ್ದರಿಂದ ಮನೆಯಲ್ಲಿರುವವರಿಗೆ ಆ ಮನೆಯ ಯಜಮಾನ ಮೃತಪಟ್ಟಾಗ ಅವರು ಯಾವ ಬ್ಯಾಂಕ್ಗಳಲ್ಲಿ ಸಾಲ ಮಾಡಿದ್ದಾರೆ ಎಂಬುದು ಗೊತ್ತಾಗುವುದಿಲ್ಲ.

ಮನೆಯ ಯಜಮಾನನು ಸಾಲ ಮಾಡಿ ತೀರಿಕೊಂಡರೆ ಆ ಸಾಲವನ್ನು ತೀರಿಸುವಂತೆ ಬ್ಯಾಂಕ್ ಮನೆಯವರನ್ನು ಕೇಳಬಹುದು. ಕುಟುಂಬಸ್ಥರು ಯಾವುದೇ ರೀತಿಯ ತೀರ್ಮಾನವನ್ನು ತೆಗೆದುಕೊಳ್ಳದಿದ್ದಾಗ, ಮಾತ್ರ ಸಾಲವನ್ನು ತೀರಿಸಲು ಆಸ್ತಿ ಹರಾಜು ಪ್ರಕ್ರಿಯೆಯ ಹಂತಕ್ಕೆ ಬ್ಯಾಂಕ್ ಹೋಗಬಹುದು.

ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment