ಇಂಥವರ ಪಡಿತರ ಚೀಟಿ ಅಮಾನತ್ತು ಮಾಡಲಾಗುತ್ತದೆ ! BPL ಕಾರ್ಡ್ ಇದ್ರೂ ವೇಸ್ಟ್, ಇಂಥವರಿಗೆ ಯಾವುದೇ ಯೋಜನೆಯ ಹಣ ಸಿಗುವುದಿಲ್ಲ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ.

ಈ ಲೇಖನದಲ್ಲಿ ತಿಳಿಸುವುದೇನೆಂದರೆ ಇಂಥವರ ಬಳಿ ಬಿಪಿಎಲ್ ಕಾರ್ಡ್ ಇದ್ರೂ ವ್ಯರ್ಥ ಏಕೆಂದರೆ ಅವರಿಗೆ ಸರ್ಕಾರದ ಯಾವುದೇ ಯೋಜನೆಯ ಹಣ ವರ್ಗಾವಣೆ ಹಾಗುವುದಿಲ್ಲ. ಏಕೆ ಸರ್ಕಾರವು ಇಂಥ ಬಿಪಿಎಲ್ ಕಾರ್ಡ್ ಪಡಿತರ ಚೀಟಿಯನ್ನು ಅಮಾನತ್ತು ಮಾಡಲಾಗುತ್ತದೆ ಎಂದು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಪಡಿತರ ಚೀಟಿ ಎಂಬುದು ಎಲ್ಲರಿಗೂ ತುಂಬಾ ಮುಖ್ಯವಾದ ಕಾರ್ಡ್ ಆಗಿದೆ ಏಕೆಂದರೆ ಬಿಪಿಎಲ್ ಕಾರ್ಡ್ ನಿಂದ ತುಂಬಾ ಪ್ರಯೋಜನವಿದೆ.

WhatsApp Group Join Now
Telegram Group Join Now

ಆರೋಗ್ಯದ ವಿಚಾರಕ್ಕೆ ಬಂದರೂ ಕೂಡ ಹಣಕಾಸಿನ ವಿಚಾರಕ್ಕೆ ಬಂದರೂ ಕೂಡ ಇನ್ನು ಇತ್ಯಾದಿ ಕ್ಷೇತ್ರದಲ್ಲಿ ಪಡಿತರ ಚೀಟಿ ಕಾರ್ಡ್ ಗೆ ತುಂಬಾ ಮುಖ್ಯವಾದ ಸ್ಥಾನವಿದೆ ಎಂದೇ ಹೇಳಬಹುದು. ಆದರೆ ಸರ್ಕಾರವು ಯಾರು ಬಿ ಪಿ ಎಲ್ ಕಾರ್ಡಿನಲ್ಲಿ ಆರು ತಿಂಗಳಾದರೂ ಅಕ್ಕಿ ಪಡೆಯುತ್ತಿಲ್ಲವೋ ಅಂತಹ ಕಾರ್ಡ್ಗಳನ್ನು ಅಮಾನತ್ತು ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ಕೆಲವರು ಬಿಪಿಎಲ್ ಕಾರ್ಡ್ ಪಡೆಯಲು ತುಂಬಾ ಅಲೆದಾಡುತ್ತಿರುತ್ತಾರೆ ಆದರೆ ಬಿಪಿಎಲ್ ಕಾರ್ಡ್ ಪಡೆದವರು ಕೆಲವರು ಮಾತ್ರ ತಿಂಗಳುಗಟ್ಟಲೆ ಆದರೂ ಅಕ್ಕಿಯನ್ನು ಪಡೆಯದೆ ಸುಮ್ಮನೆ ವ್ಯರ್ಥ ಮಾಡುತ್ತಿರುತ್ತಾರೆ. ಆದ್ದರಿಂದ ಸರ್ಕಾರವು ಅಗತ್ಯವಿರುವವರಿಗೆ ಮಾತ್ರ ರೇಷನ್ ಕಾರ್ಡ್ ಅಂದರೆ ಪಡಿತರ ಚೀಟಿ ಕಾರ್ಡ್ ನೀಡಬೇಕೆಂದು ಆದೇಶ ಮಾಡಿದ್ದು ರೇಷನ್ ಕಾರ್ಡ್ ಅರ್ಜಿ ಹಾಕಿರುವವರ ಸಂಖ್ಯೆ ತುಂಬಾ ಹೆಚ್ಚಾಗಿದೆ. ಆದ್ದರಿಂದ ಅನುಕೂಲ ಇಲ್ಲದವರ ರೇಷನ್ ಕಾರ್ಡ್ ತೆಗೆದು ಅನುಕೂಲ ಇರುವವರಿಗೆ ರೇಷನ್ ಕಾರ್ಡ್ ಕೊಡಲು ಸರ್ಕಾರವು ಅನುವು ಮಾಡುತ್ತಿದೆ. ರೇಷನ್ ಕಾರ್ಡ್ ಎಂಬುದು ಪ್ರತಿಯೊಬ್ಬರಿಗೂ ಕೂಡ ತುಂಬಾ ಪ್ರಯೋಜನಕಾರಿಯಾಗಿದ್ದು.

ಸರ್ಕಾರವು ಯಾವುದೇ ಯೋಜನೆಯನ್ನು ಜಾರಿಗೆ ತಂದರು, ಆ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಬೇಕೆಂದರೆ ಪ್ರತಿಯೊಂದು ಮನೆಗೂ ಕೂಡ ರೇಷನ್ ಕಾರ್ಡ್ ಇರಲೇಬೇಕು. ಆದ್ದರಿಂದ ಸರ್ಕಾರವು ರೇಷನ್ ಕಾರ್ಡ್ ಆಧರಿತದ ಮೇಲೆಯೇ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈಗಾಗಲೇ ರಾಜ್ಯ ಸರ್ಕಾರದ ಐದು ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಯನ್ನು ಕೂಡ ಪಡಿತರ ಚೀಟಿಯ ಆಧಾರದ ಮೇಲೆ ನೀಡಲಾಗುತ್ತಿದೆ.

ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಗೆ ರೇಷನ್ ಕಾರ್ಡ್ ತುಂಬಾ ಮುಖ್ಯವಾಗಿದ್ದು. ಬ್ಯಾಂಕ್ ಖಾತೆಗೆ ರೇಷನ್ ಕಾರ್ಡ್ ಲಿಂಕ್ ಆಗಿರಲೇಬೇಕು ನಿಮ್ಮ ರೇಷನ್ ನಂಬರ್ ಗೆ ಆಗ ಎರಡು ಸಾವಿರ ರೂಪಾಯಿ ಹಣ ಜಮಾ ಆಗುತ್ತದೆ. ಆದರೆ ಕೆಲವು ಅಡೆತಡೆಗಳಿಂದ ಗೃಹಲಕ್ಷ್ಮಿ ಹಣವು ಕೂಡ ಬಂದಿಲ್ಲ, 5 ಕೆಜಿ ಅನ್ನಭಾಗ್ಯದ ಹಣವು ಕೂಡ ಬಂದಿಲ್ಲ. ಇವೆರಡು ಯೋಜನೆಗೆ ಮುಖ್ಯ ಆಧಾರವೇ ರೇಷನ್ ಕಾರ್ಡ್ ಆಗಿದೆ. ಆದ್ದರಿಂದ ಸರ್ಕಾರವು ಇದಕ್ಕೆ ಸಹಾಯವಾಣಿ ನಂಬರ್ ಗೆ ಎಸ್ಎಮ್ಎಸ್ ಮಾಡಿ ಎಂದು ತಿಳಿಸಿದ್ದು. ರೇಷನ್ ಕಾರ್ಡ್ ನಂಬರನ್ನು ನೀವು ಆ ನಂಬರ್ಗೆ ಎಸ್ಎಂಎಸ್ ಮಾಡಿದರೆ ಪರಿಹಾರವನ್ನು ಸೂಚಿಸುತ್ತೇವೆ ಎಂದು ತಿಳಿಸಿದ್ದಾರೆ. ಆದ್ದರಿಂದ ರೇಷನ್ ಕಾರ್ಡ್ ಎಲ್ಲವುದಕ್ಕೂ ಕೂಡ ಬಹು ಮುಖ್ಯವಾದ ದಾಖಲೆ ಎಂದು ಹೇಳಬಹುದು.

ರಾಜ್ಯ ಸರ್ಕಾರಕ್ಕೆ ಒಟ್ಟು 2.96 ಲಕ್ಷ ಪಡಿತರ ಚೀಟಿಯ ಅರ್ಜಿಯ ಸಂದಾಯವಾಗಿದೆ, ಆದರೆ ಸರ್ಕಾರವು ಈ ವಿಚಾರದಲ್ಲಿ ಯಾವುದೇ ಕೂಡ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಈಗ ಈ ವಿಷಯದ ಬಗ್ಗೆ ಚರ್ಚಿಸಿ ಯಾರು ಆರು ತಿಂಗಳಾದರೂ ಅಕ್ಕಿ ಪಡೆಯುತ್ತಿಲ್ಲ ಅಂಥವರ ರೇಷನ್ ಕಾರ್ಡ್ ಅನ್ನು ಅಮಾನತು ಮಾಡಿ ನಂತರ ಇವರೆಲ್ಲ ಕಾರ್ಡ್ ಕೊಡಲಾಗುತ್ತದೆ ಎಂದು ನಿರ್ಧಾರ ಮಾಡಿದ್ದಾರೆ. ಹೊಸದಾಗಿ ಪಡೆದರೆ ಚೀಟಿ ಪಡೆಯಲು ಈಗ ಸದ್ಯಕ್ಕೆ ಸಾಧ್ಯವಿಲ್ಲ ಎಂದು ಹೇಳಬಹುದು. ಏಕೆಂದರೆ ಈಗ ಅರ್ಜಿ ಸಲ್ಲಿಸುವವರ ಎಲ್ಲರಿಗೂ ಕೂಡ ರೇಷನ್ ಕಾರ್ಡ್ ಸಂದಾಯವಾದ ಮೇಲೆ ಆಗ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಎಂದು ಸರ್ಕಾರ ತಿಳಿಸಿದೆ.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment