UPI ವಹಿವಾಟಿನ ಹಣ ಹೆಚ್ಚಳ ಮಾಡಿದ RBI. ವಹಿವಾಟಿನ ಮಿತಿಯನ್ನು 5 ಲಕ್ಷದವರೆಗೆ ಹೆಚ್ಚಿಸಲಾಗಿದೆ.

ಎಲ್ಲರಿಗೂ ನಮಸ್ಕಾರ…

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕಡೆಯಿಂದ ಯುಪಿಐ ದಾರಿಗೆ ಒಂದು ಒಳ್ಳೆಯ ಸಿಹಿ ಸುದ್ದಿ ಎಂದೇ ಹೇಳಬಹುದು. ಏಕೆಂದರೆ ಯುಪಿಐ ವಹಿವಾಟಿನ ಹಣವನ್ನು ಡಿಸೆಂಬರ್ 8ರಂದು ಹೆಚ್ಚಳ ಮಾಡಲಾಗಿದೆ. ಕಳೆದ ಎರಡು ದಿನದ ಹಿಂದೆಯೇ ಈ ನಿಯಮದ ಆದೇಶ ಹೊರಬಂದಿದೆ. ಇನ್ಮುಂದೆ ಯುಪಿಐ ದಾರರು 5 ಲಕ್ಷದವರೆಗೂ ಹಣದ ವಹಿವಾಟನ್ನು ನಡೆಸಬಹುದು. ಈ ಒಂದು ಬದಲಾವಣೆ ಮಾಡಲು ಕಾರಣವೇನೆಂದರೆ ಅದುವೇ ಆರೋಗ್ಯ ಹಾಗೂ ಶಿಕ್ಷಣದ ಸಲುವಾಗಿ ಈ ಒಂದು ಹೊಸ ನಿಯಮವನ್ನು ಜಾರಿಗೊಳಿಸಿದೆ RBI. ಈ ಹಿಂದೆ ಯುಪಿಐ ವಹಿವಾಟಿನ ಮಿತಿ ಒಂದು ಲಕ್ಷದವರೆಗೆ ಇತ್ತು, ಆದರೆ ಇನ್ಮುಂದೆ ಈ ರೀತಿಯ ನಿಯಮ ಇರುವುದಿಲ್ಲ.

WhatsApp Group Join Now
Telegram Group Join Now

5 ಲಕ್ಷದವರೆಗೂ ಕೂಡ ಯುಪಿಐ ದಾರರೂ ಹಣದ ವಹಿವಾಟನ್ನು ಮಾಡಬಹುದು. ಈ ಒಂದು ಹೊಸ ನಿಯಮದಿಂದ ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯ ಪಡೆಯುವವರಿಗೆ ಅನುಕೂಲವಾಗುತ್ತದೆ. ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯಗಳಿಗೆ ಯುಪಿಐ ಹಣದ ಮಿತಿಯನ್ನು ಐದು ಲಕ್ಷದವರೆಗೆ ಹೆಚ್ಚಿಸುತ್ತೇವೆ ಎಂದು ಆರ್ಬಿಐ ಗೌರ್ನರ್ ಆದ ಶಕ್ತಿಕಾಂತ್ ದಾಸರವರು ತಮ್ಮ ಎಂಪಿಸಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಒಂದು ಹೊಸ ನಿಯಮವು ಮುಂದಿನ ದಿನಗಳಲ್ಲಿ ಶೀಘ್ರದಲ್ಲೇ ಜಾರಿಯಾಗಲಿದೆ.

ಈ ಒಂದು ನಿರ್ಧಾರದಿಂದ ಶಿಕ್ಷಣ ಮುಂದುವರೆಸುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಆರೋಗ್ಯ ಕರವಾದ ಸೌಲಭ್ಯಗಳನ್ನು ಪಡೆಯಬೇಕೆಂದು ಹಣದ ಸಮಸ್ಯೆ ಉಂಟಾದಾಗ ಈ ಯುಪಿಐ ಪಾವತಿ ಮೂಲಕ 5 ಲಕ್ಷದವರೆಗೆ ಹಣದ ವಹಿವಾಟನ್ನು ನಡೆಸಬಹುದು. ಮುಂದಿನ ದಿನಗಳಲ್ಲಿ ಈ ಒಂದು ಹೊಸ ನಿಯಮ ಜಾರಿಯಾಗಿ ರೂ. 5 ಲಕ್ಷದ ವರೆಗೆ ಯುಪಿಐ ವಹಿವಾಟನ್ನು ಮಾಡಬಹುದಾಗಿದೆ.

UPI ಪಾವತಿಯಲ್ಲಿ ಹೊಸ ನಿಯಮ ಜಾರಿ.

ಪ್ರಪಂಚದ ಎಲ್ಲಾ ಜನರು ಕೂಡ ಡಿಜಿಟಲ್ ಪೇಮೆಂಟ್‌ಗಳನ್ನು ಬಳಸಿ ( phonePe, Google pay, Paytm, ) ಗಳಂತಹ ಅಪ್ಲಿಕೇಶ್ನಗಳನ್ನು ಬಳಸಿ ಯುಪಿಐ ಮೂಲಕ ಬೇರೊಂದು ವ್ಯಕ್ತಿಗಳಿಗೆ ಹಣವನ್ನು ವರ್ಗಾವಣೆ ಮಾಡುತ್ತಾರೆ. ಹಾಗೂ ಆ ಹಣವನ್ನು ಕೂಡ ಪಡೆದುಕೊಳ್ಳುತ್ತಾರೆ. ಕ್ಷಣಮಾತ್ರದಲ್ಲೇ ಹಣವನ್ನು ಬೇರೊಂದು ವ್ಯಕ್ತಿಗಳಿಗೆ ಕಳುಹಿಸಬಹುದು ಅಥವಾ ಬೇರೊಂದು ವ್ಯಕ್ತಿಗಳಿಂದ ಹಣವನ್ನು ಸ್ವೀಕರಿಸಬಹುದು ಇಂತಹ ಒಂದು ಡಿಜಿಟಲ್ ಯುಗದಲ್ಲಿ ಡಿಜಿಟಲ್ ಅಪ್ಲಿಕೇಶನ್ ಗಳು ಕೋಟ್ಯಾಂತರ ಜನರ ಗ್ರಾಹಕರನ್ನು ಹೊಂದಿದೆ.

ಆದ್ದರಿಂದ ಈ ಅಪ್ಲಿಕೇಶನ್ ಮೂಲಕ ಯುಪಿಐ ಪಾವತಿಯನ್ನು ಮಾಡುತ್ತೀರಿ ಎಂದು ಬಯಸಿದರೆ ನೀವು 1 ಲಕ್ಷದವರೆಗೆ ಮಾತ್ರ ಹಣವನ್ನು ಬೇರೊಂದು ವ್ಯಕ್ತಿಗೆ ವರ್ಗಾಯಿಸಲು ಸಾಧ್ಯ. ಇದು ಈ ಹಿಂದೆಯ ನಿಯಮ ಅನ್ವಯವಾಗುತ್ತಿತ್ತು ಆದರೆ ಇನ್ಮುಂದೆ ಈ ರೀತಿಯಲ್ಲ ಮೋದಿಯ ಸರ್ಕಾರವು ಈ ಯುಪಿಐ ಪಾವತಿಯ ಹಣವನ್ನು ಹೆಚ್ಚಳ ಮಾಡಲು ಮುಂದಾಗಿದೆ.

ಇದನ್ನು ಓದಿ :- ಮಾತೃಭಾಷೆಯನ್ನು ಬಳಸಿಕೊಂಡು ಟೈಪಿಂಗ್ ಮಾಡಿ ! ಲಕ್ಷಾಂತರ ಹಣವನ್ನು ಸಂಪಾದಿಸಿ. How to earn money from home ! ಇಲ್ಲಿದೆ ಸಂಪೂರ್ಣವಾದ ವಿವರ.

ಈಗಾಗಲೇ ಹಲವಾರು ಸೈಬರ್ ಪ್ರಕರಣಗಳು ದಾಖಲಾಗುತ್ತಿವೆ. ಅಂಥಹ ವಂಚಕರ ಮೇಲೂ ಕೂಡ ಸೈಬರ್ ಪ್ರಕರಣಗಳು ದಾಖಲಾಗಿ ಸೈಬರ್ ವಂಚಕರನ್ನು ಬಂಧಿಸಲಾಗುತ್ತಿದೆ. ಈ ಒಂದು ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯಬಾರದು ಎಲ್ಲಿಯೂ ಕೂಡ ಈ ಒಂದು ಕೆಲಸ ಆಗಬಾರದೆಂದು ಸರ್ಕಾರವು ಹೊಸ ಆದೇಶವನ್ನು ಜಾರಿಗೊಳಿಸಿ ಆ ಆದೇಶವನ್ನು ಪಾಲಿಸಬೇಕು ಎಂಬುದನ್ನು ಕೂಡ ಸೂಚನೆ ನೀಡಿದೆ. ಆದಶವೇನೆಂದರೆ ನಾಲ್ಕು ಗಂಟೆಯಲ್ಲಿ ಒಬ್ಬ ವ್ಯಕ್ತಿಯು ಎರಡು ಸಾವಿರ ಹಣವನ್ನು ಮಾತ್ರ ಬೇರೊಂದು ವ್ಯಕ್ತಿಗೆ ಮಾಡಲು ಸಾಧ್ಯ ಎಂದು ತಿಳಿಸಿದೆ.

ಆ ಒಂದು ನಿರ್ದಿಷ್ಟ ಸಮಯವನ್ನು ಇನ್ನು ಕನಿಷ್ಠ ಗೊಳಿಸಬೇಕೆಂದು ಕೂಡ ನಿರ್ಧಾರ ಮಾಡಿದೆ ಏಕೆಂದರೆ ಈ ವಂಚಕರ ಕೆಲಸದಿಂದ ಕೋಟ್ಯಂತರ ಜನರಿಗೆ ತೊಂದರೆ ಆಗಬಾರದೆಂಬ ನಿಟ್ಟಿನಲ್ಲಿ ಸಮಯವನ್ನು ಕನಿಷ್ಠ ಗೊಳಿಸಬೇಕೆಂದು ಕೂಡ ನಿರ್ಧಾರ ಗೊಳಿಸಿದೆ. 2000 ಹಣವನ್ನು ಮಾತ್ರ 4 ಗಂಟೆಯಲ್ಲಿ ಬೇರೊಂದು ವ್ಯಕ್ತಿಗೆ ಹಣವನ್ನು ವರ್ಗಾವಣೆ ಮಾಡಲು ಸಾಧ್ಯ ಈ ಒಂದು ನಿಯಮವನ್ನು 4 ಗಂಟೆ ಇದ್ದ ಸಮಯವನ್ನು ಕನಿಷ್ಠ ಗೊಳಿಸಿ ಒಂದೆರಡು ಗಂಟೆ ಇನ್ನು ಹೆಚ್ಚಿನ ಪ್ರಮಾಣದ ಹಣದ ವಹಿವಾಟನ್ನು ನಡೆಸಬೇಕೆಂಬುದು ಈ ಒಂದು ಸರ್ಕಾರದ ಹೊಸ ನಿರ್ಧಾರ. ಈ ನಿರ್ಧಾರದಿಂದವಾದರೂ ವಂಚಕರು ಕಡಿಮೆಯಾಗಿ ಎಲ್ಲೂ ಕೂಡ ಯುಪಿಐ ಬಳಕೆದಾರರಿಗೆ ಸೈಬರ್ ವಂಚನೆ ಆಗಬಾರದೆಂಬ ನಿಟ್ಟಿನಲ್ಲಿ ಈ ಸರ್ಕಾರದ ನಿಯಮಗಳು ಜಾರಿಯಾಗಲಿವೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಡೆಯಿಂದ ಕೂಡ ಯುಪಿಐ ಬಳಕೆದಾರರಿಗೆ ಹೊಸ ನಿಯಮ ಜಾರಿಯಾಗಿ ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯಕ್ಕಾಗಿ ಹೆಚ್ಚಿನ ಹಣವನ್ನು ಇನ್ಮುಂದೆ ವರ್ಗಾವಣೆ ಮಾಡಬಹುದು, ಅಥವಾ ಸ್ವೀಕರಿಸಬಹುದು ಹಣವನ್ನು. ಈ ಒಂದು ಹೊಸ ನಿಯಮವು ಮುಂದಿನ ದಿನಗಳಲ್ಲಿ ಜಾರಿಯಾಗಲಿದೆ ಎಂಬ ಸುದ್ದಿ ಬಂದಿದೆ. ನಿಮ್ಮ ಸ್ನೇಹಿತರು ಕೂಡ ಡಿಜಿಟಲ್ ಆ್ಯಪ್ ಗಳನ್ನು ಬಳಸುತ್ತಾರ, ಹಾಗಾದ್ರೆ ಅವರಿಗೂ ಶೇರ್ ಮಾಡುವ ಮೂಲಕ ಈ ಒಂದು ಲೇಖನದ ಮಾಹಿತಿಯನ್ನು ತಿಳಿಸಿರಿ ಹಾಗು ಐದು ಲಕ್ಷದವರೆಗೆ ಯುಪಿಐ ಮೂಲಕ ಹಣವನ್ನು ಪಾವತಿ ಮಾಡಬಹುದು ಎಂದು ಕೂಡ ಹೇಳಿರಿ.

ಲೇಖನವನ್ನು ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment