4 ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಈವರೆಗೂ ಖರ್ಚು ಮಾಡಿದ ಹಣವೆಷ್ಟು ಗೊತ್ತಾ ? ಗೊತ್ತಾದ್ರೆ ಶಾಕ್ ಆಗ್ತೀರಾ. ಮೊತ್ತದ ಪೂರ್ಣ ವಿವರ ಹೀಗಿದೆ ನೋಡಿ.

ಎಲ್ಲರಿಗೂ ನಮಸ್ಕಾರ…

ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದು ಆರು ತಿಂಗಳು ಆಯಿತು, ಆದರೂ ಕೂಡ, ಕೊನೆಯ ಯೋಜನೆಯನ್ನು ಜಾರಿಗೊಳಿಸಲು ಸಿದ್ಧವಾಗುತ್ತಿದೆ ಸರ್ಕಾರ. ಯುವನಿಧಿ ಯೋಜನೆಯು ಜನವರಿಯಲ್ಲಿ ಜಾರಿಗೊಳ್ಳುತ್ತದೆ, ಎಂಬ ಮಾಹಿತಿ ತಿಳಿದು ಬಂದಿದೆ. ಇನ್ನು ಉಳಿದ ನಾಲ್ಕು ಗ್ಯಾರಂಟಿ ಯೋಜನೆಗಳು ಸಕ್ರಿಯವಾಗಿವೆ. ಎಲ್ಲಾ ಯೋಜನೆಗಳು ಕೂಡ ಜನಸಾಮಾನ್ಯರಿಗೆ ಸೌಲಭ್ಯದ ಯೋಜನೆಗಳಾಗಿವೆ. ನಾಲ್ಕು ಯೋಜನೆಗಳು ಜಾರಿಯಾಗಿ ಬರೋಬ್ಬರಿ ಮೂರು ನಾಲ್ಕು ತಿಂಗಳಾಗಿರಬಹುದು ಅಷ್ಟೇ, ಆದರೆ ಸರ್ಕಾರ ಈ ಎಲ್ಲಾ ಯೋಜನೆಗಳಿಗೆ ಖರ್ಚು ಮಾಡಿದ ಹಣ ಎಷ್ಟು ಗೊತ್ತಾ ? ಈವರೆಗೂ 18 ಸಾವಿರ ಕೋಟಿ ಹಣವನ್ನು ಈ ಎಲ್ಲಾ ಯೋಜನೆಗಳಿಗೆ ಖರ್ಚು ಮಾಡಿದೆ ಸರ್ಕಾರ. ಯಾವ ಯಾವ ಯೋಜನೆಗಳಿಗೆ ಜಾಸ್ತಿ ಹಣ ಖರ್ಚಾಗಿದೆ ಎಂಬುದನ್ನು ಈ ಕೆಳಕಂಡ ಲೇಖನದಲ್ಲಿ ತಿಳಿಸಲಾಗುತ್ತದೆ ಕೊನೆವರೆಗೂ ಲೇಖನವನ್ನು ಓದಿ.

WhatsApp Group Join Now
Telegram Group Join Now

2303 ಕೋಟಿ ರೂ ಹಣ ಶಕ್ತಿ ಯೋಜನೆಯ ಖರ್ಚು !

ಹೌದು ಈವರೆಗೂ ಕೂಡ 2303 ಕೋಟಿ ರೂ ಹಣದ ಉಚಿತ ಟಿಕೆಟ್ಗಳನ್ನು ವಿತರಿಸಲಾಗಿದೆ. ಈ ಒಂದು ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಮಾತ್ರ ಉಚಿತವಾದ ಟಿಕೇಟುಗಳು ಲಭ್ಯವಿತ್ತು. ಈ ಒಂದು ಯೋಜನೆಯನ್ನು ಬಳಸಿಕೊಂಡ ನಾರಿಯರು ದಿನಕ್ಕೆ ಸರಾಸರಿ 60 ಲಕ್ಷ ಟಿಕೆಟ್ಗಳು ಬಳಕೆಯಾಗುತ್ತಿದ್ದವು ಹಾಗೂ 6 ತಿಂಗಳ ವೆಚ್ಚವನ್ನು ಲೆಕ್ಕ ಹಾಕಿದರೆ, 97.2 ಕೋಟಿಗೂ ಮೀರಿದಂತಹ ಉಚಿದವಾದ ಪ್ರಯಾಣ ಮಾಡಿದ್ದಾರೆ ಮಹಿಳೆಯರು. ಇಂದಿನವರೆಗೂ ವೆಚ್ಚವನ್ನು ಲೆಕ್ಕ ಹಾಕಿದರೆ 2303 ಕೋಟಿ ರೂ ಟಿಕೆಟ್ಗಳನ್ನು ಉಚಿತವಾಗಿ ಮಹಿಳೆಯರಿಗೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಆರು ತಿಂಗಳ ಹಿಂದೆಯೇ ಕಾಂಗ್ರೆಸ್ ಸರ್ಕಾರದ ಯೋಜನೆಗಳು ಅರ್ಜಿ ಪೂರೈಸಿ, ನಂತರ ಕಾರ್ಯನಿರ್ವಹಿಸಲು ಸಜ್ಜದವು. ಈ ಎಲ್ಲಾ ಯೋಜನೆಗಳ ಸೌಲಭ್ಯವನ್ನು ಪ್ರತಿಯೊಂದು ಮನೆಯ ಗೃಹಿಣೀಯರು ( ಮಹಿಳೆಯರು ) ಉಪಯೋಗಿಸಿಕೊಳ್ಳುತ್ತಿದ್ದಾರೆ. ಈ ಯೋಜನೆ ಮಹಿಳೆಯರಿಗೆ ಮೀಸಲಾಗಿದ್ದು ಮಾತ್ರ. ಯಾವುದೇ ಜಾತಿ ಭೇದವಿಲ್ಲದೆ ಬಸ್ ಪ್ರಯಾಣ ಮಾಡುವಂಥಹ ಸಮಾನತೆ ಶಕ್ತಿ ಯೋಜನೆಗಿದೆ. ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಕೊಟ್ಟ ಮಾತಿನಂತೆ ಉಚಿತ ಪ್ರಯಾಣವನ್ನು ಸಾಗಿಸುತ್ತಿದೆ.

ಇದನ್ನು ಓದಿ :- Phonepe, Google pay & Paytm, ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ ಗಳಿಂದ ಗ್ರಾಹಕರಿಗೆ ಸಿಗಲಿದೆ 10,000 ಹಣ, ಬಡ್ಡಿ ಇಲ್ಲದೆ ಸಾಲ ! 10 ನಿಮಿಷದಲ್ಲಿ ಪಡೆದುಕೊಳ್ಳಬಹುದು.

ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 11,200 ಕೋಟಿ ಬಿಡುಗಡೆ ಮಾಡಲಾಗಿದೆ.

99.52 ಲಕ್ಷ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ. ಅರ್ಜಿ ಸಲ್ಲಿಸಿ ಮೂರು ತಿಂಗಳ ಹಣವನ್ನು ಪಡೆದುಕೊಂಡ ಫಲಾನುಭವಿಗಳು ಇವರು. ಪ್ರತಿ ತಿಂಗಳು 2000 ಹಣವನ್ನು ಖಾತೆಗೆ ವರ್ಗಾಯಿಸುತ್ತೇವೆ, ಎಂಬ ಭರವಸೆಯಂತೆಯೇ ನಡೆದುಕೊಂಡಿದೆ ಕಾಂಗ್ರೆಸ್ ಸರ್ಕಾರ. ಈ ಯೋಜನೆಗೆ ಮೊದಲೇ ಮೀಸಲಿಟ್ಟ ಹಣವೆಂದರೆ 17,500 ಕೋಟಿ. ಆದರೆ ಈವರೆಗೂ ಮಹಿಳೆಯರಿಗೆ ಖಾತೆಗೆ ವರ್ಗಾವಣೆ ಆದ ಹಣದ ಮೊತ್ತ 11,200 ಕೋಟಿ ರೂ ಬಿಡುಗಡೆಯಾಗಿದೆ. ಇನ್ನೂ ಕೆಲ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಹಣ ವರ್ಗಾವಣೆ ಆಗಿಲ್ಲ, ಹಲವಾರು ಸಮಸ್ಯೆ ಉಂಟಾಗಿದೆ ಅರ್ಜಿಯಲ್ಲಿ ಅದಕ್ಕಾಗಿ ಹಣ ಬರಲು ಸ್ವಲ್ಪ ಕಾಲಾವಕಾಶವನ್ನು ತೆಗೆದುಕೊಳ್ಳುತ್ತಿದೆ ಎಲ್ಲಾ ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಆಗೇ ಆಗುತ್ತದೆ ಎಂಬ ಭರವಸೆಯನ್ನು ಲಕ್ಷ್ಮಿ ಹೆಬ್ಬಾಳ್ಕರ್ ರವರು ನೀಡಿದ್ದಾರೆ. ಮಹಿಳೆಯರಿಗೆ ಮೀಸಲಿಟ್ಟ ಈ ಯೋಜನೆಯು, ಸಾಮಾನ್ಯ ಮಹಿಳಾ ಜನತೆಗೆ ಅನುಕೂಲತೆಯನ್ನು ನೀಡಿದೆ. ಅಂದರೆ ಈ ದುಬಾರಿ ದುನಿಯಾದಲ್ಲಿ ಮನೆ ಜವಾಬ್ದಾರಿ ಹೊತ್ತ ಮಹಿಳೆಗೆ ಭಾರವಾಗ ಬಾರದೆಂಬ ಕಾರಣದಿಂದ ಸರ್ಕಾರದಿಂದ 2000 ಹಣವನ್ನು ಖಾತೆಗೆ ವರ್ಗಾಯಿಸಲಾಗಿದೆ.

2,152 ಕೋಟಿ ರೂ ಹಣವನ್ನು ಗೃಹ ಜ್ಯೋತಿ ಯೋಜನೆಗೆ ಪೂರೈಸಲಾಗಿದೆ.

1.56 ಕೋಟಿ ಕುಟುಂಬಗಳು ಈ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತವಾದ 200 ಯೂನಿಟ್ ವಿದ್ಯುತ್ತನ್ನು ಪಡೆದುಕೊಳ್ಳುತ್ತಿದ್ದಾರೆ. ಅಂದರೆ 200 ಯೂನಿಟ್ ಗಿಂತ ಕಡಿಮೆ ಒಳಗೊಂಡ ಕರೆಂಟ್ ಬಿಲ್ಗಳನ್ನು ಸರ್ಕಾರವೇ ಪಾವತಿಸುತ್ತದೆ. 2,152 ಕೋಟಿ ರೂ ಹಣವನ್ನು ಮೂರು ತಿಂಗಳಿಂದ ಖರ್ಚು ಮಾಡಿದೆ ಸರ್ಕಾರ. ಹಲವಾರು ವರ್ಷಗಳಿಂದ ವಿದ್ಯುತ್ ಬಿಲ್ ಹೊರೆಯಿಂದ ಹಲವಾರು ಜನರು ಕಂಗೆಟ್ಟಿ ಹೋಗಿದ್ದರು ಆದರೆ ಕಾಂಗ್ರೆಸ್ ಬರವಸೆಯ ಯೋಜನೆಯಲ್ಲಿ ಉಚಿತವಾದ 200 ಯೂನಿಟ್ ವಿದ್ಯುತ್ತನ್ನು ನೀಡಲು ಮುಂದಾಗಿದೆ ಗೃಹಜೋತಿ ಯೋಜನೆ. ಸಿದ್ದರಾಮಯ್ಯನವರ ಹೇಳಿಕೆ ಏನೆಂದರೆ ಗೃಹಜ್ಯೋತಿಯು ಎಲ್ಲಾರ ಮನೆ ಮನೆಯ ಬೆಳಕಿನ ದೀಪವಾಗಿದೆ ಎಂದು ಒಳ್ಳೆಯ ನುಡಿಯನ್ನು ಹೇಳಿದ್ದಾರೆ.

2,444 ಕೋಟಿ ಅನ್ನಭಾಗ್ಯ ಯೋಜನೆಗೆ ಜಮೆಯಾಗಿದೆ. 

3.92 ಕೋಟಿ ಫಲಾನುಭವಿಗಳಿಗೆ ಈವರೆಗೂ 2,444 ಕೋಟಿ ಹಣವನ್ನು ಖಾತೆಗೆ ಜಮಾ ಮಾಡಲಾಗಿದೆ ಈ ಅನ್ನಭಾಗ್ಯ ಯೋಜನೆಯಡಿ ಪ್ರತಿ ಅಭ್ಯರ್ಥಿಯು 10 ಕೆಜಿ ಅಕ್ಕಿಯನ್ನು ನೀಡುತ್ತೇವೆ ಎಂಬ ಭರವಸೆಯನ್ನು ಕಾಂಗ್ರೆಸ್ ಸರ್ಕಾರ ನೀಡಿದ್ದು ಆದರೆ ಅಕ್ಕಿಯ ಅಲಭ್ಯತೆಯ ಕಾರಣದಿಂದ ಐದು ಕೆಜಿ ಅಕ್ಕಿಯನ್ನು ಮಾತ್ರ ವಿತರಿಸಲಾಗುತ್ತಿದೆ, ಹಾಗೂ ಉಳಿದ ಐದು ಕೆಜಿ ಅಕ್ಕಿಗೆ ಹಣವನ್ನು ಎಲ್ಲ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗುತ್ತಿದೆ. ಬಡತನದ ರೇಖೆಯಲ್ಲಿರುವ ಕುಟುಂಬಗಳು ಪಡಿತರ ಚೀಟಿಯನ್ನು ಮಾಡಿಸಿ ಇದರ ಫಲವನ್ನು ಪಡೆಯಬಹುದು. ರಾಜ್ಯ ಸರ್ಕಾರವು ಈವರೆಗೂ ಎಲ್ಲಾ ಯೋಜನೆಗಳಿಂದ ಸಾಮಾನ್ಯ ಜನರ ಹಸಿವು ನೀಗಿಸಿದೆ ಸರ್ಕಾರ. ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಮೂರು ವಿವಿಧ ಪಡಿತರ ಚೀಟಿ ದಾರರಿಗೆ ಈ ಒಂದು ಯೋಜನೆ ಸಲ್ಲುತ್ತಿದೆ. ಆದರೆ ಕೆಲವು ಪಡಿತರ ಚೀಟಿದಾರರಿಗೆ ಈ ಒಂದು ಯೋಜನೆ ಸಲ್ಲುವುದಿಲ್ಲ. ಅಂಥವರಿಗೆ ಮಾತ್ರ ಇನ್ನೂ ಕೂಡ ಯಾವುದೇ ರೀತಿಯ ಹಣ ವರ್ಗಾವಣೆ ಆಗಿಲ್ಲ. ಎಲ್ಲಾ ಯೋಜನೆಗಳ ಖರ್ಚಿನ ವೆಚ್ಚವು ಹೀಗಿತ್ತು.

ಇದನ್ನು ಓದಿ :- Phonepe, Google pay & Paytm, ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ ಗಳಿಂದ ಗ್ರಾಹಕರಿಗೆ ಸಿಗಲಿದೆ 10,000 ಹಣ, ಬಡ್ಡಿ ಇಲ್ಲದೆ ಸಾಲ ! 10 ನಿಮಿಷದಲ್ಲಿ ಪಡೆದುಕೊಳ್ಳಬಹುದು.

ಲೇಖನವನ್ನು ಇಲ್ಲಿವರೆಗೂ ಓದಿದ್ದಕ್ಕೆ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment