ವಿದ್ಯಾರ್ಥಿಗಳೇ ಗಮನಿಸಿ : ಈ ಒಂದು ಸ್ಕಾಲರ್ಶಿಪ್ ನಿಂದ 10,000 ಹಣವನ್ನು ಪಡೆಯಬಹುದು, ಈ ಕೂಡಲೇ ಅರ್ಜಿ ಸಲ್ಲಿಸಿ.

ಎಲ್ಲರಿಗೂ ನಮಸ್ಕಾರ…

ಈಗಾಗಲೇ ವಿದ್ಯಾರ್ಥಿಗಳಿಗೆ ಹಲವಾರು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ ಮಾಡಲಾಗಿದೆ. ಆಸಕ್ತಿ ಉಳ್ಳ ಎಲ್ಲಾ ವಿದ್ಯಾರ್ಥಿಗಳು ಕೂಡ ಎಲ್ಲಾ ಫೌಂಡೇಶನ್ಗಳ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ. 30,000 ಹಣದವರೆಗೂ ಕೂಡ ಈ ಎಲ್ಲಾ ವಿದ್ಯಾರ್ಥಿ ವೇತನದಲ್ಲಿ ಹಣವನ್ನು ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಕೆಲವು ದಿನಗಳ ಹಿಂದೆ ಎಸ್ಬಿಐ ಫೌಂಡೇಶನ್ ವತಿಯಿಂದ ಎಸ್‌ಬಿಐಎಫ್ ಆಶಾ ವಿದ್ಯಾರ್ಥಿವೇತನವನ್ನು ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ನೀಡಲು ಮುಂದಾಗಿದೆ.

WhatsApp Group Join Now
Telegram Group Join Now

ಈ ಒಂದು ಎಸ್ ಬಿಐಎಫ್ ಆಶಾ ವಿದ್ಯಾರ್ಥಿವೇತನದ ಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ಎಷ್ಟು ಹಣವನ್ನು ವೇತನವಾಗಿ ನೀಡಲಿದೆ ಹಾಗೂ ಯಾವ ಅರ್ಹ ವಿದ್ಯಾರ್ಥಿಗಳಿಗೆ ಹಣ ದೊರೆಯಲಿದೆ. ಮತ್ತು ವಿದ್ಯಾರ್ಥಿಯು ಯಾವ ತರಗತಿಯನ್ನು ಓದಿ, ವಿದ್ಯಾಭ್ಯಾಸವನ್ನು ಮುಗಿಸಿರಬೇಕು, ಹಾಗೂ ಅರ್ಜಿಯನ್ನು ಯಾವ ರೀತಿ ಸಲ್ಲಿಸಿ ವೇತನವನ್ನು ಪಡೆದುಕೊಳ್ಳಬೇಕು, ಎಂಬುದನ್ನು ಈ ಕೆಳಕಂಡ ಲೇಖನದಲ್ಲಿ ಮಾಹಿತಿ ನೀಡಲಾಗಿದೆ, ಲೇಖನವನ್ನು ಕೊನೆವರೆಗೂ ಓದಿ.

ಎಸ್ ಬಿಐಎಫ್ ಆಶಾ ವಿದ್ಯಾರ್ಥಿವೇತನ !

ಹೌದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ವತಿಯಿಂದ ಈ ಒಂದು ಎಸ್ಬಿ ಐಎಫ್ ಆಶಾ ವಿದ್ಯಾರ್ಥಿವೇತನದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಿ ಹಣವನ್ನು ಪಡೆಯುವ ಅವಕಾಶ ನೀಡಿದೆ. ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಹಲವಾರು ತೊಂದರೆಗಳನ್ನು ಎದುರಿಸುತ್ತಿರುತ್ತಾರೆ. ಅದರಲ್ಲೂ ಹಣದ ಸಮಸ್ಯೆ ಕೂಡ ಉಂಟಾಗುತ್ತದೆ ಇಂತಹ ಎಲ್ಲ ಹಲವಾರು ಕಾರಣಗಳನ್ನು ಗಮನಿಸಿದ ಎಸ್ ಬಿಐ ಬ್ಯಾಂಕ್, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಓದಲು ಸಹಾಯ ಮಾಡಲಿದೆ.

ಕೆಲವು ಕುಟುಂಬಗಳ ಮಕ್ಕಳು ವಿದ್ಯಾಭ್ಯಾಸ ಮಾಡಲು ಹಣದ ಸಮಸ್ಯೆ ಇದ್ದರೂ ಕೂಡ ಪ್ರತಿಭಾವಂತ ವಿದ್ಯಾರ್ಥಿಗಳಾಗಿರುತ್ತಾರೆ ಶಾಲೆಗಳಲ್ಲಿ ಹಾಗೂ ಓದಿನಲ್ಲಿ ಉತ್ತೀರ್ಣವಾದ ಅಂಕವನ್ನು ಗಳಿಸಿರುತ್ತಾರೆ. ಇನ್ನು ಮುಂದಿನ ಶಿಕ್ಷಣವನ್ನು ಪಡೆಯಲು ಆಗದೆ ವಿದ್ಯಾಭ್ಯಾಸವನ್ನು ತೊರೆದಿರುತ್ತಾರೆ ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣಕ್ಕಾಗಿ ಎಸ್ ಬಿ ಐ ಕಡೆಯಿಂದ ವಿದ್ಯಾರ್ಥಿವೇತನ ಸಿಗಲಿದೆ. ವಿದ್ಯಾರ್ಥಿಗಳೇ ನಿಮಗೂ ಕೂಡ ವಿದ್ಯಾರ್ಥಿ ವೇತನ ಸಿಗಬೇಕಾ, ಹಾಗಾದ್ರೆ ಈ ಕೆಳಕಂಡ ಲೇಖನದ ಮಾಹಿತಿಯನ್ನು ಓದಿ, ಅರ್ಜಿ ಯಾವ ರೀತಿ ಸಲ್ಲಿಸಬೇಕೆಂದು ತಿಳಿದುಕೊಳ್ಳಿ.

ಇದನ್ನು ಓದಿ :- Phonepe, Google pay & Paytm, ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ ಗಳಿಂದ ಗ್ರಾಹಕರಿಗೆ ಸಿಗಲಿದೆ 10,000 ಹಣ, ಬಡ್ಡಿ ಇಲ್ಲದೆ ಸಾಲ ! 10 ನಿಮಿಷದಲ್ಲಿ ಪಡೆದುಕೊಳ್ಳಬಹುದು.

ಇಂಥಹ ವಿದ್ಯಾಹರ್ತೆಯನ್ನು ಮುಗಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ !

ಎಸ್ಬಿಐಎಫ್ ವಿದ್ಯಾರ್ಥಿ ವೇತನವನ್ನು ಪಡೆಯಲು ಅರ್ಹ ವಿದ್ಯಾರ್ಥಿಗಳು 6 ರಿಂದ 12ನೇ ತರಗತಿಯನ್ನು ಓದುತ್ತಿರಬೇಕು, ನೀವು ಕೂಡ ಈ ತರಗತಿಗಳಲ್ಲಿ ಓದುತ್ತಿದ್ದರೆ ಅರ್ಜಿಯನ್ನು ಸಲ್ಲಿಸಬಹುದು ಹಾಗೂ ಭಾರತದಲ್ಲಿ ಎಲ್ಲೆಡೆ ಇದ್ದರೂ ಕೂಡ ಅರ್ಜಿ ಪೂರೈಸಬಹುದು ಮತ್ತು ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಕುಟುಂಬದ ಆದಾಯ 3 ಲಕ್ಷಕ್ಕಿಂತ ಕಡಿಮೆ ಇರಬೇಕು. ವಿದ್ಯಾರ್ಥಿಗಳು ಇಂದಿನ ಶೈಕ್ಷಣಿಕದಲ್ಲಿ 75% ಅಂಕವನ್ನು ಗಳಿಸಿರಬೇಕು, 75% ಗಿಂತ ಇನ್ನೂ ಹೆಚ್ಚಿನ ಅಂಕವನ್ನು ಗಳಿಸಿದ ವಿದ್ಯಾರ್ಥಿಗಳಿಗೂ ಕೂಡ ಎಸ್ಬಿಐಎಫ್ ವಿದ್ಯಾರ್ಥಿ ವೇತನ ಸಲ್ಲುತ್ತದೆ.

ವಿದ್ಯಾರ್ಥಿ ವೇತನದ ಮೊತ್ತ ಹೀಗಿದೆ :- ವರ್ಷಕ್ಕೆ 10000 ಹಣವನ್ನು ಖಾತೆಗೆ ವರ್ಗಾಯಿಸುತ್ತದೆ ಎಸ್‌ಬಿಐಎಫ್ ವಿದ್ಯಾರ್ಥಿ ವೇತನ.

ಕೆಳಕಂಡ ದಾಖಲಾತಿಗಳನ್ನು ಕೂಡ ವಿದ್ಯಾರ್ಥಿ ಹೊಂದಿರಬೇಕು.

  • ವಿದ್ಯಾರ್ಥಿಯ ಗುರುತಿಗಾಗಿ ಆಧಾರ್ ಕಾರ್ಡ್,
  • ಬ್ಯಾಂಕ್ ಪುಸ್ತಕ,
  • ಪಾಸ್ಪೋರ್ಟ್ ಸೈಜ್ ಭಾವಚಿತ್ರ,
  • ಹಿಂದಿನ ಶೈಕ್ಷಣಿಕ ವರ್ಷದ ಅಂಕಪಟ್ಟಿ,
  • ಈಗಿನ ಪ್ರವೇಶ ಪತ್ರ,
  • ಆದಾಯ ಪ್ರಮಾಣ ಪತ್ರ,
  • ಇನ್ನು ಮುಂತಾದ ದಾಖಲಾತಿಗಳನ್ನು ಕೂಡ ಅರ್ಜಿಗೆ ಸಲ್ಲಿಸಬೇಕಾಗುತ್ತದೆ.

ನಿಮ್ಮ ಅಕ್ಕ ಪಕ್ಕದ ಸ್ನೇಹಿತರಿಗೂ ಕೂಡ ಈ ಒಂದು ವಿದ್ಯಾರ್ಥಿವೇತನದ ಬಗ್ಗೆ ಮಾಹಿತಿ ನೀಡಿ, 10,000 ಹಣ ವಿದ್ಯಾರ್ಥಿ ವೇತನವಾಗಿ ಸಿಗಲಿದೆ ಎಂದು ಕೂಡ ಹೇಳಿ, ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಒಂದು ಲೇಖನವನ್ನು ಶೇರ್ ಮಾಡಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ..

Leave a Comment