ಪದವೀದಾರರು ಈ ದಾಖಲಾತಿಗಳನ್ನು ಸಿದ್ಧಪಡಿಸಿಕೊಂಡರೆ, ಯುವನಿಧಿ ಯೋಜನೆ ಜಾರಿಯಾದ ವೇಳೆ ನೀವೇ ಮೊದಲ ಅಭ್ಯರ್ಥಿಯಾಗಿ ಅರ್ಜಿ ಸಲ್ಲಿಸುವಿರಿ.

ಎಲ್ಲರಿಗೂ ನಮಸ್ಕಾರ..

ರಾಜ್ಯ ಸರ್ಕಾರವು ಈಗಾಗಲೇ ಪಂಚ ಗ್ಯಾರಂಟಿಯಲ್ಲಿ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಲಕ್ಷಾಂತರ ಜನಗಳಿಗೆ ಉಪಯೋಗ ಮಾಡಿಕೊಟ್ಟಿದೆ, ಕೊನೆಯ ಯೋಜನೆ ಎಂದರೆ ಅದುವೇ ಯುವನಿಧಿ ಯೋಜನೆ ಈ ಯೋಜನೆಯಲ್ಲಿ ಪದವೀಧರರಿಗೆ ಹಾಗೂ ಡಿಪ್ಲೋಮಾ ವಿದ್ಯಾರ್ಥಿಗಳಿಗೆ 1500 ಹಾಗೂ 3000 ಹಣ ಖಾತೆಗೆ ವರ್ಗಾವಣೆ ಆಗುತ್ತದೆ, ಈ ಯುವನಿಧಿ ಯೋಜನೆಯನ್ನು ಜಾರಿಗೊಳಿಸಲು ಸಕಲ ಸಿದ್ಧತೆಯನ್ನು ನಡೆಸುತ್ತಿದೆ ಸರ್ಕಾರ.

WhatsApp Group Join Now
Telegram Group Join Now

2024 ನೇ, ಹೊಸ ವರ್ಷದ ಸಂದರ್ಭದಲ್ಲಿ ಮೊದಲ ವಾರವೇ ಅರ್ಜಿಯನ್ನು ಆಹ್ವಾನಿಸಲಿದೆ, ಹಾಗೂ ಈ ಯೋಜನೆ ಜಾರಿಗೊಳ್ಳಲಿದೆ ಎಂಬ ಮಾಹಿತಿ ಬಂದಿದೆ. ನೀವು ಕೂಡ ಪದವೀಧರರಾಗಿದ್ದರೆ ಈ ಕೆಳಕಂಡ ದಾಖಲಾತಿಗಳನ್ನು ರೆಡಿ ಮಾಡಿ ಇಟ್ಟುಕೊಳ್ಳಿ ಏಕೆಂದರೆ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಶುರುವಾದ ನಂತರ ನೀವೇ ಮೊದಲು ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಹಾಗಾಗಿ ಕೆಳಕಂಡ ದಾಖಲಾತಿಗಳನ್ನು ಪರಿಶೀಲಿಸಿಕೊಳ್ಳಿ ನಿಮ್ಮ ಹತ್ತಿರ ಇದೆಯಾ ಎಂದು, ಯುವನಿಧಿ ಯೋಜನೆಯ ಹೆಚ್ಚಿನ ಮಾಹಿತಿಗಾಗಿ ಲೇಖನವನ್ನು ಓದಿ.

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಕಾರಣದಿಂದ ಈ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಗೃಹಲಕ್ಷ್ಮಿ, ಗೃಹ ಜ್ಯೋತಿ, ಶಕ್ತಿ ಯೋಜನೆ, ಹಾಗೂ ಅನ್ನಭಾಗ್ಯ ಯೋಜನೆಯು, ಲಕ್ಷಾಂತರ ಜನಗಳಿಗೆ ನೆರವು ನೀಡಿವೆ. ಇನ್ನೂ ಕೂಡ ಯುವನಿಧಿ ಯೋಜನೆಗೆ ಮುಹೂರ್ತ ಫಿಕ್ಸ್ ಆಗಿಲ್ಲ ಎಂದೇ ಹೇಳಬಹುದು. ಏಕೆಂದರೆ ನಿಗದಿತವಾದ ದಿನಾಂಕವನ್ನು ಪ್ರಸ್ತುತಪಡಿಸುತ್ತಿಲ್ಲ ರಾಜ್ಯ ಸರ್ಕಾರ, ಆದರೆ ತಿಂಗಳನ್ನು ಮಾತ್ರ ಪ್ರಸ್ತುತಪಡಿಸುತ್ತಿದೆ. ಡಿಸೆಂಬರ್ ಮುಗಿಯುವಷ್ಟರಲ್ಲಿ ಅಥವಾ ಜನವರಿ ತಿಂಗಳು ಶುರುವಾದ ಬಳಿಕ ಈ ಯೋಜನೆಗೆ ಜೀವ ತುಂಬಲಿದೆ ಸರ್ಕಾರ.

ಯುವನಿಧಿ ಯೋಜನೆಯ ಫಲಾನುಭವಿಗಳು ವಿದ್ಯಾರ್ಥಿಗಳು ಮಾತ್ರ. 

ಯಾವ ವರ್ಷದಲ್ಲೂ ಕೂಡ ಇಂಥಹ ಪಂಚ ಗ್ಯಾರಂಟಿ ಯೋಜನೆಗಳು ಜಾರಿಯಾಗಿಲ್ಲ, ಆದರೆ 2023-24ನೇ ಸಾಲಿನಲ್ಲಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯನವರು ಈ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸಲಿದ್ದಾರೆ. ನೀವು ಕೂಡ ಈ ಯೋಜನೆಯ ಫಲಾನುಭವಿಗಳಾಗಬೇಕೆಂದರೆ ಸರ್ಕಾರ ನಿಗದಿಪಡಿಸುವ ದಿನಾಂಕದಂದು ಅರ್ಜಿಯನ್ನು ಸಲ್ಲಿಸಿ, ಅರ್ಜಿಯನ್ನು ಸಲ್ಲಿಸಲು ಈಗಲೇ ತಯಾರು ಮಾಡಿರಿ ಅಂದರೆ ನಿಮ್ಮ ಹತ್ತಿರ ಇರುವ ಕೆಲವು ದಾಖಲಾತಿಗಳನ್ನು ನೀವು ಈ ಯೋಜನೆಗೆ ಸಲ್ಲಿಸಬೇಕಾಗುತ್ತದೆ, ಅದಕ್ಕಾಗಿ ಈಗಿನಿಂದಲೇ ತಯಾರು ಮಾಡಿರಿ, ಇನ್ನೂ ಒಂದು ತಿಂಗಳ ಬಳಿಕ ಈ ಯೋಜನೆ ಜಾರಿಯಾಗಲಿದೆ.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಒಂದು ತಿಂಗಳಿನವರೆಗೂ ಕೂಡ ಕಾಲವಕಾಶ ನೀಡಿದೆ ಸರ್ಕಾರ, ಈ ಕೆಳಕಂಡ ದಾಖಲಾತಿಗಳಲ್ಲಿ ಒಂದು ಕೂಡ ಕೈತಪ್ಪಿ ಹೋಗಬಾರದು, ಎಲ್ಲಾ ದಾಖಲಾತಿಗಳನ್ನು ಕೂಡ ವಿದ್ಯಾರ್ಥಿಯು ಹೊಂದಿದ್ದರೆ ಮಾತ್ರ, ಈ ಯೋಜನೆ ಯಿಂದ ನಿಮಗೆ ಖಾತೆಗೆ ಹಣ ವರ್ಗಾವಣೆ ಆಗುತ್ತದೆ. ಇಂದಿನಿಂದಲೇ ಎಲ್ಲಾ ದಾಖಲಾತಿಗಳು ನಿಮ್ಮ ಹತ್ತಿರ ಇದೆಯೋ ಇಲ್ಲವೋ ಎಂದು ಒಮ್ಮೆಯಾದರೂ ಪರಿಶೀಲಿಸಿಕೊಳ್ಳಿ. ಪರಿಶೀಲನೆ ಮಾಡಿಲ್ಲವೆಂದರೆ ಮುಂದಿನ ತಿಂಗಳಲ್ಲಿ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಿ ಎಂದಾಗ ನೀವು ಆ ಒಂದು ದಾಖಲಾತಿಯನ್ನು ಮಾಡಿಸಲು ಒಂದು ತಿಂಗಳು ಸಮಯವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಚ್ಚರ.

ಯುವನಿಧಿ ನಿರುದ್ಯೋಗ ಭತ್ಯೆಯ ಫಲಾನುಭವಿಗಳಾಗಬೇಕೆಂದರೆ ಈ ದಾಖಲಾತಿಯನ್ನು ಹೊಂದಿರಬೇಕು.

  • ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಆಧಾರ್ ಕಾರ್ಡ್
  • ಕುಟುಂಬದ ಆದಾಯ ಪ್ರಮಾಣ ಪತ್ರ
  • ಅಂಕಪಟ್ಟಿ ಹಾಗೂ ಶಿಕ್ಷಣ ಸಂಸ್ಥೆಯಿಂದ ಪಡೆದ ಪ್ರಮಾಣ ಪತ್ರಗಳು
  • ಬ್ಯಾಂಕ್ ಖಾತೆ
  • ದೂರವಾಣಿ ಸಂಖ್ಯೆ
  • ಇಮೇಲ್ ಐಡಿ
  • ಅಭ್ಯರ್ಥಿಯ ಭಾವಚಿತ್ರ
  • ಶಿಕ್ಷಣ ಪಡೆದ ಕೊನೆಯ ಅಂಕಪಟ್ಟಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment