ಪಿಎಂ ಕಿಸಾನ್ ಯೋಜನೆಯ 15 ನೇ ಕಂತಿನ ಹಣ ನಿಮ್ಮ ಖಾತೆಗೆ ವರ್ಗಾವಣೆ ಆಗಿಲ್ವಾ ? ಹಾಗಾದ್ರೆ ಈ ಒಂದು ಕೆಲಸ ಮಾಡಿ ತಕ್ಷಣವೇ ಹಣ ವರ್ಗಾವಣೆ ಆಗುತ್ತದೆ.

ಎಲ್ಲರಿಗೂ ನಮಸ್ಕಾರ…

ಈಗಾಗಲೇ 8 ಕೋಟಿ ರೈತರು ಪಿಎಂ ಕಿಸನ್ ಯೋಜನೆಯ 15 ನೇ ಕಂತಿನ ಹಣದ ಫಲಾನುಭವಿಗಳಾಗಿದ್ದಾರೆ. 15 ನೇ ಕಂತಿನ ಹಣವನ್ನು ಪ್ರಧಾನ ಮಂತ್ರಿಗಳೇ ಸ್ವತಃ ಡಿಬಿಟಿ ಮಾಡುವ ಮೂಲಕ ನವೆಂಬರ್ 15 ರಂದು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಖಾತೆಗೆ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಕೆಲ ರೈತರ ಖಾತೆಗೆ ಇನ್ನೂ ಕೂಡ ಯಾವುದೇ ರೀತಿಯ ಪಿಎಂ ಕಿಸನ್ ಯೋಜನೆಯ ಹಣ ವರ್ಗಾವಣೆ ಆಗಿಲ್ಲ, ಏಕೆ ಆಗಿಲ್ಲ ಹಾಗೂ ಈ ಕೆಳಕಂಡ ಕೆಲಸಗಳನ್ನು ಮಾಡಿದರೆ ಹಣವು ನಿಮ್ಮ ಖಾತೆಗೆ ಬಂದು ತಲುಪುತ್ತದೆ, ಎಂಬುದನ್ನು ಲೇಖನದಲ್ಲಿ ತಿಳಿಸಿಕೊಡಲಾಗಿದೆ, ಕೊನೆವರೆಗೂ ಲೇಖನವನ್ನು ಓದಿ.

WhatsApp Group Join Now
Telegram Group Join Now

ಈ ತಪ್ಪು ಮಾಡಿದ್ದರಿಂದಲೇ ನಿಮ್ಮ ಪಿಎಂ ಕಿಸಾನ್ ಯೋಜನೆಯ ಹಣ ಸ್ಥಗಿತಗೊಂಡಿದೆ.

  • 15ನೇ ಕಂತಿನ ಹಣ ವರ್ಗಾವಣೆಯಾಗಲು ನೀವು ನಿಮ್ಮ ಖಾತೆಗೆ ಈಕೆವೈಸಿಯನ್ನು ಪರಿಪೂರ್ಣವಾಗಿ ಮಾಡಿಸಿರಬೇಕು, ಈ ಕಾರಣಕ್ಕು ಕೂಡ ನಿಮ್ಮ ಪಿಎಂ ಕಿಸಾನ್ ಯೋಜನೆಯ 15ನೇ ಕಂತಿನ ಹಣ ಸ್ಥಗಿತಗೊಂಡಿದೆ. ನೀವು ಯಾವಾಗ ನಿಮ್ಮ ಖಾತೆಗೆ ಈಕೆವೈಸಿಯನ್ನು ಮಾಡಿಸುತ್ತೀರೋ ಆಗ ನಿಮಗೆ ತಲುಪಬೇಕಾದ 15ನೇ ಕಂತಿನ ಹಣ ವರ್ಗಾವಣೆ ಆಗುತ್ತದೆ.
  • ರೈತರ ಬ್ಯಾಂಕ್ ಖಾತೆಯು ತಪ್ಪು ಮಾಹಿತಿಗಳಿಂದ ಒಳಗೊಂಡಿದ್ದರೆ ಹಾಗೂ ಅರ್ಜಿ ಸಲ್ಲಿಸುವಾಗ ನಕಲಿ ದಾಖಲಾತಿಗಳನ್ನು ಅಪ್ಲೋಡ್ ಮಾಡಿದ್ದರೆ ಅಂತಹ ರೈತರ ಸಮುದಾಯಕ್ಕೆ ಈಗೊಂದು ಹಣ ತಲುಪಿಲ್ಲ ಕೂಡಲೇ ನೀವು ಈ ಸಮಸ್ಯೆಯನ್ನು ಪರಿಶೀಲಿಸಿ ಬಗೆಹರಿಸಿಕೊಳ್ಳಿ ನಂತರ ನಿಮಗೆ 15ನೇ ಕಂತಿನ ಹಣ ವರ್ಗಾವಣೆ ಆಗುತ್ತದೆ.
  • ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಕೋಟ್ಯಾಂತರ ಜನರು ಅರ್ಜಿಯನ್ನು ಸಲ್ಲಿಕೆ ಪೂರೈಸಿದ್ದರು. ಆದರೆ ಕೆಲವು ರೈತರ ದಾಖಲಾತಿಗಳು ಈ ಯೋಜನೆಗೆ ಸರಿಹೊಂದದ ಕಾರಣದಿಂದಲೂ ಕೂಡ ವರ್ಗಾವಣೆ ಹಣ ಸ್ಥಗಿತಗೊಂಡಿದೆ. ನೀವೇನಾದರೂ ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಕೂಡಲೇ ಎಲ್ಲವನ್ನು ಒಂದು ಬಾರಿ ಪರಿಶೀಲಿಸಿ, ನಂತರ ಸಬ್ಮಿಟ್ ಮಾಡಿ ಈ ಯೋಜನೆ ಕಡೆಯಿಂದ ನಿಮಗೆ ಹಣ ತಲುಪಿ, ಫಲಾನುಭವಿಗಳಾಗುತ್ತಿರಿ ನೀವು ಕೂಡ.
  • ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಹಣವನ್ನು ರೈತರಿಗೆ ವರ್ಗಾವಣೆ ಮಾಡಲು ಬ್ಯಾಂಕ್ ಖಾತೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ಬ್ಯಾಂಕ್ ಖಾತೆಯೂ ಕೂಡ ಆಧಾರ್ ಕಾರ್ಡ್ ಗೆ ಲಿಂಕ್ ಆಗದಿದ್ದರೂ ಕೂಡ ಹಣ ವರ್ಗಾವಣೆ ಆಗಲ್ಲ. ಈ ಕಾರಣವನ್ನು ಗಮನದಲ್ಲಿಟ್ಟುಕೊಳ್ಳಿ, ಬ್ಯಾಂಕ್ ಗೆ ಭೇಟಿ ನೀಡಿ ನಂತರ ಬ್ಯಾಂಕ್ ಸಿಬ್ಬಂದಿ ವರ್ಗದವರಿಗೆ, ಆಧಾರ್ ಕಾರ್ಡ್ ನೀಡಿ ಲಿಂಕ್ ಮಾಡಿಸಿ, ನಂತರ ನಿಮಗೆ 15ನೇ ಕಂತಿನ ಹಣ ವರ್ಗಾವಣೆ ಆಗುತ್ತದೆ.

ಮೇಲ್ಕಂಡ ಎಲ್ಲಾ ಸೂಚನೆಗಳನ್ನು ಗಮನಿಸಿ, ನೀವು ಕೂಡ ಈ ತಪ್ಪುಗಳನ್ನು ಮಾಡಿದ್ದರೆ, ಈ ಕೂಡಲೇ ಎಲ್ಲಾ ತಪ್ಪುಗಳನ್ನು ಬಗೆಹರಿಸಿಕೊಳ್ಳಿ, ನಂತರ ನಿಮಗೆ 15ನೇ ಕಂತಿನ ಹಣ ನಿಮ್ಮ ಖಾತೆಗೆ ವರ್ಗಾವಣೆ ಆಗುತ್ತದೆ. ಈಗಾಗಲೇ ಈ ತಿಂಗಳಿನಲ್ಲಿ ಎಂಟು ಕೋಟಿ ಜನಗಳಿಗೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ, 15ನೇ ಕಂತಿನ ಹಣವು ಬಿಡುಗಡೆಯಾಗಿದೆ.

ರಾಜ್ಯದ ಎಲ್ಲಾ ರೈತರು ಕೂಡ ಈ ಯೋಜನೆ ಅಡಿಯಲ್ಲಿ ಹಣವನ್ನು ಪಡೆದುಕೊಂಡಿದ್ದಾರೆ, ನೀವು ಕೂಡ ರೈತರಾಗಿದ್ದರೆ ನಿಮಗೂ ಕೂಡ ಹಣ ತಲುಪಲಿ, 15ನೇ ಕಂತಿನ ಹಣ ದೊರಕಿ ಫಲಾನುಭವಿಗಳಾಗಿ. ಎಲ್ಲೇ ನೋಡಿದರೂ ಕೇಂದ್ರ ಸರ್ಕಾರದ್ದೇ ಸದ್ದು ಏಕೆಂದರೆ ಹಲವಾರು ಯೋಜನೆಗಳನ್ನು ಸಾಮಾನ್ಯ ಜನರಿಗೆ ತಲುಪಿಸುವಂಥಹ ಕೆಲಸ ಮಾಡುತ್ತಿದೆ. ಹೀಗಾಗಿ ಪಿಎಂ ಕಿಸಾನ್ ಯೋಜನೆಯ 15ನೇ ಕಂತಿನ ಹಣವನ್ನು ಕೂಡ ನೀವು ಪಡೆದುಕೊಳ್ಳಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ..

Leave a Comment