ಅನ್ನದಾತರಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ ! ನೀವೇನಾದ್ರೂ ಈ ಯೋಜನೆಯ ಫಲಾನುಭವಿಗಳಾದರೆ, ನಿಮಗೆ ಸಿಗಲಿದೆ 3 ಲಕ್ಷ ರೂ ಹಣ ಸಾಲ.

ಎಲ್ಲರಿಗೂ ನಮಸ್ಕಾರ..

ರಾಜ್ಯದ ಎಲ್ಲಾ ರೈತರು ಕೂಡ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಾಗಿರುತ್ತಾರೆ. ಈ ಫಲಾನುಭವಿಗಳಿಗೆ ಸಿಗಲಿದೆ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ 3 ಲಕ್ಷ ರೂ ಹಣ ಸಾಲದ ರೂಪದಲ್ಲಿ ಸಹಾಯಧನವಾಗಿ ಸಿಗಲಿದೆ. ಹಾಗೂ ಪಿಎಂ ಕಿಸಾನ್ ಯೋಜನೆಯಲ್ಲಿ ಹಲವಾರು ಮಾಹಿತಿಗಳನ್ನು ಬಿಚ್ಚಿಟ್ಟಿದೆ ಸರ್ಕಾರ, ರೈತರಿಗೆ ಈ ಯೋಜನೆ ಅಡಿಯಲ್ಲಿ ಯಾವ ಮಾಹಿತಿಯನ್ನು ತಿಳಿಸಲು ಮುಂದಾಗಿದೆ ಸರ್ಕಾರ ಎಂಬುದನ್ನು ಈ ಕೆಳಕಂಡ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ ಲೇಖನವನ್ನು ಕೊನೆಯವರೆಗೂ ಓದಿ.

WhatsApp Group Join Now
Telegram Group Join Now

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಎಲ್ಲಾ ಕೃಷಿಕರ ರೈತರ ಮನೆಯ ಬಾಗಿಲಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ (KCC) ತಲುಪುವಂಥಹ ಅಭಿಯಾನ ಶುರುವಾಗಲಿದೆ, ಎಂಬ ಮಾಹಿತಿಯನ್ನು ಅನ್ನದಾತರಿಗೆ ನೀಡಿದೆ ಸರ್ಕಾರ. ಕಿಸಾನ್ ಕ್ರೆಡಿಟ್ ಕಾರ್ಡ್ ಕಿಸಾನ್ ಕ್ರೆಡಿಟ್ ಕಾರ್ಡ್ ಜಾಲತಾಣದ ಉದ್ದೇಶವೇನೆಂದರೆ ರೈತರಿಗೆ ಸಹಾಯ ಮಾಡಬೇಕು ಹಾಗೂ 3 ಲಕ್ಷವನ್ನು ಸಹಾಯಧನವಾಗಿ ನೀಡಬೇಕು ಎಂಬುದು, ರಾಜ್ಯದ ಎಲ್ಲಾ ರೈತರಿಗೂ ಕೂಡ ಸಾಲದ ಸೌಲಭ್ಯ ನೀಡಲು ಮುಂದಾಗಿದೆ ಪಿಎಂ ಕಿಸನ್ ಯೋಜನೆ. ನೀವು ಕೂಡ ಸಾಲವನ್ನು ಪಡೆಯಬೇಕು ಎಂದುಕೊಂಡಿದ್ದೀರಾ ಹಾಗಾದ್ರೆ ಈ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ 3 ಲಕ್ಷ ಸಾಲವನ್ನು ಪಡೆಯಿರಿ.

ಈಗಾಗಲೇ ರಾಜ್ಯದ ಸ್ವಲ್ಪಮಟ್ಟಿನ ರೈತರು ಈ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಿದ್ದಾರೆ ಕೆಲ ರೈತರು ಮಾತ್ರ ಇನ್ನೂ ಮಾಹಿತಿ ತಿಳಿಯಲಿಲ್ಲದ ಕಾರಣದಿಂದ ಸಾಲವನ್ನು ಪಡೆಯಲು ಅರ್ಜಿ ಸಲ್ಲಿಸಿಲ್ಲ ಹೀಗಾಗಿ ಕೇಂದ್ರ ಸರ್ಕಾರವೇ ರೈತರ ಮನೆ ಬಾಗಿಲಿಗೆ ಭೇಟಿ ನೀಡಿ ಒಮ್ಮೆ ಈ ಯೋಜನೆಯ ಬಗ್ಗೆ ತಿಳಿಸುತ್ತದೆ ಈಗಾಗಲೇ ಕೆಲ ರೈತರ ಮನೆಗೆ ಭೇಟಿ ನೀಡಿ ಯೋಜನೆ ಬಗ್ಗೆ ತಿಳಿಸಿದೆ. “ಘರ್ ಘರ್ ಕೆಸಿಸಿ ಅಭಿಯಾನ್” ಎಂಬ ಘೋಷಣೆಯನ್ನು ಹೇಳಿ ರೈತರ ಮನೆ ಮನೆಗೆ ಭೇಟಿ ನೀಡುತ್ತಿದ್ದೆ ಕೇಂದ್ರ ಸರ್ಕಾರ.

ಸಾಲ ಪಡೆಯುವ ವಿಧಾನ 

ರೈತರು ಸಾಲವನ್ನು ಪಡೆಯಲು ಮೊದಲಿಗೆ ಈ https://fasalrin.gov.in/ ಜಾಲತಾಣಕ್ಕೆ ಭೇಟಿ ನೀಡಿ.

  • ಮೊದಲು ಲಾಗಿನ್ ಎಂಬ ಇಂಗ್ಲಿಷ್ ಪದದ ಮೇಲೆ ಕ್ಲಿಕ್ಕಿಸಿ,
  • ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಲು ಕೇಳುತ್ತದೆ, ಮೊಬೈಲ್ ಸಂಖ್ಯೆ ಹಾಕಿ ಹಾಗೂ ಕ್ಯಾಪ್ಚ ಸಂಖ್ಯೆಗಳನ್ನು ನಮೂದಿಸಿ, ನಂತರ ಲಾಗಿನ್ ಮಾಡಿ.
  • ಅನಂತರ ರೈತರ ವಿವರವನ್ನು, ನಮೂದಿಸಿ. ನಂತರ ಕಿಸಾನ್ ಕ್ರೆಡಿಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.
  • ಅರ್ಜಿಯು ಬ್ಯಾಂಕಿಗೆ ತಲುಪಿ, ಯಾವ ರೈತ ಅರ್ಹರು ಎಂಬುದನ್ನು ತಿಳಿದು ಆ ರೈತನಿಗೆ ಮಾತ್ರ 3 ಲಕ್ಷ ಸಾಲವನ್ನು ನೀಡುತ್ತದೆ, ಕಿಸಾನ್ ಕ್ರೆಡಿಟ್ ಕಾರ್ಡ್.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ರೈತರಿಗೆ ಸಾಲ ನೀಡಲು ಮುಂದಾದ ಕೇಂದ್ರ ಸರ್ಕಾರ !

ಹೌದು ಪಿ ಎಂ ಕಿಸಾನ್ ಯೋಜನೆಯ ಅಡಿಯಲ್ಲಿ ಕೆಸಿಸಿ ಎಂಬ ಹೊಸ ಪೋರ್ಟಲ್ ತೆಗೆದು ರೈತರಿಗಾಗಿ ವರ್ಷಕ್ಕೆ ಮೂರು ಲಕ್ಷ ಹಣವನ್ನು ಸಾಲದ ರೂಪದಲ್ಲಿ ನೀಡುತ್ತದೆ, ಈ ಕಿಸಾನ್ ಕ್ರೆಡಿಟ್ ಕಾರ್ಡ್ ಪೋರ್ಟಲ್ಗೆ ( ವಾಣಿಜ್ಯ ಬ್ಯಾಂಕುಗಳು 97, ಗ್ರಾಮೀಣ ಬ್ಯಾಂಕುಗಳು 58, ಸಹಕಾರಿ ಬ್ಯಾಂಕುಗಳು 512) ಈ ಎಲ್ಲಾ ಬ್ಯಾಂಕುಗಳು ಕೂಡ ಸೇರಿಕೊಂಡಿವೆ. ರೈತರಿಗೆ ಸಾಲ ನೀಡಲು ಮುಂದಾಗಿವೆ. ಸಾಮಾನ್ಯ ರೈತರು ಬ್ಯಾಂಕಿನಲ್ಲಿ 3 ಲಕ್ಷ ಸಾಲವನ್ನು ಪಡೆದರೆ ವರ್ಷಕ್ಕೆ ಏಳರಷ್ಟು ಬಡ್ಡಿಯನ್ನು ಹಾಕುತ್ತದೆ ಬ್ಯಾಂಕು ಆದರೆ ಕೇಂದ್ರ ಸರ್ಕಾರದಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ನೊಂದಿಗೆ 3 ಲಕ್ಷ ಸಾಲವನ್ನು ಪಡೆದರೆ ವಾರ್ಷಿಕವಾಗಿ 4 ರಷ್ಟು ಬಡ್ಡಿ ಮಾತ್ರ ಪಾವತಿಸ ತಕ್ಕದ್ದು.

ನೀವೇನಾದ್ರೂ ಮೂರು ಲಕ್ಷಕ್ಕಿಂತ ಹೆಚ್ಚಿನ ಸಾಲವನ್ನು ಪಡೆದರೆ ನಿರ್ದಿಷ್ಟ ಒಂದೊಂದು ನಿರ್ದಿಷ್ಟ ಹಣಕ್ಕೂ ಕೂಡ ಬ್ಯಾಂಕ್ ಬಡ್ಡಿಯನ್ನು ಹಾಕುತ್ತದೆ. 1998ರಲ್ಲಿ ಪ್ರಾರಂಭವಾದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ. ಈ ಯೋಜನೆಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ನಬಾರ್ಡ್ ಜೊತೆಗೂಡಿ ಯೋಜನೆಯನ್ನು ಪ್ರಾರಂಭಿಸಿವೆ. ಒಂದು ವರ್ಷಕ್ಕೆ 4ರಷ್ಟು ಬಡ್ಡಿಯನ್ನು ತೆಗೆದುಕೊಂಡು 3 ಲಕ್ಷದವರೆಗೆ ಸಾಲವನ್ನು ನೀಡುವ ಯೋಜನೆ ಇದಾಗಿದೆ. ಕೃಷಿಕಾರರಿಗೆ ಬೆಳೆಗಳು ಎಷ್ಟು ಮುಖ್ಯವೋ ಅಷ್ಟೇ ಹಣದ ಸಹಾಯವು ಮುಖ್ಯ. ಎಲ್ಲಾ ರೈತರಿಗೂ ಕೂಡ ಈ ಯೋಜನೆಯಿಂದ ಸಾಲ ದೊರೆಯುತ್ತದೆ, ಈ ಕೂಡಲೇ ಅರ್ಜಿ ಸಲ್ಲಿಸಿ ಸಾಲವನ್ನು ಪಡೆದುಕೊಳ್ಳಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment