ವಿದ್ಯಾರ್ಥಿಗಳಿಗೆ 20 ಸಾವಿರದವರೆಗೆ ಸ್ಕಾಲರ್ಶಿಪ್ ಸಿಗಲಿದೆ, ನೀವು ಕೂಡ ಈ ಸ್ಕಾಲರ್ಶಿಪ್ ಅನ್ನು ಪಡೆದುಕೊಳ್ಳಬೇಕಾ ? ಹಾಗಾದ್ರೆ ಈ ಲೇಖನವನ್ನು ಓದಿ.

ಎಲ್ಲರಿಗೂ ನಮಸ್ಕಾರ…

Labour Card Scholarship 2023 : ಈ ಸ್ಕಾಲರ್ಶಿಪ್ ಮುಖಾಂತರ ವಿದ್ಯಾರ್ಥಿಗಳಿಗೆ 20,000 ಹಣವನ್ನು ಖಾತೆಗೆ ವರ್ಗಾಯಿಸಲಾಗುತ್ತದೆ. ಯಾವ ವಿದ್ಯಾರ್ಥಿಯು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಹರು ಎಂಬ ಮಾಹಿತಿಯು ಕೂಡ ಈ ಕೆಳಕಂಡಂತಿದೆ. ವಿದ್ಯಾಭ್ಯಾಸಕ್ಕಾಗಿ ಹಲವಾರು ಸಮಸ್ಯೆಗಳು ಉಂಟಾಗಬಹುದು. ಆ ಸಮಸ್ಯೆಗಳನ್ನು ತೊರೆದು ಹಾಕಲು ಸರ್ಕಾರವು ಹಲವಾರು ವಿದ್ಯಾರ್ಥಿ ವೇತನವನ್ನು ಜಾರಿಗೊಳಿಸಿ, ಈಗಾಗಲೇ ಆ ವಿದ್ಯಾರ್ಥಿ ವೇತನದ ಹಣವನ್ನು ಎಲ್ಲಾ ಅರ್ಹ ವಿದ್ಯಾರ್ಥಿಗಳಿಗೆ ತಲುಪಿಸುವ ಕೆಲಸ ಮಾಡುತ್ತಿದೆ.

WhatsApp Group Join Now
Telegram Group Join Now

ಇಂದಿನ ಎಲ್ಲಾ ಸ್ಕಾಲರ್ಶಿಪ್ ಅನ್ನು ಹೊರತುಪಡಿಸಿ ಮುಂದಿನ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನದಡಿಯಲ್ಲಿ 20 ಸಾವಿರದವರೆಗೆ ಸ್ಕಾಲರ್ಶಿಪ್ ದೊರಕಲಿದೆ. ನೀವು ಕೂಡ ಈ ಒಂದು ಸ್ಕಾಲರ್ಶಿಪ್‌ಗೆ ಅರ್ಹರ ? ಹಾಗಾದ್ರೆ ಈ ಕೆಳಕಂಡ ಲೇಖನದ ಮೂಲಕ ಹೆಚ್ಚಿನ ಮಾಹಿತಿಯನ್ನು ತಿಳಿಯಿರಿ. ಲೇಖನವನ್ನು ಕೊನೆವರೆಗೂ ಓದಿರಿ.

ಶೈಕ್ಷಣಿಕ ವಿದ್ಯಾಭ್ಯಾಸಕ್ಕಾಗಿ ಹಲವಾರು ಕುಟುಂಬದ ಮಧ್ಯಮವರ್ಗದ ಮಕ್ಕಳು ತುಂಬಾ ತೊಂದರೆಗಳನ್ನು ಎದುರಿಸುತ್ತಿರುತ್ತಾರೆ. ಇಂಥಹ ಎಲ್ಲ ತೊಂದರೆಗಳಿಂದ ಹೊರ ತರಲು ಈ ವಿದ್ಯಾರ್ಥಿ ವೇತನಗಳು ಸಹಾಯ ಮಾಡುತ್ತದೆ. ಅಂದರೆ ಓದಿನಲ್ಲಿ ಮುಂದಿನ ವಿದ್ಯಾಭ್ಯಾಸವನ್ನು ಮಾಡಲು ಹಣದ ರೀತಿಯಲ್ಲಿ ಸಹಾಯವಾಗಲಿದೆ. ನೀವು ಕೂಡ ವಿದ್ಯಾರ್ಥಿಗಳೇ ತಾನೆ, ಹಾಗಾದರೆ ಈ ಒಂದು ವಿದ್ಯಾರ್ಥಿ ವೇತನವನ್ನು ಬಳಸಿಕೊಂಡು ಮುಂದಿನ ವಿದ್ಯಾಭ್ಯಾಸವನ್ನು ಮುಂದುವರೆಸಿರಿ. ಸರ್ಕಾರದ ವಿದ್ಯಾರ್ಥಿ ವೇತನವಿದು. ಯಾವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ಸಲ್ಲುತ್ತದೆ, ಹಾಗೂ ಯಾವ ದಾಖಲಾತಿಗಳು ಬೇಕು ಅರ್ಜಿ ಸಲ್ಲಿಸಲು ಎಂಬುದನ್ನು ಈ ಕೆಳಕಂಡ ಲೇಖನದಲ್ಲಿ ತಿಳಿಯಿರಿ.

Labour Card Scholarship 2023 

 • ಯೋಜನೆ :- ಶೈಕ್ಷಣಿಕ ಪ್ರೋತ್ಸಾಹ ಧನ ಸಹಾಯ, ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಮುಖಾಂತರ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ನಂತರ ಇದರ ಸೌಲಭ್ಯಕಾರವಾದ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಳ್ಳಬಹುದು.
 • ಪ್ರೋತ್ಸಾಹ ಧನ ಎಷ್ಟು :- 6,000 ದಿಂದ 20,000 ದವರೆಗೆ ಅರ್ಹ ವಿದ್ಯಾರ್ಥಿಗಳಿಗೆ ತಲುಪಿಸುವ ಕೆಲಸ ಈ ಯೋಜನೆಯದು.
 • ಈ ವಿದ್ಯಾರ್ಥಿಗಳು ಮಾತ್ರ ಅರ್ಹರು :- ಪ್ರೌಢಶಾಲೆ ಮಕ್ಕಳು ಹಾಗೂ ಪಿಯುಸಿ ಓದುತ್ತಿರುವವರು ಮತ್ತು ಡಿಗ್ರಿ ಯಲ್ಲಿ ಯಾವುದೇ ರೀತಿಯ ಕೋರ್ಸ್ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಕೋರ್ಸ್, ಡಿಪ್ಲೋಮೋ ಕೋರ್ಸ್, ಐಟಿಐ ಕೋರ್ಸ್, ಇಂಜಿನಿಯರ್ ಓದುವವರಿಗೆ ಹಾಗೂ ವೈದ್ಯಕೀಯ ಕೋರ್ಸನ್ನು ಓದುತ್ತಿರುವವರಿಗೆ ಈ ಒಂದು ಸ್ಕಾಲರ್ಶಿಪ್ ದೊರೆಯಲಿದೆ. ಒಟ್ಟಾರೆ ಹೇಳುವುದಾದರೆ ಎಲ್ಲಾ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಈ ವಿದ್ಯಾರ್ಥಿ ವೇತನ ಸಲ್ಲುತ್ತದೆ.

ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ವೆಬ್ಸೈಟ್ ಮೂಲಕ ಆನ್ಲೈನ್ ನಲ್ಲಿ ಅರ್ಜಿಯ ಪ್ರಕ್ರಿಯೆಯನ್ನು ಸಲ್ಲಿಸುವುದು ಹಾಗೂ ಸ್ನಾತಕೋತ್ತರ ಪದವಿಯನ್ನು ಮಾಡುತ್ತಿರುವ ವಿದ್ಯಾರ್ಥಿಗಳು ಮಾಸಿಕ ಆದಾಯ 35,000 ಹಣ ಮೀರಿರಬಾರದು ಅಂತಹ ಅರ್ಹ ವಿದ್ಯಾರ್ಥಿಗಳಿಗೆ ಮಾತ್ರ ಈ ಯೋಜನೆ ಸಲ್ಲುತ್ತದೆ. ಹಾಗೂ ಕುಟುಂಬದಲ್ಲಿ ಒಬ್ಬ ಅರ್ಹ ಅಭ್ಯರ್ಥಿಗೆ ಮಾತ್ರ ಈ ಯೋಜನೆಯ ಹಣ ತಲುಪುತ್ತದೆ.

ಪತ್ರಿಕಾ ಪ್ರಕಟಣೆಯಲ್ಲಿ ಈ ಒಂದು ಸಂದೇಶ ಹೊರ ಹಾಕಿದೆ ಕಲ್ಯಾಣ ಮಂಡಳಿ. ನೀವು ಕೂಡ ಈ ಮೇಲ್ಕಂಡ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡು ಓದುತ್ತಿದ್ದೀರಾ ಹಾಗಾದ್ರೆ ನೀವು ಈ ವಿದ್ಯಾರ್ಥಿ ವೇತನಕ್ಕೆ ಅರ್ಹರು. ಏಕೆ ತಡ ಮಾಡುತ್ತಿದ್ದೀರಿ ಈ ಕೆಳಕಂಡ ಮಾಹಿತಿಯನ್ನು ಓದಿ ಈ ಕೂಡಲೇ ಅರ್ಜಿಯನ್ನು ಸಲ್ಲಿಸಿರಿ.

ಅರ್ಹತೆಗಳು ಈ ಕೆಳಕಂಡಿನಂತಿವೆ.

 • ನೀವು ಕೂಡ ಕಾರ್ಮಿಕರ ಮಕ್ಕಳೇ ಹಾಗಾದರೆ ಮಂಡಳಿಯ ವಂತಿಕೆಯನ್ನು ಪಾವತಿಸುವ ಮಕ್ಕಳು ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರುತ್ತಾರೆ.
 • ವಿದ್ಯಾರ್ಥಿಗಳು ಹಿಂದಿನ ಶೈಕ್ಷಣಿಕ ವಿದ್ಯಾಭ್ಯಾಸದಲ್ಲಿ ಸಾಮಾನ್ಯ ವರ್ಗದ ಅಭ್ಯರ್ಥಿಗಳು 50% ಅಂಕವನ್ನು ಗಳಿಸಿರಬೇಕು. ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಗರಿಷ್ಠ 45% ಅಂಕವನ್ನು ಗಳಿಸಿ ಪಾಸ್ ಆಗಿರಬೇಕು ಹಿಂದಿನ ವರ್ಷದ ಶೈಕ್ಷಣಿಕ ವಿದ್ಯಾಭ್ಯಾಸದಲ್ಲಿ.
 • ಈ ಕೆಳಕಂಡ ರೀತಿ ವಿದ್ಯಾರ್ಥಿ ವೇತನದ ಮೊತ್ತವನ್ನು ನೀಡಲಾಗುತ್ತದೆ.
 • ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದೀರಾ ಅಂದರೆ 8 ತರಗತಿಯಿಂದ 10ನೇ ತರಗತಿಯವರೆಗೂ ಓದುತ್ತಿರುವ ವಿದ್ಯಾರ್ಥಿಗಳಿಗೆ 6,000 ಮೊತ್ತವನ್ನು ಸ್ಕಾಲರ್ಶಿಪ್ ಆಗಿ ನಿಮ್ಮ ಖಾತೆಗೆ ವರ್ಗಾಯಿಸಲಾಗುತ್ತದೆ.
 • ಪಿಯುಸಿ, ಐಟಿಐ, ಡಿಪ್ಲೋಮೋ, ಟಿಸಿಎಚ್ ಕೋರ್ಸ್ ಅನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ 8,000 ಮೊತ್ತ ದೊರೆಯಲಿದೆ.
 • ಡಿಗ್ರಿ ಪದವಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ 10,000 ಹಣದ ವಿದ್ಯಾರ್ಥಿ ವೇತನವನ್ನು ಪಡೆಯುತ್ತಾರೆ.
 • ಸ್ನಾತಕೋತ್ತರ ಪದವಿಯನ್ನು ಆಯ್ಕೆ ಮಾಡಿಕೊಂಡು ಓದುವ ವಿದ್ಯಾರ್ಥಿಗಳಿಗೆ 12,000 ಹಣವನ್ನು ನಿರ್ದಿಷ್ಟವಾಗಿ ಮೀಸಲಿಡಲಾಗಿದೆ.
 • ಇಂಜಿನಿಯರ್ ಹಾಗೂ ವೈದ್ಯಕೀಯ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿರುವ ವಿದ್ಯಾರ್ಥಿಗಳಿಗೆ 20 ಸಾವಿರದವರೆಗೆ ಸ್ಕಾಲರ್ಶಿಪ್ ದೊರಕಲಿದೆ.

ಅರ್ಜಿ ಸಲ್ಲಿಸಲು 31-1- 2024 ರಂದು ಕೊನೆಗೊಳ್ಳಲಿದೆ. ಅಂದರೆ ಕೊನೆಯ ದಿನಾಂಕ ನಿಗದಿತವಾಗಿದೆ ನೀವುಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಕೂಡಲೇ ಈ ಕೆಳಕಂಡ ಲಿಂಕ್ ಮೂಲಕ ವೆಬ್ಸೈಟ್ಗೆ ಭೇಟಿ ನೀಡಿ ಹೇಳಲಾಗುವ ಎಲ್ಲಾ ದಾಖಲಾತಿಗಳನ್ನು ಕೂಡ ಸಬ್ಮಿಟ್ ಮಾಡುವ ಮೂಲಕ ಅರ್ಜಿಯನ್ನು ಪೂರೈಸಿರಿ ಮೊದಲಿಗೆ ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿ ಲಾಗಿನ್ ಆಗಿರಿ.

Apply Online

ನಿಮ್ಮ ಅಕ್ಕ ಪಕ್ಕದ ಸ್ನೇಹಿತರಿಗೂ ಕೂಡ ಈ ಲೇಖನವನ್ನು ಶೇರ್ ಮಾಡುವ ಮೂಲಕ ಅವರಿಗೂ ಕೂಡ ವಿದ್ಯಾರ್ಥಿ ವೇತನದ ಬಗ್ಗೆ ತಿಳಿಸಿರಿ, ಅವರು ಕೂಡ 20 ಸಾವಿರದ ವರೆಗೆ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಲಿ.

ಲೇಖನವನ್ನು ಇಲ್ಲಿಯವರೆಗೂ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment