ಮೊಬೈಲ್ ಬಳಕೆದಾರರಿಗೆ ಬಂತು ಕೇಂದ್ರ ಸರ್ಕಾರದಿಂದ ಹೊಸ ಆದೇಶ ! ಶೀಘ್ರದಲ್ಲೇ ಪ್ರತಿಯೊಂದು ಮೊಬೈಲ್ಗು ID ಸಂಖ್ಯೆ ನೀಡಲಾಗುತ್ತದೆ.

ಎಲ್ಲರಿಗೂ ನಮಸ್ಕಾರ..

ಮೊಬೈಲ್ ಬಳಸುವ ಚಂದಾದಾರರಿಗೆ ಈ ಒಂದು ಸುದ್ದಿ. ನಿಮ್ಮ ಹತ್ತಿರ ಇರುವ ಪ್ರತಿಯೊಂದು ಮೊಬೈಲ್ ಗು ಕೂಡ ಸರ್ಕಾರದಿಂದ ಸಿಗಲಿದೆ ID ಸಂಖ್ಯೆ. ನಿಮಗೂ ಕೂಡ ಯಾವ ರೀತಿ ಗುರುತಿನ ಚೀಟಿ ಇರುತ್ತದೆಯೋ ಅದೇ ರೀತಿ ಮೊಬೈಲ್ಗೂ ಇನ್ನು ಮುಂದೆ ಗುರುತಿನ ಚೀಟಿ ಯಂತೆ ಈ ID ಸಂಖ್ಯೆ ಕೆಲಸ ನಿರ್ವಹಿಸುತ್ತದೆ. ಈ ಒಂದು ಐಡಿ ಸಂಖ್ಯೆಯಲ್ಲಿ ಎಲ್ಲಾ ಮಾಹಿತಿಯು ಲಭ್ಯವಿರುತ್ತದೆ. ಐಡಿ ಸಂಖ್ಯೆಯು ಯಾವ ರೀತಿ ಕೆಲಸ ನಿರ್ವಹಿಸುತ್ತದೆ ಎಂದರೆ ನಿಮ್ಮ ಹತ್ತಿರ ಇರುವ ಫೋನ್ ಗಳು ಎಷ್ಟು ಹಾಗೂ ಸಿಮ್ ಕಾರ್ಡ್ ಗಳು ನೀವು ಬಳಕೆ ಮಾಡುತ್ತಿದ್ದರೆ ಯಾವ ಸಿಮ್ ಕಾರ್ಡ್ ಬಳಕೆ ಮಾಡುತ್ತಿದ್ದೀರಿ ಹಾಗೂ ಯಾವ ಸಿಮ್ ಕಾರ್ಡ್ ಯಾವ ಸ್ಥಳದಲ್ಲಿ ಸಕ್ರಿಯವಾಗಿದೆ ಸಿಮ್ ಕಾರ್ಡ್ ನ ಒಡೆಯ ಯಾರು ಎಂದು ಈ ಐಡಿ ಸಂಖ್ಯೆಯಲ್ಲಿ ಮಾಹಿತಿಯನ್ನು ಪ್ರತ್ಯೇಕವಾಗಿ ಸಂಗ್ರಹಿಸುತ್ತದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ಲೇಖನವನ್ನು ಓದಿ.

WhatsApp Group Join Now
Telegram Group Join Now

ID ಸಂಖ್ಯೆಯು ಯಾವ ಮಾಹಿತಿಯನ್ನು ಸಂಗ್ರಾಹ ಮಾಡಿರುತ್ತದೆ.

ಮೊಬೈಲ್ ಬಳಕೆ ಮಾಡುತ್ತಿರುವ ಚಂದಾದಾರನು ಎಷ್ಟು ಸಿಮ್ ಕಾರ್ಡ್ ಅನ್ನು ಹೊಂದಿದ್ದಾನೆ, ಹಾಗೂ ಯಾವ ಹೆಸರಿನಲ್ಲಿ ಸಿಮ್ ಕಾರ್ಡ್ ನೋಂದಣಿಯಾಗಿದೆ, ಮತ್ತು ಯಾವ ಸ್ಥಳದಲ್ಲಿ ವ್ಯಕ್ತಿ ವಾಸಿಸುತ್ತಿದ್ದಾನೇ, ಎಷ್ಟು ವರ್ಷದಿಂದ ಮೊಬೈಲ್ ನನ್ನು ಬಳಕೆ ಮಾದುತ್ತಿದಾರೆ, ಹಾಗೂ ಎಷ್ಟು ಸಿಮ್ ಕಾರ್ಡ್ ಅನ್ನು ಖರೀದಿಸಿದ್ದಾರೆ, ಎಂದು ಹಲವಾರು ಮಾಹಿತಿಯನ್ನು ಈ ಒಂದು ಐಡಿ ಸಂಖ್ಯೆ ಸಂಗ್ರಹ ಮಾಡಿರುತ್ತದೆ. ಹಲವಾರು ಎಲ್ಲ ಮಾಹಿತಿಯನ್ನು ಒಂದೇ ಸ್ಥಳದಲ್ಲಿ ಕಾಣಬಹುದು ಎಂದು ಕೂಡ ಹೇಳಬಹುದು ಪಾಯಿಂಟ್ ಗಳ ಮೂಲಕ ಒಂದರ ಕೆಳಗೆ ಒಂದು ಮೊಬೈಲ್ ನ ಮಾಹಿತಿಯನ್ನು ಕಲೆಯಾಕಿರುತ್ತದೆ.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಸರ್ಕಾರದ ವಿಶಿಷ್ಟ ಐಡಿಯು, 14 ಸಂಖ್ಯೆಯ ಆಯುಷ್ಮಾನ್ ಭವ ಆರೋಗ್ಯ ಖಾತೆಯಂತೆ ಈ ವಿಶಿಷ್ಟ ಇಡಿಯು ಕೂಡ ಇರುತ್ತದೆ. ಆಯುಷ್ಮಾನ್ ಖಾತೆಯು ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಅಂದರೆ, ನಿಮ್ಮ ಆರೋಗ್ಯದ ಎಲ್ಲಾ ಮಾಹಿತಿಯನ್ನು ಒಂದೇ ಸ್ಥಳದಲ್ಲಿ ಇರುತ್ತದೆಯೋ ಅದೇ ರೀತಿ ಈ ಒಂದು ವಿಶಿಷ್ಟ ಐಡಿ ಸಂಖ್ಯೆಯನ್ನು ಕೂಡ ಒಂದೇ ಸ್ಥಳದಲ್ಲಿ ಮೊಬೈಲ್ ನ ಎಲ್ಲಾ ಮಾಹಿತಿಗಳು ಕೂಡ ಲಭ್ಯವಿರುತ್ತದೆ. ಈ ಒಂದು ಐಡಿ ಸಂಖ್ಯೆಯಿಂದ ನಕಲಿ ಸಿಮ್ ಕಾರ್ಡ್ ಹಾಗೂ ಮೊಬೈಲ್ ಗಳನ್ನು ರದ್ದುಗೊಳಿಸಬಹುದು. ಈ ನಿಟ್ಟಿನಿಂದ ಸರ್ಕಾರ ಈ ಒಂದು ಐಡಿ ಸಂಖ್ಯೆಯನ್ನು ಎಲ್ಲಾ ಮೊಬೈಲ್ ಚೆಂದಾದಾರರಿಗೆ ನೀಡಬೇಕೆಂದು ಘೋಷಣೆ ಮಾಡಿದೆ.

ಮೊಬೈಲ್ ಬಳಕೆದಾರರಿಗೆ ವಿಶಿಷ್ಟ ID ಸಂಖ್ಯೆಯ ಅಗತ್ಯವೇನಿದೆ ?

ಮೊಬೈಲ್ ಯಾವ ಸ್ಥಳದಲ್ಲಿದೆ, ಹಾಗೂ ಮೊಬೈಲ್ ಗೆ ವಂಚನೆಗೆ ಒಳಗಾದ ವ್ಯಕ್ತಿಗಳು ಯಾರು, ಮತ್ತು ವ್ಯಕ್ತಿಗಳು ಮೊಬೈಲ್ಗೆ ವಂಚಿತರಾಗಬಾರದು ಎಂಬ ಕಾರಣಕ್ಕಾಗಿ ಒಂದು ID ಸಂಖ್ಯೆಯನ್ನು ಎಲ್ಲಾ ಮೊಬೈಲ್ ಚಂದಾದಾರರಿಗೂ ನೀಡಲಾಗುತ್ತಿದೆ. ಈ ಒಂದು ಐಡಿ ಸಂಖ್ಯೆಯಿಂದ ಹೆಚ್ಚಿನ ಸಿಮ್ ಕಾರ್ಡ್ ಬಳಕೆ ಮಾಡುತ್ತಿರುವ ವ್ಯಕ್ತಿಗಳ ಫೋನನ್ನು ಹಾಗೂ ಸಿಮ್ ಕಾರ್ಡ್ ಅನ್ನು ರದ್ದುಗೊಳಿಸಲು ಸಹಾಯವಾಗುತ್ತದೆ.

ನೀವೇನಾದರೂ ಹೊಸ ಸಿಮ್ನನ್ನು ಖರೀದಿ ಮಾಡಬೇಕೆಂದು ಕೊಂಡಿದ್ದರೆ ಆ ಸಮಯದಲ್ಲಿ ಈ ಒಂದು ವಿಶಿಷ್ಟ ಐಡಿಯನ್ನು ನಿಮಗೆ ಸರ್ಕಾರವು ನೀಡುತ್ತದೆ. ಮತ್ತು ಸಿಮ್ ಕಾರ್ಡ್ ಅನ್ನು ಖರೀದಿಸುವಾಗ ಯಾವ ವ್ಯಕ್ತಿಯ ಹೆಸರಿನಲ್ಲಿ ಸಿಮ್ ಕಾರ್ಡ್ ಖರೀದಿಸುತ್ತಿದ್ದೀರಿ, ಹಾಗೂ ನಿಮ್ಮದೇ ಹೆಸರಿನಲ್ಲಿ ಸಿಮ್ ಕಾರ್ಡ್ ಅನ್ನು ಖರೀದಿಸುತ್ತಿದ್ದೀರಾ, ಎಂದು ಖಚಿತವಾಗಿ ಸರ್ಕಾರಕ್ಕೆ ಹೇಳಬೇಕಾಗುತ್ತದೆ. ವಿಶಿಷ್ಟ ಐಡಿ ಸಂಖ್ಯೆಯಲ್ಲಿ ನಿಮ್ಮ ವಯಸ್ಸು ನಿಮ್ಮ ಶಿಕ್ಷಣ ನಿಮ್ಮ ಆದಾಯದ ಎಲ್ಲಾ ಮಾಹಿತಿಯನ್ನು ಈ ಒಂದು ಒಂದೇ ಸ್ಥಳದಲ್ಲಿ ಸಂಗ್ರಹಿಸಿರುತ್ತದೆ.

ಕಳೆದ ಆರು ತಿಂಗಳಿನಿಂದ 6.4 ದಶಲಕ್ಷಕ್ಕೂ ಹೆಚ್ಚಿನ ಫೋನ್ ಗಳನ್ನು ಕಡಿತಗೊಳಿಸಲಾಗಿದೆ ಏಕೆಂದರೆ ಒಬ್ಬ ವ್ಯಕ್ತಿ ಹತ್ತಿರ ಇರಬೇಕಾದ ಫೋನ್ಗಳೆಂದರೆ ಅದು ಎರಡು ಅಥವಾ ಮೂರು ಅಷ್ಟೇ ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಫೋನ್ ಗಳನ್ನು ಬಳಸುತ್ತಿದ್ದ ವ್ಯಕ್ತಿಗಳ ಸಿಮ್ ಕಾರ್ಡ್ ಹಾಗೂ ಫೋನ್ ಗಳನ್ನು ರದ್ದುಗೊಳಿಸಿದೆ ಸರ್ಕಾರ. ಸಾಮಾನ್ಯ ಜನರನ್ನು ಈ ವಂಚನೆಯಿಂದ ಹೊರತೆಗೆದು ಇವೊಂದು ಐಡಿ ಸಂಖ್ಯೆಯನ್ನು ಬಳಸಿಕೊಳ್ಳಲಾಗುತ್ತಿದೆ ಹಾಗೂ ವೇಗವಾಗಿ ನಕಲಿ ಸಿಮ್ ಕಾರ್ಡ್ಗಳನ್ನು ರದ್ದುಗೊಳಿಸಬಹುದು.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು ! ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment