ನವೆಂಬರ್ ತಿಂಗಳಿನಲ್ಲೂ ಕೂಡ ಈರುಳ್ಳಿ ಬೆಲೆ ದುಬಾರಿ ! ಮತ್ತಷ್ಟು, ಮೊತ್ತದಲ್ಲಿ ತಿರುವು ಕಂಡ ಈರುಳ್ಳಿ, ಯಾವ ಜಿಲ್ಲೆಯಲ್ಲಿ ಈರುಳ್ಳಿ ದರ ಎಷ್ಟಿದೆ ?

ಎಲ್ಲರಿಗೂ ನಮಸ್ಕಾರ..

ಕಳೆದ ಎರಡು ತಿಂಗಳಿನಿಂದ ತರಕಾರಿಗಳಲ್ಲೇ ಪ್ರಖ್ಯಾತ ಹೆಸರು ಪಡೆದ ಕೆಂಪು ಸುಂದರಿ ಟೊಮೆಟೊ ಕೂಡ ಬೆಲೆಯಲ್ಲಿ ಏರಿಕೆ ಏರಿಕೆ ಕಂಡು, ಟೊಮೊಟೊ ಖರೀದಿಸುವ ಗ್ರಾಹಕರ ಕಣ್ಣನ್ನು ಕೆಂಪಾಗಿಸಿತು. ಹೀಗಾಗಿ ಒಂದು ಕೆಜಿ ಕೆಂಪು ಸುಂದರಿಯ ಬೆಲೆ 150 ಹಣವನ್ನು ನೀಡಿ ಖರೀದಿಸುವಂತಹ ಪರಿಸ್ಥಿತಿ ಗ್ರಾಹಕರಿಗೆ, ಸಾಮಾನ್ಯ ಜನರಿಗೆ. ಟೊಮೊಟೊ ಬೆಲೆ ಒಂದು ಕೆಜಿಗೆ 150 ಹಣವಾದರೂ ಕೂಡ ಗ್ರಾಹಕರು ಖರೀದಿಸುತ್ತಿದ್ದರು. ಆ ಹೊತ್ತಿನಲ್ಲಿ ಈರುಳ್ಳಿಯ ಬೆಲೆ ಕಡಿಮೆ ಆಗಿತ್ತು. ಆದರೆ ಕಳೆದ ಒಂದು ವಾರದಿಂದ ಈ ಈರುಳ್ಳಿಯ ಬೆಲೆ ಗಗನಕ್ಕೇರಿದೆ.

WhatsApp Group Join Now
Telegram Group Join Now

ಅತ್ತೆಗೊಂದು ಕಾಲ ಸೊಸೆಗೆ ಇನ್ನೊಂದು ಕಾಲ ಎಂಬ ಗಾದೆಯಂತೆಯೇ ಈ ಟೊಮೊಟೊ ಕೂಡ ಕುಸಿದಿದ್ದು, ಈಗ ಈ ಈರುಳ್ಳಿಯ ಕಾಲ ಬಂದಿದೆ. ಟೊಮೊಟೊ ಖರೀದಿಸಲು ಎರಡು ತಿಂಗಳ ಹಿಂದೆ ಗ್ರಾಹಕರು ಹಿಂದೆ ಮುಂದೆ ನೋಡುತ್ತಿರುವಾಗ ಈರುಳ್ಳಿ ಖರೀದಿಸಿ ಜೀವನವನ್ನು ಮುಂದೆ ನಡೆಸುವಂತಹ ಮನಸ್ಥಿತಿ. ಆದರೆ ಇದೀಗ ಟೊಮೊಟೊವನ್ನು ಖರೀದಿಸಿ, ಈರುಳ್ಳಿಯನ್ನು ಪಕ್ಕಕ್ಕೆ ಇಡುವಂತಹ ಪರಿಸ್ಥಿತಿ ಎದುರಾಗಿದೆ. ಈರುಳ್ಳಿಯ ಬೆಲೆ ಏಕೆ ಹೆಚ್ಚಳವಾಯಿತು ಹಾಗೂ ಯಾವ ಜಿಲ್ಲೆಗಳಲ್ಲಿ ಯಾವ ಬೆಲೆ ಕಂಡಿದೆ ಈರುಳ್ಳಿ, ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ, ಲೇಖನವನ್ನು ಕೊನೆಯವರೆಗೂ ಓದಿ.

ಜನಗಳಿಗೆ ಒಂದು ತಿಂಗಳ ಹಿಂದೆಯೇ ಈ ಈರುಳ್ಳಿಯ ಬೆಲೆ ಹೆಚ್ಚಾಗುತ್ತದೆ ಎಂಬುದನ್ನು ಸೂಚನೆ ನೀಡಿತ್ತು ಸರ್ಕಾರ ಆದರೆ ಸರ್ಕಾರವೇ ಹೆಚ್ಚೆಚ್ಚು ದಾಸ್ತಾನು ಮಾರುಕಟ್ಟೆಗೆ ತರಕಾರಿಗಳನ್ನು ರಫ್ತು ಮಾಡಿ ಈರುಳ್ಳಿಯ ಬೆಲೆಯನ್ನು ಇಳಿಕೆಯಲ್ಲೇ ಸಾಗಿಸುತ್ತಿತ್ತು. ಆದರೆ ಭೂಮಿಗೆ ಮಳೆರಾಯನ ಆಗಮನ ಇಲ್ಲದಿರುವ ಕಾರಣಕ್ಕಾಗಿ ಈರುಳ್ಳಿಯನ್ನು ರೈತರು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲು ಆಗುತ್ತಿಲ್ಲ, ಹಾಗೂ ಹೆಚ್ಚಿನ ಪ್ರಮಾಣದ ಈರುಳ್ಳಿಯನ್ನು ಮಾರುಕಟ್ಟೆಗೆ ರಫ್ತು ಮಾಡಲು ಆಗುತ್ತಿಲ್ಲ, ಈ ಕಾರಣದಿಂದಲೇ ಈರುಳ್ಳಿಯ ಬೆಲೆಯನ್ನು ಹೆಚ್ಚು ಮಾಡಲಾಗಿದೆ. ಕೆಲವು ತಿಂಗಳಿನಿಂದ ಈರುಳ್ಳಿಯ ಬೆಲೆ 30 ಅಥವಾ 40 ಮೊತ್ತದಲ್ಲಿದ್ದ ಈರುಳ್ಳಿ ಈಗ ಏರಿಕೆ ಕ್ರಮದಲ್ಲಿ ಮೊತ್ತವನ್ನು ಅಂತವಾಗಿ ಹೆಚ್ಚು ಪ್ರಮಾಣದಲ್ಲಿ ಸಾಗುತ್ತಿದೆ. ಅಂದರೆ ಒಂದು ಕೆಜಿಗೆ 80 ಅಥವಾ 90 ರೂ ಹಣವನ್ನು ನೀಡಿ ಖರೀದಿಸುವಂತಹ ಪರಿಸ್ಥಿತಿ ಗ್ರಾಹಕರಿಗೆ ಬಂದಿದೆ.

ನಿಮ್ಮ ಊರಿನಲ್ಲಿ ಈರುಳ್ಳಿಯ ಬೆಲೆ ಎಷ್ಟಿದೆ ಎಂದು ಕಮೆಂಟ್ ಮೂಲಕ ತಿಳಿಸಿ ಹಾಗೂ ಯಾವ ಯಾವ ಊರಿನಲ್ಲಿ, ಯಾವ ಯಾವ ಜಿಲ್ಲೆಗಳಲ್ಲಿ ಈ ಈರುಳ್ಳಿ ಬೆಲೆ ಹೆಚ್ಚಾಗಿದೆ ಎಂಬುದನ್ನು ಕೂಡ ತಿಳಿದುಕೊಳ್ಳಿ.

ಬೆಂಗಳೂರಿನಲ್ಲೂ ಹೆಚ್ಚಾದ ಈರುಳ್ಳಿ ಬೆಲೆ !

ಹೌದು ಬೆಂಗಳೂರು ನಗರದಲ್ಲೂ ಕೂಡ ಹೆಚ್ಚಾಗಿದೆ ಈರುಳ್ಳಿ ಬೆಲೆ. ಎಲ್ಲಿ ನೋಡಿದರೂ ಕೂಡ ಮಾರುಕಟ್ಟೆಯಲ್ಲಿ ಈ ಈರುಳ್ಳಿ ಬೆಲೆಯ ಏರಿಕೆಯ ಸುದ್ದಿಯೇ ಜಾಸ್ತಿ ಕೇಳುತ್ತಿದೆ. ಸಾಮಾನ್ಯ ಜೀವನವನ್ನು ನಡೆಸುವ ಜನಗಳು ಈ ಈರುಳ್ಳಿ ಬೆಲೆ ಹೆಚ್ಚಾಗಿರುವ ಕಾರಣದಿಂದ, ತಿಂಗಳಿಗೆ ಒಂದು ಕೆಜಿ ಈರುಳ್ಳಿ ಖರೀದಿಸುವಂತಹ ಪರಿಸ್ಥಿತಿ ಎದುರಾಗಿದೆ. ಈರುಳ್ಳಿ ಬೆಲೆ ಬೆಳೆಯುವಂತಹ ಪ್ರದೇಶಗಳಲ್ಲಿ ಮಳೆರಾಯನ ಆಗಮ ಇಲ್ಲದ ಕಾರಣದಿಂದ ಬಸಲು ಬಂದಿಲ್ಲ ಹಾಗಾಗಿ ಈ ಈರುಳ್ಳಿಯನ್ನು ಮಾರುಕಟ್ಟೆಗೆ ರಫ್ತು ಮಾಡಲು ಆಗುತ್ತಿಲ್ಲ. 57 ರಷ್ಟು ಈರುಳ್ಳಿ ಬೆಲೆ ಹೆಚ್ಚಾಗಿದೆ, ಹೀಗಾಗಿ ರಾಜ್ಯದಲ್ಲೇ ಈ ಈರುಳ್ಳಿಯ ಸದ್ದು ಕೂಡ ಹೆಚ್ಚಾಗಿದೆ.

ಕರ್ನಾಟಕದಲ್ಲಿ ಈರುಳ್ಳಿಯ ಬೆಲೆ ಎಷ್ಟಿದೆ ?

  1. ಮಂಡ್ಯ ಜಿಲ್ಲೆ – 80 ರಿಂದ 90 ₹
  2. ಮೈಸೂರು ಜಿಲ್ಲೆ – 80 ರಿಂದ 90 ₹
  3. ಉಡುಪಿ ಜಿಲ್ಲೆ – 70 ರಿಂದ 80 ₹
  4. ಚಿಕ್ಕಮಗಳೂರು ಜಿಲ್ಲೆ – 70 ರಿಂದ 80 ₹
  5. ದಕ್ಷಿಣ ಕನ್ನಡ ಜಿಲ್ಲೆ – 80 ರಿಂದ 90 ₹
  6. ಧಾರವಾಡ ಜಿಲ್ಲೆ – 70 ರಿಂದ 80 ₹
  7. ವಿಜಯಪುರ ಜಿಲ್ಲೆ – 70 ರಿಂದ 80 ₹
  8. ರಾಯಚೂರು ಜಿಲ್ಲೆ – 60 ರಿಂದ 70 ₹
  9. ಕೊಪ್ಪಳ ಜಿಲ್ಲೆ – 60 ರಿಂದ 80 ₹
  10. ಕಲಬುರಗಿ ಜಿಲ್ಲೆ – 60 ರಿಂದ 70 ₹
  11. ಬೀದರ್ ಜಿಲ್ಲೆ – 60 ರಿಂದ 80 ₹
  12. ಯಾದಗಿರಿ ಜಿಲ್ಲೆ – 60 ರಿಂದ 80 ₹
  13. ಚಿತ್ರದುರ್ಗ ಜಿಲ್ಲೆ – 60 ರಿಂದ 70 ₹

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು ಸ್ನೇಹಿತರೆ, ಮತ್ತೆ ಸಿಗೋಣ ಮುಂದಿನ ಮಾಹಿತಿಯೊಂದಿಗೆ…

Leave a Comment