ಇನ್ನು ಮುಂದೆ ಹೆಣ್ಣು ಮಕ್ಕಳ ಮದುವೆ ಹೊರೆ, ಅಪ್ಪ ಅಮ್ಮನ ಜವಭ್ದಾರಿ ಅಲ್ಲ, ಸರ್ಕಾರದ ಜವಭ್ದಾರಿ ! ಇಲ್ಲಿದೆ ಸಂಪೂರ್ಣ ಮಾಹಿತಿ.

ಎಲ್ಲರಿಗೂ ನಮಸ್ಕಾರ…

ಆಗೊಂದು ಕಾಲವಿತ್ತು ಹೆಣ್ಣು ಮಗು ಜನಿಸಿದರೆ ಯಾಕಾದರೂ ಹೆಣ್ಣು ಮಗು ಜನಿಸಿತು ಎಂದು ಭಯಪಡುತ್ತಿದ್ದರು. ಹೆಣ್ಣು ಮಗುವನ್ನು ಸಾಕಲು ವಿದ್ಯಾಭ್ಯಾಸವನ್ನು ಕೊಡಿಸಲು ಮತ್ತು ಮದುವೆ ಮಾಡಲು ತುಂಬಾ ಕಷ್ಟವಾಗುತ್ತದೆ. ಯಾಕಾದರೂ ಹೆಣ್ಣು ಮಗು ಕೊಟ್ಟೆ ದೇವರೆಂದು ಬೈದುಕೊಳ್ಳುತ್ತಿದ್ದರು. ಹೆಣ್ಣು ಮಗು ಜನಿಸಿದರೆ ಮುಂದೆ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಕಲ್ಪನೆ ಇತ್ತು, ಹೆಣ್ಣು ಮಕ್ಕಳ ವಿಚಾರದಲ್ಲಿ ಜವಾಬ್ದಾರಿ ಎಂಬುದು ತುಂಬಾ ದೊಡ್ಡದಾಗಿರುತ್ತದೆ. ಆದ್ದರಿಂದ ಹೆಣ್ಣು ಮಕ್ಕಳು ಜನಿಸಿತು ಎಂದರೆ ಎಲ್ಲರೂ ಭಯಪಡುತ್ತಿದ್ದರು. 

WhatsApp Group Join Now
Telegram Group Join Now

ಹೆಣ್ಣು ಮಕ್ಕಳು ಜನಿಸಿದರೆ ಪ್ರಪಂಚವೂ ತುಂಬಾ ಕೀಳಾಗಿ ನೋಡುತ್ತಿತ್ತು. ಹೆಣ್ಣು ಮಕ್ಕಳು ಜನಿಸಿದರೆ ಎಷ್ಟು ಕಷ್ಠ ಅನುಭವಿಸಬೇಕು ಎಂದು ತಂದೆ ತಾಯಿಗೆ ಭಯ ಹೆಚ್ಚಾಗುತ್ತಿತ್ತು. ಹೆಣ್ಣು ಮಕ್ಕಳನ್ನು ಸಾಕಿ ವಿದ್ಯಾಭ್ಯಾಸವನ್ನು ನೀಡಿ ಮದುವೆ ಮಾಡಬೇಕೆಂಬುದು ಚಿಕ್ಕ ವಿಷಯವಲ್ಲ, ತುಂಬಾ ದೊಡ್ಡದಾದ ಜವಾಬ್ದಾರಿ. ಹೆಣ್ಣು ಜನಿಸಿತು ಇಂದು ತಂದೆ ತಾಯಿಗಳು ಆತಂಕಕ್ಕೆ ಒಳಗಾಗುತ್ತಿದ್ದರು.

ಆದರೆ ಈಗ ಆ ಜಮಾನವೇ ಬದಲಾಗಿದೆ. ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಜನಿಸಿದ್ದು ಎಂದು ಅಸಡ್ಡೆ ಮಾಡುತ್ತಿದ್ದರು ಕೆಲವು ಕುಟುಂಬಗಳು,ಆದರೆ ಈಗ ಹೆಣ್ಣು ಮಕ್ಕಳು ಜನಿಸಿದರೆ ಮನೆಗೆ ಮಹಾಲಕ್ಷ್ಮಿ ಜನಿಸಿದಳು ಸಂತೋಷಪಡುವ ಕುಟುಂಬಗಳು ಸಹ ಹೆಚ್ಚಾಗಿದೆ. ಹೆಣ್ಣು ಮಕ್ಕಳು ಜನಿಸಿದರೆ ಹೆಣ್ಣು ಮಕ್ಕಳನ್ನು ಪೋಷಿಸಲು ಖರ್ಚು ವಿದ್ಯಾಭ್ಯಾಸ ಕೊಡಿಸುವುದು ಮದುವೆ ಮಾಡುವುದು ಎಲ್ಲವೂ ಕೂಡ ತುಂಬಾ ದುಬಾರಿಯಾಗುತ್ತದೆ ಎಲ್ಲವಕ್ಕೂ ಕೂಡ ತುಂಬಾ ಹಣ ಖರ್ಚಾಗುತ್ತದೆ ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದು ಪೋಷಕರುಗಳ ಚಿಂತೆ ಆಗಿರುತ್ತದೆ. ಮುಂಚೆ ಹೆಣ್ಣು ಮಕ್ಕಳು ಜನಿಸಿದರೆ ಹೊರೆ ಎಂದು ಭಾವಿಸುತ್ತಿದ್ದರು ಆದರೆ ಈಗ ಹೆಣ್ಣು ಮಕ್ಕಳು ಜನಿಸಿದರೆ, ಯಾವುದೇ ಕಾರಣಕ್ಕೂ ಪೋಷಕರಿಗೆ ಹೊರೆ ಆಗುವುದಿಲ್ಲ.

ಹೆಣ್ಣು ಮಕ್ಕಳ ಭವಿಷ್ಯಕ್ಕೆ ತಂದೆ ತಾಯಿಗಳು ಹೆಚ್ಚಿನ ಕನಸನ್ನು ಕಂಡಿರುತ್ತಾರೆ ಮಗಳಿಗೆ ಚೆನ್ನಾಗಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿಸಬೇಕು. ವಿದ್ಯಾಭ್ಯಾಸ ಶಿಕ್ಷಣವನ್ನು ಕೊಡಿಸಬೇಕು ಮದುವೆ ಮಾಡಬೇಕು ಎಂದು ಸಾಕಷ್ಟು ಕನಸುಗಳನ್ನು ತಂದೆ ತಾಯಿಯಂದಿರು ಹೊಂದಿರುತ್ತಾರೆ. ಅದೇ ರೀತಿಯಲ್ಲಿ ಶ್ರಮಪಟ್ಟು ಕೆಲಸವನ್ನು ಮಾಡುತ್ತಾರೆ ಹೆಣ್ಣು ಮಗುವಿನ ಮೇಲೆ ಹೆಚ್ಚಿನ ಜವಾಬ್ದಾರಿ ಅನ್ನು ವಹಿಸುತ್ತಾರೆ. ಇನ್ನು ಮುಂದೆ ಪೋಷಕರು ಸ್ವಲ್ಪ ಹಣ ಉಳಿತಾಯ ಮಾಡಿದರು ನಿಮ್ಮ ಹೆಣ್ಣು ಮಗು 21 ವರ್ಷ ವಯಸ್ಸಿಗೆ ಬರುವಷ್ಟರಲ್ಲಿ ಕೇಂದ್ರ ಸರ್ಕಾರವೇ ನಿಮಗೆ 27 ಲಕ್ಷ ರೂಪಾಯಿಗಳನ್ನು ಕೊಡುತ್ತದೆ.

ಸುಕನ್ಯಾ ಸಮೃದ್ಧಿ ಯೋಜನಾ!

ಸುಕನ್ಯಾ ಸಮೃದ್ಧಿ ಯೋಜನೆಯ ಬಗ್ಗೆ ನೀವು ಕೇಳಿರಬಹುದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಾಗ ಹೆಣ್ಣು ಮಕ್ಕಳ ಸಲುವಾಗಿ ಹೆಣ್ಣು ಮಕ್ಕಳ ಅನುಕೂಲತೆಗೆ ಒಳಿತಿಗಾಗಿ ಮೋದಿಜಿಯವರು ಸುಕನ್ಯಾ ಸಮೃದ್ಧಿ ಯೋಜನೆ ಯನ್ನು ಜಾರಿಗೆ ತಂದರು.

ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಹೆಣ್ಣು ಮಗುವಿಗೆ 21 ವರ್ಷ ಆಗುತ್ತಿದ್ದಂತೆ ಆಕೆಗೆ 27 ಲಕ್ಷ ರೂಪಾಯಿಗಳನ್ನು ಕೇಂದ್ರ ಸರ್ಕಾರವೇ ಕೊಡುತ್ತದೆ. ಇದಕ್ಕೆ ನೀವು ಸಾಕಷ್ಟು ಹಣವನ್ನು ಹೂಡಿಕೆ ಮಾಡಬೇಕೆಂಬುವಂತಹದ್ದಿಲ್ಲ’ ಬಹಳ ಕಡಿಮೆ ಮೊತ್ತವನ್ನು ಹುಡುಕಿ ಮಾಡಿದರೆ ಸಾಕು!

ಸುಕನ್ಯಾ ಸಮೃದ್ಧಿ ಯೋಜನೆಯ ಅರ್ಹತೆಗಳಾವುವು?

ಒಂದು ಕುಟುಂಬದಲ್ಲಿ ಹೆಣ್ಣು ಮಗು ಜನಿಸಿದಾಗ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಬಹುದು. ಹೆಣ್ಣು ಮಗುವಿಗೆ ಹತ್ತು ವರ್ಷದ ಒಳಗೆ ಈ ಯೋಜನೆಗೆ ಸೇರಿಸಬೇಕು ಹತ್ತು ವರ್ಷ ಮೇಲ್ಪಟ್ಟ ನಂತರ ಸುಕನ್ಯಾ ಸಮೃದ್ಧಿ ಯೋಜನೆಗೆ ಸೇರಿಸಿಕೊಳ್ಳಲು ಸಾಧ್ಯವಿಲ್ಲ. ಕುಟುಂಬದಲ್ಲಿ ಮೊದಲು ಜನಿಸಿದ ಹೆಣ್ಣು ಮಗಳಿಗೆ ಮಾತ್ರ ಈ ಸೌಲಭ್ಯವು ದೊರಕುತ್ತದೆ.

250 ರೂಪಾಯಿ ಇಂದ ಗರಿಷ್ಠ 1.50 ಲಕ್ಷ ರೂಪಾಯಿ ಗಳವರೆಗೆ ಸುಕನ್ಯಾ ಸಮೃದ್ಧಿ ಯೋಜನೆ ಯಲ್ಲಿ ಮೊತ್ತವನ್ನು ಹೂಡಿಕೆ ಮಾಡಬಹುದು.ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ಗಳಲ್ಲಿ ನೀವು ಖಾತೆಯನ್ನು ಆರಂಭಿಸಬಹುದು.

ಸುಕನ್ಯಾ ಸಮೃದ್ಧಿ ಯೋಜನೆಯ ಲಾಭಗಳು!

ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವ ಹಣ ಕಡಿಮೆ ಆದರೆ ಪಡೆಯುವ ಲಾಭ ಹೆಚ್ಚು. ಹೇಗೆಂದರೆ ನೀವು ಕನಿಷ್ಠ ಕಡಿಮೆ ಹಣವನ್ನು ಹೂಡಿಕೆ ಮಾಡಿದರೆ ಸರ್ಕಾರವು 7-8% ಬಡ್ಡಿಯನ್ನು ನೀಡುತ್ತಿದೆ ನೀವು ಪ್ರತಿ ತಿಂಗಳು 3000 ರೂಪಾಯಿಗಳನ್ನು ಹೂಡಿಕೆ ಮಾಡಿದ್ರೆ ಒಂದು ವರ್ಷಕ್ಕೆ ಅಂದರೆ 12 ತಿಂಗಳಿಗೆ 36000 ಆಗುತ್ತದೆ. 15 ವರ್ಷಗಳಲ್ಲಿ ನೀವು ಅಂದಾಜಾಗಿ ಒಂಬತ್ತು ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ ಇದಕ್ಕೆ ಸಿಗುವ ಬಡ್ಡಿ 17,93,814 ಆಗುತ್ತದೆ.

15 ವರ್ಷಗಳ ನಂತರ 6 ವರ್ಷವಾದ ಮೇಲೆ ನಿಮ್ಮ ಹೆಣ್ಣು ಮಗಳಿಗೆ 27 ಲಕ್ಷ ರೂಪಾಯಿಯನ್ನು ಕೇಂದ್ರ ಸರ್ಕಾರವೇ ನೀಡುತ್ತದೆ. ಇಲ್ಲಿ ಸರ್ಕಾರ ಕೊಡುವ ಬಡ್ಡಿಯಾಗಲಿ ಹಣ ಹೂಡಿಕೆಯ ಮೇಲಾಗಲಿ ಯಾವುದೇ ರೀತಿಯ ತೆರಿಗೆಯನ್ನು ಪಾವತಿ ಮಾಡಬೇಕಾಗಿಲ್ಲ. ನೀವು ಸುಕನ್ಯಾ ಸಮೃದ್ಧಿ ಯೋಜನೆಯ ಸಂಪೂರ್ಣ ಲಾಭ ಪಡೆಯಬಹುದು.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.

Leave a Comment