PhonePe ನಲ್ಲಿ ಹಣ ಇಲ್ವಾ ? ಹಾಗಾದ್ರೆ ಫೋನ್ ಪೇ ಮೂಲಕವೇ ಯಾವುದೇ ರೀತಿಯ ಹಣ ಇಲ್ಲದಿದ್ದರೂ ಕೂಡ ಲೋನ್ ಸಿಗಲಿದೆ. ಯಾವ ರೀತಿ ಲೋನನ್ನು ಪಡೆದುಕೊಳ್ಳಬೇಕು ಎಂದು ತಿಳಿಯಿರಿ.

ಎಲ್ಲರಿಗೂ ನಮಸ್ಕಾರ…

ಪ್ರಪಂಚದಲ್ಲಿಡೆ ಜನ ಇದ್ದಾರೆ. ಆ ಜನರು ಡಿಜಿಟಲ್ ಯುಗಕ್ಕೆ ಮೊರೆ ಹೋಗಿದ್ದಾರೆ ಎಂದು ಹೇಳಬಹುದು. ಏಕೆಂದರೆ ಯಾವುದೇ ವಸ್ತುಗಳನ್ನು ಖರೀದಿಸಿದರು ಕೂಡ ಯುಪಿಐ ಪೇಮೆಂಟ್ ಮಾಡಲಾಗುತ್ತದೆ. ಚಿಕ್ಕ ಚಿಕ್ಕ ವ್ಯಾಪಾರದಿಂದ ಹಿಡಿದು ದೊಡ್ಡ ವ್ಯವಹಾರಗಳಿಗೂ ಕೂಡ ಈ ಯುಪಿಐ ಮೂಲಕವೇ ಹಣವನ್ನು ಬೇರೊಂದು ವ್ಯಕ್ತಿಗಳಿಗೆ ಪಾವತಿಸಬಹುದು. ಅಂಥಹ ಕಲಿಯುಗದಲ್ಲಿ ಇದ್ದೇವೆ ನಾವೆಲ್ಲರೂ. ಇಂಥಹ ಕಲಿಯುಗದಲ್ಲೇ ಫೋನ್ ಪೇ ಎಂಬ ಆ್ಯಪ್ ನಲ್ಲಿ ಲೋನ್ ಕೂಡ ಪಡೆಯಬಹುದು.

WhatsApp Group Join Now
Telegram Group Join Now

ಫೋನ್ ಪೇ ಆ್ಯಪ್ ದಿನದಿನಕ್ಕೆ ಅಪ್ಡೇಟ್ ಆಗುತ್ತಲೇ ಇದೆ ಇಂದು ಕೂಡ ಅಪ್ಡೇಟ್ ಆಗಿದೆ, ಲೋನನ್ನು ಕೊಡಲು ಮುಂದಾಗಿದೆ ಎಂದು ಹೇಳಬಹುದು. ನಿಮಗೂ ಕೂಡ ಲೋನ್ ಬೇಕೆ ? ಮತ್ತು ನಿಮ್ಮ ಫೋನ್ ಪೇ ನಲ್ಲಿ ಹಣ ಇಲ್ಲದಿದ್ದರೂ ಕೂಡ ಲೋನ್ ಕೊಡಲು ಮುಂದಾಗಿದೆ ಫೋನ್ ಪೇ ಆ್ಯಪ್ ಯಾವ ರೀತಿ ಹಣವನ್ನು ಪಡೆದುಕೊಳ್ಳಬಹುದು ಎಂಬುದನ್ನು ತಿಳಿಯಿರಿ.

ನಾವೆಲ್ಲರೂ ಕೂಡ ಹಣವನ್ನು ಪಾವತಿಸಲು ಡಿಜಿಟಲ್ ಅಪ್ಲಿಕೇಶನ್ ಮೂಲಕ ಹಣವನ್ನು ಪಾವತಿಸುತ್ತೇವೆ. ಹೆಚ್ಚಿನ ಪ್ರಮಾಣದ ಗ್ರಾಹಕರನ್ನು ಹೊಂದಿರುವ ಆ್ಯಪ್ ಎಂದರೆ ಅದು ಫೋನ್ ಪೇ ಮಾತ್ರ. ಎಲ್ಲಾ ಸ್ಮಾರ್ಟ್ ಫೋನ್ ಗ್ರಾಹಕರ ಫೋನಿನಲ್ಲಿ ಫೋನ್ ಪೇಯನ್ನು ಬಳಸಿ, ಹಣವನ್ನು ಬೇರೊಂದು ವ್ಯಕ್ತಿಗಳಿಗೆ ವರ್ಗಾವಣೆ ಮಾಡಲಾಗುತ್ತದೆ. ಈ ಒಂದು ಅಪ್ಲಿಕೇಶನ್ ಮಾತ್ರ ಎಲ್ಲೆಡೆ ಜನರು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುತ್ತಿದ್ದಾರೆ. ಹೆಚ್ಚಿನ ಗ್ರಾಹಕರನ್ನು ಹೊಂದಿರುವ ಆ್ಯಪ್ ಎಂದು ಹೇಳಬಹುದು.

ಫೋನ್ ಪೇ ಬಳಸುವ ಗ್ರಾಹಕರು ಎಷ್ಟಿದ್ದಾರೆ ಗೊತ್ತಾ ?

ಭಾರತ ದೇಶದಲ್ಲೇ 50 ಕೋಟಿಗೂ ಮೀರುವಂತ ಜನರು ಈ ಫೋನ್ ಪೇ ಆ್ಯಪ್ ಅನ್ನು ಬಳಕೆ ಮಾಡಿ ಹಣವನ್ನು ಬೇರೊಂದು ವ್ಯಕ್ತಿಗಳಿಗೆ ವರ್ಗಾಯಿಸುತ್ತಿದ್ದಾರೆ. ಹಾಗೂ ಈ 50 ಕೋಟಿ ಜನಗಳಲ್ಲಿ ಜಾಸ್ತಿ ಬಳಕೆ ಮಾಡುವ ಹೆಚ್ಚಿನ ಜನರು ಎಂದರೆ ಅದು ವ್ಯಾಪಾರ ಮಾಡುವ ವ್ಯಕ್ತಿಗಳು 3.7 ಕೋಟಿ ವ್ಯಾಪಾರಿಗಳೇ ಇದ್ದಾರಂತೆ. ಫೋನ್ ಪೇ ಅಪ್ಲಿಕೇಶನ್ ಇಷ್ಟೊಂದು ಕೋಟಿ ಜನರನ್ನು ಸೆಳೆದಿದೆ. ಹಾಗೂ ಇನ್ನೂ ಹೆಚ್ಚಿನ ಗ್ರಾಹಕರನ್ನು ಹೊಂದಲು ಈ ಆ್ಯಪ್ ಮತ್ತಷ್ಟು ಹೊಸ ಹೊಸ ಅಪ್ಡೇಟ್ಗಳನ್ನು ಮಾಡಿ ಗ್ರಾಹಕರಿಗೆ ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಉಚಿತವಾಗಿ ನೀಡಬೇಕೆಂಬ ನಿಟ್ಟಿನಲ್ಲಿ ಲೋನ್ ಕೊಡಲು ಮುಂದಾಗಿದೆ. ನೀವು ಕೂಡ ಲೋನ್ ಪಡೆದು ಕೊಳ್ಳಬೇಕೆ ? ಹಾಗಾದ್ರೆ ಈ ಕೆಳಕಂಡ ಮಾಹಿತಿಯನ್ನು ಕೊನೆವರೆಗೂ ಓದಿ ಯಾವ ರೀತಿ ಲೋನನ್ನು ಪಡೆಯುವುದು ಎಂಬ ವಿಷಯವನ್ನು ಕೂಡ ತಿಳಿದುಕೊಳ್ಳಿ.

ಜನವರಿ 1 ರಿಂದ ಗ್ರಾಹಕರಿಗೆ ಲೋನ್ ಕೊಡಲು ಮುಂದಾಗಿದೆ ಫೋನ್ ಪೇ ಆ್ಯಪ್ !

ಹೌದು ನೀವು ಈ ಹಿಂದೆ ಹಣವನ್ನು ವರ್ಗಾಯಿಸಲು ಮಾತ್ರ ಫೋನ್ ಪೇ ಆ್ಯಪ್ ಅನ್ನು ಬಳಕೆ ಮಾಡುತ್ತಿದ್ದೀರಿ. ಆದರೆ ಇನ್ಮುಂದೆ ಹಾಗಲ್ಲ ಹಣವನ್ನು ವರ್ಗಾಯಿಸಲು ಮತ್ತು ಗ್ರಾಹಕರಿಗೆ ಸಾಲದ ಸೌಲಭ್ಯವನ್ನು ಈ ಅಪ್ಲಿಕೇಶನ್ ನಲ್ಲಿ ಹೊಸದಾಗಿ ಚಾಲನೆ ಮಾಡಲಾಗುತ್ತದೆ. ಹೀಗಾಗಿ ಫೋನ್ ಪೇ ಕೂಡ ಐದಾರು ಬ್ಯಾಂಕ್ ಗಳ ಜೊತೆ ಮಾತನಾಡಿ ಜೊತೆಗೂಡಿ ಈ ಲೋನ್ ಕೊಡಲು ಮುಂದಾಗಿದೆ. ಜನವರಿ ಒಂದರಿಂದ ಲೋನ್ ಕೊಡಲು ಚಾಲನೆ ಮಾಡಲಾಗುತ್ತದೆ ಎಂಬ ವಿಷಯವಾರು ಹಲವಾರು ಕಡೆ ಜಾಲತಾಣಗಳಲ್ಲಿ ಓಡಾಡುತ್ತಿವೆ. ಈ ಒಂದು ವಿಷಯ ನಿಜವಾಗಿದೆ 2024ನೇ ಸಾಲಿನಲ್ಲಿ ಜನವರಿ ಒಂದರಿಂದ ಈ ಒಂದು ಲೋನ್ ಕೊಡುವ ಸೌಲಭ್ಯ ಎಲ್ಲಾ ಫೋನ್ ಪೇ ಗ್ರಾಹಕರಿಗೆ ಲಭ್ಯವಿದೆ ಎಂದು ಕಾದು ನೋಡಬೇಕಿದೆ.

ಇದನ್ನು ಓದಿ :- ಮಾತೃಭಾಷೆಯನ್ನು ಬಳಸಿಕೊಂಡು ಟೈಪಿಂಗ್ ಮಾಡಿ ! ಲಕ್ಷಾಂತರ ಹಣವನ್ನು ಸಂಪಾದಿಸಿ. How to earn money from home ! ಇಲ್ಲಿದೆ ಸಂಪೂರ್ಣವಾದ ವಿವರ.

ವಿಮಾ ಸೌಲಭ್ಯಗಳನ್ನು ಮಾಡಿ ಕೂಡ ಯಶಸ್ವಿ ಕಂಡ ಆ್ಯಪ್ ಇದು.

ಹೌದು, ಫೋನ್ ಪೇ ಐವತ್ತು ಕೋಟಿ ಗ್ರಾಹಕರಿಗೆ ಈ ಹಿಂದೆ ವಿಮ ಪಾಲಿಸಿಯನ್ನು ಕೂಡ ಅಪ್ಲಿಕೇಶನ್ ನಲ್ಲಿ ಚಾಲನೆ ಮಾಡಿ, ಹಲವಾರು ಕಂಪನಿಗಳ ಜೊತೆಗೂಡಿ ಕಾರ್ ವಿಮೆಗಳನ್ನು ಕೂಡ 56 ಲಕ್ಷ ಪಾಲಿಸಿಗಳನ್ನು ಈಗಾಗಲೇ ಮಾರಾಟ ಮಾಡಿದೆ. ಇಂಥಹ ಎಲ್ಲಾ ಸೌಲಭ್ಯಗಳನ್ನು ತನ್ನ 50 ಕೋಟಿ ಗ್ರಾಹಕರಿಗೆ ಫೋನ್ ಪೇ ಅಪ್ಲಿಕೇಶನ್ ನೀಡುತ್ತಿದೆ. ಮತ್ತು ಒಂದು ನಂಬಿಕಸ್ಥ ಆ್ಯಪ್ ಮೂಲಕ ಸಾಲವನ್ನು ಇನ್ಮುಂದೆ ಪಡೆಯಬಹುದು. ಹಾಗೂ EMI ಮೂಲಕ ಕೂಡ ನೀವು ವಿಮಾ ಪಾಲಿಸಿಯನ್ನು ಪಾವತಿಸಬಹುದು. ಫೋನ್ ಪೇ ಬಳಸುವ ಗ್ರಾಹಕರಿಗೆ ಮತ್ತಷ್ಟು ಜೀವನವನ್ನು ಸುಖಕರವಾಗಿರಿಸಲು ಕಷ್ಟಕ್ಕೆ ನೆರವು ನೀಡಲು ಮುಂದಾಗಿದೆ ಫೋನ್ ಪೇ.

ಏಕೆಂದರೆ ಪ್ರಪಂಚದ ಎಲ್ಲಾ ಜನರಿಗೂ ಕೂಡ ಹಣದ ಅವಶ್ಯಕತೆ ಇದ್ದೇ ಇರುತ್ತದೆ, ಈ ಹಣದ ಅವಶ್ಯಕತೆಯಿಂದ ಸಾಲವನ್ನು ಕೂಡ ಮಾಡಬೇಕಾಗುತ್ತದೆ. ನೀವು ಸಾಲವನ್ನು ವ್ಯಕ್ತಿಗಳ ಹತ್ತಿರ ಮಾಡುವುದಕ್ಕಿಂತ ಇಂಥಹ ಆ್ಯಪ್ ಮೂಲಕ ಸಾಲ ಮಾಡಿ ಹಣವನ್ನು ತೀರಿಸುವುದೇ ಮೇಲು ಏಕೆಂದರೆ ಈ ಆ್ಯಪ್ ಗಳು ಕೆಲವು ತಿಂಗಳ ಸಮಯವನ್ನು ಕೂಡ ಕೊಟ್ಟಿರುತ್ತದೆ. ಆ ಸಮಯವನ್ನು ಉಪಯೋಗಿಸಿಕೊಂಡು ನೀವು ಮತ್ತೆ ಆ ಹಣವನ್ನು ಹಿಂಪಾವತಿಸಬೇಕು. ಅಂಥಹ ಒಂದು ನಿಮ್ಮ ಮೇಲೆ ನಿಮಗೆ ನಂಬಿಕೆ ಇದ್ದರೆ ಮಾತ್ರ ಇಂಥಹ ಆ್ಯಪ್ ಗಳಲ್ಲಿ ಸಾಲವನ್ನು ಪಡೆದುಕೊಳ್ಳಿ ಇಲ್ಲದಿದ್ದರೆ ಪಡೆದುಕೊಳ್ಳಬೇಡಿ, ಏಕೆಂದರೆ ಹಲವಾರು ಕಡೆ ಫ್ರಾಡ್ ಆ್ಯಪ್ ಗಳ ಮೂಲಕ ಸಾಲವನ್ನು ಪಡೆದು ವ್ಯಕ್ತಿಗಳ ಜೀವ ತೆಗೆಯುವಂತ ಕೆಲಸ ಮಾಡುತ್ತಿವೆ.

ಆದರೆ ಈ ಒಂದು ನಂಬಿಕಸ್ಥ ಫೋನ್ ಪೇ ಈ ರೀತಿ ಮಾಡುವುದಿಲ್ಲ. ಗ್ರಾಹಕರಿಗೆ ಹಲವಾರು ತಿಂಗಳು ಸಮಯವನ್ನು ಕೊಟ್ಟು ನಂತರ ಮುಂದಾಲೋಚನೆಗೆ ಆ್ಯಪ್ ನಿರ್ಧರಿಸುತ್ತದೆ. ಹಾಗೂ ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ಕೂಡ ಗ್ರಾಹಕರಿಗೆ ಮುಂದಿನ ಜನವರಿಯಿಂದ ಕೊಡಬೇಕೆಂಬ ದೃಷ್ಟಿಯಲ್ಲಿದೆ. ಒಟ್ಟಾರೆ ಹೇಳುವುದಾದರೆ ಫೋನ್ ಪೇ ಬಳಕೆದಾರರಿಗೆ ಜೀವನವನ್ನು ಮತ್ತಷ್ಟು ಸುಲಭವಾಗಿರಿಸಲು ಹತ್ತಾರು ಸೌಲಭ್ಯಗಳನ್ನು ಜನವರಿ ಒಂದರಿಂದ ಚಾಲನೆ ಮಾಡಲಾಗುತ್ತದೆ. ನೀವು ಕೂಡ ಫೋನ್ ಪೇ ಬಳಕೆದಾರರ ಹಾಗಾದ್ರೆ ಇಂಥಹ ಒಂದು 10 ಸೌಲಭ್ಯಗಳನ್ನು ನೀವು ಕೂಡ ಪಡೆದುಕೊಳ್ಳಬಹುದು ಇನ್ಮುಂದೆ. ಜನವರಿ ಒಂದರವರೆಗೂ ಕಾದು ನೋಡಬೇಕಿದೆ ಈ ಆಪ್ ಯಾವ ಯಾವ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡಿದೆ ಎಂದು.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment