ಸೆನ್ಸೋಡೈನ್ ಶೈನಿಂಗ್ ಸ್ಟಾರ್ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ ! ಅರ್ಜಿ ಸಲ್ಲಿಸಿದ ವಿಧ್ಯಾರ್ಥಿಗಳಿಗೆ 1,05,000 ರೂ ಹಣ ಪ್ರತಿ ವರ್ಷವೂ ಸಿಗಲಿದೆ.

ಎಲ್ಲರಿಗೂ ನಮಸ್ಕಾರ

ವಿದ್ಯಾರ್ಥಿಗಳು ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ ಕೋರ್ಸ್ ಅನ್ನು ನಾಲ್ಕು ವರ್ಷಗಳ ಕಾಲ ಆಯ್ಕೆ ಮಾಡಿಕೊಂಡಿದ್ದರೆ, ಅಂಥಹ ವಿದ್ಯಾರ್ಥಿಗಳಿಗೆ ಈ ಒಂದು ಶೈನಿಂಗ್ ಸ್ಟಾರ್ ಸ್ಕಾಲರ್ಶಿಪ್ ಸಿಗಲಿದೆ. ಪ್ರತಿ ವರ್ಷವೂ ಕೂಡ ( 1,05,000 ) ಒಂದು ಲಕ್ಷದ ಐದು ಸಾವಿರದ ವರೆಗೂ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ಇದೀಗ ಸೆನ್ಸೋಡೈನ್ ಶೈನಿಂಗ್ ಸ್ಟಾರ್ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನಿಸಲಾಗಿದೆ. 

WhatsApp Group Join Now
Telegram Group Join Now

ಜನ ಸಾಮಾನ್ಯರ ಆರೋಗ್ಯ ಕಾಳಜಿಯನ್ನು ವಹಿಸಿ ಆರೋಗ್ಯ ಸುರಕ್ಷತೆಯ ಉತ್ಪಾದನೆಯನ್ನು ನೀಡುವ ಸೆನ್ಸೋಡೈನ್ ಶೈನಿಂಗ್ ಸ್ಟಾರ್ ಕಂಪನಿಯು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಕೂಡ ನೀಡುತ್ತದೆ. ಈ ವಿದ್ಯಾರ್ಥಿ ವೇತನದ ಹೆಸರು ಐಡಿಎ ಸೆನ್ಸೋಡೈನ್ ಶೈನಿಂಗ್ ಸ್ಟಾರ್ ಸ್ಕಾಲರ್ಶಿಪ್ ಪ್ರೋಗ್ರಾಮ್. ಈ ಒಂದು ಸ್ಕಾಲರ್ ಶಿಪ್ ಅನ್ನು ಪಡೆದುಕೊಳ್ಳಬೇಕೆಂದರೆ, ಯಾವ ರೀತಿ ಅರ್ಜಿ ಸಲ್ಲಿಸಬೇಕು, ಹಾಗೂ ಯಾರೆಲ್ಲ ಅರ್ಜಿಗೆ ಅರ್ಹರು ಎಂದು ಈ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ ಕೊನೆವರೆಗೂ ಲೇಖನವನ್ನು ಓದಿ.

ವಿದ್ಯಾರ್ಥಿ ವೇತನದ ವಿವರವನ್ನು ತಿಳಿದುಕೊಳ್ಳಿ.

Scholer Ship Name :- ಸೆನ್ಸೋಡೈನ್ ಐಡಿಎ ಶೈನಿಂಗ್ ಸ್ಟಾರ್ ಸ್ಕಾಲರ್ಶಿಪ್ ಪ್ರೋಗ್ರಾಮ್

Last date of application :- 31-10-2023 ಈ ತಿಂಗಳ ಕೊನೆಯ ದಿನವೆ ಅಂತ್ಯದ ದಿನಗಳಾಗಿರುತ್ತವೆ.

ಕೂಡಲೇ ಅರ್ಜಿ ಸಲ್ಲಿಸಿ ಈ ಒಂದು ಸೆನ್ಸೋಡೈನ್ ಶೈನಿಂಗ್ ಸ್ಟಾರ್ ಸ್ಕಾಲರ್ಶಿಪ್ ಅನ್ನು ನೀವು ಕೂಡ ಪಡೆದುಕೊಳ್ಳಿ.

ಸೆನ್ಸೋಡೈನ್ ಶೈನಿಂಗ್ ಸ್ಟಾರ್ ಸ್ಕಾಲರ್ಶಿಪ್ ಪಡೆದುಕೊಳ್ಳಲು ಅರ್ಹತೆಗಳೇನು ?

  • ಬಿಡಿಎ ಕೋರ್ಸ್ಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಈ ಒಂದು ಸೆನ್ಸೋಡೈನ್ ಶೈನಿಂಗ್ ಸ್ಟಾರ್ ಸ್ಕಾಲರ್ಶಿಪ್‌ಗೆ ಅರ್ಜಿ ಸಲ್ಲಿಸಬಹುದು.
  • ನಾಲ್ಕು ವರ್ಷಗಳ ಕಾಲ ಬಿಡಿಎಸ್ ಕೋರ್ಸ್ಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಕೂಡ ಸೆನ್ಸೋಡೈನ್ ಶೈನಿಂಗ್ ಸ್ಟಾರ್ ಸ್ಕಾಲರ್ಶಿಪ್ ಪಡೆಯಬಹುದು.
  • ಖಾಸಗಿ ವಲಯದ ಸಂಸ್ಥೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಹಾಗೂ ಸರ್ಕಾರಿ ವಲಯದ ಸಂಸ್ಥೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಇಬ್ಬರೂ ಕೂಡ ಅರ್ಜಿಯನ್ನು ಸಲ್ಲಿಸಬಹುದು. ಯಾವುದೇ ಸಂಸ್ಥೆಯಲ್ಲಿ ಓದಿದರು ಕೂಡ ಈ ಒಂದು ಅರ್ಜಿ ಸಲ್ಲಿಸಲು ಅವಕಾಶ ಇದೆ.
  • ದ್ವಿತೀಯ ಪಿಯುಸಿಯಲ್ಲಿ ಉತ್ತಮವಾದ ಅಂಕ ಪಡೆದುಕೊಂಡು 60% ಹೆಚ್ಚಿನ ಅಂಕ ಪಡೆದಿರಬೇಕು.
  • 8 ಲಕ್ಷ ಮೀರಿರಬಾರದು ವಿದ್ಯಾರ್ಥಿಯ ಕುಟುಂಬದ ಆದಾಯ.
  • ದೇಶದ ಯಾವುದೇ ಭಾಗದಲ್ಲಿದ್ದರೂ ಕೂಡ ವಿದ್ಯಾರ್ಥಿಗಳು ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಥಿ ವೇತನದ ಹಣವನ್ನು ಎಷ್ಟು ನೀಡುತ್ತಾರೆ ! 

ವಿದ್ಯಾರ್ಥಿಗಳು ಬಿಡಿಎಸ್ ಕೋರ್ಸ್ ಅನ್ನು ಆಯ್ಕೆ ಮಾಡಿಕೊಂಡು ಓದುತ್ತಿರುವವರಿಗೆ ಒಂದು ವರ್ಷಕ್ಕೊಮ್ಮೆ ಈ ಒಂದು ಶೈನಿಂಗ್ ಸ್ಟಾರ್ ಸ್ಕಾಲರ್ಶಿಪ್ ಪಡೆದುಕೊಳ್ಳುತ್ತಿದ್ದಾರೆ. 1,05,000 ರೂ ಹಣ ಈ ಒಂದು ಸ್ಕಾಲರ್ಶಿಪ್ ನಲ್ಲಿ ಸಿಗುತ್ತಿದೆ. ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನಾಲ್ಕು ವರ್ಷದ ಕೋರ್ಸ್ ಆಗಿದ್ದರಿಂದ ಒಟ್ಟು ಮೊತ್ತ 4,20,000 ರೂ ಹಣ ಸಿಗಲಿದೆ. ವಿದ್ಯಾರ್ಥಿಗಳು ಈ ಒಂದು ಸ್ಕಾಲರ್ಶಿಪ್ ಅನ್ನು ಪಡೆದುಕೊಳ್ಳಲು ಆರು ತಿಂಗಳಿಗೆ ನಡೆಯುವ ಪರೀಕ್ಷೆಯಲ್ಲಿ ಪ್ರತಿ ಬಾರಿಯೂ ಕೂಡ 60 ಶೇಕಡ ಅಂಕಗಳನ್ನು ಗಳಿಸಿರಬೇಕು ಅಂತಹ ವಿದ್ಯಾರ್ಥಿಗಳಿಗೆ ಮಾತ್ರ ಪ್ರತಿ ವರ್ಷವೂ ವಿದ್ಯಾರ್ಥಿವೇತನ ಸಿಗಲಿದೆ. ನೀವು ಗಳಿಸಿರುವ ಅಂಕಪಟ್ಟಿಯನ್ನು ಕೂಡ ಈ ಒಂದು ಸೆನ್ಸೋಡೈನ್ ಕಂಪನಿಗೆ ಸಬ್ಮಿಟ್ ಮಾಡಬೇಕು.

ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು.

  • ಎಸ್,ಎಸ್,ಎಲ್ಸಿ ಹಾಗೂ ದ್ವಿತೀಯ ಪಿಯುಸಿಯ ಅಂಕಪಟ್ಟಿ.
  • ನಾಲ್ಕು ವರ್ಷದ ಬಿಡಿಎಸ್ ಕೋರ್ಸ್ಗೆ ಪ್ರವೇಶ ಪಡೆದ ಪತ್ರ
  • ನಿಮ್ಮ ಕಾಲೇಜಿನ ಸಂಸ್ಥೆಯ ದಾಖಲಾತಿ ವಿವರಗಳನ್ನು ಕೂಡ ಸಬ್ಮಿಟ್ ಮಾಡಬೇಕಾಗುತ್ತದೆ.
  • ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಬ್ಯಾಂಕ್ ಖಾತೆ ವಿವರ
  • ವಿದ್ಯಾರ್ಥಿಯ ಆಧಾರ್ ಕಾರ್ಡ್
  • ಆದಾಯ ಪ್ರಮಾಣ ಪತ್ರ ಇನ್ನು ಮುಂತಾದ ಕೆಲವು ದಾಖಲಾತಿಗಳನ್ನು ಅರ್ಜಿಗೆ ಸಬ್ಮಿಟ್ ಮಾಡಬೇಕಾಗುತ್ತದೆ.

ಅರ್ಜಿಯನ್ನು ಸಲ್ಲಿಸುವ ನಿಯಮ

ಫೋನಿನ ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದು ಕೆಳಗೆ ನೀಡಿರುವ ಲಿಂಕ್ ಕ್ಲಿಕ್ಕಿಸಿ ನಂತರ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಅಡ್ರೆಸ್ ಕೇಳಲಾಗುತ್ತದೆ ಸರಿಯಾದ ಮೊಬೈಲ್ ಸಂಖ್ಯೆಯನ್ನು ನೀಡಿ ಮತ್ತೆ ಇಂದಿರುಗೆ ವೆಬ್ ಪೇಜ್ ಗೆ ರೀಡೈರೆಕ್ಟ್ ಆಗುತ್ತದೆ ನಂತರ ಕೇಳಲಾಗುವ ನಿಮ್ಮ ವೈಯಕ್ತಿಕವಾದ ವಿವರಗಳನ್ನು ಟೈಪಿಸಿ, ಮೇಲಿನ ದಾಖಲಾತಿಗಳನ್ನು ಸಬ್ಮಿಟ್ ಮಾಡಿ ಅರ್ಜಿಯನ್ನು ಪೂರೈಸಿ.

Apply Now

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು ಸ್ನೇಹಿತರೆ ! ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment