ನೀವು ಕೂಡ ವಾಹನವನ್ನು ಖರೀದಿಸಬೇಕೆಂದುಕೊಂಡಿದ್ದೀರಾ ? ಹಾಗಾದ್ರೆ ಈ ಯೋಜನೆಅಡಿಯಲ್ಲಿ 4 ಲಕ್ಷ ಸಹಾಯಧನವನ್ನು ನೀಡಲಾಗುತ್ತದೆ. ಈ ಕೂಡಲೇ ಅರ್ಜಿ ಸಲ್ಲಿಸಿ.

ಎಲ್ಲರಿಗೂ ನಮಸ್ಕಾರ…

ಸರ್ಕಾರಿ ಯೋಜನೆ ಯಾದ ಸ್ವಾವಲಂಬಿ ಸಾರಥಿ ಯೋಜನೆ ಅಡಿಯಲ್ಲಿ ವಾಹನಗಳನ್ನು ಖರೀದಿಸುವ ವ್ಯಕ್ತಿಗೆ 4 ಲಕ್ಷ ವರೆಗೂ ಸಹಾಯಧನ ಸಿಗುತ್ತದೆ. ಈ ಒಂದು ಯೋಜನೆ ಅಡಿಯಲ್ಲಿ ನೀವು ಕೂಡ ಹಣವನ್ನು ಪಡೆಯಲು ಬಯಸಿದ್ದರೆ ಡಿಸೆಂಬರ್ 15ನೇ ದಿನಾಂಕದೊಳಗೆ ಅರ್ಜಿಯನ್ನು ಪೂರೈಸಿ, ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ನಿರುದ್ಯೋಗಿಯಾಗಿರುವ ನೀವು ಒಂದೊಳ್ಳೆ ಕೆಲಸವನ್ನು ವೃದ್ಧಿಸಿಕೊಳ್ಳಲು ಈ ಒಂದು ವಾಹನದ ಸಾಲ ಕೊಡಲು ಮುಂದಾಗಿದೆ ಸ್ವಾವಲಂಬಿ ಸಾರಥಿ ಯೋಜನೆ. ಯುವಕ ಯುವತಿಯರು ಯಾರು ಬೇಕಾದರೂ ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಹಣವನ್ನು 4 ಲಕ್ಷದವರೆಗೆ ಪಡೆದುಕೊಳ್ಳಬಹುದು. ಯಾವ ರೀತಿ ಈ ಒಂದು ಯೋಜನೆ ಅಡಿಯಲ್ಲಿ ಹಣ ಸಿಗುತ್ತದೆ ಎಂಬ ಪೂರ್ತಿ ಮಾಹಿತಿ ಈ ಕೆಳಕಂಡ ಲೇಖನದಲ್ಲಿದೆ ಲೇಖನವನ್ನು ಕೊನೆವರೆಗೂ ಓದಿ.

WhatsApp Group Join Now
Telegram Group Join Now

4 ಲಕ್ಷದವರೆಗೆ ಸಹಾಯಧನ ನೀಡಲಾಗುತ್ತದೆ.

ಸ್ವಾವಲಂಬಿ ಸಾರಥಿ ಯೋಜನೆಯಡಿಯಲ್ಲಿ ಯುವಕ ಯುವತಿಯರು ನಿರುದ್ಯೋಗದಿಂದ ಮನೆಯಲ್ಲೇ ಇದ್ದರೆ, ಅಂತವರಿಗೆ ಹಲವಾರು ಬ್ಯಾಂಕ್ಗಳು ಕೂಡಿ ಸಾಲ ಸೌಲಭ್ಯವನ್ನು ನೀಡುತ್ತವೆ. ನಂತರ ನೀವು ಯಾವುದಾದರೂ ಒಂದು ಕೆಲಸವನ್ನು ಆಯ್ಕೆ ಮಾಡಿಕೊಂಡು ಕೊಡುವ ಸಾಲವನ್ನು ಕೆಲಸಕ್ಕಾಗಿ ಅಭಿವೃದ್ಧಿ ಪಡಿಸಿಕೊಳ್ಳಬೇಕು. ಹೆಚ್ಚಿನ ಆದಾಯವನ್ನು ಹಿಂಪಡೆದುಕೊಳ್ಳಬೇಕು ಈ ಕಾರಣಕ್ಕಾಗಿ ನಿರುದ್ಯೋಗವನ್ನು ಭತ್ಯೆ ಮಾಡಲು ಹಲವಾರು ಬ್ಯಾಂಕ್ಗಳು ಕ್ರಮವನ್ನು ತೆಗೆದುಕೊಂಡು ವಾಹನದ ಖರೀದಿಗೆ 4 ಲಕ್ಷ ವರೆಗೆ ಸಾಲವನ್ನು ನೀಡಲು ಮುಂದಾಗಿದೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಯುವಕ ಯುವತಿಯರಿಗೆ ಮಾತ್ರ 4 ಲಕ್ಷ ರೂ ಹಣ ಸಿಗುತ್ತದೆ. ಈ ವರ್ಗದ ಜನರಿಗೆ ಮಾತ್ರ ಸ್ವಾವಲಂಬಿ ಸಾರಥಿ ಯೋಜನೆ ಅನ್ವಯವಾಗುತ್ತದೆ. ಈ ಒಂದು ಯೋಜನೆ ಅಡಿಯಲ್ಲಿ ಸರಕು ವಾಹನಗಳು ಹಾಗೂ ಹಳದಿ ಬೋರ್ಡ್ ಹೊಂದಿರುವ ಟ್ಯಾಕ್ಸಿಯನ್ನು ಖರೀದಿಸಬಹುದು. ಖರೀದಿಸಿದ ವಾಹನಗಳಲ್ಲೇ ನೀವು ಪ್ರತಿನಿತ್ಯ ಕೆಲಸವನ್ನು ಮಾಡಬಹುದು. ಈ ವಾಹನಗಳ ಖರೀದಿಗೆ 75 ರಷ್ಟು ಸಹಾಯಧನ ಮಾಡಲಾಗುತ್ತದೆ. ಅಂದರೆ 4 ಲಕ್ಷದವರೆಗೆ ಹಣವನ್ನು ಈ ಯೋಜನೆ ನಿಮಗೆ ದೊರಕಿಸಿ ಕೊಡುತ್ತದೆ. ಈ ಒಂದು ಯೋಜನೆಯ ಉದ್ದೇಶವೇನೆಂದರೆ ನಿರುದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಿ ಒಂದೊಳ್ಳೆ ಕೆಲಸವನ್ನು ಆ ನಿರುದ್ಯೋಗಿಗಳಿಗೆ ಕೊಟ್ಟು ಆದಾಯವನ್ನು ತೆಗೆಯುವಂತ ಉದ್ದೇಶ ಈ ಯೋಜನೆಯದು.

ಇದನ್ನು ಓದಿ :- Phonepe, Google pay & Paytm, ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ ಗಳಿಂದ ಗ್ರಾಹಕರಿಗೆ ಸಿಗಲಿದೆ 10,000 ಹಣ, ಬಡ್ಡಿ ಇಲ್ಲದೆ ಸಾಲ ! 10 ನಿಮಿಷದಲ್ಲಿ ಪಡೆದುಕೊಳ್ಳಬಹುದು.

ಒಟ್ಟಾರೆ ಹೇಳುವುದಾದರೆ ನಿರುದ್ಯೋಗಿಗಳ ಸಂಖ್ಯೆ ಕಡಿಮೆಯಾಗಬೇಕಷ್ಟೇ ಈ ಯೋಜನೆಯ ಉದ್ದೇಶ. ಅದಕ್ಕಾಗಿ ಪರಿಶಿಷ್ಟ ಪಂಗಡದ ಜನರಿಗೆ ವಾಹನವನ್ನು ಖರೀದಿಸಲು ಲೋನ್ ಸಬ್ಸಿಡಿಯನ್ನು ಕೊಡಲಾಗುತ್ತದೆ. ಲೋನ್ ಸಬ್ಸಿಡಿ ಎಂದರೆ 50 ಸಾವಿರ 1 ಲಕ್ಷ ಅಲ್ಲ ಬರ ಬರೀ ನಾಲ್ಕು ಲಕ್ಷದವರೆಗೂ ಹಣ ಸಾಲದ ರೂಪದಲ್ಲಿ ಸಿಗುತ್ತದೆ. ಈ ಯೋಜನೆಯಲ್ಲಿ ಸಹಾಯಧನವನ್ನು ಪಡೆಯಬೇಕಾದ ವ್ಯಕ್ತಿಯು ಕೆಲವು ಅರ್ಹತಾ ಮಾನದಂಡಗಳನ್ನು ಹೊಂದಿರಬೇಕು ಈ ಕೆಳಕಂಡ ಲೇಖನದಲ್ಲಿ ತಿಳಿಸಲಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಈ ಕೆಳಕಂಡ ಅರ್ಹತೆಯನ್ನು ಹೊಂದಿರಬೇಕು.

  • ಅಭ್ಯರ್ಥಿಯು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವ್ಯಕ್ತಿ ಆಗಿರಬೇಕು ಅಥವಾ SC-ST ವರ್ಗದ ವ್ಯಕ್ತಿಯಾಗಿರಬೇಕು. ಇಂಥಹ ವರ್ಗದ ಯುವಕರಿಗೆ ಈ ಯೋಜನೆ ಸಲ್ಲುತ್ತದೆ.
  • ಅರ್ಜಿದಾರರು ಕರ್ನಾಟಕದಲ್ಲಿಯೇ ವಾಸವಿರಬೇಕು.
  • ಅರ್ಜಿ ಸಲ್ಲಿಸುವ ವ್ಯಕ್ತಿಯ ವಯಸ್ಸು 18 ವರ್ಷ ಮೇಲ್ಪಟ್ಟು ಹಾಗೂ 55 ವರ್ಷ ಒಳಗಿನ ಅಭ್ಯರ್ಥಿಗಳಿಗೆ ಮಾತ್ರ ಈ ಯೋಜನೆಯ ಸೌಲಭ್ಯ ದೊರೆಯುತ್ತದೆ.
  • ಕುಟುಂಬದ ವಾರ್ಷಿಕ ಆದಾಯವು 4.50 ಲಕ್ಷ ಹಣ ಮೀರಿರಬಾರದು.
  • ಅರ್ಜಿದಾರನ ಕುಟುಂಬದ ಯಾವುದೇ ವ್ಯಕ್ತಿಗಳು ಕೂಡ ಸರ್ಕಾರಿ ನೌಕರರಾಗಿರಬಾರದು.
  • RTO ಡ್ರೈವಿಂಗ್ ಲೈಸನ್ಸ್ ಅನ್ನು ಪಡೆದುಕೊಂಡಿರಬೇಕು. ಇದು ಎಲ್ಲಾ ಅರ್ಜಿ ಸಲ್ಲಿಸುವ ಅಭ್ಯರ್ಥಿಗೂ ಕೂಡ ಕಡ್ಡಾಯವಾಗಿದೆ.

ಈ ಕೆಳಕಂಡ ದಾಖಲಾತಿಗಳನ್ನು ಅರ್ಜಿದಾರನು ಹೊಂದಿರಬೇಕು.

  1. ಅರ್ಜಿದಾರನ ಎರಡು ಪಾಸ್ಪೋರ್ಟ್ ಸೈಜ್ ಭಾವಚಿತ್ರ
  2. ಆಧಾರ್ ಕಾರ್ಡ್
  3. ಆನ್ಲೈನ್ ಅಪ್ಲಿಕೇಶನ್
  4. ಬ್ಯಾಂಕ್ ಪುಸ್ತಕ
  5. ಡ್ರೈವಿಂಗ್ ಲೈಸೆನ್ಸ್
  6. ಆದಾಯ ಪ್ರಮಾಣ ಪತ್ರ ಹಾಗೂ ಜಾತಿ ಪ್ರಮಾಣ ಪತ್ರ
  7. ಈ ಹಿಂದೆ ನೀವು ಯಾವುದೇ ಯೋಜನೆಯಲ್ಲಿ ಸಾಲವನ್ನು ಪಡೆದಿರಬಾರದು, ಇಂಥಹ ಒಂದು ದಾಖಲಾತಿಯನ್ನು ಕೂಡ ಹೊಂದಿರಬೇಕು ಅಭ್ಯರ್ಥಿ.

ಈ ರೀತಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ

ಸ್ವಾವಲಂಬಿ ಸಾರಥಿ ಯೋಜನೆ ಅಡಿಯಲ್ಲಿ ನೀವು ಕೂಡ ನಾಲ್ಕು ಲಕ್ಷದವರೆಗೆ ಹಣವನ್ನು ಪಡೆದುಕೊಳ್ಳಬೇಕೆಂಬ ಯೋಚನೆಯಲ್ಲಿದ್ದೀರಾ ? ಹಾಗಾದ್ರೆ ಈ ಕೂಡಲೇ ಈ ಕೆಳಕಂಡ ಲಿಂಕ್ ಮೂಲಕ ಅರ್ಜಿಯನ್ನು ಪೂರೈಸಿರಿ ಕೇಳಲಾಗುವ ಎಲ್ಲಾ ದಾಖಲಾತಿಗಳನ್ನು ಕೂಡ ನೀವು ನೋಂದಾಯಿಸಿರಿ ನಂತರ ಸಬ್ಮಿಟ್ ಮಾಡುವ ಮೂಲಕ ಅರ್ಜಿಯನ್ನು ಪೂರೈಸಿರಿ.

https://sevasindhu.karnataka.gov.in/Sevasindhu/Kannada

ಡಿಸೆಂಬರ್ 15ನೇ ದಿನಾಂಕ ಅರ್ಜಿ ಸಲ್ಲಿಸಲು ಕೊನೆಗೊಳ್ಳಲಿದೆ. ಈ ಕೂಡಲೇ ಅಭ್ಯರ್ಥಿಯು ಅರ್ಜಿಯನ್ನು ಪೂರೈಸಿರಿ. 15ನೇ ದಿನಾಂಕದಂದು ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಅರ್ಜಿಯು ಪರಿಗಣಿಕೆ ಆಗುವುದಿಲ್ಲ. ಅರ್ಜಿಯನ್ನು ರದ್ದು ಮಾಡಲಾಗುತ್ತದೆ. ನೀವು ಈ ತಪ್ಪನ್ನು ಮಾಡಬೇಡಿ, ಡಿಸೆಂಬರ್ 15ನೇ ತಾರೀಖಿನ ಒಳಗೆ ಅರ್ಜಿಯನ್ನು ಪೂರೈಸಿರಿ.

ನಿಮ್ಮ ಅಕ್ಕ ಪಕ್ಕದ ಸ್ನೇಹಿತರು ಕೂಡ ವಾಹನವನ್ನು ಖರೀದಿಸಬೇಕೆಂದು ಅಂದುಕೊಂಡಿರುತ್ತಾರೆ ಅಂಥಹ ವ್ಯಕ್ತಿಗಳಿಗೆ ಈ ಒಂದು ಲೇಖನವನ್ನು ಶೇರ್ ಮಾಡುವ ಮೂಲಕ ಸ್ವಾವಲಂಬಿ ಸಾರಥಿ ಯೋಜನೆಯ ಬಗ್ಗೆ ತಿಳಿಸಿರಿ. ಈ ಯೋಜನೆ ಅಡಿಯಲ್ಲಿ ನಾಲ್ಕು ಲಕ್ಷದವರೆಗೆ ವಾಹನವನ್ನು ಖರೀದಿಸಲು ಹಣ ಸಿಗುತ್ತದೆ ಎಂದು ಕೂಡ ಹೇಳಿರಿ ಲೇಖನವನ್ನು ಶೇರ್ ಮಾಡುವ ಮೂಲಕ ವಿಷಯವನ್ನು ಹಂಚಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನ ದೊಂದಿಗೆ.

Leave a Comment