SC-ST ವರ್ಗದ ಜನರು ಟ್ಯಾಕ್ಸಿ ಹಾಗೂ ವಾಹನವನ್ನು ಖರೀದಿಸುತ್ತಿದ್ದರೆ, ಸರ್ಕಾರದ ಯೋಜನೆಯನ್ನೇ ಆಧರಿಸಿಕೊಂಡು, ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸಿ.

ಎಲ್ಲರಿಗೂ ನಮಸ್ಕಾರ…

ರಾಜ್ಯ ಸರ್ಕಾರದ ಸ್ವಾವಲಂಬಿ ಸಾರಥಿ ಯೋಜನೆ ಅಡಿಯಲ್ಲಿ ಸರಕು ಹಾಗು ಟ್ಯಾಕ್ಸಿ ( ಹಳದಿ ಬೋರ್ಡ್ ) ಒಂದಿರುವ ಚಾಲಕರಿಗೆ ಈ ಒಂದು ಸಿಹಿ ಸುದ್ದಿ ಎಂದೇ ಹೇಳಬಹುದು, ಏಕೆಂದರೆ ಇವರಿಗೆ ಮಾತ್ರ ಈ ಸಾಲದ ಸೌಲಭ್ಯ ಸರ್ಕಾರದಿಂದ ಸಿಗಲಿದೆ. ಟ್ಯಾಕ್ಸಿ ಅಥವಾ ಯಾವುದೇ ವಾಹನಗಳನ್ನು ಖರೀದಿಸಬೇಕು ಎಂಬ ಆಸೆ ಇದ್ದರೆ ಅಂತಹ ಚಾಲಕರಿಗೆ ಸರ್ಕಾರವೇ ಸಹಾಯಧನವೆಂದು ಸಾಲದ ರೀತಿ ಹಣವನ್ನು ಖಾತೆಗೆ ವರ್ಗಾಯಿಸುತ್ತದೆ.

WhatsApp Group Join Now
Telegram Group Join Now

ಟ್ಯಾಕ್ಸಿ ಚಾಲಕರಿಗೆ ಸರ್ಕಾರದಿಂದಲೇ ಸಿಗಲಿದೆ ಸಾಲದ ಸೌಲಭ್ಯ, ಈ ಸಾಲದ ಸೌಲಭ್ಯವನ್ನು ಯಾವ ರೀತಿ ಉಪಯೋಗಿಸಬೇಕು ಹಾಗೂ ಯಾರು ಈ ಒಂದು ಯೋಜನೆಗೆ ಅರ್ಹರು ಎಂಬ ಮಾಹಿತಿಯನ್ನು ಕೆಳಕಂಡ ಲೇಖನದಲ್ಲಿ ತಿಳಿಸಲಾಗುತ್ತದೆ ಕೊನೆವರೆಗೂ ಲೇಖನವನ್ನು ಓದಿ.

ನೀವೇನಾದರೂ ಟ್ಯಾಕ್ಸಿ ಖರೀದಿಸಬೇಕು ಎಂದುಕೊಂಡಿದ್ದೀರ ? ಹಾಗಾದ್ರೆ ಕೂಡಲೇ ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸಿ, ನವೆಂಬರ್ 29ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. ವಾಹನ ವಾಹನಗಳನ್ನು ಚಲಿಸುವ ಚಾಲಕರೆ ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಿ, ಕೂಡಲೇ ಈ ಒಂದು ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿ, ಸಾಲದ ಸೌಲಭ್ಯವನ್ನು ನೀವು ಕೂಡ ಪಡೆದುಕೊಳ್ಳಿ. ಅರ್ಜಿಯನ್ನು ಯಾವ ರೀತಿ ಸಲ್ಲಿಸಬೇಕು ಹಾಗೂ ಈ ಯೋಜನೆಗೆ ಯಾರು ಅರ್ಹರು ಎಂಬುದನ್ನು ತಿಳಿದುಕೊಳ್ಳಿ.

ಡಾ.ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಈ ಒಂದು ಸಾಲದ ಸೌಲಭ್ಯ ದೊರೆಯುತ್ತಿದೆ, ಸ್ವಾವಲಂಬಿ ಸಾರಥಿ ಯೋಜನೆಯ ಫಲಾನುಭವಿಗಳು ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಸ್ವಾವಲಂಬಿ ಸಾರಥಿ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಯುವತಿ ಯುವಕರಿಗೆ ಈ ಒಂದು ಅಭಿವೃದ್ಧಿ ನಿಗಮದಿಂದ ಸಾಲದ ಸೌಲಭ್ಯ ದೊರಕಲಿದೆ. ಮತ್ತು ಉದ್ಯೋಗಾವಕಾಶವನ್ನು ದೊರಕಿಸಿಕೊಡಲಿದೆ ಈ ಯೋಜನೆ. ಸಹಾಯಧನವನ್ನು 70ರಷ್ಟು ನೀಡಲಾಗುತ್ತದೆ ಅಂದರೆ ಒಂದು ಲಕ್ಷದವರೆಗೂ ಸಾಲದ ಸೌಲಭ್ಯವನ್ನು ನೀಡುತ್ತದೆ ಹಾಗೂ ಪರಿಶಿಷ್ಟ ವರ್ಗದ ಜನಗಳಿಗೆ ಶೇಕಡಾ 70ರಷ್ಟು ಸಾಲ ಲಭ್ಯ ಅಂದರೆ ಎರಡು ಲಕ್ಷದವರೆಗೆ ಹಣ ನೀಡಲಿದೆ ಈ ಯೋಜನೆ. ನೀವೇನಾದರೂ ಸರಕು ಹಾಗು ಟ್ಯಾಕ್ಸಿಗಳಂತಹ ವಾಹನಗಳನ್ನು ಖರೀದಿಸಬೇಕೆಂದು ಅಂದುಕೊಂಡಿದ್ದರೆ ಅಂತ ಚಾಲಕರಿಗೆ ಮಾತ್ರ ಶೇಕಡ 75ರಷ್ಟು ಹಣ ನೀಡಲಿದೆ ಅಂದರೆ 4 ಲಕ್ಷದವರೆಗೆ ಸಾಲದ ಸೌಲಭ್ಯ ದೊರೆಯಲಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಕಂಡ ದಾಖಲಾತಿಗಳನ್ನು ಹೊಂದಿರಬೇಕು.

  • ಅಭ್ಯರ್ಥಿಯ ಭಾವಚಿತ್ರ
  • ಮೊಬೈಲ್ ಸಂಖ್ಯೆ
  • ಜಾತಿ ಪ್ರಮಾಣ ಪತ್ರ
  • ಅಭ್ಯರ್ಥಿಯ ಆದಾಯ ಪ್ರಮಾಣ ಪತ್ರ.
  • ವಾಹನವನ್ನು ಚಲಿಸುವ ಪರವಾನಗಿ ( driving licence )
  • ಬ್ಯಾಂಕ್ ಖಾತೆ
  • ಖರೀದಿಸಿರುವ ವಾಹನದ ಬೆಲೆ ಪಟ್ಟಿ
  • ಅಭ್ಯರ್ಥಿಯ ಸ್ವಯಂ ಘೋಷಣೆ ಪತ್ರ

ಈ ಮೇಲ್ಕಂಡ ಎಲ್ಲಾ ದಾಖಲಾತಿಗಳನ್ನು ಕೂಡ ಅರ್ಜಿದಾರರು ಹೊಂದಿರಬೇಕು, ಆನ್ಲೈನ್ ಮೂಲಕವೇ ಎಲ್ಲ ದಾಖಲಾತಿಗಳನ್ನು ಅಪ್ಲೋಡ್ ಮಾಡುವ ಮೂಲಕ ಸಾಲವನ್ನು ಪಡೆಯತಕ್ಕದ್ದು.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಅಭ್ಯರ್ಥಿಗಳು ಈ ಕೆಳಕಂಡ ಅರ್ಹತೆಯನ್ನು ಹೊಂದಿರಬೇಕು.

  • ಕರ್ನಾಟಕದಲ್ಲೆ ಚಿರಂತನರಾಗಿರಬೇಕು
  • ವಯಸ್ಸಿನ ಅಂತರ 21 ರಿಂದ 45 ವಯಸ್ಸುಳ್ಳವರಾಗಿರಬೇಕು.
  • ಅರ್ಜಿದಾರರ ಕುಟುಂಬದ ಆದಾಯ 4,50,000 ಮೀರಿರಬಾರದು.
  • ಡ್ರೈವಿಂಗ್ ಲೈಸೆನ್ಸ್ ಕೂಡ ಅರ್ಜಿದಾರ ಹೊಂದಿರಬೇಕು.
  • ಅಭ್ಯರ್ಥಿಯ ಕುಟುಂಬದ ಸದಸ್ಯರು ಯಾವುದೇ ರೀತಿಯ ಸರ್ಕಾರಿ ನೌಕರಿಯಲ್ಲಿ ಇರಬಾರದು.
  • ಕಳೆದ 5 ವರ್ಷಗಳಿಂದ ಅಭ್ಯರ್ಥಿಯ ಕುಟುಂಬದ ಸದಸ್ಯರು ಯಾವುದೇ ರೀತಿಯ ಬೇರೊಂದು ಯೋಜನೆಯಲ್ಲಿ ಸಾಲವನ್ನು ಪಡೆದುಕೊಂಡಿರಬಾರದು.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು ! ಮತ್ತೆ ಸಿಗೋಣ ಮುಂದಿನ ವಿಷಯದೊಂದಿಗೆ.

Leave a Comment