ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ! 9,10 ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ ವರ್ಷದ ಪ್ರಯುಕ್ತ ರಾಗಿಮಾಲ್ಟ್ ಹಾಗೂ ಮೊಟ್ಟೆ ವಿತರಣೆ ಆರಂಭ.

ಎಲ್ಲರಿಗೂ ನಮಸ್ಕಾರ… ರಾಜ್ಯದ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಈಗಾಗಲೇ ರಾಗಿ ಮಾಲ್ಟ್ ಹಾಗೂ ಮೊಟ್ಟೆಗಳನ್ನು ವಿತರಿಸಲಾಗುತ್ತಿದೆ. ವಿತರಿಸಿದ ಆಹಾರಗಳನ್ನು ವಿದ್ಯಾರ್ಥಿಗಳು ಈವರೆಗೆ ಸೇವಿಸುತ್ತಾ ಇದ್ದಾರೆ, ಆದರೆ ಒಂಬತ್ತನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಈವರೆಗೂ ಯಾವುದೇ ರೀತಿಯ ಇಂತಹ ಆಹಾರವನ್ನು ನೀಡದ ಕಾರಣದಿಂದ ಇನ್ಮುಂದೆ ಹೊಸ ವರ್ಷದ ಪ್ರಯುಕ್ತ ಜನವರಿಯಿಂದಲೇ ರಾಗಿ ಮಾಲ್ಟ್ ಹಾಗೂ ಮೊಟ್ಟೆಗಳನ್ನು ವಿತರಿಸಲು ಮುಂದಾಗಿದೆ.

ಇಲ್ಲಿಯವರೆಗೂ ಕೂಡ ಒಂದನೇ ತರಗತಿಯಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ವಾರದಲ್ಲಿ ಎರಡು ಬಾರಿ ಮೊಟ್ಟೆ ಹಾಗೂ ರಾಗಿ ಮಾಲ್ಟನ್ನು ವಿತರಿಸಲಾಗುತ್ತಿತ್ತು, ಆದರೆ ಇನ್ನು ಮುಂದೆ 9ನೇ ತರಗತಿ ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೂ ಕೂಡ ರಾಗಿಮಾರ್ಟ್ ಮೊಟ್ಟೆಗಳನ್ನು ವಿತರಿಸಲು ಮುಂದಾಗಿದೆ ಕೇಂದ್ರ ಸರ್ಕಾರ. ಈ ವಿಷಯದ ಬಗ್ಗೆ ಸಚಿವರಾದ ಮಧು ಬಂಗಾರಪ್ಪನವರು ಮಾಹಿತಿಯನ್ನು ನೀಡಿದ್ದಾರೆ. ಜನವರಿಯಿಂದಲೇ ಈ ಒಂದು ಹೊಸ ಆಹಾರವನ್ನು ವಿದ್ಯಾರ್ಥಿಗಳಿಗೆ ನೀಡುತ್ತೇವೆ ಎಂದು ಭರವಸೆಯನ್ನು ಕೂಡ ನೀಡಿದ್ದಾರೆ.

WhatsApp Group Join Now
Telegram Group Join Now

ಇನ್ನೂ ಕೆಲವೇ ದಿನಗಳಲ್ಲಿ 2024ನೇ ಸಾಲಿನ ಹೊಸ ವರ್ಷ ಆರಂಭವಾಗುತ್ತದೆ ಆ ಹೊಸ ವರ್ಷ ಆರಂಭದಲ್ಲಿ ವಿದ್ಯಾರ್ಥಿಗಳಿಗೆ ಹೊಸ ಸುದ್ದಿ ಎಂದು ಹೇಳಬಹುದು ಈ ಸುದ್ದಿಯಿಂದ ಪೌಷ್ಟಿಕಾಂಶವು ಕೂಡ ಈ ಆಹಾರದಲ್ಲಿ ದೊರೆಯುತ್ತವೆ. ಹಾಗೂ ಇನ್ನು ಹೆಚ್ಚಿನ ಪೌಷ್ಟಿಕಾಂಶಗಳು ಮಕ್ಕಳಿಗೆ ದೊರೆಯಬೇಕೆಂಬ ಉದ್ದೇಶದಿಂದ ಈ ಒಂದು ರಾಗಿಮರ್ಟ್ ಹಾಗೂ ಮೊಟ್ಟೆಗಳನ್ನು ವಿತರಿಸಲು ಸರ್ಕಾರ ಕೈಗೊಂಡಿದೆ ಈ ಒಂದು ಕೈಗೊಂಡಿರುವ ಕಾರಣದಿಂದ ಮುಂದಿನ ತಿಂಗಳಿನಿಂದಲೇ ಈ ಆಹಾರ ಎಲ್ಲಾ ವಿದ್ಯಾರ್ಥಿಗಳ ಸೇವನೆಯಲ್ಲಿ ನೋಡಬಹುದು.

ಸರ್ಕಾರಿ ಶಾಲಾ ಮಕ್ಕಳಿಗೆ ಮಾತ್ರ ಈ ಆಹಾರಗಳು ದೊರೆಯುತ್ತವೆ. ಖಾಸಗಿ ವಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಸರ್ಕಾರದ ಸೌಲಭ್ಯವಾಗಲಿ ಸೌಕರ್ಯಗಳಾಗಲಿ ದೊರೆಯುವುದಿಲ್ಲ. ಆದ್ದರಿಂದ ನೀವೇನಾದರೂ ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದರೆ ನೀವು ಕೂಡ ಇಂತಹ ಆಹಾರಗಳನ್ನು ಸೇವಿಸಿ ಹೆಚ್ಚಿನ ಪೌಷ್ಟಿಕಾಂಶಗಳನ್ನು ಪಡೆದುಕೊಳ್ಳಿ ಮುಂದಿನ ದಿನಗಳಲ್ಲಿ ಹೆಚ್ಚಿನ ಪೌಷ್ಟಿಕಾಂಶವನ್ನು ಪಡೆದಿರುತ್ತಿರಿ, ಇನ್ನೂ ಕೂಡ ಓದಿನಲ್ಲಿ ಶಿಕ್ಷಣವನ್ನು ಮುಂದುವರಿಸಲು ಹೆಚ್ಚಿನ ಉತ್ಸುಕರಾಗಿ ಗಮನವಿಟ್ಟು ಓದುವಂತಹ ಆಸಕ್ತಿಯನ್ನು ಗಳಿಸಿಕೊಳ್ಳುತ್ತೀರಿ ಆದರಿಂದ ಈ ಎಲ್ಲಾ ಆಹಾರವನ್ನು ಸೇವಿಸುವ ಮೂಲಕ ನಿಮ್ಮ ಪೌಷ್ಟಿಕಾಂಶತೆಯ ಕೊರತೆಯನ್ನು ನೀಗಿಸಿರಿ.

ಈಗಾಗಲೇ ಸರ್ಕಾರಿ ಶಾಲಾ ಮಕ್ಕಳಿಗೆ ಹಲವಾರು ಪ್ರಯೋಜನಗಳನ್ನು ನೀಡುವ ಸೌಲಭ್ಯಗಳನ್ನು ಮಕ್ಕಳಿಗೆ ಸರ್ಕಾರ ನೀಡಿದೆ. ಆದರೂ ಕೂಡ ಆಹಾರದ ವಿಷಯದಲ್ಲಿಯೇ ಬದಲಾವಣೆಯನ್ನು ಮಾಡಿ, ಈ ಆಹಾರಗಳನ್ನು ಕೂಡ ಜೋಡಿಸಿ ಮುಂದಿನ ತಿಂಗಳಿನಿಂದಲೇ ಎಲ್ಲಾ ವಿದ್ಯಾರ್ಥಿಗಳಿಗೆ ನೀಡಲು ಮುಂದಾಗಿದೆ. ಈ ಒಂದು ಆಹಾರಗಳ ಬಗ್ಗೆ ದೈಹಿಕ ಶಿಕ್ಷಕರು ಗಮನವನ್ನು ವಹಿಸಬೇಕೆಂದು ಸಚಿವರು ಸೂಚನೆ ನೀಡಿದ್ದಾರೆ. ಆ ಸೂಚನೆಯನ್ನು ಪಾಲಿಸಿಯೇ ನೀವು ಮುಂದಿನ ತಿಂಗಳಿನಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಮೊಟ್ಟೆಗಳನ್ನು ವಿತರಿಸಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment