58,500 ರೂ ಹಣವನ್ನು ಸಹಾಯಧನವಾಗಿ ಮಿಶ್ರತಳಿ ಹಸು ಸಾಕಾಣಿಕೆಗೆ ನೀಡಲಿದೆ ಸರ್ಕಾರ. ಈ ಕೂಡಲೇ ಅರ್ಜಿ ಸಲ್ಲಿಸಿ.

ಎಲ್ಲರಿಗೂ ನಮಸ್ಕಾರ..

2023-24ನೇ ಸಾಲಿನ ಗಿರಿಜನ ಉಪಯೋಜನೆ ಅಡಿಯಲ್ಲಿ ಹಸು ಸಾಕಾಣಿಕೆಗೆ ಸಹಾಯಧನವನ್ನು ನೀಡಲಿದೆ ಪಶುಪಾಲನ ಮತ್ತು ಪಶು ವೈದ್ಯಕೀಯ ಇಲಾಖೆ. ಮಿಶ್ರ ತಳಿ ಹಸು ಘಟಕದ ಅರ್ಹ ಪಲಾನುಭವಿಗಳಿಗೆ ಇಲಾಖೆಯು ಅರ್ಜಿಯನ್ನು ಆಹ್ವಾನಿಸಿದೆ, ನೀವು ಕೂಡ ಮಿಶ್ರತಳಿ ಹಸುವನ್ನು ಸಾಕಾಣಿಕೆ ಮಾಡುತ್ತಿದ್ದರೆ ಕೂಡಲೇ ಅರ್ಜಿ ಸಲ್ಲಿಸಿ, ಯೋಜನೆಯ ಹಣವನ್ನು ಪಡೆದುಕೊಳ್ಳಿ. ಹಾಗೂ ಮಿಶ್ರ ತಳಿ ಘಟಕದಲ್ಲಿ ಹಸುವನ್ನು ಕೂಡ ವಿತರಿಸಲಾಗುತ್ತದೆ. ಅರ್ಜಿ ಸಲ್ಲಿಸಲು ನವೆಂಬರ್ 25 ಕೊನೆಯ ದಿನಾಂಕವಾಗಿದೆ. ಈ ಕೆಳಕಂಡ ಲೇಖನದಲ್ಲಿ ಅರ್ಜಿಯನ್ನು ಯಾವ ರೀತಿ ಸಲ್ಲಿಸಬೇಕೆಂಬ ಮಾಹಿತಿ ಇದೆ ಕೊನೆವರೆಗೂ ಲೇಖನವನ್ನು ಓದಿ.

WhatsApp Group Join Now
Telegram Group Join Now

ಮಿಶ್ರದಲ್ಲಿ ಘಟಕದಲ್ಲಿ ಮಿಶ್ರ ಹಸುವನ್ನು ಕೂಡ ವಿತರಿಸಲಾಗುತ್ತದೆ ಹಾಗೂ ಹಣದ ಸಹಾಯವನ್ನು ಕೂಡ ಪ್ರೋತ್ಸಾಹ ಧನವಾಗಿ ನೀಡಲಿದೆ ಅಂದರೆ 65,000 ವೆಚ್ಚ ರೂ ಹಣವನ್ನು ಮೀಸಲಿಡಲಾಗಿದೆ. ಈ 65,000 ಹಣದಲ್ಲಿ ಪ್ರತಿಯೊಂದು ವರ್ಗಕ್ಕೂ ಕೂಡ ಬೇರೆ ಬೇರೆ ರೀತಿಯ ಹಣವನ್ನು ಹಂಚಿಕೆ ಮಾಡಲಿದೆ ಇಲಾಖೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಅರ್ಹ ಫಲಾನುಭವಿಗಳಿಗೆ, ಸಹಾಯಧನವಾಗಿ ಶೇಕಡ 90%ರಷ್ಟು ಹಣವನ್ನು ಖಾತೆಗೆ ಜಮಾ ಮಾಡಲಿದೆ 90%ರಷ್ಟು ಅಂದರೆ 58,500 ಹಣವನ್ನು ವರ್ಗಾವಣೆ ಮಾಡಲಿದೆ ಇಲಾಖೆ. ಉಳಿದ 10% ಹಣವನ್ನು ಸಾಲದ ರೂಪದಲ್ಲಿ ನೀಡಲಿದೆ ಮಿಶ್ರತಳಿ ಘಟಕ. 6,500 ಹಣವನ್ನು, ಫಲಾನುಭವಿಗಳ ಬ್ಯಾಂಕ್ ಖಾತೆಯೊಂದಿಗೆ ಸಾಲವನ್ನಾಗಿ ಪರಿವರ್ತಿಸಲಾಗುತ್ತದೆ.

ಅರ್ಜಿ ಸಲ್ಲಿಸುವ ಫಲಾನುಭವಿಗಳು ಹೊಂದಿರಬೇಕಾದ ದಾಖಲಾತಿಗಳೆಂದರೆ, FRUITS ID ಗುರುತಿನ ಸಂಖ್ಯೆ ಅರ್ಹ ಅಭ್ಯರ್ಥಿಗಳು ಹೊಂದಿರಬೇಕು. ಹಾಗೂ ಪಶು ಸಂಕುಲದ ಕೃಷಿಕಾರ ರಾಗಿರಬೇಕು. ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕೂಲಿ ಕಾರ್ಮಿಕರಿಗೆ ಈ ಒಂದು ಮಿಶ್ರ ತಳಿ ಘಟಕದ ಸಹಾಯಧನ ಲಭಿಸುತ್ತದೆ. ಅರ್ಜಿ ಪ್ರಕ್ರಿಯೆ ಮುಗಿದ ನಂತರ ಆಯ್ಕೆಗೊಂಡ ಸದಸ್ಯರು ಹಾಲು ಉತ್ಪಾದನೆ ಮಾಡುವ ಸಂಘಗಳ ಸದಸ್ಯರಾಗಿರಬೇಕು ಅಥವಾ ಸದಸ್ಯತ್ವವನ್ನು ಪಡೆದುಕೊಳ್ಳಬೇಕು.

ಮಿಶ್ರ ತಳಿ ಘಟಕದಲ್ಲಿ ಆಯ್ಕೆಗೊಂಡ ಅಭ್ಯರ್ಥಿಯು, ದಿನನಿತ್ಯ ಕೂಡ ಹಸುವಿನ ಹಾಲನ್ನು, ಹಾಲು ಉತ್ಪಾದನಾ ಸಂಘಕ್ಕೆ, ಕಡ್ಡಾಯವಾಗಿ ಹಾಕುತ್ತೇನೆ ಎಂಬ ಪತ್ರವನ್ನು ಕೂಡ ಆಯ್ಕೆಯಾದ ನಂತರ ಪೂರೈಸಬೇಕು. ಕಳೆದ 5 ವರ್ಷಗಳಿಂದ ಸರ್ಕಾರದ ಬೇರೆ ಯೋಜನೆಗಳಿಗೆ, ಅಂದರೆ ಹೈನುಗಾರಿಕೆ ಯೋಜನೆಯಲ್ಲಿ ಈಗಾಗಲೇ ಸೌಲಭ್ಯವನ್ನು ಪಡೆದ ಕುಟುಂಬಗಳಿಗೆ ಈ ಯೋಜನೆಯು ಅರ್ಹವಾಗಿರುವುದಿಲ್ಲ. ಇಂಥಹ ಕುಟುಂಬದ ಅಭ್ಯರ್ಥಿಗಳು ಯಾರು ಕೂಡ ಅರ್ಜಿಯನ್ನು ಸಲ್ಲಿಸಲು ಮುಂದಾಗಬೇಡಿ, ಅರ್ಜಿಯು ಪೂರೈಕೆ ಆಗುವುದಿಲ್ಲ. ನೀವೇನಾದರೂ ವಿಶೇಷ ಚೇತನ ವ್ಯಕ್ತಿಯಾಗಿದ್ದರೆ ನೀವು ಕೂಡ ವಿಶೇಷ ಚೇತನದ ಪ್ರಮಾಣ ಪತ್ರವನ್ನು ಹೊಂದಿರಬೇಕು. ಹಾಗೂ ಅರ್ಜಿ ಸಲ್ಲಿಸುವ ಪರಿಶಿಷ್ಟ ವರ್ಗದ ಅಭ್ಯರ್ಥಿಗಳು ಆರ್‌ಸಿ ನಂಬರ್ ಕೂಡ ಹೊಂದಿರಬೇಕು.

ಇದನ್ನು ಓದಿ :- ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಈ ಮಿಶ್ರ ತಳಿ ಘಟಕದ ಯೋಜನೆಯಲ್ಲಿ ನೀವು ಕೂಡ ಫಲಾನುಭವಿಗಳಾಗಬೇಕಾದರೆ, ಹೆಚ್ಚಿನ ಮಾಹಿತಿಗಾಗಿ ನಿಮ್ಮ ಊರ, ತಾಲೂಕಿನ ಪಶುವೈದ್ಯಾಧಿಕಾರಿಗಳನ್ನು ಒಂದು ಬಾರಿ ಭೇಟಿ ನೀಡಿ ಯೋಜನೆಯ ವಿವರವನ್ನು ಪೂರ್ಣ ಪ್ರಮಾಣದಲ್ಲಿ ಪಡೆದುಕೊಳ್ಳಿ, ಅರ್ಜಿ ಸಲ್ಲಿಸಲು ನವೆಂಬರ್ 25 ಕೊನೆಯ ದಿನಾಂಕವಾಗಿದೆ. ದಿನನಿತ್ಯವೂ ಕೂಡ ಹಸು ಸಾಕಾಣಿಕೆಯಲ್ಲಿ ಮದ್ಧರಾಗಿದ್ದರೆ ಸರ್ಕಾರದ ಸಹಾಯಧನವನ್ನು ನೀವು ಕೂಡ ಪಡೆದುಕೊಳ್ಳಿ ಈ ಯೋಜನೆ ಅಡಿಯಲ್ಲಿ 58500 ಹಣವನ್ನು ಖಾತೆಗೆ ವರ್ಗಾಯಿಸಲಾಗುತ್ತದೆ. ಈ ಹಣದಲ್ಲಿ ನೀವು ಹಸುವನ್ನು ಕೂಡ ಖರೀದಿಸಬಹುದು. ಸರ್ಕಾರದ ಯೋಜನೆಗಳಲ್ಲಿ ಪಾಲ್ಗೊಂಡು ಇದರ ಸೌಲಭ್ಯಗಳನ್ನು ನೀವು ಕೂಡ ಒದಗಿಸಿಕೊಳ್ಳಿ. ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿದ್ದರೆ ಸಾಕು ಸಿಗುತ್ತೆ 58,500 ಹಣ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ಧನ್ಯವಾದಗಳು, ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment