ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬೈಸೈಕಲ್ ಮತ್ತು ಲ್ಯಾಪ್ಟಾಪ್ ವಿತರಣೆ ಮಾಡುವ ಬಗ್ಗೆ ಕುರಿತು ! ರಾಜ್ಯ ಶಿಕ್ಷಣ ಇಲಾಖೆಯು ನಿರ್ಧಾರ ತೆಗೆದುಕೊಂಡಿದೆ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ…

ಈ ಲೇಖನದಲ್ಲಿ ತಿಳಿಸುವುದೇನೆಂದರೆ ಶಾಲಾ ವಿದ್ಯಾರ್ಥಿಗಳಿಗೆ ರಾಜ್ಯ ಶಿಕ್ಷಣ ಇಲಾಖೆಯ ಉಚಿತ ಬೈಸೈಕಲ್ ಮತ್ತು ಉಚಿತ ಲ್ಯಾಪ್ಟಾಪ್ ಕೊಡುವ ಮಾಹಿತಿಯನ್ನು ಕುರಿತು,ರಾಜ್ಯ ಶಿಕ್ಷಣ ಇಲಾಖೆಯ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದೆ ಆ ನಿರ್ಧಾರಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿದುಕೊಳ್ಳೋಣ. ಶಾಲಾ ವಿದ್ಯಾರ್ಥಿಗಳಿಗೆ ಬೈಸೈಕಲ್ ಮತ್ತು ಲ್ಯಾಪ್ಟಾಪ್ ತುಂಬಾ ಮುಖ್ಯವಾದ ವಸ್ತುಗಳಾಗಿವೆ. ಏಕೆಂದರೆ ವಿದ್ಯಾರ್ಥಿಗಳು ಶಾಲೆಗೆ ಹೆಚ್ಚು ದೂರ ನಡೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ.

WhatsApp Group Join Now
Telegram Group Join Now

ಗ್ರಾಮೀಣ ಪ್ರದೇಶದಲ್ಲಂತೂ ಮಕ್ಕಳು ಬೈಸೈಕಲ್ ಇಲ್ಲದೆ ತುಂಬಾ ಕಷ್ಟಪಟ್ಟು ನಡೆದುಕೊಂಡು ದೂರ ಊರಿಗೆ ಪ್ರಯಾಣಿಸಿ ಶಿಕ್ಷಣ ಪಡೆಯುತ್ತಿದ್ದಾರೆ. ಸರ್ಕಾರವು ಉಚಿತ ಬೈಸೈಕಲ್ ಕೊಡುವ ನಿರ್ಧಾರವನ್ನು 2019-20 ಸಾಲಿನಲ್ಲಿ ರಾಜ್ಯ ಸರ್ಕಾರವು ಯೋಜನೆಯನ್ನು ಜಾರಿಗೆ ತಂದಿದ್ದು. ಆದರೆ ಈಗ ಈ ಯೋಜನೆಯು ಕೂಡ ಸ್ಥಗಿತವಾಗಿದೆ. ಹಾಗಿದ್ದರೆ ಮಕ್ಕಳಿಗೆ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬೈಸೈಕಲ್ ಕೊಡುವುದಿಲ್ಲವೇ ಎಂದು ತಿಳಿದುಕೊಳ್ಳೋಣ.

ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಬೈಸೈಕಲ್ ವಿತರಣೆ ಮಾಹಿತಿ ಕುರಿತು !

ಈಗಾಗಲೇ ಸರ್ಕಾರವು ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಬೈಸೈಕಲ್ ಅನ್ನು ನೀಡುತ್ತಿತ್ತು. ಆದರೆ ಈಗ ಉಚಿತ ಬೈಸೈಕಲ್ ವಿತರಣೆ ಯೋಜನೆ ಸ್ಥಗಿತವಾಗಿದೆ. ಮಕ್ಕಳು ಗ್ರಾಮೀಣ ಪ್ರದೇಶದಲ್ಲಿ ಒಂದು ಊರಿನಿಂದ ಮತ್ತೊಂದು ಊರಿಗೆ ಓದಲು ಹೋಗಬೇಕಾಗುತ್ತದೆ. ಆದರೆ ಬೈಸೈಕಲ್ ಇಲ್ಲದ ಕಾರಣ ಅಂತಹ ವಿದ್ಯಾರ್ಥಿಗಳು ತುಂಬಾ ದೂರ ನಡೆದು ಕಷ್ಟ ಪಡಬೇಕಾಗುತ್ತದೆ. ಅದಕ್ಕಾಗಿ ಸರ್ಕಾರವು 2019 -20 ನೇ ಸಾಲಿನಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದ್ದು. ಆಗ ಎಲ್ಲಾ ಮಕ್ಕಳಿಗೂ ಕೂಡ ತುಂಬಾ ಅನುಕೂಲವಾಗಿತ್ತು ಶಾಲೆಗೆ ತೆರಳಲು. ಆದರೆ ಈಗ ಆ ಯೋಜನೆ ಸ್ಥಗಿತಗೊಂಡಿರುವುದರಿಂದ ಸರ್ಕಾರವು ಮತ್ತೊಂದು ನಿರ್ಧಾರವನ್ನು ತೆಗೆದುಕೊಂಡಿದೆ. ಹಾಗಿದ್ದರೆ ಆ ನಿರ್ಧಾರವೇನು ಎಂಬುದನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಯೋಣ.

ಬೈಸೈಕಲ್ ವಿತರಣೆ ಬದಲು ವಿದ್ಯಾರ್ಥಿಗಳಿಗೆ ಸಿಗಲಿದೆ ಸಾರಿಗೆ ಭತ್ಯೆ !

ಸರ್ಕಾರವು ಬೈಸೈಕಲ್ ವಿತರಣೆ ಮಾಡಲು ತುಂಬಾ ಕಷ್ಟವಾಗುತ್ತದೆ ಎಂದು. ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ಬಸ್ ಹಣವನ್ನು ನೀಡಲಾಗುತ್ತದೆ ಎಂದು ಸರ್ಕಾರವು ತಿಳಿಸಿದೆ. ಕೇಂದ್ರ ಸರ್ಕಾರದಿಂದ ಸಮಗ್ರ ಶಿಕ್ಷಣ ಯೋಜನೆಯನ್ನು ಜಾರಿಗೊಳಿಸಿದ್ದು, ಆ ಯೋಜನೆಯ ಅಡಿಯಲ್ಲಿ ದೂರ ದೂರ ಊರುಗಳಿಂದ ನಡೆದುಕೊಂಡು ಹೋಗುವ ವಿದ್ಯಾರ್ಥಿಗಳಿಗೆ ಪ್ರಯಾಣ ಭತ್ಯೆ ನೀಡಲು ಸರ್ಕಾರವು ಮುಂದಾಗಿದೆ. ಪ್ರತಿ ವಿದ್ಯಾರ್ಥಿಗಳಿಗೂ 6 ತಿಂಗಳವರೆಗೆ, 600 ರೂಪಾಯಿಯನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ವಿದ್ಯಾ ವಿಕಾಸನ ಯೋಜನೆಯ ಅಡಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು 1 ರಿಂದ 10ನೇ ತರಗತಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಎರಡು ಜೊತೆ ಸಾಕ್ಸ್ ಉಚಿತವಾಗಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಸರ್ಕಾರಿ ಶಾಲಾ ಮಕ್ಕಳಿಗೂ ಕೂಡ ಉಚಿತ ಲ್ಯಾಪ್ಟಾಪ್ ನೀಡಲಾಗುವುದು !

ಸರ್ಕಾರವು ಎಲ್ಲಾ ಸರ್ಕಾರಿ ಶಾಲೆಗಳಿಗೂ ಕೂಡ ಉಚಿತ ಲ್ಯಾಪ್ಟಾಪ್ ನೀಡಬೇಕೆಂದು ನಿರ್ಧರಿಸಿದ್ದು. ಖಾಸಗಿ ಶಾಲೆಯ ಮಕ್ಕಳಂತೆ ಸರಕಾರಿ ಶಾಲೆಯ ಮಕ್ಕಳು ಕೂಡ ಡಿಜಿಟಲ್ ಮಾಹಿತಿಯ ಬಗ್ಗೆ ತಿಳಿದುಕೊಂಡಿರಬೇಕು. ಎಂಬ ಮುಖ್ಯ ಕಾರಣದಿಂದಾಗಿ ಸರ್ಕಾರವು ಎಲ್ಲಾ ಸರ್ಕಾರಿ ಶಾಲೆಗಳಿಗೂ ಉಚಿತ ಲ್ಯಾಪ್ಟಾಪ್ ಕೊಡಲಾಗುವುದು ಎಂದು ತಿಳಿಸಿದ್ದಾರೆ. ಸರ್ಕಾರಿ ಶಾಲೆ ಮಕ್ಕಳು ಕೂಡ ಎಲ್ಲಾ ವಿಷಯದಲ್ಲೂ ಕೂಡ ಮುಂದೆ ಬರಬೇಕು ಎಂಬುದು ಸರ್ಕಾರದ ಮುಖ್ಯ ಉದ್ದೇಶ ಆದ್ದರಿಂದ ಡಿಜಿಟಲ್ ಮಾಹಿತಿಯು ತಿಳಿದುಕೊಂಡು ನಾವು ಕೂಡ ಖಾಸಗಿ ಶಾಲೆ ಮಕ್ಕಳಿಗೆ ಏನು ಕಡಿಮೆ ಇಲ್ಲ ಎಂದು ತಿಳಿಸುತ್ತಿದೆ. ಈಗಿನ ಕಾಲದಲ್ಲಂತೂ ಡಿಜಿಟಲ್ ಮಾಹಿತಿಯ ಬಗ್ಗೆ ಪ್ರತಿಯೊಬ್ಬ ವಿದ್ಯಾರ್ಥಿಯು ಕೂಡ ತಿಳಿದುಕೊಂಡಿರಬೇಕು. ಅದರಿಂದ ಮಕ್ಕಳಿಗೆ ಅನುಕೂಲವಾಗಲಿ ಎಂದು ಎಲ್ಲಾ ಶಾಲೆಗಳಿಗೂ ಕೂಡ ಉಚಿತ ಲ್ಯಾಪ್ಟಾಪ್ ಅನ್ನು ನೀಡಲಾಗುತ್ತಿದೆ.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment