ರಾಜ್ಯದಲ್ಲಿ ಮೊದಲ ಬಾರಿಗೆ ‘KSRTC’ ಸಾರಿಗೆ ಬಸ್ಗಳಲ್ಲಿ ‘UPI’ ಪಾವತಿ ಯಶಸ್ವಿ, ಸಾರಿಗೆ ಬಸ್ಗಳಲ್ಲಿ ಪ್ರಯಾಣಿಸುವವರಿಗೆ ಗುಡ್ ನ್ಯೂಸ್!

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ.

ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ ವಾಯುವ್ಯ ಕರ್ನಾಟಕ ರಸ್ತೆ ಸಂಸ್ಥೆಯ ಬಸ್ಸುಗಳಲ್ಲಿ ಯುಪಿಐ ವ್ಯವಸ್ಥೆ ಜಾರಿಗೆ ತರಲಾಯಿತು, ಆದರೆ ವಾಯುವ್ಯ ಕರ್ನಾಟಕ ರಸ್ತೆ ಸಂಸ್ಥೆಯ ಬಸ್ಸುಗಳಲ್ಲಿ ಯುಪಿಐ ವ್ಯವಸ್ಥೆ ಯಶಸ್ವಿಯಾಗಿದೆ. ಕರ್ನಾಟಕ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸುವವರಿಗೆ ಇದು ಒಂದು ಸಂತಸದ ಸುದ್ದಿಯಾಗಿದೆ. ಸರ್ಕಾರವು ಪ್ರಯಾಣಿಕರಿಗೆ ಯಾವುದೇ ರೀತಿಯ ಸಮಸ್ಯೆ ಇಲ್ಲದೆ ಪ್ರಯಾಣಿಸಲು ಯುಪಿಐ ಪಾವತಿ ವ್ಯವಸ್ಥೆ ಜಾರಿಗೆ ತಂದು ಯಶಸ್ವಿಯಾಗಿದೆ.

WhatsApp Group Join Now
Telegram Group Join Now

ಕರ್ನಾಟಕ ಸಾರಿಗೆ ಬಸ್ ಗಳಲ್ಲಿ ಯುಪಿಐ ಪಾವತಿ ವ್ಯವಸ್ಥೆ ಮೂಲಕ ಚಿಲ್ಲರೆ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗಿದೆ. ಫೋನ್ ಪೇ ಕಂಪನಿಯ ಸಹಯೋಗದಲ್ಲಿ ಯುಪಿಐ ಮೂಲಕ ಹಣ ಸ್ವೀಕೃತ ವ್ಯವಸ್ಥೆಯನ್ನು ಹುಬ್ಬಳ್ಳಿ ಗ್ರಾಮಾಂತರ ಮೂರನೇ ಘಟಕದಲ್ಲಿ ಜಾರಿಗೆ ತರಲಾಯಿತು ಸದ್ಯಕ್ಕೆ ಯುಪಿಐ ಮುಖಾಂತರ ಹಣವನ್ನು ಫೋನ್ ಪೇ ಮಾಡುವ ಕಾರ್ಯ ಯಶಸ್ವಿಯಾಗಿದೆ.

ಸಾರಿಗೆ ಬಸ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಚಿಲ್ಲರೆ ಸಮಸ್ಯೆ ಉಂಟಾಗುತ್ತಿತ್ತು ಆದರೆ ಈಗ ವಾಯುವ್ಯ ಸಾರಿಗೆ ಪ್ರಯಾಣಿಸುವವರಿಗೆ ಯಾವುದೇ ಸಮಸ್ಯೆ ಇಲ್ಲ. ಸರ್ಕಾರವು ಪ್ರಯಾಣಿಕರಿಗೆ ಸಮಸ್ಯೆ ಆಗಬಾರದೆಂದು ಯುಪಿಐ ವ್ಯವಸ್ಥೆ ಜಾರಿಗೆ ತಂದು ಯಶಸ್ವಿಯಾಗಿದೆ. ಅದೇ ರೀತಿ ಇನ್ನಿತರ ಬಸ್ಸುಗಳಲ್ಲೂ ಯುಪಿಐ ಯನ್ನು ಜಾರಿಗೊಳಿಸಲಾಗುವುದು ಎಂದು ಸರ್ಕಾರವು ಘೋಷಣೆ ಮಾಡಿದೆ. ಯುಪಿಐ ವ್ಯವಸ್ಥೆ ಯಶಸ್ವಿ ಆಗುತ್ತೋ ಇಲ್ಲವೋ ಎಂಬ ಆತಂಕದಲ್ಲಿ ಸರ್ಕಾರವಿತ್ತು ಆದರೆ ಆತಂಕಕ್ಕೆ ಫುಲಿ ಸ್ಟಾಪ್ ಇಡಲಾಗಿದೆ ಯುಪಿಐ ಮುಖಾಂತರದ ಹಣಕಾಸಿನ ವ್ಯವಸ್ಥೆ ತುಂಬಾ ಅಚ್ಚು ಕಟ್ಟಾಗಿ ಯಶಸ್ವಿಯಾಗಿದೆ.

ಪ್ರತಿ ತಿಂಗಳು ಕೂಡ ಈ ದಿನಾಂಕದಂದು ಗೃಹಲಕ್ಷ್ಮಿ ಹಣ ವರ್ಗಾವಣೆ ಆಗುತ್ತದೆ. ಯಾವ ದಿನಾಂಕ ಎಂದು ತಿಳಿಯಲು ಈ ಲೇಖನವನ್ನು ಓದಿ !

ಶಕ್ತಿ ಯೋಜನೆ ಮುಖಾಂತರ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಸರ್ಕಾರವು ಕಲ್ಪಿಸಿದೆ. ಮಹಿಳೆಯರು ಯಾವುದೇ ರೀತಿಯ ಟಿಕೆಟ್ ಹಣ ನೀಡದೆ ಉಚಿತವಾಗಿ ಕರ್ನಾಟಕ ರಾಜ್ಯದೊಳಗಡೆ ಯಾವುದೇ ಸ್ಥಳಕ್ಕಾದರೂ ಉಚಿತವಾಗಿ ಬಸ್ಸಿನಲ್ಲಿ ಪ್ರಯಾಣಿಸಬಹುದು. ಆದರೆ ಗಂಡಸರು ಟಿಕೆಟ್ ಗೆ ಹಣ ನೀಡಿದೆ ಪ್ರಯಾಣಿಸಬೇಕು. ಆದರೆ ಅವರಿಗೆಲ್ಲರಿಗೂ ಯುಪಿಐ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು ಒಂದು ಸಂತಸದ ಗುಡ್ ನ್ಯೂಸ್ ಆಗಿದೆ.

ಏಕೆಂದರೆ ಸಾರಿಗೆ ಪ್ರಯಾಣಿಕರು ಕೆಲವೊಮ್ಮೆ ಚಿಲ್ಲರೆ ನೀಡದೆ ಕಂಡಕ್ಟರ್ ಹತ್ತಿರ ಬೈಸಿಕೊಳ್ಳುತ್ತಾರೆ ಮತ್ತು ಕಂಡಕ್ಟರ್ ಪ್ರಯಾಣಿಕರಿಗೆ ಒಮ್ಮೊಮ್ಮೆ ಚಿಲ್ಲರೆ ನೀಡುವುದೇ ಇಲ್ಲ, ಇದರಿಂದಾಗಿ ಪ್ರಯಾಣಿಕರು ಬೇಸತ್ತಿ ಹೋಗಿದ್ದಾರೆ. ಚಿಲ್ಲರೆ ಸಮಸ್ಯೆ ಬಹಳ ಇತ್ತು ಆದರೆ ಇದಕ್ಕೆಲ್ಲ ಇನ್ನು ಮುಂದೆ ಅವಕಾಶ ಇರುವುದಿಲ್ಲ. ಪ್ರಯಾಣಿಕರಿಗೂ ತೊಂದರೆಯಾಗುವುದಿಲ್ಲ ಮತ್ತು ಕಂಡಕ್ಟರಿಗೂ ಚಿಲ್ಲರೆ ಕೊಡಲು ತೊಂದರೆಯಾಗುವುದಿಲ್ಲ ಹಾಗಾಗಿ ಯುಪಿಐ ವ್ಯವಸ್ಥೆಯನ್ನು ಆದಷ್ಟು ಬೇಗ ಎಲ್ಲಾ ಸರ್ಕಾರಿ ಬಸ್ಸುಗಳಲ್ಲಿ ಅನ್ವಯಿಸುತ್ತೇವೆ ಎಂದು ಸರ್ಕಾರ ಹೇಳಿದೆ.

ಪ್ರಯಾಣಿಕರಿಗೆ ಚಿಲ್ಲರೆ ಸಮಸ್ಯೆ ಪರಿಹಾರ ಮತ್ತು ನಗದು ರಹಿತ ಪ್ರಯಾಣ ಮತ್ತಿ ತರ ಪ್ರಯೋಜನಗಳಿಂದಾಗಿ ಯು ಪಿ ಐ ವ್ಯವಸ್ಥೆಗೆ ಸಾರ್ವಜನಿಕರಿಂದ ಹಾಗೂ ಸಿಬ್ಬಂದಿಗಳಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದೆ. ಪ್ರಯಾಣಿಕರು ಇನ್ನು ಮುಂದೆ ಯಾವುದೇ ತೊಂದರೆ ಇಲ್ಲದೆ ಆರಾಮಾಗಿ ಬಸ್ ಗಳಲ್ಲಿ ಪ್ರಯಾಣಿಸಬಹುದು. ಸರ್ಕಾರವು ಈಗಾಗಲೇ ಯುಪಿಐ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಶೀಘ್ರದಲ್ಲಿ ಕರ್ನಾಟಕ ಸಾರಿಗೆ ಸಂಸ್ಥೆಯ ಎಲ್ಲಾ 4581 ಬಸ್ ಗಳಲ್ಲಿ ಯು ಪಿ ಐ ವ್ಯವಸ್ಥೆಯನ್ನು ವಿಸ್ತರಿಸಲಾಗುತ್ತದೆ ಎಂದು ಸರ್ಕಾರವು ಘೋಷಣೆ ನೀಡಿದೆ.

ಒಟ್ಟಾರೆ ಇನ್ನೇನು ಕೆಲವು ದಿನಗಳಲ್ಲಿ ಎಲ್ಲಾ ಕರ್ನಾಟಕ ಸಾರಿಗೆ ಬಸ್ಗಳಲ್ಲಿ ಯುಪಿಐ ನ ಹಣಕಾಸು ವರ್ಗಾವಣೆಯ ವ್ಯವಸ್ಥೆಯು ಎಲ್ಲಾ ಸರ್ಕಾರಿ ಬಸ್ಸುಗಳಲ್ಲಿ ಅನ್ವಯವಾಗಿರುತ್ತದೆ. ಸಾರ್ವಜನಿಕರು ಚಿಲ್ಲರೆಗೆ ಎಲ್ಲೂ ಪರದಾಡದೆ ಫೋನ್ ಪೇ ಮುಖಾಂತರ ಹಣ ನೀಡಿ ಟಿಕೆಟ್ ಪಡೆದು ಆರಾಮಾಗಿ ಕರ್ನಾಟಕ ಸಾರಿಗೆ ಬಸ್ಗಳಲ್ಲಿ ಪ್ರಯಾಣಿಸಬಹುದು.

ಈ ಲೇಖನವನ್ನು ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು. 

Leave a Comment