ಆಧಾರ್ ಕಾರ್ಡ್ ನಲ್ಲಿರುವ ಹೆಸರನ್ನು ಎಷ್ಟು ಬಾರಿ ಚೇಂಜ್ ಮಾಡಬಹುದು ಗೊತ್ತಾ ? ಈ ಮಾಹಿತಿಗಳನ್ನು ಮಾತ್ರ ಬದಲಾಯಿಸಬಹುದು.

ನಮಸ್ಕಾರ ಗೆಳೆಯರೇ,

ಭಾರತೀಯ ನಾಗರೀಕರಿಗೆ ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಎಂಬುವುದು ಬಹು ಮುಖ್ಯವಾಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಆಧಾರ್ ಕಾರ್ಡ್ ಅನ್ನು ಸರ್ಕಾರವು ಕಡ್ಡಾಯ ಮಾಡಿದೆ ಇತ್ತೀಚಿನ ದಿನಗಳಂತೂ ಆಧಾರ್ ಕಾರ್ಡ್ ಪ್ರತಿಯೊಬ್ಬರಲ್ಲೂ ಸಹ ಇರಬೇಕಾದಂತಹ ಒಂದು ದಾಖಲೆಯಾಗಿದೆ.ಆಧಾರ್ ಕಾರ್ಡನ್ನು ವೈಯಕ್ತಿಕ ಮತ್ತು ಸರ್ಕಾರಿ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ನಾವು ಆಧಾರ್ ನಲ್ಲಿ ಒದಗಿಸಿ ಡೇಟಾವನ್ನು ನವೀಕರಿಸಬೇಕು. ಏನಾದರೂ ಈ ಮಾಹಿತಿಯನ್ನು ಬದಲಾಯಿಸಬೇಕೆಂದರೆ ಬದಲಾಯಿಸಿಕೊಳ್ಳಲು ಮಿತಿಯನ್ನು ಹೊಂದಿದೆ. ನಿಮ್ಮ ಫೋನ್ ಅಲ್ಲಿ ನೀವು ಪಡೆದ ಆಧಾರ್ ಓಟಿಪಿಯನ್ನು ಗುರುತಿಸದ ವ್ಯಕ್ತಿಗೆ ಎಂದು ನೀಡಬೇಡಿ.

WhatsApp Group Join Now
Telegram Group Join Now

ಆಧಾರ್ ಕಾರ್ಡ್ ನಲ್ಲಿ ಹೆಸರು ದಿನಾಂಕಗಳನ್ನು ಬದಲಾಯಿಸಬಹುದೇ?

ನಿಮ್ಮ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಲಿಂಗ ಮತ್ತು ಜನ್ಮ ದಿನಾಂಕವನ್ನು ಒಂದು ಬಾರಿ ಮಾತ್ರ ನೀವು ಮಾರ್ಪಡಿಸಬಹುದು. ಮತ್ತು ನಿಮ್ಮ ಹೆಸರನ್ನು 2 ಬಾರಿ ಮಾತ್ರ ಬದಲಾಯಿಸಬಹುದಾಗಿದೆ. ನೀವು ಏನಾದರೂ ನಿಮ್ಮ ವಿಳಾಸವನ್ನು ಬದಲಾಯಿಸಬೇಕೆಂದರೆ ಆಧಾರ್ ಕಾರ್ಡ್ ನಿಮಗೆ ಅನುಮತಿಸುತ್ತದೆ. ಆದರೆ ನೀವು ವಿಳಾಸವನ್ನು ಬದಲಾಯಿಸಬೇಕೆಂದರೆ ಇದಕ್ಕೆ ಕೆಲವು ಪುರಾವೆಗಳನ್ನು ಅಂದರೆ ದಾಖಲೆಗಳನ್ನು ನೀಡಬೇಕಾಗುತ್ತದೆ. ಇದಕ್ಕೆ ಬೇಕಾಗಿರುವ ದಾಖಲೆಗಳೆಂದರೆ:-ಗುರುತಿನ ಪುರಾವೆ, ರೇಷನ್ ಕಾರ್ಡ್, ವಿಳಾಸದ ಪುರಾವೆಗಳನ್ನು ನೀಡಬೇಕಾಗುತ್ತದೆ. ಇತರ ದಾಖಲೆಗಳನ್ನು ಪ್ರಸ್ತುತಪಡಿಸಬೇಕಾಗುತ್ತದೆ. ನೀವು ಈ ಎಲ್ಲಾ ಮಾಹಿತಿಗಳನ್ನು ಆನ್ಲೈನ್ ಮುಖಾಂತರ ಅಪ್ಡೇಟ್ ಮಾಡಬಹುದು.

ಇದನ್ನು ಓದಿ :- ಶಕ್ತಿ ಯೋಜನೆಯನ್ನು 10 ವರ್ಷಗಳ ಕಾಲ ಮುನ್ನಡೆಸಲಿದೆ ಕಾಂಗ್ರೆಸ್ ಸರ್ಕಾರ ! ಬಸ್ ಟಿಕೆಟ್ ಗಾಗಿ 2021 ಕೋಟಿ ರೂ ಹಣ ಬಿಡುಗಡೆ ಮಾಡಲಾಗಿದೆ.

ಆದರೆ ನೀವು ಒಂದು ವೇಳೆ ಮೂರನೇ ಬಾರಿ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರನ್ನು ಬದಲಾಯಿಸಬೇಕು,ಅಂದರೆ ಮೊದಲು ನೀವು ಆಧಾರ್ ಕಾರ್ಡ್ ಕೇಂದ್ರಕ್ಕೆ ಭೇಟಿ ನೀಡಿ. UIDAI ನ ಪ್ರಾದೇಶಿಕ ಕಚೇರಿಗೆ ಹೋಗಿ, ನೀವು ನಿಮ್ಮ ಹೆಸರನ್ನು ಮತ್ತೊಮ್ಮೆ ಅಪ್ ಡೇಟ್ ಮಾಡಿಸಲು ಅವರ ಬಳಿ ಅನುಮತಿ ಪಡೆಯಿರಿ. ಆಧಾರ್ ಕಾರ್ಡ್ ತುಂಬಾ ಮಹತ್ವದಾದರಿಂದ ನಿಮ್ಮ ಆಧಾರ್ ಕಾರ್ಡ್ ಮಾಹಿತಿಯನ್ನು ಅಪರಿಚಿತ ವ್ಯಕ್ತಿಗಳಿಗೆ ನೀಡಬೇಡಿ. ನೀವು ಆಧಾರ್ ಕಾರ್ಡನ್ನು ಎಚ್ಚರಿಕೆಯಿಂದ ಬಳಸಬೇಕು.

ಆಧಾರ್ ಕಾರ್ಡ್ ಎಂಬುದು ಒಬ್ಬ ವ್ಯಕ್ತಿಗೆ ತುಂಬಾ ಮುಖ್ಯವಾದ ದಾಖಲೆಯಾಗಿದೆ. ಆಧಾರ್ ಕಾರ್ಡನ್ನು ಸರಕಾರಿ ಕೆಲಸಗಳಿಗೆ ವೈಯಕ್ತಿಕ ಕೆಲಸಗಳಿಗೆ ಬಳಸಲಾಗುತ್ತದೆ. ಆಧಾರ್ ಕಾರ್ಡನ್ನು ಐದು ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಸಹ ಆಧಾರ್ ಕಾರ್ಡನ್ನು ಮಾಡಿಸಿಕೊಳ್ಳಬೇಕು. ಐದು ವರ್ಷ ಮೇಲ್ಪಟ್ಟ ಎಲ್ಲರಿಗೂ ಕೂಡ ಆಧಾರ್ ಕಾರ್ಡ್ ಇರಬೇಕೆಂದು ಸರ್ಕಾರ ಕಡ್ಡಾಯ ಮಾಡಿದೆ.ಎಲ್ಲಾ ಹಣಕಾಸಿನ ವ್ಯವಹಾರಕ್ಕೆ ಸರ್ಕಾರಿ ಹಾಗೂ ಸರ್ಕಾರಿ ರೇತರ ಕೆಲಸಗಳಿಗೂ ಕೂಡ ಆಧಾರ್ ಕಾರ್ಡ್ ಬೇಕೇ ಬೇಕು.ಸರ್ಕಾರವೇ ಆಧಾರ್ ಕಾರ್ಡ್ ಕಡ್ಡಾಯ ಮಾಡಿದ ಮೇಲೆ ನಿಮ್ಮಲ್ಲಿ ಪ್ರತಿಯೊಬ್ಬರೂ ಕೂಡ ಆಧಾರ್ ಕಾರ್ಡ್ ಹೊಂದಿರುತ್ತೀರಿ.ಭಾರತದಲ್ಲಿ ಆಧಾರ್ ಕಾರ್ಡ್ ಎನ್ನುವುದು ಪ್ರತಿಯೊಬ್ಬ ಪ್ರಜೆಗೂ ಕೂಡ ಬಹಳ ಮುಖ್ಯವಾಗಿರುವ ದಾಖಲೆ ಆಗಿ ಇರುತ್ತದೆ.

ಇತ್ತೀಚಿನ ಕೆಲವು ದಿನಗಳಲ್ಲಿ ಆಧಾರ್ ಕಾರ್ಡನ್ನು ವಿವಿಧ ರೀತಿಯ ವಂಚನೆಗಳಿಗೆ ಬಳಸಲಾಗುತ್ತಿದೆ ಆದ್ದರಿಂದ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಎಚ್ಚರಿಕೆಯಿಂದ ಬಳಸಬೇಕಿದೆ, ಆದರಿಂದ ನೀವು ನಿಮ್ಮ ಆಧಾರ್ ಕಾರ್ಡ್ ಮಾಹಿತಿಗಳನ್ನು ಯಾರಿಗೂ ನೀಡಬೇಡಿ. ಅಲ್ಲದೆ ಆಧಾರ್ ಕಾರ್ಡ್ ಒಟಿಪಿಯನ್ನು ಸಹ ಅಪರಿಚಿತ ವ್ಯಕ್ತಿಗೆ ಮಾಹಿತಿ ನೀಡಬೇಡಿ. ಒಂದು ವೇಳೆ ನೀವೇನಾದರೂ ಈ ಕೆಲಸ ಮಾಡಿದರೆ ನೀವು ಮೋಸ ಹೋಗುವ ಸಾಧ್ಯತೆ ಇದೆ. ಆದ್ದರಿಂದ ವಂಚನೆ ಮಾಡುವವರಿಂದ ದೂರವಿರಿ ನಿಮ್ಮ ಆಧಾರ್ ಕಾರ್ಡನ್ನು ಎಚ್ಚರಿಕೆಯಿಂದ ಬಳಸಿ.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.

Leave a Comment