ಉಚಿತ ಆಧಾರ್ ಕಾರ್ಡ್ ನವೀಕರಣಕ್ಕೆ, ಇನ್ನು ಕೇವಲ 3 ದಿನಗಳು ಮಾತ್ರ, ಹಾಗಾಗಿ ಈಗಲೇ ಉಚಿತವಾಗಿ ಅಪ್ಡೇಟ್ ಮಾಡಿಸಿಕೊಳ್ಳಿ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ.

ಈ ಲೇಖನದಲ್ಲಿ ತಿಳಿಸುವುದೇನೆಂದರೆ. ಸರ್ಕಾರವು ಈಗಾಗಲೇ ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಲು ಅವಕಾಶವನ್ನು ನೀಡಿತ್ತು ಆದರೆ ಇನ್ನು ಕೇವಲ ಮೂರು ದಿನಗಳು ಮಾತ್ರ ಬಾಕಿ ಇವೆ ಆದ್ದರಿಂದ ನೀವೇನಾದರೂ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಬೇಕು ಎಂದರೆ ಹೇಗೆ ಅಪ್ಡೇಟ್ ಮಾಡಿಕೊಳ್ಳಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ. ಆಧಾರ್ ಕಾರ್ಡ್ ಎಂಬುದು ಪ್ರತಿಯೊಬ್ಬ ನಾಗರೀಕನ ಪ್ರಮುಖ ದಾಖಲೆಯಾಗಿದ್ದು, ಆಧಾರ್ ಕಾರ್ಡ್ ಅನ್ನು ವ್ಯಕ್ತಿಯ ಗುರುತಿನ ಚೀಟಿ ಎಂದೇ ಹೇಳಬಹುದು. ಇತ್ತೀಚಿನ ದಿನಗಳಲ್ಲೊಂದು ಆಧಾರ್ ಕಾರ್ಡ್ ಪ್ರತಿಯೊಬ್ಬರಿಗೂ ಕಡ್ಡಾಯವಾಗಿದೆ ಎಂದು ಸರ್ಕಾರವು ತಿಳಿಸಿದೆ. ಇತ್ತೀಚಿನ ದಿನಗಳಲ್ಲಿ ಕೆಲವರು ಆಧಾರ್ ಕಾರ್ಡನ್ನು 10 ವರ್ಷಗಳ ಹಿಂದೆ ಮಾಡಿಸಿ ಈಗಿನ ಸಂದರ್ಭದಲ್ಲಿ ಅವರು ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಕೊಳ್ಳಬೇಕು.

WhatsApp Group Join Now
Telegram Group Join Now

ಆಧಾರ್ ಕಾರ್ಡ್ ಬ್ಯಾಂಕಿನ ವಹಿವಾಟು ನಡೆಸಲು ಇತ್ತೀಚಿಗೆ ಸರ್ಕಾರವು ಬಿಟ್ಟಿದಂತಹ 5 ಯೋಜನೆಗಳಲ್ಲಿ ಪ್ರಮುಖವಾದ ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಗಂತೂ ಆಧಾರ್ ಕಾರ್ಡ್ ತುಂಬಾ ಮುಖ್ಯವಾಗಿದೆ. ಬ್ಯಾಂಕುಗಳಿಗೆ ಆಧಾರ್ ಕಾರ್ಡ್ ಅಪ್ಡೇಟ್ ಆಗಿರಲೇಬೇಕು ಎಂದು ಸರ್ಕಾರವು ಕಡ್ಡಾಯವಾಗಿ ಆದೇಶ ನೀಡಿದೆ. ಒಟ್ಟಾರೆ ಆಧಾರ್ ಕಾರ್ಡ್ ಪ್ರತಿಯೊಬ್ಬ ವ್ಯಕ್ತಿಯ ಮುಖ್ಯ ದಾಖಲೆ ಎಂದು ಹೇಳಬಹುದು. ನೀವೇನಾದರೂ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು ಎಂದರೆ ಇನ್ನು ಕೇವಲ ಮೂರು ದಿನಗಳು ಮಾತ್ರ ಬಾಕಿ ಉಳಿದಿದೆ ಅಷ್ಟರಲ್ಲಿ ಹೋಗಿ ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಿ.

ಆಧಾರ್ ಕಾರ್ಡ್ ಉಚಿತ ಅಪ್ಡೇಟ್!

ಆಧಾರ್ ಕಾರ್ಡ್ ಉಚಿತ ಅಪ್ಡೇಟ್ ಇನ್ನೂ ಕೇವಲ ಮೂರು ದಿನಗಳು ಬಾಕಿ ಉಳಿದಿದ್ದು ಡಿಸೆಂಬರ್ 14ರಲ್ಲಿ ಉಚಿತವಾಗಿ ಆಧಾರ್ ಕಾರ್ಡ್ ನವೀಕರಣ ಮಾಡುವುದನ್ನು ತಡೆಗಟ್ಟಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ಹತ್ತು ವರ್ಷಗಳು ಮೇಲ್ಪಟ್ಟ ಆಧಾರ್ ಕಾರ್ಡ್ ಗಳನ್ನು ಈ ಕೂಡಲೇ ನೀವು ಅಪ್ಡೇಟ್ ಮಾಡಬೇಕಾಗುತ್ತದೆ. ಆದರೆ ಆಧಾರ್ ಕಾರ್ಡ್ ಉಚಿತ ಅಪ್ಡೇಟ್ ಅಲ್ಲಿ ನೀವು ಯಾವುದೇ ಶುಲ್ಕವನ್ನು ಪಾವತಿಸುವಂತಿಲ್ಲ, ಉಚಿತವಾಗಿ ನೀವು ಆಧಾರ್ ಕಾರ್ಡ್ ನವೀಕರಣ ಮಾಡಿಕೊಳ್ಳಬಹುದು..

ಆದರೆ ಇದಕ್ಕೆ ಅವಕಾಶ ಇರುವ ದಿನಗಳು ತುಂಬಾ ಕಡಿಮೆ ಇನ್ನು ಕೇವಲ ಮೂರು ದಿನಗಳು ಮಾತ್ರ ಉಳಿದಿದೆ ಅದರ ಒಳಗೆ ನೀವು ಉಚಿತವಾಗಿ ಅಪ್ಡೇಟ್ ಅನ್ನು ಮಾಡಿಸಿಕೊಳ್ಳಲು ಅವಕಾಶವಿದೆ. ನೀವು ಆಧಾರ್ ಕಾರ್ಡ್ ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಲು ಆನ್ಲೈನ್ ಮುಖಾಂತರವೂ ಕೂಡ ಲಭ್ಯವಿದೆ ನೀವೇ ಸ್ವತಹವಾಗಿ ಉಚಿತ ಅಪ್ಡೇಟ್ ಮಾಡಿಕೊಳ್ಳಬಹುದು. ಹೇಗೆ ಎಂದರೆ https://myaadhaar.uidai.gov.inಈ ವೆಬ್ಸೈಟ್ಗೆ ಭೇಟಿ ನೀಡುವ ಮುಖಾಂತರ ನೀವು ಯಾವುದೇ ಶುಲ್ಕವನ್ನು ಪಾವತಿಸದೆ ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಬಹುದು. ನೀವೇನಾದರೂ ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ಹೋದರೆ ಅಲ್ಲಿ ಉಚಿತವಾಗಿ ಮಾಡಿಕೊಳ್ಳುವುದಿಲ್ಲ. ಹಣವನ್ನು ಪಾವತಿ ಮಾಡಿ ಅಪ್ಡೇಟ್ ಮಾಡಿಸಬೇಕಾಗುತ್ತದೆ.

ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಅಗತ್ಯವಿರುವ ದಾಖಲೆಗಳು!

  • ಮತದಾರ ಗುರುತಿನ ಚೀಟಿ
  • ಪಡಿತರ ಚೀಟಿ
  • ಪಾಸ್ ಬುಕ್
  • ಪ್ರಮಾಣ ಪತ್ರ
  • ಅಂಗವಿಕಲತೆಯ ಪ್ರಮಾಣ ಪತ್ರ
  • ಭಾರತೀಯ ಪಾಸ್ಪೋರ್ಟ್

ಆಧಾರ್ ಕಾರ್ಡ್ ನವೀಕರಣ ವೆಬ್ಸೈಟ್ನಲ್ಲಿ ಹೇಗೆ ಮಾಡುವುದು ಎಂದು ಈ ಕೆಳಗಿನ ಲೇಖನದಲ್ಲಿ ತಿಳಿದುಕೊಳ್ಳಿ.

  1. ಮೊದಲನೆಯದಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಬೇಕೆಂದರೆ https://myaadhaar.uidai.gov. in/ಈ ವೆಬ್ಸೈಟ್ಗೆ ಭೇಟಿ ನೀಡಿ.
  2. ಎರಡನೆಯದಾಗಿ ಲಾಗಿನ್ ಮಾಡಿಕೊಳ್ಳಿ ನಂತರ ನಿಮ್ಮ ಆಧಾರ್ ನಂಬರ್ ಹಾಕಿ ಕ್ಯಾಪ್ಚ ಎಂಟರ್ ಮಾಡಿ.
  3. ಮೂರನೆಯದಾಗಿ ಓಟಿಪಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ಓಟಿಪಿಯು ನಿಮ್ಮ ಮೊಬೈಲ್ ಗೆ ಬರುತ್ತದೆ.
  4. ನಾಲ್ಕನೆಯದಾಗಿ ನೀವು ಹೆಸರನ್ನು ಅಥವಾ ಜನ್ಮ ದಿನಾಂಕವನ್ನು ನವೀಕರಣ ಮಾಡಬೇಕು ಎಂದರೆ ನವೀಕರಣ ಮಾಡಿಕೊಳ್ಳಿ. ನಿಮಗೆ ಮೊಬೈಲ್ ನಂಬರ್ ಮುಂತಾದವು ಯಾವುದಾದರೂ ನೀವು ಯಾವುದನ್ನು ನವೀಕರಣ ಮಾಡಿಕೊಂಡಿರಬೇಕು ಎಂದಿದ್ದೀರಾ ಅದನ್ನು ನವೀಕರಿಸಿ.
  5. ಕೊನೆಯದಾಗಿ ನಿಮ್ಮ ವಿಳಾಸ ದೃಢೀಕರಣ ದಾಖಲೆಯ ಸ್ಕ್ಯಾನ್ ಪ್ರತಿ ಅಪ್ಲೋಡ್ ಮಾಡಿ.

ಈ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಮತ್ತೆ ಸಿಗೋಣ ಮುಂದಿನ ಲೇಖನದೊಂದಿಗೆ.

Leave a Comment